ನಟ ಧನುಶ್ ಐಶ್ವರ್ಯಾ ಡಿವೋರ್ಸ್ ಪಡೆದ ಕೆಲವೇ ದಿನದಲ್ಲಿ ಏನಾಗಿದೆ ನೋಡಿ.. ಗಂಡ ಹೆಂಡತಿ ಪ್ರೀತಿ ಅಂದರೆ ಇದೇ..

0 views

ನಟ ಧನುಶ್.. ತಮಿಳಿನ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಧನುಶ್ ತಮ್ಮದೇ ಆದ ಒಂದು ವಿಭಿನ್ನ ಶೈಲಿಯಲ್ಲಿ ಸಿನಿಮಾ ಮಾಡಿಕೊಂಡು ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವುದು ಎಲ್ಲರಿಗೂ ತಿಳಿದೇ ಇದೆ.. ಇತ್ತ ತಮಿಳು ಮಾತ್ರವಲ್ಲ ಭಾರತದ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿ ಕಾಂತ್ ಅವರ ಮಗಳು ಐಶ್ವರ್ಯಾ ರನ್ನು ಮದುವೆಯಾಗಿದ್ದ ಧನುಶ್ ಅವರು ಕಳೆದ ತಿಂಗಳಷ್ಟೇ ತಮ್ಮ ಹದಿನೆಂಟು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು.. ಹೌದು ಅಭಿಮಾನಿಗಳು ಮೆಚ್ಚಿದ ಸ್ಟಾರ್ ಜೋಡಿಗಳಲ್ಲಿ ಒಂದಾಗಿದ್ದ ಐಶ್ವರ್ಯಾ ಹಾಗೂ ಧನುಶ್ ಜೋಡಿ ಅಧಿಕೃತವಾಗಿ ದೂರವಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು..

ಹೌದು ಈ ಬಗ್ಗೆ ಖುದ್ದು ಧನುಶ್ ಅವರೇ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಸ್ನೇಹಿತರಿಗೆ ವಿಚಾರ ತಿಳಿಸಿದ್ದರು.. ಸ್ನೇಹಿತರಾಗಿ ನಂತರ ದಂಪತಿಗಳಾಗಿ ಇಬ್ಬರು ಮಕ್ಕಳ ಪೋಷಕರಾಗಿ ಸುಂದರ ಜೋಡಿ ಎನಿಸಿಕೊಂಡಿದ್ದ ಧನುಶ್ ಹಾಗೂ ಐಶ್ವರ್ಯಾ ಜೋಡಿ ದೂರವಾಗಿದ್ದು ಅಭಿಮಾನಿಗಳಿಗೆ ಬಹಳಷ್ಟು ಬೇಸರವನ್ನುಂಟು ಮಾಡಿರುವುದು ಸತ್ಯ.. ಇನ್ನು ಈ ಬಗ್ಗೆ ಆ ಸಮಯದಲ್ಲಿ ಮಾತನಾಡಿದ್ದ ಧನುಶ್ “ಸ್ನೇಹಿತರು, ದಂಪತಿಗಳು ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಹದಿನೆಂಟು ವರ್ಷಗಳ ಕಾಲ ಜೀವನ ಮಾಡಿದೆವು.. ನಮ್ಮಿಬ್ಬರ ಈ ಪ್ರಯಾಣವು ಹೊಂದಾಣಿಕೆ ತಿಳುವಳಿಕೆ ಹಾಗೂ ಬೆಳವಣಿಗೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು..

ಆದರೆ ಇಂದು ನಾವು ಬೇರೆ ಬೇರೆ ದಾರಿಯಲ್ಲಿ ನಡೆಯುವ ಸ್ಥಳದಲ್ಲಿ ಬಂದು ನಿಂತಿದ್ದೇವೆ.. ಐಶ್ವರ್ಯಾ ಹಾಗೂ ನಾನು ಇಬ್ಬರೂ ಸಹ ದಾಂಪತ್ಯ ಜೀವನದಿಂದ ದೂರವ್ಗುವ ನಿರ್ಧಾರವನ್ನು ಮಾಡಿದ್ದೇವೆ.. ದಯವಿಟ್ಟು ನೀವೆಲ್ಲರೂ ನಮ್ಮ ನಿರ್ಧರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ನಮ್ಮದೇ ಆದ ಸಮಯವನ್ನು ನೀಡಿ ಎಂದು ಬರೆದು ಪೋಸ್ಟ್ ಮಾಡಿದ್ದರು.. ಈ ಪೋಸ್ಟ್ ನೋಡುತ್ತಿದ್ದಂತೆ ಅಭಿಮಾನಿಗಳು ಬಹಳಷ್ಟು ಮಂದಿ ಬೇಸರ ವ್ಯಕ್ತ ಪಡಿಸಿದರೆ.. ಮತ್ತಷ್ಟು ಮಂದಿ ಮುಂದಿನ ಜೀವನದ ಬಗ್ಗೆ ಗಮನ ನೀಡಿ.. ವ್ಯಯಕ್ತಿಕವಾಗಿ ಯಾರ್ಯಾರಿಗೆ ಏನೇನು ನೋವಿರುವುದೋ ಹೇಳಲಾಗದು ಎಂದು ಮುಂದಿನ ಜೀವನಕ್ಕೆ ಶುಭ ಕೋರಿದ್ದರು..

ಆದರೀಗ ಧನುಶ್ ಹಾಗೂ ಐಶ್ವರ್ಯಾ ಮತ್ತೆ ಒಂದಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಹೌದು ಇಬ್ಬರು ದೂರಾದ ಕೆಲವೇ ದಿನಗಳಲ್ಲಿ ಐಶ್ವರ್ಯಾ ಅವರು ಆಸ್ಪತ್ರೆ ಸೇರುವಂತಾಗಿದೆ.. ಹೌದು ಐಶ್ವರ್ಯಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಈ ಬಗ್ಗೆ ಖುದ್ದು ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಚಾರ ತಿಳಿಸಿ ಎಲ್ಲರೂ ಎಚ್ಚರಿಕೆಯಾಗಿರಿ.. ನಾನು ಸಾಕಷ್ಟು ಕಾಳಜಿ ವಹಿಸಿಯೂ ಕೂಡ ಕೊರೊನಾ ಸೋಂಕು ತಗುಲಿದೆ.. ನೀವೆಲ್ಲರೂ ಮಾಸ್ಕ್ ಧರಿಸಿ ಲಸಿಕೆ ಪಡೆದು ಎಚ್ಚರಿಕೆಯಿಂದಿರಿ ಎಂದಿದ್ದಾರೆ.. ಇನ್ನು ವಿಚಾರ ತಿಳಿದ ಕೂಡಲೇ ಧನುಶ್ ಅವರು ಆಸ್ಪತ್ರೆಗೆ ತೆರಳಿ ಐಶ್ವರ್ಯಾ ಅವರ ಆರೋಗ್ಯ ವಿಚಾರ್ಸಿ ಕಾಳಜಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ..

ಇತ್ತ ಧನುಶ್ ಅವರ ತಂದೆಯೂ ಸಹ ಈ ಮುನ್ನ ಮಗ ಹಾಗೂ ಸೊಸೆಯ ಡಿವೋರ್ಸ್ ಬಗ್ಗೆ ಮಾತನಾಡಿ.. ಇದು ಗಂಡ ಹೆಂಡತಿ ನಡುವಿನ ಸಣ್ಣ ಭಿನ್ನಾಭಿಪ್ರಾಯವಷ್ಟೇ ಅವರಿಬ್ಬರು ಒಟ್ಟಿಗೆ ಹೈದರಾಬಾದ್ ನಲ್ಲಿ ಜೊತೆಯಾಗಿದ್ದಾರೆ ಎಂದಿದ್ದರು.. ಇತ್ತ ರಜನಿ ಕಾಂತ್ ಅವರೂ ಸಹ ಈ ವಿಚಾರ ತಿಳಿದು ಐಶ್ವರ್ಯಾ ಹಾಗೂ ಧನುಶ್ ಬಳಿ ಮಾತನಾಡಿದ್ದಾರೆ ಎನ್ನಲಾಗಿದೆ.. ಸಧ್ಯ ಪತ್ನಿಗೆ ಕೊರೊನಾ ಸೋಂಕು ತಗುಲಿರುವ ವಿಚಾರ ತಿಳಿದು ಕಾಳಜಿ ವಹಿಸಿರುವ ಧನುಶ್ ಅವರು ಮತ್ತೆ ಐಶ್ವರ್ಯಾ ಅವರ ಜೊತೆ ಒಟ್ಟಾಗಿ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ..