ಅತ್ತೆಯ ಜೊತೆ ಧಬೆ ಧಬೆ ಜಲಪಾತ ನೋಡಲು ಬಂದಳು.. ಆದರೆ ಮುಂದೆ ಆಗಿದ್ದೇ ಬೇರೆ.. ಬೆಚ್ಚಿಬಿದ್ದ ಕುಟುಂಬದವರು..

0 views

ಜೀವನದಲ್ಲಿ ಒಮ್ಮೊಮ್ಮೆ ತಿರುವುಗಳು ಯಾವ ಯಾವ ರೀತಿಯಲ್ಲಿ ಯಾವ ಸಮಯದಲ್ಲಿ ಬರುವುದೋ ತಿಳಿಯದು.. ಆದರೆ ಕೆಲವೊಂದು ಸಂದರ್ಭ ಗಳು ಜೀವನವೇ ಕೊನೆಯಾಗುವಂತೆ ಮಾಡಿಬಿಡುತ್ತದೆ.. ಅದೇ ರೀತಿ ಇಲ್ಲೊಂದು ಮನಕಲಕುವ ಘಟನೆ ನಡೆದಿದ್ದು ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ.. ಹೌದು ಗೃಹಿಣಿಯೊಬ್ಬರು ತನ್ನ ಅತ್ತೆಯ ಜೊತೆ ಧಬೆ ಧಬೆ ಜಲಪಾತ ನೋಡಲೆಂದು ಬಂದರು.. ಆದರೆ ಮುಂದೆ ನಡೆದದ್ದೂ ಮಾತ್ರ ಮನಕಲಕುವ ಘಟನೆ.. ಈ ಘಟನೆ ನಡೆದಿರುವುದು ನಮ್ಮದೇ ರಾಜ್ಯದ ಯಾದಗಿರಿಯ ಗುರುಮಠಕಲ್ ನಲ್ಲಿ..

ಹೌದು ಈ ಹೆಣ್ಣು ಮಗಳ ಹೆಸರು ಐಶ್ಚರ್ಯಾ ಶರಣು.. ವಯಸ್ಸಿನ್ನು ಕೇವಲ ಇಪ್ಪತ್ತ ಮೂರು.. ಈಕೆಗೆ ಕೆಲ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದು ಒಂದು ವರ್ಷದ ಪುಟ್ಟ ಕಂದಮ್ಮನೂ ಇದೆ.. ಯಾದಗಿರಿ ಸಮೀಪದ ಚಿತ್ತಾಪುರಕ್ಕೆ ಮದುವೆಯಾಗಿದ್ದ ಐಶ್ವರ್ಯಾ ಶರಣು ಅಲ್ಲಿಯೇ ಕೂಡು ಕುಟುಂಬವಾದ ಅತ್ತೆಯ ಮನೆಯಲ್ಲಿ ಇದ್ದಳು.. ಒಳ್ಳೆಯ ಮನೆ ಒಳ್ಳೆಯ ಅತ್ತೆ ಮಾವ.. ಒಳ್ಳೆಯ ಗಂಡ ಹಾಗೂ ಮಗು.‌. ಜೀವನಕ್ಕೆ ಇನ್ನೇನು ಬೇಕಿ ಎನ್ನುವಂತಿತ್ತು.. ನೆಮ್ಮದಿಯಿಂದ ಸಂಸಾರ ಮಾಡಿಕೊಂಡಿದ್ದರು.. ಆದರೆ ಮನೆಯಲ್ಲಿಯೇ ಇದ್ದು ಬೇಸರವಾಗುತ್ತಿದೆ ಎಂದು ಅತ್ತೆ ಹಾಗೂ ಇಬ್ಬರು ಸೊಸೆಯಂದಿರು ಮತ್ತು ಅಕ್ಕ ಪಕ್ಕದ ಮಹಿಳೆಯರು ತೆಗೆದುಕೊಂಡ ನಿರ್ಧಾರ ಇಂದು ಒಂದು ಹೆಣ್ಣು ಮಗಳೇ ಇಲ್ಲವಾಗುವಂತಾಗಿ ಹೋಗಿದೆ..

ಹೌದು ನಿನ್ನೆ ಚಿತ್ತಾಪುರದಿಂದ ಗುರಮಠಕಲ್ ಬಳಿಯ ಧಬೆ ಧಬೆ ಜಲಪಾತ ನೋಡಲು ಐಶ್ವರ್ಯಾ ಶರಣು ಹಾಗೂ ಅವರ ಅತ್ತೆ ಮತ್ತು ಮತ್ತೊಬ್ಬ ಸೊಸೆ ಹಾಗೂ ಅಕ್ಕ ಪಕ್ಕದ ಮಹಿಳೆಯರು ಸೇರಿ ಒಟ್ಟು ಏಳು ಜನರು ಜಲಪಾತ ನೋಡಲೆಂದು ಬಂದಿದ್ದಾರೆ.. ಭಾನುವಾರ ಪ್ರವಾಸದಿಂದ ಮನರಂಜನೆ ಪಡೆಯಲು ಬಂದ ಮಹಿಳೆಯರು ಇಂದು ಒಂದು ಮನೆಯ ದೀಪವೇ ಆರಿ ಹೋಗಿದೆ.. ಹೌದು ಏಳು ಜನರು ಜಲಪಾತ ನೋಡಿದ ಬಳಿಕ ಅಲ್ಲಿಯೇ ಪಕ್ಕದಲ್ಲಿ ಇದ್ದ ನೀರಿಗೆ ಬೇಡ ಬೇಡ ಎಂದರೂ ಕೇಳದೆ ಐಶ್ವರ್ಯಾ ಶರಣು ಸೇರಿದಂತೆ ನಾಲ್ವರು ಮಹಿಳೆಯರು ನೀರಿಗೆ ಇಳಿದಿದ್ದಾರೆ.. ಆದರೆ ನೀರಿಗೆ ಸಿಲುಕಿ ನಾಲ್ವರೂ ಸಹ ಮುಳುಗಿಹೋಗಿತ್ತಿದ್ದರು.. ತಕ್ಷಣ ಅಲ್ಲಿಯೇ ಇದ್ದ ಸ್ಥಳೀಯರು ಮೂವರನ್ನು ರಕ್ಷಣೆ ಮಾಡಿದ್ದಾರೆ.. ಆದರೆ ದುರ್ಧೈವ ಐಶ್ವರ್ಯಾ ಶರಣು ಮಾತ್ರ ಸಿಗಲೇ ಇಲ್ಲ‌‌.. ಹೌದು ನೀರಿನಲ್ಲಿ ಆಟವಾಡಲು ಹೋಗಿ ಜೀವನದ ಆಟವನ್ನೇ ನಿಲ್ಲಿಸಿ ಬಿಟ್ಟರು.. ಹೌದು ದುರಾದೃಷ್ಟವೆಂಬಂತೆ ಐಶ್ವರ್ಯಾ ಶರಣು ನೀರಿನಲ್ಲಿ ಸಿಲುಕಿ ಮುಳುಗಿ ಹೋದರು..

ನೋಡು ನೋಡುತ್ತಿದ್ದಂತೆ ಸೊಸೆಯನ್ನು ಕಳೆದುಕೊಂಡ ಆ ಅತ್ತೆ ಬೆಚ್ವಿಬಿದ್ದರು.. ತಕ್ಷಣ ಸ್ಥಳಕ್ಕೆ ಗುರುಮಠಕಲ್ ನ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.. ಸತತ ಎರಡು ಗಂಟೆಗಳ ಕಾಲ ಹುಡುಕಾಡಿ ಐಶ್ವರ್ಯಾ ಶರಣು ಅವರನ್ನು ಹೊರ ತಂದಿದ್ದಾರೆ.. ಆದರೆ ಕೆಲ ಗಂಟೆಗಳ ಮುನ್ನವಷ್ಟೇ ಎಲ್ಲರೊಟ್ಟಿಗೆ ಮಾತನಾಡಿಕೊಂಡು ಸಂತೋಷದಿಂದ ಇದ್ದ ಸೊಸೆಯನ್ನು ಅಲ್ಲಿನ ಸ್ಥಳೀಯರು ನೀರಿನಿಂದ ಹೊರ ತಂದದ್ದನ್ನು ನೋಡಿ ಅವರ ಕುಟುಂಬದವರು ನೋಡಿ ಕುಸಿದು ಬಿದ್ದಿದ್ದಾರೆ.. ಹೌದು ಇದೀಗ ಆ ಹದಿನಾಲ್ಕು ತಿಂಗಳ ಕಂದಮ್ಮ ಜೀವನ ಪೂರ್ತಿ ಅಮ್ಮನಿಲ್ಲದ ಜೀವನ ಸಾಗಿಸಬೇಕಿದೆ.. ಆ ಮಗು ಮಾಡಿದ ತಪ್ಪಾದರೂ ಏನು.. ಇತ್ತ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳಿಗೆ ಐಶ್ವರ್ಯಾ ಅವರ ಅತ್ತೆ ಕಾಲಿಗೆ ಬಿದ್ದಿದ್ದು ಏನು ಮಾಡಬೇಡ್ರಪ್ಪಾ ಮಗಳಂತೆ ನೋಡಿಕೊಂಡಿದ್ದೆ ನಾನು ಎಂದು ಗೋಳಾಡುತ್ತಿದ್ದು ಕಾಲಿಗೆ ಬೀಳಲು ಬಂದ ಆಕೆಯನ್ನು ತಡೆದು ನೀನು ನನ್ಮ ತಾಯಿಯಂತೆ ಇದ್ದೀಯಾ ನನ್ನ ಕಾಲಿಗೆ ಬೀಳಬೇಡಿ..

ನಾವು ಯಾರಿಗೂ ಏನು ಮಾಡೋದಿಲ್ಲ.. ಜೊತೆಯಲ್ಲಿ ಬಂದವರ ಹೇಳಿಕೆ ಪಡೆಯುತ್ತೇವೆ ಅಷ್ಟೇ ಎಂದು ಸಾಂತ್ವಾನ ಹೇಳಿದರು.. ಇತ್ತ ಸ್ಥಳಕ್ಕೆ ಆಗಮಿಸಿದ ಐಶ್ವರ್ಯ ಶರಣು ಅವರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.. ಮನರಂಜನೆಗಾಗಿ ಪ್ರವಾಸಕ್ಕೆಂದು ಬಂದು ಇದೀಗ ಜೀವನದಲ್ಲಿ ಎಂದೂ ಮರೆಯಲಾಗದ ಇಂತಹ ಘಟನೆಯ ನೋವಿನ ಜೊತೆಗೆ ಮರಳಿದರು.. ಇತ್ತ ಈ ಧಬೆ ಧಬೆ ಜಲಪಾತಕ್ಕೆ ಪ್ರತಿ ವಾರಾಂತ್ಯ ಅತಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಲೇ ಇದೆ ಎಂದು ಸಾರ್ವಜನಿಕರು ಜಿಲ್ಲಾಡಲಿತದ ಬಗ್ಗೆ ಅಸಮಾಧಾನವನ್ನು ಸಹ ವ್ಯಕ್ತ ಪಡಿಸಿದ್ದಾರೆ..

ಒಟ್ಟಿನಲ್ಲಿ ಈ ರೀತಿ ಪ್ರವಾಸಕ್ಕಾಗಿ ತೆರಳಿದಾಗ ಇಂತಹ ಅದೆಷ್ಟೋ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಸಹ ಅದನ್ನು ಸುದ್ದಿಗಳಲ್ಲಿ ನೋಡುತ್ತಿದ್ದರೂ ಸಹ ಜನರು ನೀರಿನ ಬಳಿ ಹೋದಾಗ ಅಥವಾ ಬೆಟ್ಟ ಗುಡ್ಡಗಳ ಮೇಲೆ ಹೋದಾಗ ಫೋಟೋ ಕಾರಣಕ್ಕೋ ಅಥವಾ ಮತ್ತೊಂದಕ್ಕೋ ಈ ರೀತಿ ಮುಂದೆ ಸಾಗಿ ಜೀವ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ದಯವಿಟ್ಟು ಯಾರೇ ಆಗಲಿ ಪ್ರವಾಸಗಳಿಗೆ ತೆರಳಿದಾಗ ಆದಷ್ಟು ನೀರಿನಿಂದ ಅಥವಾ ಬೆಟ್ಟ ಗುಡ್ಡಗಳ ತುದಿಯಲ್ಲಿ ನಿಂತಾಗ ಆದಷ್ಟು ಎಚ್ಚರಿಕೆ ವಹಿಸಿ.. ನಾವುಗಳೇನೋ ಹೋಗಿ ಬಿಡುತ್ತೇವೆ.ಮ್ ಹೋದ ನಂತರ ನಮಗೆ ಏನೂ ತಿಳಿಯಿವುದಿಲ್ಲ.. ಆದರೆ ನಮ್ಮನ್ನೆ ನಂಬಿಕೊಂಡ ಅಥವಾ ನಮ್ಮನ್ನೇ ಜೀವವೆಂದುಕೊಂಡ ಕುಟುಂಬ ನಾವಿಲ್ಲದೇ ಜೀವನ ಪೂರ್ತಿ ಕಣ್ಣೀರು ಇಡಬೇಕಾಗುತ್ತದೆ.. ಹೆತ್ತವರ ಸಂಕಟ ಹೇಳತೀರದಾಗಿರುತ್ತದೆ.. ದಯವಿಟ್ಟು ಯಾರೇ ಆಗಲಿ ಹೊರಗೆ ಹೋದಾಗ ಆದಷ್ಟು ಜಾಗೃತರಾಗಿರಿ..