ಮುದ್ದು ಮಗಳಿಗೆ ನಾಮಕರಣ ಮಾಡಿದ ಕನ್ನಡ ಕಿರುತೆರೆಯ ಖ್ಯಾತ ಜೋಡಿ..

0 views

ಕನ್ನಡದ ಸಾಕಷ್ಟು ಕಲಾವಿದರು ತಮ್ಮ ಜೊತೆ ಅಭಿನಯಿಸಿದ ಸಹ ಕಲಾವಿದರನ್ನು ಪ್ರೀತಿಸಿ ಮದುವೆಯಾಗಿ ನಿಜ ಜೀವನದಲ್ಲಿಯೂ ಜೋಡಿಯಾಗಿ ಸುಖ ಸಂಸಾರ ನಡೆಸುತ್ತಿದ್ದು ಸ್ಟಾರ್ ಜೋಡಿಗಳಾಗಿದ್ದಾರೆನ್ನಬಹುದು.. ಇನ್ನು ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲ ಕಿರುತೆರೆಯಲ್ಲಿಯೂ ಅಂತಹ ಸಾಕಷ್ಟು ಕಲಾವಿದರಿದ್ದು ಧಾರಾವಾಹಿಗಳ ಜೋಡಿಗಳೇ ನಿಜ ಜೀವನದಲ್ಲಿಯೂ ಜೋಡಿಯಾಗಿದ್ದಾರೆ.. ಹೌದು ಸ್ಯಾಂಡಲ್ವುಡ್ ನಲ್ಲಿ ವಿಷ್ಣುವರ್ಧನ್ ಭಾರತಿ.. ಅಂಬರೀಶ್ ಸುಮಲತಾ.. ಯಶ್ ರಾಧಿಕಾ.. ಕೃಷ್ಣ ಮಿಲನಾ ನಾಗರಾಜ್.. ಉಪೇಂದ್ರ ಪ್ರಿಯಾಂಕಾ.. ಹೀಗೆ ಸಾಕಷ್ಟು ಕಲಾವಿದರುಗಳು ಕಲಾವುದರನ್ನೇ ಕೈಹಿಡಿದು ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿಗಳು ಎನಿಸಿಕೊಂಡಿದ್ದಾರೆ..

ಅದೇ ರೀತಿ ಕಿರುತೆರೆಯಲ್ಲಿಯೂ ಸಾಕಷ್ಟು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಚಂದನ್ ಕವಿತಾ ಸೇರಿದಂತೆ ಇನ್ನು ಅನೇಕ ಕಲಾವಿದರು ಸಹ ಕಲಾವಿದರನ್ನೇ ಪ್ರೀತಿಸಿ ಮದುವೆಯಾಗಿರೋದುಂಟು.. ಅದೇ ರೀತಿ ಕನ್ನಡ ಕಿರುತೆರೆಯ ಖ್ಯಾತ ಜೋಡಿಯೊಂದು ಇದೀಗ ಮುದ್ದು ಮಗಳ ನಾಮಕರಣ ಮಾಡಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿದ್ದ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ಅಭಿನಯಿಸಿ ಸಿಕ್ಕಪಟ್ಟೆ ಫೇಮಸ್ ಆಗಿದ್ದ ಕಿರುತೆರೆ ನಟ ರಾಘವೇಂದ್ರ ಹಾಗೂ ನಟಿ ಅಮೃತಾ ರಾಮಮೂರ್ತಿ ಜೋಡಿ ತೆರೆ ಮೇಲೆ ಮೋಡಿ ಮಾಡಿದ್ದು ಬಹಳಷ್ಟು ಖ್ಯಾತಿ ಗಳಿಸಿದ್ದರು‌.

ಇನ್ನು ಧಾರಾವಾಹಿಯಲ್ಲಿ ಅಭಿನಯಿಸುವ ಸಮಯದಲ್ಲಿಯೇ ಪರಸ್ಪರ ಪ್ರೀತಿ ಮಾಡುತ್ತಿದ್ದ ಈ ಜೋಡಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.. ಇತ್ತ ರಾಘವೇಂದ್ರ ಅವರು ಕಲರ್ಸ್ ಕನ್ನಡ ವಾಹಿನಿಯ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಅಭಿನಯಿಸಿದರೆ ಅತ್ತ ಅಮೃತಾ ರಾಮಮೂರ್ತಿ ಅವರು ಮನಸಾರೆ ಹಾಗೂ ಇನ್ನಿತರ ಧಾರಾವಾಹಿಗಳಲ್ಲಿ ಬ್ಯುಸಿ ಆದರು.. ಇನ್ನು ಮನಸಾರೆ ಧಾರಾವಾಹಿಯಿಂದ ಅರ್ಧಕ್ಕೆ ಹೊರಬಂದು ಸುದ್ದಿಯಾಗಿದ್ದ ಅಮೃತಾ ನಂತರ ತಾಯಿಯಾಗುತ್ತಿರುವ ವಿಚಾರ ಹಂಚಿಕೊಂಡಿದ್ದರು..

ನಂತರ ಗರ್ಭಿಣಿ ಸಮಯದ ಫೋಟೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅಮೃತಾ ಹಾಗೂ ರಾಘವೇಂದ್ರ ಜೋಡಿ ತಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮನದ ಸಂತೋಷವನ್ನು ಹಂಚಿಕೊಂಡು ಸಂಭ್ರಮ ಪಟ್ಟಿದ್ದರು.. ಇನ್ನು ಕಳೆದ ಐದು ತಿಂಗಳ ಹಿಂದಷ್ಟೇ ಅಮೃತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಮ್ಮ ಕುಟುಂಬಕ್ಕೆ ಪುಟ್ಟ ದೇವತೆಯ ಆಗಮನವಾಗಿದೆ ಎಂದು ಬಹಳ ಸಂತೋಷ ಪಟ್ಟಿದ್ದರು..

ಇನ್ನು ಈ ಸ್ಟಾರ್ ಜೋಡಿ ಮಗಳನ್ನು ತಮ್ಮ ಜೀವನದ ದೇವತೆ ಎಂದಿದ್ದು ಹೆಣ್ಣು ಮಗುವಿಗೆ ಅವರು ಕೊಟ್ಟ ಗೌರವಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.. ಇನ್ನು ಇದೀಗ ತಮ್ಮ ಪುಟ್ಟ ದೇವತೆಗೆ ನಾಮಕರಣ ಕರಯಕ್ರಮವನ್ನು ನೆರವೇರಿಸಿದ್ದು ಮುದ್ದು ಕಂದನಿಗೆ ಧೃತಿ ಎಂದು ಹೆಸರನ್ನಿಟ್ಟಿದ್ದಾರೆ..ಹೌದು ಸಾಮಾಜಿಕ ಜಾಲತಾಣದಲ್ಲಿ ಮಗಳ ನಾಮಕರಣದ ಸಂತೋಷ ಹಂಚಿಕೊಂಡಿರುವ ಅಮೃತಾ ಹಾಗೂ ರಾಘವೇಂದ್ರ ಜೋಡಿ ಧೃತಿ ಎಂದು ನಾಮಕರಣ ಮಾಡಿದ್ದೇವೆ.. ಧೃತಿ ಪುಟ್ಟಿ ಎಂದು ಕರೆಯುತ್ತೇವೆ.. ಎಂದಿದ್ದಾರೆ..

ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ನಿನ್ನ ಜೊತೆ ನನ್ನ ಕತೆ ಹಾಡಿನ ಸಂಗೀತದ ಜೊತೆ ಮಗಳ ಹೆಸರನ್ನು ಅನಾವರಣ ಮಾಡಿದ್ದಾರೆ.. ಇದರ ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಬರೆದುಕೊಂಡಿದ್ದು “ಅಪ್ಪು ಸರ್ ಲವ್ ಯೂ.. ನಮ್ಮ ಜೀವನದ ಬೆಳಕು ನೀವು” ಎಂದು ಬರೆದು ಪೋಸ್ಟ್ ಮಾಡಿದ್ದು ತಮ್ಮ ಜೀವನದ ಸಂಭ್ರಮದ ದಿನದಲ್ಲಿ ಪುನೀತ್ ಅವರನ್ನು ನೆನೆದಿದ್ದಿದಾರೆ.. ಇನ್ನು ಇತ್ತ ಮುದ್ದು ಕಂದನಿಗೆ ಧೃತಿ ಎಂದು ನಾಮಕರಣ ಮಾಡಿದ್ದು ಸ್ನೇಹಿತರು ಅಭಿಮಾನಿಗಳು ನೆಟ್ಟಿಗರು ಮುದ್ದು ಕಂದನಿಗೆ ಶುಭ ಹಾರೈಸಿದ್ದಾರೆ..