ದ್ವಾರಕೀಶ್ ಅವರ ಪತ್ನಿ..

0 views

ಸ್ಯಾಂಡಲ್ವುಡ್ ನ ಖ್ಯಾತ ಹಿರಿಯ ನಟ ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಇಂದು ಇಹಲೋಕ ತ್ಯಜಿಸಿದ್ದಾರೆ.. ಹೌದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ದ್ವಾರಕೀಶ್ ಅವರು ಚಿತ್ರರಂಗದಲ್ಲಿ ಅನೇಕ ಏಳುಬೀಳುಗಳನ್ನು ನೋಡಿದ್ದಾರೆ.. ಬಹಳಷ್ಟು ಬಾರಿ ಆರ್ಥಿಕ ಸಂಕ ಷ್ಟವನ್ನು ಎದುರಿಸಿದ್ದಾರೆ.. ಅದಾಗಲೇ ಹನ್ನೆರೆಡು ಮನೆಗಳನ್ನು ದ್ವಾರಕೀಶ್ ಅವರು ತಮ್ಮ ಆರ್ಥಿಕ ಸಂಕ ಷ್ಟವನ್ನು ದೂರ ಮಾಡಿಕೊಳ್ಳಲು ಮಾರಿದ್ದರು.. ಮೊನ್ನೆ ಮೊನ್ನೆಯಷ್ಟೇ ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಹತ್ತು ಕೋಟಿ ರೂಪಾಯಿಗಳಿಗೆ ಮತ್ತೊಂದು ಮನೆಯನ್ನು ಮಾರಿದ ವಿಚಾರ ಸುದ್ದಿಯಾಗಿತ್ತು.. ಆದರೆ

ಆದರೆ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ದ್ವಾರಕೀಶ್ ಅವರ ಜೊತೆಯಿದ್ದ ಪತ್ನಿ ಯಾವುದೇ ಕಷ್ಟದ ಸಮಯದಲ್ಲಿಯೂ ದ್ವಾರಕೀಶ್ ಅವರ ಜೊತೆಯಾಗಿ ನಿಂತಿದ್ದರು.. ಅಷ್ಟೇ ಅಲ್ಲದೆ ದ್ವಾರಕೀಶ್ ಅವರ ಪತ್ನಿ ಅಂಬುಜ ದ್ವಾರಕೀಶ್ ಅವರೂ ಸಹ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದು ಮೇಯರ್ ಮುತ್ತಣ್ಣ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.. ಆದರೆ ದ್ವಾರಕೀಶ್ ಅವರಿಗೆ ಎಲ್ಲಾ ಸಮಯದಲ್ಲಿಯೂ ಮಾನಸಿಕ ಸ್ಥೈರ್ಯ ತುಂಬುತ್ತಿದ್ದ ಪತ್ನಿ ಇದೀಗ ಕೊನೆಯುಸಿರೆಳೆದಿದ್ದಾರೆ..

ಹೌದು ದ್ವಾರಕೀಶ್ ಅವರ ಪತ್ನಿ ಅಂಬುಜ ದ್ವಾರಕೀಶ್ ಅವರು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿನ ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.. ಅಂಬುಜ ಅವರಿಗೆ ಎಂಭತ್ತು ವರ್ಷ ವಯಸ್ಸಾಗಿತ್ತು.. ವಯೋ ಸಹಜ ಕಾಯಿಲೆಗಳಿಂದ ಅಂಭುಜ ಅವರು ಬಳಲುತ್ತಿದ್ದರು ಎನ್ನಲಾಗಿದೆ.. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಂಭುಜ ದ್ವಾರಕೀಶ್ ಅವರು ಇಂದು ಮಧ್ಯಾಹ್ನ 2.30 ರ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ..

ಮಕ್ಕಳು ಹಾಗೂ ಪತಿಯನ್ನು ಅಗಲಿರುವ ಅಂಭುಜ ಅವರ ನಿಧನಕ್ಕೆ ಸಿನಿಮಾ ಮಂದಿ ಸ್ನೇಹಿತರು ಆಪ್ತರು ಸಂಬಂಧಿಕರು ಎಲ್ಲರೂ ಸಂತಾಪ ಸೂಚಿಸಿದ್ದು ಕಂಬನಿ‌ ಮಿಡಿದಿದ್ದಾರೆ.. ಇನ್ನು ಅಂಬುಜ ಅವರ ಅಂತ್ಯಕ್ರಿಯೆಯನ್ನು ನಾಳೆ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.. ಪತ್ನಿಯ ಅಗಲಿಕೆಯ ಬಗ್ಗೆ ದ್ವಾರಕೀಶ್ ಅವರು ನೋವು ಹಂಚಿಕೊಂಡಿದ್ದು ನನ್ನ ಎಲ್ಲಾ ಏಳು ಬೀಳುಗಳಲ್ಲಿ ಜೊತೆಯಾಗಿಯೇ ಬಂದವಳು.. ಆದರೆ ಇಂದು ಒಬ್ಬನನ್ನೇ ಬಿಟ್ಟು ಹೋದಳೆಂದು ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ..