ಫಸ್ಟ್ ನೈಟ್ ನಲ್ಲಿ ಮಾಡೋದನ್ನು ಮಾಡಿದ್ದೀನಿ ಬೋಲ್ಡ್ ಆಗಿ ಮಾತನಾಡಿದ ರಚಿತಾರಾಮ್ ಹೇಳಿದ್ದೇ ಬೇರೆ.. ಶಾಕ್ ಆದ ಅಭಿಮಾನಿಗಳು..

0 views

ರಚಿತಾ ರಾಮ್ ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್.. ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ಇದೀಗ ಫರ್ಸ್ಟ್ ನೈಟ್ ಬಗ್ಗೆ ಮಾತನಾಡಿ ಒಂದು ರೀತಿ ಪೇಚಿಗೆ ಸಿಲುಕಿದ್ದಾರೆನ್ನಬಹುದು.. ಹೌದು ಲವ್ ಯು ರಚ್ಚು ಸಿನಿಮಾದಲ್ಲಿನ ಹಾಟ್ ಸೀನ್ ಬಗ್ಗೆ ಪ್ರಶ್ನೆ ಕೇಳಿದಾಗ ರಚಿತಾ ರಾಮ್ ಅವರಿಂದ ಬೇರೆ ರೀತಿಯ ಉತ್ತರವೇ ಹೊರ ಬಂದಿದೆ.. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಮಾತನಾಡಿರುವ ರಚಿತಾ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲ ಟ್ರೋಲಿಗರ ಕೈಗೆ ಸಿಲುಕಿದರೆ ಮತ್ತಷ್ಟು ಜನ ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆನ್ನಬಹುದು..

ಹೌದು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆ ಐ ಲವ್ ಯು ಸಿನಿಮಾದಲ್ಲಿ‌ ಸಿಕ್ಕಾಪಟ್ಟೆ ಹಾಟಾಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಅವರನ್ನು ಬಹಳಷ್ಟು ಟೀಕಿಸಲಾಗಿತ್ತು.. ಅವರ ಆ ಅವತಾರವೇ ರಸ್ತೆಗಳಲ್ಲಿ ಪೋಸ್ಟರ್ ಮೂಲಕ ರಾರಾಜಿಸುತ್ತಿದ್ದವು.. ಈ ಬಗ್ಗೆ ಸಾಕಷ್ಟು ಸುದ್ದಿಯೂ ಆಗಿತ್ತು.. ಇನ್ನು ಈ ಬಗ್ಗೆ ಖುದ್ದು ರಚಿತಾ ರಾಮ್ ಅವರೇ ಅಸಮಾಧಾನ ವ್ಯಕ್ತಪಡಿಸಿ ವಿವಾದವೂ ಆಗಿತ್ತು.. ಉಪೇಂದ್ರ ಅವರೇ ಆ ದೃಶ್ಯಗಳನ್ನು ನಿರ್ದೇಶನ ಮಾಡಿದ್ದು ಎನ್ನುವ ಮಾತುಗಳನ್ನಾಡಿದ್ದರು.. ಕೊನೆಗೆ ಪ್ರೊಯಾಂಕ ಅವರೂ ಸಹ ಈ ವಿವಾದದ ಬಗ್ಗೆ ಮಾತನಾಡುವಂತಾಗಿತ್ತು.. ಕೊನೆಗೆ ನಾನು ಇನ್ನು ಮುಂದೆ ಯಾವತ್ತೂ ಸಹ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾತುಗಳನ್ನು ಆಡಿದ್ದರು.. ಆದರೆ ಈಗ ನಡೆದದ್ದೇ ಬೇರೆ..

ಹೌದು ನಾಮು ಇನ್ನೆಂದೂ ಅಂತಹ ದೃಶ್ಯಗಳಲ್ಲಿ ನಟಿಸೋದಿಲ್ಲ ಎಂದಿದ್ದ ರಚಿತಾ ರಾಮ್ ಮತ್ತೆ ಇದೀಗ ಅಜಯ್ ರಾವ್ ಅವರ ಜೊತೆ ಲವ್ ಯು ರಚ್ಚು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.. ಹೌದು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಸಿನಿಮಾದ ಹಾಡಿನಲ್ಲಿ ರಚಿತಾ ರಾಮ್ ಅವರು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.. ಹೌದು ಇನ್ನು ನಿನ್ನೆ ಸಿನಿಮಾ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಚಿತಾ ರಾಮ್ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರ ಬಗ್ಗೆಯೂ ಮಾತನಾಡಿದ್ದಾರೆ.. ಹೌದು ಸಾಮಾಮ್ಯವಾಗಿ ಮಾದ್ಯಮದವರು ಪ್ರಶ್ನೆ ಮಾಡ್ತಾರೆ.. ಆದರೆ ಇಲ್ಲಿ ರಚಿತಾ ರಾಮ್ ಅವರೇ ಮಾದ್ಯಮದವರನ್ನು ನೀವುಗಳೆಲ್ಲಾ ಮೊದಲ ರಾತ್ರಿಯಲ್ಲಿ ಏನು ಮಾಡ್ತೀರಾ ಎಂದು ಪ್ರಶ್ನೆ ಕೇಳಿ ಅಲ್ಲಿದ್ದವರನ್ನು ತಬ್ಬಿಬ್ಬು ಮಾಡಿದ್ದಾರೆ..

ಹೌದು ಈ ಹಿಂದೆ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದಿಲ್ಲ ಎಂದಿದ್ದಿರಿ.. ಈಗ ಮತ್ತೆ ಲವ್ ಯು ರಚ್ಚು ಸಿನಿಮಾದಲ್ಲಿ ಅದೇ ರೀತಿ ಕಾಣಿಸಿಕೊಂಡಿದ್ದೀರಾ.. ಇದಕ್ಕೆ ಕಾರಣವೇನು ಎಂದು ಮಾದ್ಯಮದವರು ಪ್ರಶ್ನೆ ಕೇಳಿದ್ದಾರೆ.. ಅದಕ್ಕೆ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್ ಅವರು “ಹೌದು ನಾನು ಈ ಹಿಂದೆ ಹೇಳಿದ್ದೆ.. ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದಿಲ್ಲ ಅಂತ.. ಆದರೂ ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀನಿ ಎಂದರೆ ಅದರಲ್ಲಿ ಏನೋ ಒಂದು ವಿಶೇಷತೆ ಇದೆ ಎಂದು ಅರ್ಥ..

ಈ ಸಿನಿಮಾದಲ್ಲಿ ನಾನು ಯಾಕೆ ಅಷ್ಟು ಹಾಟಾಗಿ ಕಾಣಿಸಿಕೊಂಡಿದ್ದೀನಿ ಗೊತ್ತಾ.. ನೀವೆಲ್ಲರೂ ಫಸ್ಟ್ ನೈಟಿನಲ್ಲಿ ಏನು ಮಾಡ್ತೀರಾ.. ನಾವು ಅದನ್ನೇ ಮಾಡಿದ್ದೀವಿ.. ರೊಮ್ಯಾಂಸ್ ಅಲ್ವಾ.. ನಾವು ಸಹ ಅದನ್ನೇ ಮಾಡಿದ್ದೀವಿ.. ಸಿನಿಮಾದಲ್ಲಿ ಪಾತ್ರದ ಸಂದರ್ಭಕ್ಕೆ ಅನುಗುಣವಾಗಿ ನಾವು ಅಭಿನಯಿಸಿದ್ದೇವೆ.. ನೀವು ಸಿನಿಮಾ ನೋಡಿ ಆಗ ನಾನು ಯಾಕೆ ಅಷ್ಟು ಹಾಟಾಗಿ ಕಾಣಿಸಿಕೊಂಡಿದ್ದೇನೆ ಎಂದು ನಿಮಗೇ ಅರ್ಥವಾಗುತ್ತದೆ ಎಂದಿದ್ದಾರೆ..

ಇತ್ತ ರಚಿತಾ ರಾಮ್ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಸಹ ಆಗಿತ್ತಿದ್ದು.. ಒಟ್ಟಿನಲ್ಲಿ ರಚಿತಾ ರಾಮ್ ಐ ಲವ್ ಯೂ ಸಿನಿಮಾ ನಂತರ ಮತ್ತೊಮ್ಮೆ ತೆರೆ ಮೇಲೆ ಸಿಕ್ಕಾಪಟ್ಟೆ ಬೋಲ್ಡಾಗಿ ಅಭಿಮಾನಿಗಳ ಮುಂದೆ ಬರುತ್ತಿದ್ದು ಸಿನಿಮಾ ನೋಡುವ ಪ್ರೇಕ್ಷಕರ ಅಭಿಪ್ರಾಯ ಏನಿರಬಹುದೆಂದು ಸಿನಿಮಾ ಬಿಡುಗಡೆಯಾಗುವವರೆಗೂ ಕಾದು ನೋಡಬೇಕಷ್ಟೇ..