ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯ ಸಿಹಿ ಸುದ್ದಿ ನೀಡಿದ ನಟಿ ಅದಿತಿ ಪ್ರಭುದೇವ್.. ಹುಡುಗ ಯಾರು ಗೊತ್ತಾ..

0 views

ನಟಿ ಅದಿತಿ ಪ್ರಭುದೇವ್.. ಕನ್ನಡ ಕಿರುತೆರೆ ಮೂಲಕ ಜನರ ಮನಗೆದ್ದು ನಂತರ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡು ಸಧ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ನಟಿ ಅದಿತಿ ಪ್ರಭಿದೇವ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷವನ್ನೂ ಸಹ ಹಂಚಿಕೊಂಡಿದ್ದಾರೆ.. ಹೌದು ಕಲರ್ಸ್ ಸೂಪರ್ ವಾಹಿನಿಯ ನಾಗ ಕನ್ನಿಕೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ ಸಿಕ್ಕಾಪಟ್ಟೆ ಫೇಮಸ್ ಆದರು.. ಸಿನಿಮಾ ಹೀರೋಯಿನ್ ಗೂ ಕಡಿಮೆ ಇಲ್ಲದಂತಿದ್ದ ಅದಿತಿಗೆ ಮೊದಲ ಧಾರಾವಾಹಿಯಲ್ಲಿಯೇ ಸಿ‌ನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು.. ಸ್ಯಾಂಡಲ್ವುಡ್ ಗೆ ಕಾಲಿಟ್ಟ ಅದಿತಿ ಪ್ರಭುದೇವ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಶ್ಯಾನೇ ಟಾಪಾಗವ್ಳೆ ಹಾಡಿನ ಮೂಲಕ ಟ್ರೆಂಡ್ ಆದ ಅದಿತಿ ಸಾಕಷ್ಟು ಹುಡುಗರಿಗೆ ಕ್ರಶ್ ಆದರು..

ಇನ್ನು ಸಿನಿಮಾ ಮಾತ್ರವಲ್ಲದೇ ಅದಿತಿ ನಡೆದುಕೊಳ್ಳುವ ರೀತಿಯಿಂದಲೂ ಜನರಿಗೆ ಹತ್ತಿರವಾಗಿದ್ದರು.. ಹಳ್ಳಿ ಜೀವನ ರೈತಾಪಿ ಕುಟುಂಬ ಹೊಲ ಗದ್ದೆ ಹಸು ಕರು ಅಂತ ಕೆಲಸ ಮಾಡುವ ಅದಿತಿ ಒಂದು ಕೈ ಹೆಚ್ಚಾಗಿಯೇ ನಮ್ ಗಂಡ್ ಹೈಕಳಿಗೆ ಇಷ್ಟ ಆಗಿ ಬಿಟ್ಟರು.. ಇನ್ನು ಕನ್ನಡ ನಾಡು ನುಡಿ ಭಾಷೆ ಅನ್ನೋ ವಿಚಾರಕ್ಕೆ ಬಂದರೆ ಸದಾ ಮೊದಲಿಗರಾಗಿ ನಿಲ್ಲುವರು‌.. ಇಲ್ಲೇ ಬೆಳೆದು ಬೇರೆ ಭಾಷೆಗೆ ಹೋಗಿ ಕನ್ನಡ ಬರಲ್ಲ ಎನ್ನುವವರ ಮುಂದೆ ಮೊದಲು ಕನ್ನಡ ನಂತರ ಮಿಕ್ಕಿದ್ದು ಎನ್ನುವ ಅದಿತಿ ನೋಡೋಕೆ ಮಾತ್ರ ಅಲ್ಲ ನಡೆಯಲ್ಲಿಯೂ ಟಾಪ್ ಎನ್ನಬಹುದು..

ಇನ್ನು ಈ ಚೆಂದದ ನಟಿ ಸಧ್ಯ ತಮ್ಮ ಜೀವನದ ಹೊಸ ಅಧ್ಯಾಯ ಬರೆಯಲು ಮುಂದಾಗುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ‌.‌ ಹೌದು ನಟಿ ಅದಿತಿ ಪ್ರಭುದೇವ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದ್ದು ಇದಕ್ಕೆ ಕಾರಣ ಅದಿತಿ ಸಾಮಾಜಿಕ ಜಾಲತಾಣದಲ್ಲಿ ಪುರುಷರೊಬ್ಬರ ಜೊತೆ ಫೋಟೋ ಪೋಸ್ಟ್ ಮಾಡಿ ಸಂತೋಷ ಹಂಚಿಕೊಂಡಿರುವುದು.. ಹೌದು ಅದಿತಿ ಪ್ರಭುದೇವ ಅದಾಗಲೇ ಯಾರಿಗೂ ತಿಳಿಸದೇ ಅದೇ ಹುಡುಗನ ಜೊತೆ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಂಡಿದ್ದಾರೆ.

ಹೌದು ಅದಿತಿ ಹುಡುಗನ ಜೊತೆ ಆತ್ಮೀಯವಾಗಿರುವ ಅದರಲ್ಲಿಯೂ ತಮ್ಮ ಕೈ ಬೆರಳ ಉಂಗುರ ಹೈ ಲೈಟ್ ಆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅದಿತಿ “ಒಂದು ಕನಸಿನಂತೆ ನನ್ನ ಈ ಕನಸು ನನಸಾಯಿತು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಕೆಲ ಗಂಟೆಗಳ ನಂತರ ಎಂಗೇಜ್ಡ್ ಅಂತ ತಮ್ಮ ಪೋಸ್ಟ್ ಅನ್ನು ಎಡಿಟ್ ಮಾಡಿದ್ದು ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಅಧಿಕೃತವಾಗಿದೆ..

ಇನ್ನು ಈ ಫೋಟೋ ನೋಡಿದ ಅಭಿಮಾನಿಗಳು ಅದಿತಿ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.. ಅಭಿಮಾನಿಗಳು ಮಾತ್ರವಲ್ಲದೇ ಅದಿತಿಯ ಸಿನಿಮಾ ಸ್ನೇಹಿತರು ಕೂಡ ಅದಿತಿಗೆ ಶುಭ ಹಾರೈಸಿದ್ದು ಅದಿತಿ ಅದಾಗಲೇ ನಿಶ್ಚಿತಾರ್ಥ ಮಾಡಿಕೊಂಡಿರುವುದು ಖಚಿತವಾಗಿದೆ.. ಆದರೆ ಇಷ್ಟೆಲ್ಲಾ ಕಮೆಂಟ್ ಗಳು ಬಂದರೂ ಸಹ ಅದಿತಿ‌ ಮಾತ್ರ ಎಲ್ಲಿಯೂ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದರು.. ಆದರೆ ಸಾಕಷ್ಟು ಜನರು ಕಮೆಂಟ್ ಮಾಡಿದ ಬಳಿಕ ತಾವು ಎಂಗೇಜ್ ಆಗಿರುವ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ..

ಹೌದು ಮೂಲಗಳ ಪ್ರಕಾರ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಸತ್ಯ ಎನ್ನಲಾಗಿದ್ದು ಮುಂದಿನ ವರ್ಷ ಮದುವೆ ಸಮಾರಂಭ ನೆರವೇರಲಿದೆ ಎಂದು ತಿಳಿದುಬಂದಿದೆ.. ಆದರೆ ಹುಡುಗ ಯಾರು ಏನು ಮಾಡಿಕೊಂಡಿದ್ದಾರೆ ಎಂಬುದನ್ನು ಅದಿತಿಯೇ ತಿಳಿಸಬೇಕಿದ್ದು ಕೆಲ ದಿನಗಳಲ್ಲಿ ಈ ಬಗ್ಗೆ ಅದಿತಿ ಅವರೇ ಅಧಿಕೃತವಾಗಿ ತಿಳಿಸಬಹುದಾಗಿದೆ.. ಒಟ್ಟಿ‌ನಲ್ಲಿ ಸಧ್ಯ ಸಿನಿಮಾ ಜೀವನದಿಂದ ಮದುವೆ ಜೀವನಕ್ಕೆ ಕಾಲಿಡುತ್ತಿರುವ ಕಲಾವಿದರ ಸಾಲಿಗೆ ಇದೀಗ ಅದಿತಿ ಕೂಡ ಸೇರುತ್ತಿದ್ದು ಮುಂಬರುವ ದಿನಗಳಲ್ಲಿ ಸಿನಿಮಾ ವೃತ್ತಿಯನ್ನು ಮುಂದುವರೆಸುವರೋ ಅಥವಾ ಸಂಪೂರ್ಣ ಹೋಮ್ ಮೇಕರ್ ಆಗಿರುವರೋ ಕಾದು ನೋಡಬೇಕಿದೆ..