ನನ್ನ ಹೆಂಡತಿ ಬಗ್ಗೆ ಎಲ್ಲರೂ ಆ ಮಾತನ್ನು ಹೇಳುತ್ತಿದ್ದರು.. ಬಹಳ ಬೇಸರವಾಗುತಿತ್ತು.. ಪತ್ನಿಗಾಗಿ ನಿರೂಪಕ ಅಕುಲ್ ಮಾಡಿದ ಕೆಲಸ ನೋಡಿ..

0 views

ಅಕುಲ್ ಬಾಲಾಜಿ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಹೆಚ್ಚು ಪ್ರಚಲಿತಕ್ಕೆ ಬಂದಾಗ ಸ್ಟಾರ್ ನಿರೂಪಕನಾಗಿ ಕಾಣಿಸಿಕೊಂಡ ನಟ ಹಾಗೂ ನಿರೂಪಕ ಎಂದರೆ ಅದು ಅಕುಲ್ ಬಾಲಾಜಿ.. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು.. ಹಳ್ಳಿ ಹೈದ ಪ್ಯಾಟೆಗ್ ಬಂದ.. ಪ್ಯಾಟೆ ಮಂದಿ ಕಾಡಿಗ್ ಬಂದ್ರು.. ಇಂಡಿಯನ್.. ಲೈಫ್ ಸೂಪರ್ ಗುರು.. ಡ್ಯಾನ್ಸಿಂಗ್ ಸ್ಟಾರ್.. ಹೀಗೆ ಸಾಲು ಸಾಲು ಸೂಪರ್ ಹಿಟ್ ಶೋಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ಅಕುಲ್ ಬಾಲಾಜಿ ಅದ್ಯಾಕೋ‌ ಕೆಲ ದಿನಗಳಿಂದ ಕಾಣೆಯಾಗಿ ಹೋಗಿದ್ದರು.. ಆಗಾಗ ಕಾರ್ಯಕ್ರಮಗಳಲ್ಲಿ ಕಣಿಸಿಕೊಳ್ಳುವುದ ಬಿಟ್ಟರೆ ನಿರಣ್ತರವಾಗಿ ಯಾವುದೇ ಶೋಗಳಲ್ಲಿ ಕಾಣಿಸಿಕೊಂಡಿರಲಿಲ್ಲ.. ಆದರೀಗ ಮಾದ್ಯಮದ ಮುಂದೆ ಬಂದಿರುವ ಅಕುಲ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ತಮ್ಮ ಪತ್ನಿಯ ಕುರಿತು ಸಹ ಮಾತನಾಡಿದ್ದಾರೆ..

ಹೌದು ಅಕುಲ್ ಬಾಲಾಜಿ ಸಾಕಷ್ಟು ವರ್ಷಗಳಿಂದ ದಶಕದಿಂದಲೂ ನಿರೂಪಕರಾಗಿ ಕಾಣಿಸಿಕೊಂಡವರು.. ಆನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಸಿನಿಮಾ ಅಷ್ಟಾಗಿ ಕೈ ಹಿಡಿಯಲಿಲ್ಲ.. ಮತ್ತೆ ಕಿರುತೆರೆಗೆ ಬಂದ ಅಕುಲ್ ಬಾಲಾಜಿ ಸಾಲು ಸಾಲು ಶೋ ಗಳಲ್ಲಿ ನಿರೂಪಕರಾದರು.. ಇನ್ನು ಇತ್ತ ರೆಸಾರ್ಟ್ ಹಾಗೂ ಹೊಟೆಲ್ ವ್ಯವಹಾರವನ್ನೂ ಸಹ ಜೊತೆಜೊತೆಗೇ ಮಾಡುತ್ತಿದ್ದರು‌.. ಇನ್ನು ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ ಅಕುಲ್ ಸೀಸನ್ ನ ವಿನ್ನರ್ ಸಹ ಆದರು.. ಇನ್ನೂ ಲಾಕ್ ಡೌನ್ ನಂತರ ಧಾರಾವಾಹಿ ಲೋಕಕ್ಕೂ ಎಂಟ್ರಿ ಕೊಟ್ಟ ಅಕುಲ್ ತೆಲುಗಿನ ಧಾರಾವಾಹಿಯೊಂದರಲ್ಲಿ ಹೀರೋ ಆಗಿ ಕಾಣಿಸಿಕೊಂಡರು.. ಸಧ್ಯ ಆ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪುನರ್ ವಿವಾಹ ಎಂಬ ಹೆಸರಿನಲ್ಲಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಖ್ಯಾತಿಯನ್ನೂ ಸಹ ಗಳಿಸಿದೆ..

ಇನ್ನು ಸಧ್ಯ ಇದೀಗ ಮತ್ತೆ ಕನ್ನಡ ಕಿರುತೆರೆ ರಿಯಾಲಿಟಿ ಶೋ ಲೋಕಕ್ಕೆ ಮರಳುತ್ತಿರುವ ಅಕುಲ್ ಬಾಲಾಜಿ ಅವರು ಕಲರ್ಸ್ ಕನ್ನಡ ವಾಹಿನಿಯ ಹೊಸ ಶೋ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ಮಾದ್ಯಮದ ಜೊತೆ ಮಾತನಾಡಿದ್ದಾರೆ.. ಅದೇ ಸಮಯದಲ್ಲಿ ಕೆಲ ವ್ಯಯಕ್ತಿಕ ವಿಚಾರಗಳನ್ನೂ ಸಹ ಹಂಚಿಕೊಂಡಿದ್ದಾರೆ.. ಹೌದು ಅಕುಲ್ ಬಾಲಾಜಿ ಮೊದಲಿನಿಂದಲೂ ಕೊಂಚ ದಪ್ಪಗೆ ಇದ್ದವರೇ.. ಅದರಲ್ಲೂ ಬಿಗ್ ಬಾಸ್ ಗೆ ಹೋದ ಎಲ್ಲಾ ಸ್ಪರ್ಧಿಗಳು ತಮ್ಮ ತೂಕ ಇಳಿಸಿಕೊಂಡು ಮರಳಿದರೆ ಅಕುಲ್ ಮಾತ್ರ ಬಿಗ್ ಬಾಸ್ ಮನೆಯಲ್ಲಿಯೂ ಸಹ ಮತ್ತಷ್ಟು ತೂಕ ಹೆಚ್ಚಿಸಿಕೊಂಡು ಬಂದಿದ್ದವರು.. ಸ್ವತಃ ಅದ್ಭುತ ಡ್ಯಾನ್ಸರ್ ಆಗಿರುವ ಅಕುಲ್ ಮಾತ್ರ ತಮ್ಮ ಫಿಟ್ನೆಸ್ ಬಗ್ಗೆ ಎಂದೂ ಗಮನ ಕೊಟ್ಟವರಲ್ಲ..

ಆದರೆ ಅತ್ತ ಅಕುಲ್ ಬಾಲಾಜಿ ಅವರ ಮಡದಿ ಮಾತ್ರ ಫಿಟ್ನೆಸ್ ಬಗ್ಗೆ ಬಹಳ ಕಾಳಜಿ ಕೊಡುವವರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕೌಟ್ ವೀಡಿಯೋಗಳನ್ನು ಹಂಚಿಕೊಂಡು ಜನರಿಗೆ ಸಾಕಷ್ಟು ಸಲಹೆಗಳನ್ನು ಸಹ ನೀಡುತ್ತಿದ್ದರು.. ಇದನ್ನು ನೋಡಿದ ಕೆಲವರು ಮೊದಲು ಅಕುಲ್ ಬಾಲಾಜಿ ಅವರಿಗೆ ಸಲಹೆ ಕೊಡಿ ಮೇಡಂ ಎಂದಿದ್ದರಂತೆ.. ಹೌದು ಈ ಬಗ್ಗೆ ಮಾತನಾಡಿದ ಅಕುಲ್.. ನಾನು ಫಿಟ್ನೆಸ್ ಬಗ್ಗೆ ಗಮನ ಕೊಟ್ಟವನಲ್ಲ.. ಆದರೆ ನನ್ನ ಹೆಂಡತಿ ಜನರಿಗ್ರ್ ಫಿಟ್ನೆಸ್ ಬಗ್ಗೆ ಸಲಹೆ ಕೊಟ್ಟಾಗ.. ಕೆಲವರು ಅದನ್ನು ಸ್ವೀಕಾರ ಮಾಡಿದರೆ.. ಮತ್ತೆ ಕೆಲವರು ಮುಖಕ್ಕೆ ಹೊಡೆದಂತೆ ಮೊದಲು ಅಕುಲ್ ಗೆ ಹೇಳಿ ಎನ್ನುತ್ತಿದ್ದರು.ಮ್ ಅದನ್ನೆಲ್ಲಾ ನೋಡಿ ಏನಪ್ಪಾ ಹೀಗ್ ಹೇಳ್ತಿದ್ದಾರೆ ಅಂತ ನಾನೂ ಸಹ ಫಿಟ್ನೆಸ್ ಬಗ್ಗೆ ಗಮನ ಕೊಟ್ಟೆ..

ಸಧ್ಯ ಇಪ್ಪತ್ತೈದು ಕೆಜಿ ತೂಕವನ್ನು ಇಳಿಸಿಕೊಂಡಿದ್ದೇನೆ.. ನೂರರ ಮೇಲಿದ್ದವನು ಈಗ ಎಪ್ಪತ್ತಕ್ಕೆ ಬಂದಿದ್ದೇನೆ.. ಈ ಬಗ್ಗೆ ಖುಷಿ ಇದೆ.. ಹೊಸ ವರ್ಷ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.. ಪ್ರೋಮೋ ಎಲ್ಲಾ ಚಿತ್ರೀಕರಣ ಮಾಡಿದಾಗ ನನ್ನ ಬಗ್ಗೆ ನನಗೆ ಖುಷಿ ಆಯ್ತು.. ನನ್ನ ಪತ್ನಿ ಜೋ ಗೂ ಕೂಡ ಈ ಬಗ್ಗೆ ಖುಷಿ ಇದೆ.. ನನಗೆ ನನ್ನ ಈ ಬದಲಾವಣೆಗೆ ನನ್ನ ಪತ್ನಿ ಜೋನೇ ಸ್ಪೂರ್ತಿ.. ನನ್ನನ್ನು ಬಹಳ ಮೋಟಿವೇಟ್ ಮಾಡಿ ಈ ಹಂತಕ್ಕೆ ತಂದಿದ್ದಾರೆ.. ಅವರಿಗೆ ಈಗ ಯಾರೂ ಸಹ ನನ್ನ ಬಗ್ಗೆ ಹೇಳೋದಿಲ್ಲ.. ಇನ್ನು ಸಧ್ಯ ಇದೀಗ ಮತ್ತೆ ಕಿರುತೆರೆಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಹೊಸ ರೀತಿಗಲ್ಲಿ ಬರ್ತಾ ಇದ್ದೀನಿ ಎಂದಿದ್ದಾರೆ..