ಮಗಳ ಬಗ್ಗೆ ಸಂತೋಷ ಹಂಚಿಕೊಂಡ ನಟ ಪ್ರೇಮ್.. ಮದುವೇನಾ? ಫೋಟೋ ಗ್ಯಾಲರಿ‌ ನೋಡಿ..

0 views

ಸ್ಯಾಂಡಲ್ವುಡ್ ನಲ್ಲಾಗಲಿ ಅಥವಾ ಮತ್ಯಾವುದೇ ಚಿತ್ರರಂಗವಾಗಲಿ ಕುಟುಂಬದ ಕುಡಿಗಳು ತಮ್ಮ ತಂದೆ ಅಥವಾ ತಾಯಿಯ ವೃತ್ತಿಯನ್ನು ಅದರಲ್ಲೂ ಕಲೆಯನ್ನು ಮುಂದುವರೆಸುವುದು ಹೊಸದೇನಲ್ಲಾ.. ಚಿತ್ರರಂಗದ ಮೊದಲ ಜನರೇಶನ್ ನಿಂದಲೂ ಮಕ್ಕಳು ಅಪ್ಪನ ಹಾದಿ ಹಿಡಿಯೋದು ಕಾಮನ್ ಆಗಿದೆ.. ಅದೇ ರೀತಿ‌ ಇದೀಗ ಸ್ಯಾಂಡಲ್ವುಡ್ ನ ಖ್ಯಾತ ನಟನ ಪುತ್ರಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರಾ? ಎಂಬ ಸುದ್ದಿ ಎಲ್ಲೆಡೆ ಹರಡಿದೆ.. ಇದಕ್ಕೆ ಪೂರಕವಾಗಿ ವಿಶೇಷ ಫೋಟೋ ಚಿತ್ರೀಕರಣ ಕೂಡ ನಡೆದಿತ್ತು..

ಇವರು ಮತ್ಯಾರೂ ಅಲ್ಲ.. ನೆನಪಿರಲಿ ನಟ ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್.. ಹೌದು ಅಮೃತಾ ಪ್ರೇಮ್ ಅವರ ಫೋಟೋ ಚಿತ್ರೀಕರಣ ಮಾಡಿಸಿರುವ ಪ್ರೇಮ್ ಅವರು ಖುದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.. ಜೊತೆಗೆ ಮಗಳಿಗಾಗಿ ವಿಶೇಷ ಸಾಲುಗಳನ್ನು ಬರೆದು ಹಾರೈಸಿದ್ದಾರೆ.. ಮಗಳೆಂದರೆ ತಂದೆಗೆ ದೇವತೆಯಂತೆ.. ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲಾ ತಂದೆಯರಿಗೂ ಸಿಗುವುದಲ.. ಅಭಿನಂದನೆಗಳು ನನ್ನ ಅದೃಷ್ಟ ದೇವತೆಗೆ..‌ ಎಂದು ಬರೆದು ಮಗಳ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ..

ಅತ್ತ ಪ್ರೇಮ್ ಅವರು ಮಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದ್ದು ಅಮೃತಾ ಅವರು ಚಿತ್ರರಂಗಕ್ಕೆ ಬರುವ ಸಲುವಾಗಿ ಫೋಟೋ ಚಿತ್ರೀಕರಣ ಮಾಡಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.. ಅಷ್ಟೇ ಅಲ್ಲದೆ ಮತ್ತೆ ಕೆಲವರು ಮಗಳಿಗೆ ಮದುವೇನಾ? ಎಂದು ಕಮೆಂಟ್ ಮೂಲಕ ಪ್ರೇಮ್ ಅವರನ್ನು ಪ್ರಶ್ನಿಸಿದ್ದರು.. ಆದರೆ ವಾಸ್ತವ ಬೇರೆಯೇ ಇದೆ..

ಹೌದು ಅಮೃತಾ ಅವರು ಸುಮ್ಮನೆ ಗ್ರ್ಯಾಂಡ್ ಆಗಿ ರೆಡಿ ಆಗಿದ್ದನ್ನು ನೋಡಿ ಪ್ರೇಮ್ ಅವರು ಮಗಳನ್ನು ಸಂತೋಷ ಪಡಿಸುವ ಸಲುವಾಗಿಯಷ್ಟೇ ಆ ದಿನ ಫೋಟೋ ಚಿತ್ರೀಕರಣ ಮಾಡಿಸಿದ್ದಾರೆ..‌ ಇದರ ಉದ್ದೇಶ ಚಿತ್ರರಂಗಕ್ಕೆ ಬರುವ ಕಾರಣವಲ್ಲ.. ಆದರೆ ಮುಂದೆ ಚಿತ್ರರಂಗಕ್ಕೆ ಬರುವುದಿಲ್ಲ ಎನ್ನುವ ಮಾತು ಸಹ ಇಲ್ಲ.. ಮುಂದಿನ ದಿನಗಳಲ್ಲಿ ಅನೃತಾ ಆಸೆ ಪಟ್ಟರೆ ಚಿತ್ರರಂಗಕ್ಕೆ ಖಂಡಿತ ಬರಬಹುದು.. ಕಾರಣ ಮೊದಲಿನಿಂದಲೂ ಪ್ರೇಮ್ ಅವರಿಗೆ ಮಗಳೆಂದರೆ ಜೀವವೆನ್ನಬಹುದು.. ಮಕ್ಕಳ ಆಸೆ ಅವರ ಆಸಕ್ತಿ ಏನಿದೆಯೋ ಅದೇ ರೀತಿ ಅವರ ಜೀವನ ರೂಪಿಸಬೇಕು ಎಂಬ ಮಾತನ್ನಾಡಿದ್ದರು.. ಒಂದು ವೇಳೆ ಅಮೃತಾ ಅವರು ಚಿತ್ರರಂಗಕ್ಕೆ ಕಾಲಿಟ್ಟರೆ ಪ್ರೇಮ್ ಅವರ ಸಂಪೂರ್ಣ ಪ್ರೋತ್ಸಾಹ ದೊರಯಲಿದೆ ಎನ್ನಬಹುದು.

ಇನ್ನು ಸದ್ಯ ಅಮೃತಾ ಅವರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು.. ಓದಿನಲ್ಲಿ ಬಹಳ ಆಸಕ್ತಿ ಇರುವ ಅಮೃತಾ ಇಂಜಿನಿಯರಿಂಗ್ ಮುಗಿಸುವ ವರೆಗೂ ಬೇರೆ ಕಡೆ ಗಮನ ನೀಡುವುದು ಅಸಾಧ್ಯದ ಮಾತು.. ಈ ಹಿಂದೆಯೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅಮೃತಾ ಶೇಕಡ 95 ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದರು.. ಈ ಬಗ್ಗೆ ಪ್ರೇಮ್ ಅವರು ಸಹ ಮಗಳ ಅಂಕಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದರು.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅಮೃತಾ ಅವರ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ..