ಡ್ಯಾನ್ಸಿಂಗ್ ಚಾಂಪಿಯನ್ ನ ಐಶ್ವರ್ಯಾರ ನಿಜ ಜೀವನದ ಕತೆ ಕೇಳಿದರೆ ಮನಕಲಕುತ್ತದೆ..

0 views

ಕಿರುತೆರೆ ಮತ್ತು ಬೆಳ್ಳಿತೆರೆ ಅಕ್ಕ ತಂಗಿ ಇದ್ದ ಹಾಗೆ ಅಂದರೆ ತಪ್ಪಾಗುವುದಿಲ್ಲ. ಕಿರುತೆರೆಯ ಕಲಾವಿದರು ಬೆಳ್ಳಿತೆರೆಗೆ ಬರುವುದು, ಬೆಳ್ಳಿತೆರೆಯ ಕಲಾವಿದರು ಕಿರುತೆರೆಗೆ ಬರುವುದು ಇದೆಲ್ಲವೂ ಸಾಮಾನ್ಯವಾಗಿದೆ. ಮೊದಲೆಲ್ಲಾ ಸೀರಿಯಲ್ ಕಲಾವಿದರನ್ನು ಸಿನಿಮಾಗೆ ಹೆಚ್ಚಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಸಿನಿಮಾ ಕಲಾವಿದರು ಸಹ ಸೀರಿಯಲ್ ಗಳು ಅಂದ್ರೆ ಅಷ್ಟಕ್ಕಷ್ಟೇ ಎನ್ನುವ ಹಾಗೆ ಇರುತ್ತಿದ್ದರು. ಇದಕ್ಕೆ ಕಾರಣ ಸೀರಿಯಲ್ ಅಂದ್ರೆ ಸಂಭಾವನೆ ಕಡಿಮೆ ಹಾಗೂ ಹೆಚ್ಚಿನ ಜನರನ್ನು ತಲುಪಲು ಆಗುವುದಿಲ್ಲ ಎನ್ನುವುದಾಗಿತ್ತು. ಆದರೆ ಈಗ ಹಾಗಲ್ಲ ಕಾಲ ಬದಲಾಗಿದೆ. ಸಿನಿಮಾದಷ್ಟೇ ಅದ್ಧೂರಿತನ ಸೀರಿಯಲ್ ನಲ್ಲೂ ಇದೆ. ಸಿನಿಮಾ ಕಲಾವಿದರಿಗೆ ಸಿಗುವ ಹಾಗೆ ಒಳ್ಳೆಯ ಸಂಭಾವನೆ ಧಾರಾವಾಹಿ ಕಲಾವಿದರಿಗೂ ಸಿಗುತ್ತಿದೆ. ಜನರಲ್ಲಿ ಕೂಡ ಧಾರಾವಾಹಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮತ್ತು ಬೇಡಿಕೆ ಇದೆ. ಹೀಗೆ ಬೆಳ್ಳಿತೆರೆಯಿಂದ ಕಿರುತೆರೆಗೆ ಬಂದಿರುವ ಕಲಾವಿದೆಯರಲ್ಲಿ ಒಬ್ಬರು ಐಶ್ವರ್ಯ ಶಿಂಡೋಗಿ.

ಈ ಹೆಸರು ಹೇಳಿದರೆ ನಿಮಗೆ ತಕ್ಷಣಕ್ಕೆ ಗೊತ್ತಾಗದೆ ಇರಬಹುದು. ಐಶ್ವರ್ಯಾ ಅವರು ಈಗ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಅದ್ಭುತವಾಗಿ ಡ್ಯಾನ್ಸ್ ಸಹ ಮಾಡುತ್ತಾರೆ. ಐಶ್ವರ್ಯ ಅವರು ನಟನೆ ಶುರು ಮಾಡಿದ್ದು ಸಿನಿಮಾ ಮೂಲಕ. ಮಟ್ಯಾಷ್ ಎನ್ನುವ ಕನ್ನಡ ಸಿನಿಮಾದಲ್ಲಿ ಇವರು ಅಭಿನಯಿಸಿದ್ದರು, ಸಿನಿಮಾ ಇಂದ ಈ ನಟಿ ಹೆಚ್ಚೇನೂ ಜನಪ್ರಿಯತೆ ಗಳಿಸಿಕೊಳ್ಳಲಿಲ್ಲ. ಧಾರಾವಾಹಿಯಿಂದ ಮನೆಮಾತಾದರು. ಇಂದು ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ನಲ್ಲಿ ಐಶ್ವರ್ಯ ಮಾಡುವ ಡ್ಯಾನ್ಸ್ ಗೆ ಜಡ್ಜ್ ಗಳು ಮತ್ತು ಇತರೆ ಸ್ಪರ್ಧಿಗಳು ಫಿದಾ ಆಗಿದ್ದಾರೆ.

ಇಂದು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುವ ಐಶ್ವರ್ಯ ಅವರು ಚಿಕ್ಕ ವಯಸ್ಸಿನಲ್ಲಿ ಡ್ಯಾನ್ಸ್ ಕ್ಲಾಸ್ ಗೆ ಸೇರಿ ಅರ್ಧಕ್ಕೆ ಬಿಟ್ಟು ಬಂದಿದ್ದರಂತೆ. ಆದರೆ ಇಂದು ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋನಲ್ಲಿ ಐಶ್ವರ್ಯ ಡ್ಯಾನ್ಸ್ ಪಾರ್ಟ್ನರ್ ಶಿವು ಆಗಿದ್ದು, ಅವರು ಸಹ ಐಶ್ವರ್ಯ ಅವರಿಗೆ ಒಳ್ಳೆಯ ಪಾರ್ಟ್ನರ್ ಆಗಿ ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ಜೋಡಿಯ ಪರ್ಫಾರ್ಮೆನ್ಸ್ ಅನ್ನು ಜಡ್ಜ್ ಗಳು ಇಷ್ಟಪಟ್ಟರು. ಈ ನಟಿ ಕೆಲವು ಧಾರಾವಾಹಿಗಳಲ್ಲಿ ಸಹ ಅಭಿನಯ ಮಾಡಿದ್ದಾರೆ.

ಐಶ್ವರ್ಯಾ ಅವರು ನಟಿಸಿರುವುದು ವಿಲ್ಲನ್ ಪಾತ್ರಗಳಲ್ಲಿ. ಮಂಗಳಗೌರಿ ಮದುವೆ, ನಾಗಿಣಿ2 ಧಾರಾವಾಹಿಗಳಲ್ಲಿ ನೆಗಟಿವ್ ಶೇಡ್ ನ ಪಾತ್ರದಲ್ಲಿ ಐಶ್ವರ್ಯ ಶಿಂಡೋಗಿ ಅಭಿನಯಿಸಿದ್ದಾರೆ. ಇವರ ಪಾತ್ರ ಹಾಗೂ ನೆಗಟಿವ್ ಶೇಡ್ ನಲ್ಲಿ ಐಶ್ವರ್ಯ ಅವರ ಅಭಿನಯವನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯ ಮಾಡುವ ಕನಸು ಕಂಡಿದ್ದಾರೆ ನಟಿ ಐಶ್ವರ್ಯ ಶಿಂಡೋಗಿ. ತೆರೆಮೇಲೆ ಕಾಣುವ ಹಾಗೆ ಬಣ್ಣದ ಜೀವನ ನಿಜವಾಗಿಯೂ ಅದೇ ರೀತಿ ಇರುವುದಿಲ್ಲ ಎನ್ನುವುದಕ್ಕೆ ಇವರು ಕೂಡ ಸಾಕ್ಷಿ. ಇವರ ಮನಸ್ಸಿನಲ್ಲಿ ಸದಾ ಕಾಡುವ ಒಂದು ನೋವು ಕೂಡ ಇದೆ.

ಐಶ್ವರ್ಯ ಶಿಂಡೋಗಿ ಅವರಿಗೆ ತಂದೆ ತಾಯಿ ಇಬ್ಬರು ಇಲ್ಲ. ಒಂದು ನಾಯಿಯನ್ನು ಸಾಕುತ್ತಾ ಬದುಕುತ್ತಿದ್ದಾರೆ ಈ ನಟಿ. ಪ್ರತಿಯೊಬ್ಬರ ಜೀವನದಲ್ಲೂ ತಂದೆ ತಾಯಿ ಅತ್ಯಂತ ಮುಖ್ಯವಾದ ವ್ಯಕ್ತಿಗಳು, ಅವರೆ ಇಲ್ಲದೆ ಒಂಟಿಯಾಗಿದ್ದಾರೆ ಐಶ್ವರ್ಯ. ಯಾರು ಇಲ್ಲದೆ ಹೋದರು, ಜೀವನದ ಎಲ್ಲಾ ಸವಾಲುಗಳನ್ನು ಎದುರಿಸಿ ಜೀವನ ನಡೆಸುತ್ತಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಯಿಂದ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಗಳನ್ನು ಸಹ ಗಳಿಸಿದ್ದಾರೆ ಐಶ್ವರ್ಯ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರು ಆಗಾಗ ಫೋಟೋಶೂಟ್ ಗಳಿಗೆ ಪೋಸ್ ನೀಡಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸುವ ಆಸೆ ಇಟ್ಟುಕೊಂಡಿದ್ದಾರೆ ಐಶ್ವರ್ಯ.