ಅಮಿರ್ ಕಾನ್ ಹಾಗೂ ಕಿರಣ್ ದಂಪತಿ ದೂರವಾಗಲು ಕಾರಣವಾದ ಆ ಹೆಣ್ಣು ನಿಜಕ್ಕೂ ಯಾರು ಗೊತ್ತಾ.. ಇವರೇ ನೋಡಿ..

0 views

ಬಾಲಿವುಡ್ ನ ಸ್ಟಾರ್ ನಟರಲ್ಲಿ ಒಬ್ಬರಾದ ನಟ ಅಮಿರ್ ಖಾನ್ ಹಾಗೂ ಕಿರಣ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಇಬ್ಬರೂ ಸಹ ಕಾನೂನಿನ ರೀತಿಯಲ್ಲಿ ದೂರವಾಗಿದ್ದು ಅಧಿಕೃತವಾಗಿ ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ತಮ್ಮ ಹದಿನೈದು ವರ್ಷದ ಮದುವೆ ಜೀವನಕ್ಕೆ ತಿಲಾಂಜಲಿ ಬಿಟ್ಟು ಇದೀಗ ತಮ್ಮ ತಮ್ಮ ದಾರಿ ಹಿಡಿದಿದ್ದಾರೆ.. ನಾವು ಇನ್ನು ಮುಂದೆ ಗಂಡ ಹೆಂಡತಿಯಲ್ಲ ಎಂದು ಅಧಿಕೃತವಾಗಿ‌ ತಿಳಿಸಿದ್ದಾರೆ.. ಆದರೆ ಇದಕ್ಕೆ ನಿಜವಾದ ಕಾರಣವೇನು.. ಹದಿನೈದು ವರ್ಷದ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ಕಾರಣವೇನು.. ಇದರ ಹಿಂದೆ ಬೇರೆ ಯಾರಾದರೂ ಇದ್ದಾರಾ ಎಂಬ ಸಾಕಷ್ಟು ಅನುಮಾನಗಳು ಮೂಡಿದ್ದು ಸುಳ್ಳಲ್ಲ.. ಅದಕ್ಕೆಲ್ಲಾ ಈಗ ಉತ್ತರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಚಾರವೊಂದು ಹರಿದಾಡುತ್ತಿದೆ..

ಹೌದು ಸೆಲಿಬ್ರೆಟಿಗಳು ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಳ್ಳುವುದು ಮತ್ತೊಂದು ಮದುವೆಯಾಗೋದು ಹೊಸ ವಿಚಾರವೇನೂ ಅಲ್ಲ.. ಈ ಹಿಂದೆಯೂ ಸಾಕಷ್ಟು ಜೋಡಿಗಳು ಇದೇ ರೀತಿ ದೂರವಾಗಿ ಮತ್ತೆ ತಮ್ಮ ತಮ್ಮ ದಾರಿ ಹಿಡಿದು ಬೇರೆ ಬೇರೆ ಮದುವೆಯಾಗಿದ್ದಾರೆ.. ಬಾಲಿವುಡ್ ನಲ್ಲಿಯೂ ಸಾಕಷ್ಟು ಸ್ಟಾರ್ ನಟರು ನಟಿಯರು ಸಂಗಾತಿಗಳಿಂದ ದೂರವಾದ ಉದಾಹರಣೆಗಳೂ ಇದೆ.. ಇನ್ನು ಇದೀಗ ಬಾಲಿವುಡ್ ನ ಸ್ಟಾರ್ ಹೀರೋ ಅಮಿರ್ ಖಾನ್ ಹಾಗೂ ಕಿರಣ್ ರಾವ್ ದೂರವಾಗಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.. ನಾವು ನಮ್ಮ ಬದುಕಿನ ಹೊಸ ದಾರಿಯನ್ನು ಪ್ರಾರಂಭ ಮಾಡುತ್ತಿದ್ದೇವೆ.. ನಾವು ಇನ್ನು ಮುಂದೆ ಗಂಡ ಹೆಂಡತಿಯಾಗಿ ಮುಂದುವರೆಯೋದಿಲ್ಲ..

ಆದರೆ ಮಕ್ಕಳಿಗಾಗಿ ಸಹ ಪೋಷಕರಾಗಿ ಮುಂದುವರೆಯುತ್ತಿದ್ದೇವೆ.. ಗಂಡ ಹೆಂಡತಿ ಅನ್ನುವ ಸಂಬಂಧ ಬಿಟ್ಟು ಮೆಕ್ಕೆಲ್ಲವೂ ಹಾಗೆ ಮುಂದುವರೆಯಲಿದೆ.. ಎಂದಿದ್ದರು.. ಹೌದು ಈ ಹದಿನೈದು ವರ್ಷದ ಸುಂದರ ಬದುಕಿನಲ್ಲಿ ನಾವು ಒಂದು ಸಂಪೂರ್ಣ ಜೀವನದ ಸಂತೋಷವನ್ನು ಜೊತೆಯಾಗಿ ಹಂಚಿಕೊಂಡಿದ್ದೇವೆ.. ನಮ್ಮ ಸಂಬಂಧ ನಂಬಿಕೆ ಹಾಗೂ ಗೌರವದಿಂದ ಬೆಳೆದಿದೆ.. ಈಗ ನಾವು ನಮ್ಮ ಬದುಕಿನ ಹೊಸ ಅಧ್ಯಾಯವನ್ನು ಆರಂಭ ಮಾಡುತ್ತಿದ್ದೇವೆ.. ಇನ್ನು ಮುಂದೆ ನಾವು ಗಂಡ ಹೆಂಡತಿಯಲ್ಲ.. ಆದರೆ ಸಹ ಪೋಷಕರಾಗಿ ಇರುತ್ತೇವೆ‌‌.. ಒಬ್ಬರಿಗೊಬ್ಬರು ಕುಟುಂಬವಾಗಿ ಮುಂದುವರೆಯುತ್ತೇವೆ.. ಕೆಲವು ದಿನಗಳ ಹಿಂದೆಯೇ ನಾವು ದೂರವಾಗುವ ನಿರ್ಧಾರವನ್ನು ಮಾಡಿದ್ದೇವು.. ಈಗ ಅಧಿಕೃತವಾಗಿ ದೂರವಾಗುತ್ತಿದ್ದೇವೆ..

ಆದರೆ ನಮ್ಮ ಮಗ ಅಜಾದ್ ಗಾಗಿ ನಾವು ಪೋಷಕರಾಗಿ ಮುಂದುವರೆಯುತ್ತೇವೆ.. ಜೊತೆಗೆ ಇತರೆ ಕೆಲಸಗಳಲ್ಲಿಯೂ ಜೊತೆಯಾಗಿಯೇ ಮುಂದುವರೆಯುತ್ತೇವೆ.. ನಮಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.. ಇನ್ನು ಇವರ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹೊಸ ವಿಚಾರವೊಂದು ಹರಿದಾಡುತ್ತಿದೆ.. ಹೌದು ಅಮಿರ್ ಖಾನ್ ಹಾಗೂ ಕಿರಣ್ ರಾವ್ ದೂರವಾಗಲು ಆ ನಟಿ ಕಾರಣ ಎನ್ನಲಾಗುತ್ತಿದೆ.. ಹೌದು ದಂಗಲ್ ಸಿನಿಮಾದ ನಾಯಕಿ ಫಾತಿಮಾ ಸನಾ ಅವರ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅಮಿರ್ ಖಾನ್ ಹಾಗೂ ಕಿರಣ್ ರಾವ್ ದೂರವಾಗಲು ಈಕೆಯೇ ಕಾರಣ ಎನ್ನಲಾಗುತ್ತಿದೆ..

ಕಳೆದ 2016 ರಲ್ಲಿ ಬಿಡುಗಡೆಯಾದ ದಂಗಲ್ ಸಿನಿಮಾದಲ್ಲಿ ಇಬ್ಬರೂ ಸಹ ಒಟ್ಟಾಗಿ ಅಭಿನಯಿಸಿದ್ದು ಆ ಸಿನಿಮಾದ ನಂತರ ಇಬ್ಬರ ನಡುವೆ ಸಂಬಂಧವಿತ್ತು ಎಂಬ ಗಾಳಿ ಸುದ್ದಿ ಹಬ್ಬಿತ್ತು.. ಆನಂತರ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತಿತ್ತು.. ಆದರೆ ಅಧಿಕೃತವಾಗಿ ಇಬ್ಬರೂ ಸಹ ಎಲ್ಲಿಯೂ ಈ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ.. ಆದರೀಗ ಫಾತಿಮಾ ಸನಾ ಅವರ ವಿಚಾರ ಮತ್ತೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದು ಫಾತಿಮಾ ಅವರ ಮುಂದಿನ ಜೀವನಕ್ಕೆ ಶುಭವಾಗಲಿ ಎಂದೂ ಸಹ ಜನರು ಹಾರೈಸುತ್ತಿದ್ದು ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿದ್ದಾರೆ..