ಮೊನ್ನೆಯಷ್ಟೇ ಆರ್ಥಿಕ ಸಂಕಷ್ಟದಿಂದಾಗಿ ಮನೆ ಮಾರಿದ್ದ ಅಭಿಷೇಕ್ ಬಚ್ಚನ್.. ಆದರೆ ಇಂದು ಏನಾಗಿದೆ ನೋಡಿ..

0 views

ಬಾಲಿವುಡ್ ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ಕಳೆದ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು‌‌.. ಹೌದು ಮೊನ್ನೆಮೊನ್ನೆಯಷ್ಟೇ ಮುಂಬೈ ನ ವೋರ್ಲಿಯಲ್ಲಿನ ಮೂವತ್ತೇಳನೇ ಅಂತಸ್ಥಿನ ತಮ್ಮ ದುಬಾರಿ ಬೆಲೆಯ ಅಪಾರ್ಟ್ಮೆಂಟ್ ಒಂದನ್ನು ನಲವತ್ತೈದು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು.. ಆದರೆ ಆ ವಿಚಾರ ಮಾಸುವ ಮುನ್ನವೇ ಅಭಿಷೇಕ್ ಅವರಿಗೆ ಮತ್ತೊಂದು ನೋವು ಎದುರಾಗಿದೆ.. ಹೌದು ಐಶ್ವರ್ಯಾ ರೈ ಅವರು ಟಾಪ್ ಹೀರೋಯಿನ್ ಆಗಿದ್ದ ಸಮಯದಲ್ಲಿಯೇ ಅವರನ್ನು ಮದುವೆಯಾಗಲು ಅನೇಕ ಉದ್ಯಮಿಗಳು ನಟರು ಮುಂದೆ ಬರುತ್ತಿದ್ದ ಸಮಯದಲ್ಲಿಯೇ ಐಶ್ವರ್ಯಾ ರೈ ಬಚ್ಚನ್ ಮನೆಯ ಸೊಸೆಯಾಗುವ ನಿರ್ಧಾರ ಮಾಡಿದರು..

ಅಭಿಷೇಕ್ ಬಚ್ಚನ್ ಅವರ ಕೈ ಹಿಡಿದು 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಅದಾದ ಬಳಿಕ ಕೆಲ ವರ್ಷಗಳಲ್ಲಿ ಹೆಂಡತಿಗಾಗಿ ಮುಂಬೈ ನಲ್ಲಿ ನಲವತ್ತೆರೆಡು ಕೋಟಿ ರೂಪಾಯಿ ಕೊಟ್ಟು ಈಗ ಮಾರಾಟ ಮಾಡಿದ್ದ ಅಪಾರ್ಟ್ಮೆಂಟ್ ಅನ್ನು ಖರೀದಿ ಮಾಡಿದ್ದರು.. ಇತ್ತ ಮದುವೆಯ ಬಳಿಕವೂ ಐಶ್ವರ್ಯಾ ರೈ ಅವರಿಗೆ ಅವಕಾಶಗಳು ಕಡಿಮೆಯಾಗಲಿಲ್ಲ.. ಒಂದರ ಮೇಲೆ ಒಂದರಂತೆ ಸಿನಿಮಾಗಳಲ್ಲಿ‌ ಕಾಣಿಸಿಕೊಂಡರು.. ಎಲ್ಲವೂ ಹಿಟ್ ಸಿನಿಮಾಗಳೇ ಆದವು.. ಅತ್ತ ಅಮಿತಾಬ್ ಬಚ್ಚನ್ ಅವರು ಈ ವಯಸ್ಸಿನಲ್ಲಿಯೂ ಕೆಲಸ ಮಾಡುತ್ತಲೇ ಇದ್ದಾರೆ..

ಆದರೆ ಸ್ಟಾರ್ ನಟನ ಮಗನಾದರೂ ಅಭಿಷೇಕ್ ಬಚ್ಚನ್ ಅವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ.. ಅದ್ಯಾಕೋ ಅಭಿಷೇಕ್ ಅವರು ಮಾಡಿದ ಸಿನಿಮಾಗಳು ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ.. ಬರುಬರುತ್ತಾ ಅವಕಾಶಗಳು ಸಹ ಕಡಿಮೆಯಾದವು.. ಅತ್ತ ವ್ಯಯಕ್ತಿಕ ಜೀವನದಲ್ಲಿ ಐಶ್ವರ್ಯಾ ಹಾಗೂ ಅಭಿಷೇಕ್ ನಡುವೆ ಭಿನ್ನಾಭಿಪ್ರಾಯ ಮೂಡಿ ಇಬ್ಬರು ದೂರಾಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಜೋರಾಗಿಯೇ ಕೇಳಿ ಬಂದಿತ್ತು.. ಆದರೆ ಆ ಬಳಿಕ ಎಲ್ಲವೂ ತಿಳಿಯಾಗಿತ್ತು.. ಆದರೆ ಇದೀಗ ಮತ್ತೊಮ್ಮೆ ಆರ್ಥಿಕ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಮೂಡಿದ್ದು ಹೆಂಡತಿಗಾಗಿ ಖರೀದಿ ಮಾಡಿದ್ದ ಅಪಾರ್ಟ್ಮೆಂಟ್ ಅನ್ನು ಮಾರಿ ಬೇರೆ ಉದ್ಯಮದಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಅಭಿಷೇಕ್ ಬಚ್ಚನ್ ಅವರು ಮಾಡಿದ್ದರು ಎನ್ನಲಾಗಿತ್ತು..

ಹೌದು ಅಕ್ಷಯ್‌ ಕುಮಾರ್‌ ಹಾಗೂ ಶಾಹಿದ್‌ ಕಪೂರ್‌ ಆ ಅಪಾರ್ಟಮೆಂಟ್‌ ನಲ್ಲಿ ಬಾಡಿಗೆಗೆ ಇದ್ದರು ಎನ್ನಲಾಗಿತ್ತು.. ಆದರೆ ಸದ್ಯ ಅದನ್ನು ಮೂರು ಮುಕ್ಕಾಲು ಕೋಟಿ ರೂಪಾಯಿ ಲಾಭಕ್ಕೆ ಮಾರಿ ಬೇರೆ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಅಭಿಷೇಕ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾಗುವಂತಾಗಿದೆ.. ಹೌದು ಅಭಿಷೇಕ್ ಬಚ್ಚನ್ ಅವರು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು ಕೈಗೆ ಗಂಭೀರವಾದ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.. ಅತ್ತ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಅವರ ಸಹೋದರಿ ಶ್ವೇತಾ ಬಚ್ಚನ್ ಆಸ್ಪತ್ರೆಯ ಮುಂದೆಯೇ ಓಡಾಡುತ್ತಿದ್ದು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ..

ಇತ್ತ ಓಟಿಟಿ ಪ್ಲಾಟ್ಫಾರ್ಮ್ ಗಾಗಿ ಕೆಲ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದ ಅಭಿಷೇಕ್ ಬಚ್ಚನ್ ಇನ್ನೂ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿಯೂ ತೊಡಗಿ ಕೊಂಡಿದ್ದರು.. ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದೆಯೋ ಅಥವಾ ಬೇರೆ ಎಲ್ಲಿಯಾದರೂ ಗಂಭೀರವಾಗಿ ಗಾಯಗೊಂಡಿದ್ದಾರೋ ಮಾಹಿತಿ ತಿಳಿದು ಬರಬೇಕಿದೆ.. ಆದರೆ ಸಧ್ಯ ಅಭಿಷೇಕ್ ಅವರ ಜೊತೆ ಕುಟುಂಬಸ್ಥರು ಆಸ್ಪತ್ರೆಯಲ್ಲಿಯೇ ಇದ್ದು ಹಾರೈಕೆ ಮಾಡುತ್ತಿದ್ದಾರೆ.. ಹೌದು ನೋವಿನ ಮೇಲೆ‌ನೋವು ಎಂಬಂತೆ ಕೈ ಬಲವಾದ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿರುವ ಅಭಿಷೇಕ್ ಬಚ್ಚನ್ ಅವರಿಗೆ ಇತ್ತ ಅಭಿಮಾನಿಗಳು ಹಾಗೂ ಸ್ನೇಹಿತರು ಅಭಿಷೇಕ್ ಬಚ್ಚನ್ ರ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ‌‌..