ನಾಗ ಚ್ವೈತನ್ಯ ವಿಚಾರಕ್ಕೆ ತೆರೆ ಎಳೆದ ಸಮಂತಾ..

0 views

ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ಅವರ ಕುಟುಂಬದಲ್ಲಿನ ಮನಸ್ತಾಪದ ವಿಚಾರ ಇದೀಗ ಬಹಿರಂಗ ವಾಗಿದೆ. ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯದಲ್ಲಿ ಮನಸ್ತಾಪ ಮೂಡಿದ್ದು ಇಬ್ಬರೂ ಕಾನೂನಿನ ಮೂಲಕ ದೂರಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದೀಗ ಆ ಎಲ್ಲಾ ಪ್ರಶ್ನೆ ಗಳಿಗೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ನೇರ ಮಾತುಕತೆಗೆ ಬಂದು ಉತ್ತರ ನೀಡಿದ್ದಾರೆ.. ಹೌದು ಸಮಂತಾ ಹಾಗೂ ನಾಗಚೈತನ್ಯ ಅವರದ್ದು ಸ್ಟಾರ್ ಜೋಡಿಯಾಗಿತ್ತು.. ಕಳೆದ ಹತ್ತು ವರ್ಷದಿಂದ ಪ್ರೀತಿಸಿ ನಾಲ್ಕು ವರ್ಷದ ಹಿಂದೆ ೨೦೧೭ ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಬಹಳ ಅನ್ಯೂನ್ಯವಾಗಿ ಸಂಸಾರ ಮಾಡಿಕೊಂಡಿದ್ದರು.. ಸಮಂತಾ ಹಾಗೂ ನಾಗಚೈತನ್ಯ ನಡುವಿನ ಆತ್ಮೀಯತೆ ಹಾಗೂ ಪ್ರೀತಿ ಆ ಮಟ್ಟಕ್ಕಿತ್ತು.. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋಗಳು ಆಗಾಗ ವೈರಲ್ ಆಗುತ್ತಿದ್ದವು.. ಆದರೀಗ ಇಬ್ಬರ ಸಂಸಾರದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯರ ಚರ್ಚೆಯ ವಿಷಯವಾಗಿ ಹೋಗಿದೆ.. ಆದರೀಗ ಎಲ್ಲಾ ವಿಚಾರವನ್ನು ಬಹಿರಂಗವಾಗಿ ಸಮಂತಾ ಮಾತನಾಡಿದ್ದು ನೋವು ಹಂಚಿಕೊಂಡಿದ್ದಾರೆ..

ಹೌದು ಸಮಂತಾ ಅಕ್ಕಿನೇನಿ ಕಳೆದ ಎರಡು ತಿಂಗಳ ಹಿಂದೆ ತಮ್ಮ ಹೆಸರಿನ ಜೊತೆ ಇದ್ದ ಅಕ್ಕಿನೇನಿ ಎಂಬ ಹೆಸರನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಿದರು.. ಇದು ಜನರಲ್ಲಿ ಆಶ್ಚರ್ಯ ವನ್ನುಂಟು ಮಾಡಿತ್ತು‌‌. ಸಮಂತಾ ಹಾಗೂ ಅಕ್ಕಿನೇನಿ ಕುಟುಂಬದ ನಡುವೆ ಏನೋ ಸರಿ ಇಲ್ಲ ಎನ್ನುವ ಚರ್ಚೆ ಆರಂಭವಾಗಿತ್ತು. ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದವು. ಸಮಂತಾ ಹಾಗೂ ನಾಗಚೈತನ್ಯ ಬೇರೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಆದರೂ ಸಹ ಸಮಂತಾ ಆಗಲಿ ನಾಗಚೈತನ್ಯ ಆಗಲಿ ಇಬ್ಬರೂ ಎಲ್ಲಿಯೂ ಈ ವಿಚಾರ ಸತ್ಯವಲ್ಲ ಎಂದು ತಿಳಿಸಲಿಲ್ಲ.. ಇತ್ತ ನಾಗಾರ್ಜುನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕುಟುಂಬದವರೆಲ್ಲರೂ ಇದ್ದರೂ ಸಹ ಸಮಂತಾ ಕಾಣಿಸಿಕೊಳ್ಳಲಿಲ್ಲ.. ಇನ್ನು ನಾಗ ಚೈತನ್ಯ ಸಿನಿಮಾ ಬಿಡುಗಡೆಯಾದರೂ ಸಹ ಸಮಂತಾರಿಂದ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಇಲ್ಲ..‌ ಈ ಮೊದಲು ಸಮಂತಾ ತಮ್ಮ ಗಂಡ ನಾಗಚೈತನ್ಯ ಅವರ ಸಿನಿಮಾಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ ಮಾಡುತ್ತಿದ್ದರು.. ಆದರೀಗ ಅದೆಲ್ಲದರಿಂದ ದೂರ ಉಳಿದರು..

ಆದರೆ ಇತ್ತ ಅಕ್ಕಿನೇನಿ ಕುಟುಂಬ ಸಹ ಈ ವಿಚಾರದ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಲಿಲ್ಲ. ನಾಗಾರ್ಜುನ್ ಅವರು ಪ್ರತಿ ವರ್ಷ ಬಿಗ್ ಬಾಸ್ ಶೋಗೂ ಮುನ್ನ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು.. ಆದರೆ ಈ ವರ್ಷ ಅದನ್ನು ಸಹ ಬೇಡವೆಂದರು.. ಮಗ ಸೊಸೆ ಬಗ್ಗೆ ವಿಷಯ ಬಂದರೆ ಉತ್ತರ ನೀಡಲಾಗದು ಎಂದು ಪತ್ರಿಕಾಗೋಷ್ಠಿಯಿಂದಲೇ ದೂರ ಉಳಿದರು. ಆದರೆ ಆ ಬಳಿಕ ನಾಗಚೈತನ್ಯ ತಮ್ಮ ಲವ್ ಸ್ಟೋರಿ ಸಿನಿಮಾದ ಪತ್ರಿಕಾಗೋಷ್ಠಿ ವೇಳೆ ಎಲ್ಲಾ ನೋವನ್ನು ಹೇಳಿಕೊಂಡಿದ್ದರು. ಸಧ್ಯ ಸೃಷ್ಟಿಯಾಗುತ್ತಿರುವ ಸಂದರ್ಭಗಳ ಬಗ್ಗೆ ನನಗೆ ನೋವಿದೆ. ನನ್ನ ವ್ಯಯಕ್ತಿಕ ವಿಚಾರಗಳು ಸುದ್ದಿಯಾಗುತ್ತಿರುವುದು ನೋವು ತಂದಿದೆ. ಆದರೆ ಏನು ಆಗಬೇಕೋ ಅದು ಆಗಲೇ ಬೇಕು. ಇಂದು ನನ್ನ ಸುದ್ದಿ ನಾಳೆ ಮತ್ತೊಂದು.. ಆದ್ದರಿಂದ ನಾನು ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರ ಉಳಿಯುತ್ತಿದ್ದೇನೆ. ಸಧ್ಯದಲ್ಲಿಯೇ ಇದೆಲ್ಲವೂ ಮುಗಿಯಲಿದೆ ಎಂದಿದ್ದರು. ಆ ಮೂಲಕ ತಮ್ಮ ಹಾಗೂ ಸಮಂತಾ ನಡುವಿನ ಸಂಬಂಧ ಸರಿ ಇಲ್ಲ ಎಂಬ ವಿಚಾರವನ್ನು ಬೇರೆಯದ್ದೇ ರೀತಿಯಲ್ಲಿ ತಿಳಿಸಿದರು. ಮನಸ್ತಾಪದ ಸುದ್ದಿ ನಿಜವಲ್ಲ ಎಂದು ಎಲ್ಲಿಯೂ ಹೇಳಲಿಲ್ಲ..

ಇನ್ನು ನಾಗ ಚೈತನ್ಯ ಬಳಿಕ ಸಮಂತಾ ಕೂಡ ಇದೀಗ ಮೌನ ಮುರಿದಿದ್ದು ನೋವಿನಲ್ಲಿ ಮಾತನಾಡಿದ್ದಾರೆ.. ಹೌದು ಮದುವೆಯಾದ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಸಹ ಹೊಸ ಮನೆಯಲ್ಲಿ ವಾಸ ಮಾಡುತ್ತಿದ್ದರು.. ಮೂರು ವರ್ಷಗಳ ಕಾಲ ಒಟ್ಟಿಗೆ ಅದೇ ಮನೆಯಲ್ಲಿದ್ದರು.. ಆದರೀಗ ನಾಗಚೈತನ್ಯ ಅದಾಗಲೇ ಸಮಂತಾ ಜೊತೆಯಿದ್ದ ಮನೆಯಿಂದ ತಮ್ಮ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ತಮ್ಮ ತಂದೆ ನಾಗಾರ್ಜುನ ಅವರ ಮನೆಗೆ ಹೋಗಿದ್ದಾರೆ.. ಹೌದು ಇನ್ನು ಮುಂದೆ ತಂದೆ ತಾಯಿಯ ಜೊತೆ ಇರಲು ನಿರ್ಧಾರ ಮಾಡಿದ್ದಾರೆ.. ಆದರೆ ಈ ಸುದ್ದಿಯ ಜೊತೆಗೆ ಸಮಂತಾ ಸಹ ಮನೆ ಖಾಲಿ ಮಾಡಿಕೊಂಡು ಮುಂಬೈ ಗೆ ತೆರಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.. ಆದರೆ ನಾಗಚೈತನ್ಯ ಮನೆ ಖಾಲಿ ಮಾಡಿರುವುದು ಸತ್ಯ.. ಆದರೆ ಸಮಂತಾ ಅವರು ಮುಂಬೈಗೆ ತೆರಳಲಿದ್ದಾರೆ ಎಂವ ವಿಚಾರ ಸತ್ಯಕ್ಕೆ ದೂರವಾಗಿತ್ತು.. ಇನ್ನು ಸಧ್ಯ ಸಮಂತಾ ಹಾಗೂ ನಾಗಚೈತನ್ಯ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ನೇರ ಮಾತುಕತೆಗೆ ಬಂದಿರುವ ಸಮಂತಾ ನೋವಿನಲ್ಲಿಯೇ ಮಾತನಾಡಿ ಕೆಲವೊಂದು ವಿಚಾರ ಹಂಚಿಕೊಂಡಿದ್ದಾರೆ..

ಹೌದು ಸಮಂತಾ ಅವರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಾನು ಮುಂಬೈ ಗೆ ತೆರಳೋದಿಲ್ಲ.. ಇದು ಸತ್ಯವಲ್ಲ. ಯಾಕೀಗೆ ಮಾತಾಡ್ತೀರಾ. ನಾನು ಇಲ್ಲೇ ಜೀವನ ಕಟ್ಟುಕೊಂಡಿದ್ದೇನೆ.. ಇಲ್ಲೇ ಇರಬೇಕು. ನಾನು ಹೈದರಾಬಾದ್ ಬಿಟ್ಟು ಹೋಗುವುದಿಲ್ಲ.. ಇಲ್ಲಿಯೇ ವಾಸ ಮಾಡುವೆ ಎಂದಿದ್ದಾರೆ. ಈ ಎಲ್ಲಾ ವಿಚಾರಗಳು ಸಾಕಷ್ಟು ನೋವನ್ನು ತಂದಿವೆ ಎಂದು ಭಾವುಕರಾಗಿಯೇ ಮಾತನಾಡಿದರು. ಆದರೆ ಬಹಳಷ್ಟು ಅಭಿಮಾನಿಗಳು ಸಮಂತಾ ಹಾಗೂ ನಾಗಚೈತನ್ಯ ಅವರ ನಡುವಿನ ಮನಸ್ತಾಪದ ವಿಚಾರದ ಬಗ್ಗೆ ಪ್ರಶ್ನೆ ಮಾಡಿ ಆ ವಿಚಾರ ಸತ್ಯವಾ ಎಂದು ಕೇಳಿದರೂ ಸಹ ಆ ಬಗ್ಗೆ ಪ್ರತಿಕ್ರಿಯೆ ನೀಡದ ಸಮಂತಾ ಅವರು ಸಧ್ಯ ನಡೆಯುತ್ತಿರುವ ಎಲ್ಲಾ ವಿಚಾರಗಳು ನನಗೆ ನೋವು ತಂದಿದೆ ಎಂದಷ್ಟೇ ಹೇಳಿದರು.. ಇನ್ನು ಈ ಮೂಲಕ ನಾಗಚೈತನ್ಯ ಹಾಗೂ ಸಮಂತಾ ನಡುವೆ ಮನಸ್ತಾಪ ಮೂಡಿರುವುದು ಸತ್ಯ ಎನ್ನಲಾಗಿದ್ದು.. ಇನ್ನು ಕೆಲವೇ ದಿನಗಳಲ್ಲಿ ಇಬ್ಬರ ಮದುವೆ ವಾರ್ಷಿಕೋತ್ಸವದ ದಿನ ಆಗಮಿಸಲಿದ್ದು ಆ ದಿನ ಎಲ್ಲಾ ವಿಚಾರಗಳಿಗೂ ತೆರೆ ಬೀಳಲಿದೆ..

ಅಷ್ಟೇ ಅಲ್ಲದೇ ಇಷ್ಟು ದಿನಗಳ ಕಾಲ ಇಬ್ಬರಲ್ಲಿ ಯಾರೊಬ್ಬರೂ ಸಹ ಈ ವಿಚಾರಗಳನ್ನು ಹೊರಗೆಲ್ಲೂ ಹೇಳಬೇಡಿ ಎಂದು ನಾಗಾರ್ಜುನ ಅವರು ಮನವಿ ಮಾಡಿದ್ದು ಮಗ ಸೊಸೆಯ ನಡುವಿನ ಮನಸ್ತಾಪ ಹೋಗಲಾಡಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.. ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ.. ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ನಿರ್ಧಾರ ಮಾಡಿ ಎಂದು ನಾಗಾರ್ಜುನ ಅವರು ಮನವಿ ಮಾಡಿಕೊಂಡಿದ್ದಕ್ಕಾಗಿ ಸಮಂತಾ ಆಗಲಿ ಅಥವಾ ನಾಗಚೈತನ್ಯ ಆಗಲಿ ಯಾರೂ ಸಹ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ತಿಳಿದುಬಂದಿದೆ. ಆದರೆ ಇತ್ತ ಅಭಿಮಾನಿಗಳು ಮಾತ್ರ ದಯವಿಟ್ಟು ನೀವಿಬ್ಬರು ದೂರಾಗಬೇಡಿ ಮತ್ತೆ ಒಂದಾಗಿ ಎಂದು ಸಾಕಷ್ಟು ಮನವಿ ಮಾಡಿಕೊಳ್ಳುತ್ತಿದ್ದು ಅಕ್ಟೋಬರ್ ಏಳರಂದು ಈ ಬಗ್ಗೆ ಅಧಿಕೃತವಾಗಿ ತಿಳಿಸಲಿದ್ದಾರೆ ಎಂದೂ ಸಹ ಹೇಳಲಾಗಿದೆ.. ಒಟ್ಟಿನಲ್ಲಿ ಹತ್ತು ವರ್ಷದ ಪ್ರೀತಿ ಹಾಗೂ ನಾಲ್ಕು ವರ್ಷದ ದಾಂಪತ್ಯ ಜೀವನ ಸಿನಿಮಾಗಳ ಆಯ್ಕೆಯ ವಿಚಾರವಾಗಿ ದೂರವಾಗುತ್ತಿರುವುದು ಬೇಸರದ ಸಂಗತಿಯೇ ಸರಿ.