ಮೈಸೂರಿನಲ್ಲಿ ಪ್ರೀತಿಸಿ ಮದುವೆಯಾದ ಜೋಡಿ ಒಂದೇ ದಿನಕ್ಕೆ ಏನಾದರು ನೋಡಿ..

0 views

ಪ್ರೀತಿ ಪ್ರೇಮ ಅನ್ನೋದು ಇತ್ತೀಚಿನ ದಿನದಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿ ಹೋಗಿದೆ.. ವಯಸ್ಸಿಗೆ ಬಂದ ಯುವಕ ಯುವತಿಯರು ಪ್ರೀತಿ ಮಾಡಲೇ ಬೇಕು ಎಂಬುದು ಕಡ್ಡಾಯವೆಂಬಂತೆ ಈಗಿನ ಯುವಜನತೆ ಪ್ರೀತಿಯಲ್ಲಿ ಬಿದ್ದಂತೆ ಕಾಣುತ್ತಿದೆ.. ಅದರಲ್ಲಿ ಅನೇಕರು ಪ್ರೀತಿಸಿದವರನ್ನೇ ಮದುವೆಯಾಗಿ ಹೊಸ ಜೀವನ ಕಟ್ಟಿಕೊಂಡರೆ ಕೆಲವರು ಸಮಯ ಕಳೆಯಲು ಸಹ ಪ್ರೀತಿ ಮಾಡೋದುಂಟು.. ಇನ್ನೂ ಕೆಲವರು ಅಪ್ಪ ಅಮ್ಮನಿಗಾಗಿ ಪ್ರೀತಿಸಿದವರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗೋದುಂಟು.. ಆದರೆ ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ತಮ್ಮ ಜೀವನ.. ತಮ್ಮ ಜೀವನದ ಗುರಿ ಬಗ್ಗೆ ಆಲೋಚನೆ ಮಾಡುವವರು ಮಾತ್ರ ಕೆಲವೇ ಮಂದಿ.. ಇನ್ನು ಕೆಲವರು ಅಪ್ಪ ಅಮ್ಮನನ್ನು ವಿರೋಧಿಸಿ ಪ್ರೀತಿಸಿದವರ ಕೈ ಹಿಡಿಯೋದುಂಟು..

ಅಂತಹವರಲ್ಲಿ ಕೆಲ ಜೋಡಿಗಳು ಒಳ್ಳೆಯ ಬದುಕನ್ನು ಕಟ್ಟಿಕೊಂಡರೆ ಮತ್ತೆ ಕೆಲವರ ಜೀವನ ಅತಂತ್ರವಾದ ಉದಾಹರಣೆಯೂ ಇದೆ.. ಅದೇ ರೀತಿ ಮೈಸೂರಿನಲ್ಲಿ ನಿನ್ನೆಯಷ್ಟೇ ಇಂತಹುದೇ ಒಂದು ಘಟನೆ ನಡೆದಿದ್ದು ಪ್ರೀತಿಸಿ ಮದುವೆಯಾದ ಜೋಡಿ ಒಂದೇ ದಿನಕ್ಕೆ ಏನಾದರು ಎಂದು ತಿಳಿದರೆ ಬೇಸರವನ್ನುಂಟು ಮಾಡುತ್ತದೆ.. ಹೌದು ಈತನ ಹೆಸರು ಅಭಿಷೇಕ್ ಈತ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಹಳ್ಳಿ ಗ್ರಾಮದ ನಿವಾಸಿ.. ಇನ್ನು ಈ ಹೆಣ್ಣು ಮಗಳ ಹೆಸರು ಅನನ್ಯ.. ಪಕ್ಕದ ಗ್ರಾಮ ಚೋಳೇನಹಳ್ಳಿಯ ನಿವಾಸಿ.. ಅನನ್ಯ ಹಾಗೂ ಅಭಿಷೇಕ್ ಅವರಿಗೆ ಹೇಗೋ ಪರಿಚಯವಾಗಿದ್ದು ಇಬ್ಬರೂ ಸ್ನೇಹಿತರಾಗಿ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ..

ಹೌದು ಅನನ್ಯ ಹಾಗೂ ಅಭಿಷೇಕ್ ಕಳೆದ ಎರಡು ವರೆ ವರ್ಷದಿಂದ ಪ್ರೀತಿಸುತ್ತಿದ್ದು ಮನೆಯವರಿಗೆ ಇವರಿಬ್ಬರ ಪ್ರೀತಿಯ ವಿಚಾರ ತಿಳಿದಿದೆ.. ಆದರೆ ಎರಡೂ ಕುಟುಂಬಗಳಲ್ಲಿ ಇಬ್ಬರ ಪ್ರೀತಿಗೂ ಒಪ್ಪಿಲ್ಲ ಎನ್ನಲಾಗಿದೆ.. ಇನ್ನು ಇಬ್ಬರೂ ಸಹ ಒಬ್ಬರನೊಬ್ಬರು ಬಿಟ್ಟಿರಲಾಗದೇ ಓಡಿ ಹೋಗಿ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ.. ಅಂದುಕೊಂಡಂತೆ ಇಬ್ಬರು ಸಹ ಕೊಡಗಿಗೆ ತೆರಳಿದ್ದು ಮಾರ್ಚ್ ಇಪ್ಪತ್ತೆಂಟರಂದು ಮೊನ್ನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶ್ರೀ ಬಾಲ ತ್ರಿಪುರಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಇಬ್ಬರು ಮದುವೆಯಾಗಿದ್ದಾರೆ..

ಮನೆಯವರ ವಿರೋಧದ ನಡುವೆಯೂ ಇಬ್ಬರು ಕೊಡಗಿಗೆ ಬಂದು ಮದುವೆಯೇನೋ ಆದರು.. ಆದರೆ ಮದುವೆಯಾದ ಒಂದೇ ದಿನದಲ್ಲಿ ಇವರಿಬ್ಬರು ಊಹಿಸಿರದ ಘಟನೆ ನಡೆದು ಹೋಗಿದೆ.. ಹೌದು ಒಂದೇ ದಿನಕ್ಕೆ ಅನನ್ಯ ತವರು ಮನೆ ಸೇರುವಂತಾಗಿದೆ.. ಇದೀಗ ಅಭಿಷೇಕ್ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.. ಹೌದು ಅನನ್ಯ ಹಾಗೂ ಅಭಿಷೇಕ್ ಇಬ್ಬರುಸಹ ಮದುವೆಯಾದ ಬಳಿಕ ಮಾರ್ಚ್ ಇಪ್ಪತ್ತೊಂಭತ್ತರಂದು ಊರಿಗೆ ಮರಳುತ್ತಿದ್ದರು.. ಆ ಸಮಯದಲ್ಲಿ ಹುಣಸೂರಿನ ಕೆಫೆ ಕಾಫಿ ಡೇ ಬಳಿ ಕಾಫಿ ಕುಡಿಯಲು ಬಂದಿದ್ದಾರೆ..

ಅದೇ ಜಾಗಕ್ಕೆ ಬಂದ ಅನನ್ಯ ಸಂಬಂಧಿಕರು.. ಅಭಿಷೇಕ್ ಮೇಲೆ ಕೈ ಮಾಡಿದ್ದಾರೆ.. ನಂತರ ಅಲ್ಲಿಂದ ಅನನ್ಯಳನ್ನು ಬಲವಂತವಾಗಿ ಕರೆದುಕೊಂಡು ಹೋಗುವ ಸಮಯದಲ್ಲಿ ಸಾರ್ವಜನಿಕರು ಬಂದು ಎಲ್ಲರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.. ಅಲ್ಲಿ ಘಟನೆ ಬಗ್ಗೆ ವಿಚಾರಿಸಿದಾಗ ಒಬ್ಬರು ಸಹ ಮೇಜರ್ ಆಗಿರುವ ಕಾರಣ ಇಬ್ಬರನ್ನು ಅವರ ಪಾಡಿಗೆ ಬಿಡಿ.. ಇಬ್ಬರನ್ನು ಕರೆದುಕೊಂಡು ಹೋಗಿ ಅವರ ತಾಯಿ ಬಳಿ ಮಾತನಾಡಿಸಿ ಎಂದಿದ್ದಾರೆ.. ಆಯಿತು ಎಂದು ಪೊಲೀಸ್ ಠಾಣೆ ಇಂಡ ಹೊರ ಬಂದ ನಂತರ ಹುಡುಗಿಯನ್ನು ಬಲವಂತವಾಗಿ ಆಕೆಯ ಸಂಬಂಧಿಕರು ಕರೆದುಕೊಂಡು ಹೋಗಿದ್ದು ಇದೀಗ ಅಭಿಷೇಕ್ ಪೊಲೀಸರ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ..

ಇತ್ತ ಅಭಿಷೇಕ್ ಹುಣಸೂರಿನ ಪೊಲಿಸ್ ಠಾಣೆಯಲ್ಲಿ ಪೊಲೀಸರು ನನ್ನ ಹೆಂಡತಿಯನ್ನು ನನ್ನ ಜೊತೆ ಕಳುಹಿಸಿಕೊಡಲಿಲ್ಲ ಎನ್ನುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾದ್ಯಮದ ಮುಂದೆ ಬಂದಿದ್ದಾರೆ.. ಹೌದು ಮದುವೆಯಾಗುವ ಮುನ್ನ ಪ್ರೀತಿಸಿದವರನ್ನು ವಿರೋಧ ಮಾಡುವುದು ಸಾಮಾನ್ಯ.. ಆದರೆ ಮದುವೆಯಾದ ನಂತರ ಹೆಂಡತಿಯನು ಬೇರೆ ಮಾಡಿರುವುದಕ್ಕೆ ಅಭಿಷೇಕ್ ಹೆಂಡತಿಯನ್ನು ಮರಳಿ ಕರೆತರುವ ಸಲುವಾಗಿ ಪರದಾಡುವಂತಾಗಿದೆ.. ಪ್ರೀತಿಸುವುದು ಸುಲಭ‌.. ಆದರೆ ಬದುಕು ಕಟ್ಟಿಕೊಳ್ಳುವ ದಾರಿಯಲಿ ನಿಜಕ್ಕೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಅನನ್ಯ ಹಾಗೂ ಅಭಿಷೇಕ್ ಘಟನೆಯೇ ನೈಜ್ಯ ಉದಾಹರಣೆ..