ಸ್ಟಾರ್ ನಟ ಕಾಶೀನಾಥ್ ಅವರ ಮಗ ಏನಾದರು ಗೊತ್ತಾ?

0 views

ಕಲಾವಿದರ ಜೀವನದಲ್ಲಿ ಏರಿಳಿತಗಳು ನಿಜಕ್ಕೂ ಊಹಿಸಲಾಗದ ಮಟ್ಟಕ್ಕೆ ಆಗಿಬಿಡುತ್ತದೆ.. ಅದರಲ್ಲೂ ಒಳ್ಳೆ ಹೆಸರು ಇರುವ ಕುಟುಂಬದಿಂದ ಬಂದರೂ ಸಹ ಸಾಕಷ್ಟು ಪರಿಶ್ರಮ ಹಾಕಿದರೂ ಸಹ ಒಮ್ಮೊಮ್ಮೆ ಅದೃಷ್ಟ ಅನ್ನೋದು ಕೈ ಹಿಡಿಯದಿದ್ದರೇ ಮೂಲೆ ಗುಂಪಾಗಿ ಹೋಗುವರು.. ಇದೇ ರೀತಿ ಸಾಕಷ್ಟು ಕಲಾವಿದರು ಮೂರು ನಾಲ್ಕು ಸಿನಿಮಾ ಮಾಡಿ ನಂತರ ಸಿನಿಮಾದಿಂದ ದೂರವಾದವರು ಇದ್ದಾರೆ.. ಅದಕ್ಕೂ ಮೀರಿ ಒಂದೇ ಸಿನಿಮಾಗೆ ಸಾಕು ಎಂದು ಹೋದವರೂ ಇದ್ದಾರೆ.. ಮತ್ತಷ್ಟು ಮಂದಿ ಸತತ ಪ್ರಯತ್ನದ ಮೂಲಕ ಸಕ್ಸಸ್ ಕಾಣುವ ಹಾದಿಯಲ್ಲಿದ್ದಾರೆ.. ಇನ್ನು ಇದೇ ರೀತಿ ಕಳೆದ ಹದಿನೈದು ವರ್ಷಗಳಿಂದ ಸಾಕಷ್ಟು ಹೀರೋಗಳು ಸಾಕಷ್ಟು ನಟಿಯರು ಸಿನಿಮಾ ರಂಗಕ್ಕೆ ಬಂದರು.. ನಟಿಯರು ಬಹುತೇಕ ಒಂದೆರೆಡು ಸಿನಿಮಾಗೆ ಸೀಮಿತರಾಗಿ ನಂತರ ಸಿನಿಮಾ ಹೊರತಾಗಿ ಬೇರೆ ಕೆಲಸ ಅಥವಾ ಕಿರುತೆರೆಯಲ್ಲಿ ಅಭಿನಯಿಸುವುದು ಹೀಗೆ ಬೇರೆ ದಾರಿ ಕಂಡುಕೊಂಡಿದ್ದನ್ನೂ ನಾವು ನೋಡಿದ್ದೇವೆ..‌ ಇನ್ನು ಅದೇ ರೀತಿ ದೊಡ್ಡ ಹೆಸರಿನ ಹಿನ್ನೆಲೆ ಇಂದ ಬಂದವರು ಕಾಶೀನಾಥ್ ಅವರ ಪುತ್ರ..

ಹೌದು ಈಗಲೂ ಕೂಡ ನಿರ್ದೇಶಕರುಗಳು ಒಂದು ರೀತಿ ಗುರುಗಳಂತೆ ನೋಡುವ ಕಾಶೀನಾಥ್ ಅವರು ಕನ್ನಡದ ಸ್ಟಾರ್ ನಿರ್ದೇಶಕರುಗಳಲ್ಲಿ ಒಬ್ಬರು.. ಉಪೇಂದ್ರ ಅವರ ಗುರುಗಳೂ ಸಹ ಹೌದು.. ತಮ್ಮ ನಿರ್ದೇಶನದಲ್ಲಿ ಸಮಾಜಕ್ಕೆ ಸಂದೇಶದ ಜೊತೆಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು.. ಈಗಲೂ ಸ್ಯಾಂಡಲ್ವುಡ್ ನಲ್ಲಿ ಕಾಶೀನಾಥ್ ಅವರೆಂದರೆ ಗೌರವವಿದೆ.. ಇನ್ನು ಅವರ ಮಗ ಅಪ್ಪನಂತೆ ಸಿನಿಮಾ ರಂಗ ಪ್ರವೇಶ ಮಾಡುವ ನಿರ್ಧಾರ ಮಾಡಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡೇ ಸಿನಿಮಾಗೆ ಎಂಟ್ರಿ‌ಕೊಟ್ಟರು.. ಆದರೆ ಅದೃಷ್ಟ ಕೈ ಹಿಡಿಯಲಿಲ್ಲ.. ಹೌದು ಕಾಶೀನಾಥ್ ಅವರ ಪುತ್ರ ಅಭಿಮನ್ಯು ಕಳೆದ ಒಂಭತ್ತು ವರ್ಷದ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟು ಸಿನಿಮಾ ಮಾಡಿದರು.. ಸಿನಿಮಾ ಮೂಲಕ ಅಭಿಮನ್ಯು ಹೆಸರು ಮಾಡಿದರು.‌ ಆದರೆ ದೊಡ್ಡ ಮಟ್ಟದ ಯಶಸ್ಸು ನೀಡಲಿಲ್ಲ.. ನಂತರ ನಾಲ್ಕು ವರ್ಷ ವ್ಯಯಕ್ತಿಕ ಕಾರಣಗಳಿಂದ ಬ್ರೇಕ್ ಪಡೆದರು.. ಮೂರ್ನಾಲ್ಕು ಸಿನಿಮಾ ಕತೆ ಕೇಳಿದರು ಆದರೆ ಅದು ಕೆಲ ದಿನಗಳು ಎಳೆದು ನಂತರ ಶುರುವಾಗಲೇ ಇಲ್ಲ..

ಆ ನಂತರ ಕಾಶೀನಾಥ್ ಅವರ ಆರೋಗ್ಯ ತೀರಾ ಹದಗೆಟ್ಟ ಕಾರಣ ಅಭಿಮನ್ಯು ಅವರು ಕಾಶೀನಾಥ್ ಅವರ ಜೊತೆ ಸಮಯ ಕಳೆಯಬೇಕೆಂದು ಮತ್ತೆ ನಾಲ್ಕು ವರ್ಷ ಸಿನಿಮಾದಿಂದ ದೂರ ಉಳಿದರು.. ಎರಡು ವರ್ಷದ ಹಿಂದೆ ಕಾಶೀನಾಥ್ ಅವರು ಕೊನೆಯುಸಿರೆಳೆದ ವಿಚಾರ ಎಲ್ಲರಿಗೂ ತಿಳಿದಿದೆ.. ಸಂಪೂರ್ಣ ಚಿತ್ರರಂಗ ಸಿನಿಮಾ ಪ್ರೇಮಿಗಳು ಅಗಲಿದ ಕಾಶೀನಾಥ್ ಅವರಿಗಾಗಿ ಕಂಬನಿ‌ ಮಿಡಿದರು.. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಿದರೂ ಸಹ ಕಾಶೀನಾಥ್ ಅವರು ಆರ್ಥಿಕವಾಗಿ ದೊಡ್ಡ ಶ್ರೀಮಂತರೇನೂ ಅಲ್ಲ.. ಸಾಧಾರಣ ಜೀವನವನ್ನೇ ಸಾಗಿಸುತ್ತಿದ್ದ ಕಾಶೀನಾಥ್ ಅವರು ಅಗಲಿದ ಬಳಿಕ ಎಲ್ಲಾ ಜವಾಬ್ದಾರಿ ಮಗನ ಮೇಲೆ ಬಿದ್ದಿತು.. ಇತ್ತ ಕಾಶೀನಾಥ್ ಅವರು ಅಗಲಿದ ದಿನವೇ ದರ್ಶನ್ ಅವರು ಅಭಿಮನ್ಯುವಿನ ಜೊತೆ ಮಾತನಾಡಿ ನಿನಗೆ ಏನೇ ಬೇಕಿದ್ದರೂ ನನಗೆ ಫೋನ್ ಮಾಡು.. ಯಾವುದೇ ಸಮಯ ಆದರೂ ಸರಿ ಮುಜುಗರ ಪಟ್ಟುಕೊಳ್ಳಬೇಡ ಎಂದಿದ್ದರು.

ಈ ವಿಚಾರವನ್ನು ಈ ಹಿಂದೆ ಅಭಿಮನ್ಯು ಮಾದ್ಯಮದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.. ಇನ್ನು ತಂದೆ ಅಗಲಿದ ಬಳಿಕ ಮುಂದೇನು ಎಂದು ಯೋಚಿಸುತ್ತಿರುವಾಗ ಅಭಿಮನ್ಯು ಮತ್ತೆ ಸಿನಿಮಾರಂಗಕ್ಕೆ ಮರಳಲು ನಿರ್ಧರಿಸಿದರು.. ಹೌದು ಒಂಭತ್ತು ವರ್ಷ ಎಲ್ಲಿಯೂ ಕಾಣಿಸಿಕೊಳ್ಳದ ಅಭಿಮನ್ಯು ಬಹಿಶಃ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು ಎಂದೇ ಗಾಂಧಿನಗರದಲ್ಲಿ ಮಾತನಾಡಿಕೊಳ್ಳಲಾಗಿತ್ತು.. ಆದರೆ ಈಗ ಒಂಭತ್ತು ವರ್ಷಗಳ ಬಳಿಕ ಅಭಿಮನ್ಯು ಮತ್ತೆ ಸ್ಯಾಂಡಲ್ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ.. ಹೌದು ಸಿನಿಮಾ ನೆಲದಲ್ಲಿ ಗಟ್ಟಿಯಾಗಿ ನೆಲೆಯೂರಲೆಂದೇ ಎಲ್ಲಾ ತಯಾರಿ ಮಾಡಿಕೊಂಡು ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ..

ಇನ್ನು ತಮ್ಮ ಭವಿಷ್ಯದ ಚಿಂತನೆಗಳ ಬಗ್ಗೆ ಮಾತನಾಡಿರುವ ಅಭಿಮನ್ಯು “ಮೊದಲೆಲ್ಲಾ ಬಹಳ ಪ್ಲ್ಯಾನ್ ಮಾಡುತ್ತಿದ್ದೆ.. ಆದರೆ ಅಂದುಕೊಂಡಂತೆ ಏನೂ ಆಗಲಿಲ್ಲ.. ನಾವು ಅಂದುಕೊಂಡ ರೀತಿ ಜೀವನ ಆಗಲ್ಲ ಅಂತ ನನಗೆ ಒಂದು ದೊಡ್ಡ ಪಾಠ ಕಲಿಸಿದೆ.. ಈಗ ಹಿಂಗೆ ಹಂಗೆ ಅಂತೇನೂ ಇಲ್ಲ.. ಏನು ಬರತ್ತೋ ಅದನ್ನ ಆರಿಸಿಕೊಂಡು ಪಾತ್ರ ಮಾಡಿಕೊಂಡು ಹೋಗುತ್ತಿರೋದು ಅಷ್ಟೇ.. ತಂದೆಯ ರೀತಿ ಒಳ್ಳೆಯ ಕಂಟೆಂಟ್ ಇರೋ ಸಿ‌ನಿಮಾ ಮಾಡಬೇಕು ಅನ್ನೋ ಆಸೆ ಇದೆ.. ಆದರೆ ಇದೇ ಬೇಕು ಅದೇ ಬೇಕು ಅಂತೇನು ಇಲ್ಲ.. ಜೀವನ ಬಹಳಷ್ಟು ಪಾಠಗಳನ್ನು ಕಲಿಸಿದೆ ಎಂದಿದ್ದಾರೆ.. ಇದೇ ನಿಜವಾದ ಜೀವನ.. ಯಾರೇ ಆಗಲಿ ಜೀವನ ಕಲಿಸುವ ಪಾಠಗಳ ಮುಂದೆ ಡಿಗ್ರಿಗಳು ಕಲಿಸೋದು ಏನೇನೂ ಇಲ್ಲ.. ಅಭಿಮನ್ಯು ಅವರ ಮುಂದಿನ ಸಿನಿಮಾ ಜೀವನ ಚೆನ್ನಾಗಿರಲಿ.. ನೂರಾರು ಕಲಾವಿದರಿಗೆ ಜೀವನ ಕೊಟ್ಟ ದೊಡ್ಡ ನಿರ್ದೇಶಕನ ಮಗನಿಗೆ ಸಿನಿಮಾರಂಗದಲ್ಲಿ‌ ಹೊಸದೊಂದು ಜೀವನ ಸಿಗುವಂತಾಗಲಿ..