ಜೀವ ಕಳೆದುಕೊಂಡ ಈ ಹೆಣ್ಣು ಮಗಳು ಯಾರು ಗೊತ್ತಾ.. ಕಾರಣ ಕೇಳಿದ್ರೆ ಕರುಳು ಕಿತ್ತು ಬರುತ್ತದೆ..

0 views

ಆಗಿಂದಾಗ್ಗೆ ಪ್ರೀತಿ ಪ್ರೇಮದ ಹುಚ್ಚಿನಿಂದಾಗಿ ಯುವ ಜನತೆ ಜೀವ ಕಳೆದುಕೊಂಡ ಸುದ್ದಿಯನ್ನು ನೋಡಿರುತ್ತೇವೆ.. ಇವರಿಗೇನ್ ಬಂದಿರೋದು ಎಂದು ಬೈದುಕೊಂಡದ್ದೂ ಉಂಟು.. ಆದರೆ ಇಲ್ಲೊಂದು ಮನಕಲಕುವ ಘಟನೆ ನಡೆದಿದೆ.. ಈ ಹೆಣ್ಣು ಮಗಳು ಸಹ ದುಡುಕಿನ ನಿರ್ಧಾರದಿಂದ ಜೀವ ಕಳೆದುಕೊಂಡಿದ್ದಾಳೆ.. ಆದರೆ ಅದಕ್ಕೆ ಕಾರಣ ಮಾತ್ರ ಕರುಳು ಕಿತ್ತು ಬರುವಂತಿದೆ..

ಹೌದು ಈಕೆಯ ಹೆಸರು ಐಶ್ವರ್ಯ‌‌.. ವಯಸ್ಸಿನ್ನು ಕೇವಲ 19.. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಹೆಣ್ಣು ಮಗಳು.. ಕಳೆದ ವರ್ಷ ಪಿಯುಸಿಯಲ್ಲಿ ಶೇಕಡ 98.5 ಅಂಕ ಪಡೆದು ಟಾಪರ್ ಆಗಿದ್ದಳು.. ಮನೆಯಲ್ಲಿ ಬಹಳ ಬಡತನ.. ಅಪ್ಪ ಮೆಕ್ಯಾನಿಕ್.. ಅಮ್ಮ ಮನೆಯಲ್ಲಿಯೇ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದರು.. ಭಗವಂತ ಹಣಕಾಸಿನಲ್ಲಿ ಆ ಕುಟುಂಬಕ್ಕೆ ಬಡತನ ಕೊಟ್ಟ..

ಆದರೆ ಸಾಕ್ಷಾತ್ ಸರಸ್ವತಿ‌ ಮಾತೆ ಆಕೆಗೆ ಒಲಿದಿದ್ದಳು.. ಐ ಎ ಎಸ್ ಮಾಡಬೇಕೆಂಬ ಕನಸು ಹೊತ್ತಿದ್ದಳು.. ಅದೇ ರೀತಿ ಬಹಳ ಶ್ರಮ ಪಟ್ಟು ಓದುತ್ತಿದ್ದ ಐಶ್ವರ್ಯ.. ಐ ಎ ಎಸ್ ಅಧಿಕಾರಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದ ಅದೇ ಹುಡುಗಿ ಇದೇ ನವೆಂಬರ್ 2 ರಂದು ಪತ್ರ ಬರೆದಿಟ್ಟು ಜೀವ ಕಳೆದುಕೊಂಡೇ ಬಿಟ್ಟಳು..

ಹೌದು ” ನನ್ನ ಈ ನಿರ್ಧಾರಕ್ಕೆ ಯಾರೂ ಕಾರಣರಲ್ಲ.. ನನ್ನಿಂದ ನನ್ನ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ.. ನಾನು ಓದದೇ ಬದುಕಲು ಸಾಧ್ಯವಿಲ್ಲ.. ಈ ಎಲ್ಲಾ ಸಮಸ್ಯೆಗೆ ನನ್ನ ಈ ನಿರ್ಧಾರವೇ ಪರಿಹಾರವಾಗಿದೆ.. ನಾನು ನಿಮಗೆ ಒಳ್ಳೆಯ ಮಗಳು ಆಗಲಿಲ್ಲ.. ಅಪ್ಪ ಅಮ್ಮ ನನ್ನನ್ನು ನೀವು ದಯವಿಟ್ಟು ಕ್ಷಮಿಸಿ ಎಂದು ಪತ್ರದಲ್ಲಿ‌ ಬರೆದಿಟ್ಟು ಮನವಿ ಮಾಡಿಕೊಂಡು ಜೀವ ಕಳೆದುಕೊಂಡೇ ಬಿಟ್ಟಳು..

ಪಿಯುಸಿಯಲ್ಲಿ ರ್ಯಾಂಕ್‌ ಬಂದ ನಂತರ ದೆಹಲಿಯ ಕಾಲೇಜಿನಲ್ಲಿ ಬಿಎಸ್ ಸಿ ಓದಲು ಸೀಟ್ ಸಿಕ್ಕಿತು.. ಇದ್ದ ಮನೆಯನ್ನು ಅಡವಿಟ್ಟು ಅಪ್ಪ ಎರಡು‌ ಲಕ್ಷ ಸಾಲ ಮಾಡಿ ಖರ್ಚು ವೆಚ್ಛ ನೋಡಿಕೊಂಡಿದ್ದರು.. ಈಗಲೂ ಆ ಹಣಕ್ಕೆ ಬಡ್ಡಿ ಕಟ್ಟುತ್ತಲೇ ಇದ್ದರು.. ಫೆಬ್ರವರಿ ಯಲ್ಲಿ ಲಾಕ್ ಡೌನ್ ಆದ ಕಾರಣ ದೆಹಲಿಯಿಂದ ಊರಿಗೆ ಬಂದ ಐಶ್ವರ್ಯ ಇಲ್ಲಿಯೇ ಉಳಿದಳು.. 80 ಸಾವಿರ ಶಿಷ್ಯ ವೇತನ ಬರಲಿದೆ ಎಂದಿದ್ದಳು.. ಆದರೆ ಕೊರೊನಾ ಕಾರಣದಿಂದಾಗಿ ಸ್ಕಾಲರ್ಶಿಪ್ ಅಕೌಂಟ್ ಗೆ ಜಮೆ ಆಗಿರಲಿಲ್ಲ..

ಇತ್ತ ಆನ್ಲೈನ್ ಕ್ಲಾಸ್ ನಡೆಯುತಿತ್ತು.. ಮೊಬೈಲ್‌ ನಲ್ಲಿ ಅರ್ಥವಾಗುತ್ತಿರಲಿಲ್ಲ.. ಅಪ್ಪನ ಬಳಿ ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಡಿಸಿ ಎಂದು ಒಂದು ಬಾರಿ ಮನವಿ ಮಾಡಿಕೊಂಡಿದ್ದಳು.. ಸ್ವಲ್ಪ ದಿನ ಹಣ ಹೊಂದಿಸಿ ಕೊಡಿಸುವುದಾಗಿ ಅಪ್ಪ ಹೇಳಿದ್ದರು.. ಆದರೆ ಅತ್ತ ಆನ್ಲೈನ್ ಕ್ಲಾಸ್ ತಪ್ಪಿ‌ ಹೋಗುತ್ತಿತ್ತು.. ಇತ್ತ ಮನೆಯಲ್ಲಿ ಕಷ್ಟಗಳನ್ನು ನೋಡುತ್ತಿದ್ದ ಐಶ್ವರ್ಯ ಅಪ್ಪನ ಬಳಿ‌ ಮತ್ತೆ ಲ್ಯಾಪ್ ಟಾಪ್ ಕೇಳಲೇ ಇಲ್ಲ.. ಲಾಕ್ ಡೌನ್ ಆದಾಗಿನಿಂದ ಮನೆಯಲ್ಲಿ ಬಹಳ ಆರ್ಥಿಕ ಸಮಸ್ಯೆಗಳು ಎದುರಾಗಿದ್ದವು.. ಈ ನಡುವೆ ನನ್ನಿಂದ ಕೂಡ ಅಪ್ಪನಿಗೆ ಹೊರೆಯಾಗುತ್ತಿದೆ ಎಂದುಕೊಂಡು ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿಯೇ ಬಿಟ್ಟಳು..

ಅತ್ತ ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಸಂಕಟ ಹೇಳತೀರದಾಗಿದೆ.. ಎಲ್ಲಾ ಕೊಡಿಸಿ ಓದಿ ಎಂದು ಬೇಡಿಕೊಂಡರೂ ಓದದೇ ಇರುವ ಸಿರಿವಂತರೂ ಇರುವರು.. ಏನೂ ಇಲ್ಲದೇ ವಿದ್ಯೆಯಿಂದಲೇ ಆಕಾಶ ಮುಟ್ಟುವ ಕನಸು ಕಾಣುವ ಬಡ ಮಕ್ಕಳಿಗೆ ಹಣವೆಂಬ ಏಣಿ ಕಾಲು ಮುರಿದು ಕೆಳಗೆ ಬೀಳಿಸಿಬಿಡುವುದು.. ಆದರೆ ಆ ತಂದೆ ತಾಯಿ ಮಾಡಿದ ತಪ್ಪಾದರೂ ಏನು.. ಅಷ್ಟೊಂದು ವಿದ್ಯಾವಂತೆಯಾಗಿದ್ದ ಐಶ್ವರ್ಯ ಕೊನೆ ಕ್ಷಣದಲ್ಲಿ ತಂದೆ ತಾಯಿಯ ಬಗ್ಗೆ ಯೋಚಿಸಬೇಕಿತ್ತು.. ಕಾಲ ಮಿಂಚಿ ಹೋಗಿದೆ.. ಆದರೆ ಬೇರೆ ಬಡ ಮಕ್ಕಳಿಗೆ ಇಂತಹ ಸ್ಥಿತಿ ಎಂದೂ ಬಾರದಿರಲಿ..