ಗಟ್ಟಿಮೇಳ ಧಾರಾವಾಹಿಯ ನಟಿ ಅಮೂಲ್ಯ ಅವರ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ.. ಶಾಕ್‌ ಆಗ್ತೀರಾ..

0 views

ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಅಮೂಲ್ಯ, ಯಾರಿಗೆ ತಾನೇ ಗೊತ್ತಿಲ್ಲ.. ಕಿರುತೆರೆ ಲೋಕದ ಟಾಪ್ ನಟಿಯರಲ್ಲಿ ಇವರು ಕೂಡ ಒಬ್ಬರು. ಈ ಪಾತ್ರದಲ್ಲಿ ನಟಿಸುತ್ತಿರುವವರು ನಿಶಾ ಮಿಲನಾ, ನಿಶಾ ಈಗ ಕನ್ನಡ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲಿ ಸಹ ಬಹಳ ಫೇಮಸ್. ತೆಲುಗು ಧಾರಾವಾಹಿ ಲೋಕಕ್ಕೆ ಇತ್ತೀಚೆಗೆ ಎಂಟ್ರಿ ಕೊಟ್ಟ ನಿಶಾ, ಅಲ್ಲಿ ಕೂಡ ಸಖತ್ ಫೇಮಸ್ ಆಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ರೌಡಿ ಬೇಬಿ ಎಂದೇ ಗುರುತಿಸಿಕೊಂಡಿದ್ದಾರೆ. ಇದೀಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ನಿಶಾ. ಗಟ್ಟಿಮೇಳ ಧಾರಾವಾಹಿಗೆ ಪ್ರಸ್ತುತ ನಿಶಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಗಟ್ಟಿಮೇಳ ಧಾರಾವಾಹಿ ಶುರುವಾಗಿ 3 ವರ್ಷಕ್ಕಿಂತ ಹೆಚ್ಚಿನ ಸಮಯವೇ ಆಗಿದೆ. ಈ ಧಾರಾವಾಹಿ ಕಿರುತೆರೆ ವೀಕ್ಷಕರು ಈಗಲೂ ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿ ಆಗಿದೆ. ಪ್ರಸ್ತುತ ವೇದಾಂತ್ ಅಮೂಲ್ಯ ಮದುವೆಯಾಗಿ, ವೇದಾಂತ್ ನಿಜವಾದ ತಾಯಿ ಯಾರು ಎನ್ನುವ ಹುಡುಕಾಟದಲ್ಲಿದೆ ಗಟ್ಟಿಮೇಳ. ವೇದಾಂತ್, ವಿಕ್ರಾಂತ್, ಧ್ರುವ ಮತ್ತು ಆದ್ಯ ತಾಯಿ ಅವರ ಜೊತೆಯಲ್ಲೇ ಇದ್ದರು ಸಹ, ತಾಯಿ ಯಾರು ಎಂದು ಅವರಿಗೆ ಗೊತ್ತಾಗುತ್ತಿಲ್ಲ. ಧ್ರುವ ಪಾತ್ರ ಸಹ ಇನ್ನಿಲ್ಲ ಎನ್ನುವ ಹಾಗೆ ತೋರಿಸಲಾಗಿದೆ.

ಒಟ್ಟಿನಲ್ಲಿ ಗಟ್ಟಿಮೇಳ ಧಾರಾವಾಹಿ ಪ್ರತಿ ಎಪಿಸೋಡ್ ನಲ್ಲೂ ರೋಚಕ ಟ್ವಿಸ್ಟ್ ಗಳನ್ನು ನೀಡುತ್ತಾ ಸಾಗುತ್ತಿದೆ. ಇದರ ನಡುವೆ ನಮ್ಮ ಕಥಾನಾಯಕಿ ಅಮೂಲ್ಯಳ ಪಂಚ್ ಡೈಲಾಗ್ಸ್ ಗಳನ್ನು ಜನರು ಮಿಸ್ ಮಾಡಿಕೊಳ್ಳುತ್ತಿರುವುದಂತೂ ನಿಜ. ನಟಿ ನಿಶಾ ಅವರ ಬಗ್ಗೆ ಹೇಳುವುದಾದರೆ, ಶಾಲಾ ದಿನಗಳಲ್ಲೇ ಮಕ್ಕಳ ಚಾನೆಲ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು ನಿಶಾ ಮಿಲನಾ. ಆದರೆ ಯಾವತ್ತಿಗೂ ಓದಿನ ವಿಚಾರದಲ್ಲಿ ತೊಂದರೆ ಮಾಡಿಕೊಂಡಿಲ್ಲ. ನಿಶಾ ಅವರು ಮಕ್ಕಳ ಶೋ ನಿರೂಪಣೆ ಮಾಡುವ ಜೊತೆಗೆ ಚೆನ್ನಾಗಿ ಹಾಡುತ್ತಿದ್ದರು.

ನಂತರ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ನಟಿಸಿದ್ದರು, ಆದರೆ ನಿಶಾ ಅವರಿಗೆ ಹಸರು ತಂದುಕೊಟ್ಟಿದ್ದು, ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರ. ನಿಶಾ ಅವರ ಚುರುಕುತನ, ಅಮ್ಮ ಅಪ್ಪ ಮತ್ತು ಸಹೋದರಿಯರ ಜೊತೆ ಇರುತ್ತಿದ್ದ ರೀತಿ, ಅವರ ಅಡ್ಡ ಹೆಸರುಗಳು, ಪಂಚ್ ಡೈಲಾಗ್ ಗಳು ಎಲ್ಲವನ್ನು ಜನರು ತುಂಬಾ ಇಷ್ಟಪಟ್ಟಿದ್ದರು. ಪಟಾಕಿಯ ಮಾತನಾಡುತ್ತಾ ಇರುವ ಪಾತ್ರವಾಗಿದೆ ಅಮೂಲ್ಯ. ಈ ಪಾತ್ರದ ಮೂಲಕ ನಿಶಾ ಅವರು ದೊಡ್ಡ ಫ್ಯಾನ್ ಬೇಸ್ ಗಳಿಸಿಕೊಂಡರು.

ನಿಶಾ ಎಲ್ಲಾ ಹುಡುಗರ ಕ್ರಶ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ತೆಲುಗು ಕಿರುತೆರೆಗೂ ಎಂಟ್ರಿ ಕೊಟ್ಟ ನಿಶಾ, ಅಲ್ಲಿ ಕೂಡ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ತಮ್ಮಲ್ಲಿ ಒಳ್ಳೆಯ ಕಲೆ ಇದೆ ಎನ್ನುವುದನ್ನು ಸಹ ತೋರಿಸಿಕೊಟ್ಟಿದ್ದಾರೆ ನಿಶಾ. ನಿಶಾ ಅವರು ಗಟ್ಟಿಮೇಳ ಧಾರಾವಾಹಿ ಶುರು ಮಾಡಿದಾಗ, ಒಂದು ಎಪಿಸೋಡ್ ಗೆ 8 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು, ಈಗ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಒಂದು ಎಪಿಸೋಡ್ ಗೆ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಕನ್ನಡ ಕಿರುತೆರೆಯ ಕಾಸ್ಲಿ ನಟಿ ಇವರು ಎಂದರೆ ತಪ್ಪಾಗುವುದಿಲ್ಲ.