ಮೊದಲ ಬಾರಿಗೆ ಮಕ್ಕಳ ಫೋಟೋ ಹಂಚಿಕೊಂಡ ನಟಿ ಅಮೂಲ್ಯ..

0 views

ಕನ್ನಡದ ಖ್ಯಾತ ನಟಿ ಅಮೂಲ್ಯ ಸಧ್ಯ ಮದುವೆಯ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದು ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಾ ಸಮಯ ಕಳೆಯುತ್ತಿದ್ದು ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ.. ಇನ್ನೂ ಕೆಲ ತಿಂಗಳುಗಳ ಹಿಂದಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ ಅವರು ಸಧ್ಯ ಇದೀಗ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.. ಅದರೆ ಮಕ್ಕಳ ಫೋಟೋ ಹಂಚಿಕೊಂಡ ಅಮೂಲ್ಯ ಮೇಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ..

ಹೌದು ನಟಿ ಅಮೂಲ್ಯ ಅವರು ಬಾಲ ನಟಿಯಾಗಿ ಸ್ಯಾಂಡಲ್ವುಡ್ ಗೆ ಕಾಲಿಟ್ಟವರು.. ಚಾಲೆಂಜಿಂಗ್ ಸ್ಟಾರ್ ದರ್ಶನ್.. ಕಿಚ್ಚ ಸುದೀಪ್ ಸೇರಿದಂತೆ ಅನೇಕ ಸ್ಟಾರ್ ನಟರುಗಳ ಜೊತೆ ಚಿಕ್ಕ ವಯಸ್ಸಿನಲ್ಲಿಯೇ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿದ್ದ ನಟಿ ಅಮೂಲ್ಯ ನಂತರದಲ್ಲಿ ನಾಯಕಿಯಾಗಿ ಸ್ಯಾಂಡಲ್ವುಡ್ ಗೆ ಕಾಲಿಟ್ಟು ಮಿಂಚಿದರು.. ಅದರಲ್ಲೂ ಅಮೂಲ್ಯ ಹಾಗೂ ಗಣೇಶ್ ಅವರ ಜೋಡಿ ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿ ಎನಿಸಿಕೊಂಡಿತ್ತು.. ಚೆಲುವಿನ ಚಿತ್ತಾರ.. ಶ್ರಾವಣಿ‌ ಸುಬ್ರಹ್ಮಣ್ಯ ಹೀಗೆ ಹಿಟ್ ಸಿನಿಮಾಗಳನ್ನು ಈ ಜೋಡಿ ನೀಡಿತ್ತು.. ತೆರೆ ಮೇಲೆ‌ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ನಿಜ ಜೀವನದಲ್ಲಿಯೂ ಬಹಳ ಆತ್ಮೀಯರಾಗಿದ್ದರು.. ಅತ್ತ ತಂದೆಯನ್ನು ಕಳೆದುಕೊಂಡಿದ್ದ ಅಮೂಲ್ಯ ಅವರನ್ನು ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರು ತಮ್ಮ ಮನೆಯ ಮಗಳಂತೆಯೇ ನೋಡುತ್ತಿದ್ದರು.. ಅದರಂತೆಯೇ ತಾವೇ ಮುಂದೆ ನಿಂತು ಹುಡುಗನನ್ನು ನೋಡಿ ಮದುವೆಯ ಜವಾಬ್ದಾರಿಯನ್ನೂ ಸಹ ವಹಿಸಿಕೊಂಡರು..

ಹೌದು ಶಿಲ್ಪಾ ಗಣೇಶ್ ಅವರಿಗೆ ಪರಿಚಯವಿದ್ದ ರಾಜಕಾರಣಿ ರಾಮಚಂದ್ರ ಅವರ ಮಗ ಜಗದೀಶ್ ಅವರ ಜೊತೆ ಅಮೂಲ್ಯ ಅವರ ಮದುವೆ ಮಾಡುವ ನಿರ್ಧಾರ ಮಾಡಿದರು.. ಅಂದುಕೊಂಡಂತೆ ಮದುವೆ ನೆರವೇರಿದ್ದು ಅಮೂಲ್ಯ ಅವರಿಗೆ ಒಳ್ಳೆಯ ಸಂಗಾತಿ ದೊರೆತಂತಾಯಿತು.. ಇನ್ನು ಮದುವೆಯ ನಂತರ ಮಾವ ಹಾಗೂ ಪತಿಯ ರಾಜಕೀಯ ಕೆಲಸಗಳಿಗೆ ಸಾಥ್ ಕೊಟ್ಟ ಅಮೂಲ್ಯ ಅವರು ಸಹ ಚುನಾವಣಾ ಪ್ರಚಾರ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.. ಇನ್ನು ಕಳೆದ ವರ್ಷ ತಾಯಿ ಯಾಗುತ್ತಿರುವ ಸಂತೋಷ ಹಂಚಿಕೊಂಡಿದ್ದ ಅಮೂಲ್ಯ ಅವರು ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು..

ಇನ್ನು ಇತ್ತ ಮನೆಗೆ ಒಟ್ಟೊಟ್ಟಿಗೆ ಇಬ್ಬರು ಕಂದಮ್ಮಗಳನ್ನು ಬರಮಾಡಿಕೊಂಡ ಜಗದೀಶ್ ಅವರು ಸಂಭ್ರಮ ಪಟ್ಟು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದರು.. ಇನ್ನು ಮೂರು ತಿಂಗಳ ಕಂದಮ್ಮಗಳನ್ನು ಬೆಂಗಳೂರಿನ ಅಣ್ಣಮ್ಮ ತಾಯಿಯ ಗುಡಿಗೆ ಕರೆದುಕೊಂಡು ಹೋಗಿ ದರ್ಶನ ಮಾಡಿಸಿ ಹರಕೆ ತೀರಿಸಿದ್ದರು. ಇನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಇಬ್ಬರು ಕಂದಮ್ಮಗಳ ಫೋಟೋಗಳನ್ನು ಅಮೂಲ್ಯ ಅವರು ಹಂಚಿಕೊಂಡಿದ್ದಾರೆ.. ಆದರೆ ಈ ಫೋಟೋ ನೋಡಿದ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ..

ಹೌದು ಇತ್ತೀಚಿನ ದಿನಗಳಲ್ಲಿ ಸ್ಟಾರ್ ಗಳು ಮಕ್ಕಳ ಫೋಟೋವನ್ನು ರಿವೀಲ್ ಮಾಡದೇ ಕೆಲ ವಿಶೇಷ ಸಂದರ್ಭದಲ್ಲಿ ಇನ್ನಷ್ಟು ವಿಶೇಷವಾಗಿ ಮಕ್ಕಳನ್ನು ತೋರುವುದು ಸಹಜವಾಗಿದೆ..ಅದೇ ರೀತಿ ಅಮೂಲ್ಯ ಅವರೂ ಸಹ ಮಕ್ಕಳ ಮುಖವನ್ನು ಇದುವರೆಗೂ ಮಾದ್ಯಮದವರಿಗೆ ತೋರಿರಲಿಲ್ಲ.. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡರೂ ಸಹ‌ ಮಕ್ಕಳ ಮುಖ ತೋರದೇ ಇರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.. ಇಬ್ಬರೂ ಮಕ್ಕಳ ಕಾಲುಗಳನ್ನು ತಮ್ಮ ಕೆನ್ನೆಗಳ ಮೇಲಿರಿಸಿಕೊಂಡು “ಧನ್ಯ”.. ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ..

ಇನ್ನು ಈಗಿನ ಟ್ರೆಂಡ್ ನಂತೆ ಅಮೂಲ್ಯ ಅವರೂ ಸಹ ಮಕ್ಕಳ ಫೋಟೋ ಚಿತ್ರೀಕರಣ ಮಾಡಿಸಿದ್ದು.. ಆದರೆ ಫೋಟೋಗಳನ್ನು ಮಾತ್ರ ರಿವೀಲ್ ಮಾಡುತ್ತಿಲ್ಲ.. ಇನ್ನು ಸಧ್ಯದಲ್ಲಿಯೇ ವಿಶೇಷ ದಿನವೊಂದರಲ್ಲಿ ಅಭಿಮಾನಿಗಳಿಗೆ ಮಕ್ಕಳ ಮುಖವನ್ನು ತೋರಬಹುದಾಗಿದೆ.. ಒಟ್ಟಿನಲ್ಲಿ ತಾಯಿಯಾಗುವ ಸುದ್ದಿ ಹಂಚಿಕೊಂಡಾಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುವ ಅಮೂಲ್ಯ ಅವರೀಗ ಮಕ್ಕಳ‌ ಫೋಟೋ ವಿಚಾರಕ್ಕೆ ಮತ್ತೆ ಸುದ್ದಿಗೆ ಬಂದದ್ದಂತೂ ಸತ್ಯ.