ಮಗಳ ಹುಟ್ಟುಹಬ್ಬ ಆಚರಿಸಲು ಹೋಗುತ್ತಿದ್ದ ಕನ್ನಡದ ಖ್ಯಾತ ಗಾಯಕ ಬೆಂಗಳೂರಿನ ಡ್ರೈನ್ ಹೋಲ್ ನಲ್ಲಿ..

0 views

ಮೊನ್ನೆಮೊನ್ನೆಯಷ್ಟೇ ಕನ್ನಡ ಕಿರುತೆರೆಯ ಖ್ಯಾತ ನಟಿ ಸುನೇತ್ರ ಪಂಡಿತ್ ಅವರು ಬೆಂಗಳೂರಿನ ರಸ್ತೆಯ ಗುಂಡಿಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದ್ದು ಕನ್ನಡ್ದ ಖ್ಯಾತ ಗಾಯಕ ಬೆಂಗಳೂರಿನ ಡ್ರೈನ್ ಹೋಲ್ ಗೆ ಬಿದ್ದು ಕಾಲು ಮುರಿದುಕೊಂಡ ಘಟನೆ ನಡೆದಿದ್ದು ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ಅದರಲ್ಲೂ ಮಗಳ ಹುಟ್ಟುಹಬ್ಬದ ಆಚರಣೆ ಮಾಡುವ ಸಲುವಾಗಿ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯಬೇಕಿದ್ದ ಮನೆಯಲ್ಲೀಗ ನೋವು ತುಂಬಿಕೊಂಡಿದೆ..

ಹೌದು ಬೆಂಗಳೂರಿನ ರಸ್ತೆಗಳ ಪಾಡು ಅದಾಗಲೇ ಎಲ್ಲರಿಗೂ ತಿಳಿದೇ ಇದೆ.. ಗುಂಡಿಗಳಿಗೆ ಡ್ರೈನ್ ಹೋಲ್ ಗಳಿಗೆ ಬಿದ್ದು ಸಾಕಷ್ಟು ಜನ ಅದಾಗಲೇ ಪೆಟ್ಟು ಮಾಡಿಕೊಂಡಿದ್ದಾರೆ.. ಮತ್ತಷ್ಟು ಮಂದಿ ಜೀವವನ್ನೇ ಕಳೆದುಕೊಂಡ ಉದಾಹರಣೆಗಳಿದೆ.. ಆದರೂ ಸಹ ಬೆಂಗಳೂರು‌ ಮಹಾನಗರ ಪಾಲಿಕೆ ಮಾತ್ರ ಎಚ್ಚೆತ್ತುಕೊಂಡಿಲ್ಲ.. ಅಧಿಕಾರಿಗಳ ಮನೆಯ ಮಂದಿ ಬೆಚ್ಚಗೆ ಬಂಗಲೆಯಲ್ಲಿ ಕುಳಿತರೆ.. ಇತ್ತ ಸಾಮಾನ್ಯ ಜನರು ಬೆಂಗಳೂರಿನ ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಂಡು ಜೀವ ಕಳೆದುಕೊಳ್ಳುವಂತಾಗಿದೆ.. ಇನ್ನು ಕಲಾವಿದರೋ ಅಥವಾ ಹೆಸರು ಮಾಡಿದವರು ಈ ರೀತಿ ಘಟನೆಯಾದಾಗ ಸುದ್ದಿಯಾಗಿ ಎರಡು ದಿನಗಳ ನಂತರ ಮತ್ತೆ ಹಳೆಮರೆಸಿಹೋಗುತ್ತದೆ..

ಹೌದು ಮೊನ್ನೆ ಸುನೇತ್ರ ಪಂಡಿತ್ ಅವರು ಚಿತ್ರೀಕರಣ ಮುಗಿಸಿ ಮನೆಗೆ ತೆರಳುವಾಗ ಬೆಂಗಳೂರಿನ ರಸ್ತೆಯ ಗುಂಡಿಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು.. ಇದೀಗ ಕನ್ನಡದ ಖ್ಯಾತ ಗಾಯಕ ಅಜಯ್ ವಾರಿಯರ್ ರಸ್ತೆಯಲ್ಲಿನ ಡ್ರೈನ್ ಹೋಲ್ ಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಜಯ್ ವಾರಿಯರ್.. “ಬೆಂಗಳೂರಿನಲ್ಲಿ ಭಾನುವಾರ ಜೋರು ಮಳೆ ಸುರಿದಿತ್ತು.. ಕೇರಳಕ್ಕೆ ತೆರಳಬೇಕಿದ್ದ ನಾನು ರೈಲ್ವೇ ನಿಲ್ದಾಣದ ಕಡೆ ಹೊರಟಿದ್ದೆ.. ಮಗಳಿಗೆ ಹುಟ್ಟುಹಬ್ಬದ ದಿನ ಸರ್ಪ್ರೈಸ್ ನೀಡಲು ಹೋಗುತ್ತಿದ್ದೆ..

ಓಲಾ ಊಬರ್ ಇಲ್ಲದ ಕಾರಣ ಮುಖ್ಯ ರಸ್ತೆಯ‌ ಕಡೆಗೆ ನಡೆದುಕೊಂಡು ಹೋಗಲು ನಿರ್ಧಾರ ಮಾಡಿ ಹೋಗುತ್ತಿದ್ದೆ.. ರಸ್ತೆಯ ತುಂಬಾ ನೀರು ತುಂಬಿಕೊಂಡಿತ್ತು.. ನಾನು ಫುಟ್ ಪಾತ್ ಮೇಲೆ ಹೋದೆ.. ಕೆಲವೇ ಹೆಜ್ಜೆ ನಡೆದು ಹೋಗುತ್ತಿದ್ದಂತೆ ಕಾಲು ಜಾರಿ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದೆ.. ನನಗೆ ಏನು ಅಂತ ತಿಳಿಯುವ ಮುನ್ನವೇ ನಾನು ಚರಂಡಿಯ ಹೋಲ್ ಒಳಗೆ ಹೋದೆ.. ನನ್ನ ಎದೆ ಮಟ್ಟದ ವರೆಗೂ ನೀರು ಇತ್ತು.. ದೇವರ ದಯೆಯಿಂದ ನಾನು ಹೇಗೋ ಬಚಾವ್ ಆದೆ.. ಆದರೆ ನನ್ನ ಕಾಲು ಮುರಿದಿದೆ.. ಫುಟ್ ಪಾತ್ ಗುಂಡಿಗಳನ್ನು ಮುಚ್ಚದೇ ಇರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾನು ಇಂದು ಕಾಲಿಗೆ ಹೊಲಿಗೆ ಹಾಕಿಸಿಕೊಳ್ಳಬೇಕಾಯಿತು..

ಅನೇಕ ಸಂಗೀತ ಕಾರ್ಯಕ್ರಮಗಳು ರದ್ದಾಯಿತು.. ಇದಕ್ಕೆಲ್ಲಾ ಯಾರನ್ನು ದೂಷಿಸಬೇಕು.. ನನ್ನನ್ನೇ.. ಏಕೆಂದರೆ ನಾನು ಫುಟ್ ಪಾತ್ ನಲ್ಲಿ ನಡೆಯುವ ಬದಲು ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಈಜಿಕೊಂಡು ಹೋಗಬೇಕಿತ್ತು.. ನಮ್ಮ ಅಧಿಕಾರಿಗಳಿಗೆ ಧನ್ಯವಾದಗಳು.. ಜನರ ಹಿತದೃಷ್ಟಿಯಿಂದ ನಾನು ಈ ಸಂದೇಶವನ್ನು‌ ನೀಡುತ್ತಿದ್ದೇನೆ.. ಫುಟ್ ಪಾತ್ ಗುಂಡಿಗಳನ್ನು ಮುಚ್ಚದೇ ಇರುವ ಕಾರಣ ಯಾರಿಗೆ ಬೇಕಾದರೂ ಇಂತಹ ಅಪಾಯಗಳು ಆಗಬಹುದು.. ಅಕಸ್ಮಾತ್ ಚಿಕ್ಕ ಮಕ್ಕಳು‌ ಈ ರೀತಿ ಬಿದ್ದರೆ ಏನಾಗಬೇಕು.. ನಾನು ಕಾನೂನು ಪಾಲಿಸುವ ಹಾಗೂ ತೆರಿಗೆ ಕಟ್ಟುವ ಬೆಂಗಳೂರಿನ ಪ್ರಜೆ..

ಇಈ ನಗರದ ಜನರಿಗೆ ಸುರಕ್ಷಿತವಾದ ರಸ್ತೆ ಹಾಗೂ ಫುಟ್ ಪಾತ್ ಗಳನ್ನು ನೀಡಿ ಎಂದು ಒತ್ತಾಯಿಸಿ ಇದು ನನ್ನ ಬಹಿರಂಗ ಪತ್ರ.. ನಿಮ್ಮ ನಿಮ್ಮ ಕಾಳಜಿ ನೀವೇ ವಹಿಸಿಕೊಳ್ಳಿ ಬೆಂಗಳೂರಿಗರೇ.. ನಮ್ಮ ಪ್ರಾಣ ಕೂಡ ಮುಖ್ಯ..ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಗಳನ್ನು ಚರಂಡಿಗಳನ್ನು‌ ಫುಟ್ ಪಾತ್ ಗಳನ್ನು ಸರಿ ಮಾಡಿ ಜನರ ಜೀವ ರಕ್ಷಣೆಯನ್ನು ಮಾಡಲಿ.. ಸಾಮಾನ್ಯ ಜನರ ಜೀವ ಅಂಗಡಿಯಲ್ಲಿ ಸಿಗುವ ಕಡಲೆಪುರಿಯಲ್ಲ ಅನ್ನೋದು ಅಧಿಕಾರಿಗಳಿಗೆ ನೆನಪಿನಲ್ಲಿರಲಿ..