ತಾಯಿಯಾಗುತ್ತಿರುವ ಸಂತೋಷ ಹಂಚಿಕೊಂಡ ಅಮೂಲ್ಯ.. ಆದರೆ ಅದಾಗಲೇ ಎಷ್ಟು ತಿಂಗಳು ಗೊತ್ತಾ.. ಗಂಡನ ಬಗ್ಗೆ ಅಮೂಲ್ಯ ಹೇಳಿದ ಮಾತು ನೋಡಿ..

0 views

ಸ್ಯಾಂಡಲ್ವುಡ್ ನ ಮತ್ತೊಂದು ಸ್ಟಾರ್ ಜೋಡಿ ಅಮೂಲ್ಯ ಹಾಗೂ ಜಗದೀಶ್ ಸಧ್ಯ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ಬರಮಾಡಿಕೊಳ್ಳುತ್ತಿದ್ದಾರೆ.. ಹೌದು ನಟಿ ಅಮೂಲ್ಯ ತಾಯಿಯಾಗುತ್ತಿದ್ದು ಅಭಿಮಾನಿಗಳ ಜೊತೆ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಕಳೆದ ನಾಲ್ಕು ವರ್ಷದ ಹಿಂದೆ 2017 ಮೇ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಅಮೂಲ್ಯ ಹಾಗೂ ಜಗದೀಶ್ ಇದೀಗ ನಾಲ್ಕು ವರ್ಷಗಳ ಬಳಿಕ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳುತ್ತಿದ್ದಾರೆ.. ಸ್ಯಾಂಡಲ್ವುಡ್ ನಲ್ಲಿ ಎರಡನೇ ಬಾರಿ ಕಂಬ್ಯಾಕ್ ಮಾಡಿ ಖ್ಯಾತಿಯಲ್ಲಿದ್ದ ಅಮೂಲ್ಯ ಅವರು ರಾಜಕಾರಣಿ ರಾಮಚಂದ್ರ ಅವರ ಮಗ ಫಾರಿನ್ ರಿಟರ್ನ್ ಜಗದೀಶ್ ಅವರ ಕೈ ಹಿಡಿದಿದ್ದರು..

ನಿಜ ಹೇಳಬೇಕೆಂದರೆ ಅಮೂಲ್ಯ ಅವರು ಕೆಲ ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.. ಆಗಿನಿಂದಲೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕುಟುಂಬ ಹಾಗೂ ದರ್ಶನ್ ವಿಜಯಲಕ್ಷ್ಮಿ ಅವರು ಅಮೂಲ್ಯ ಅವರನ್ನು ತಮ್ಮ ಕುಟುಂಬದಲ್ಲಿ ಒಬ್ಬರಂತೆಯೇ ನೋಡಿಕೊಳ್ಳುತ್ತಿದ್ದರು..ಇನ್ನು ಇತ್ತ ಅಮೂಲ್ಯ ಅವರ ಮದುವೆ ಜವಾಬ್ದಾರಿಯನ್ನು ಶಿಲ್ಪಾ ಗಣೇಶ್ ಅವರೇ ತೆಗೆದುಕೊಂಡಿದ್ದು ಅವರೇ ಹುಡುಗನನ್ನು ನೋಡಿದವರಾಗಿದ್ದಾರೆ‌‌. ಹೌದು ಅಮೂಲ್ಯ ಬಗ್ಗೆ ಮೊದಲಿನಿಂದಲೂ ತಿಳಿದಿದ್ದ ಗಣೇಶ್ ಅವರು ಹಾಗೂ ಶಿಲ್ಪಾ ಗಣೇಶ್ ಅವರು ಅಮೂಕ್ಯ ಅವರಿಗೆ ತಮ್ಮ ಕುಟುಂಬದ ಸ್ನೇಹಿತರಾಗಿದ್ದ ಜಗದೀಶ್ ರನ್ನು ಮದುವೆ ಮಾಡಲು ನಿರ್ಧರಿಸಿ ಆ ಬಗ್ಗೆ ಜಗದೀಶ್ ಅವರಿಗೆ ವಿಚಾರ ತಿಳಿಸಿದ್ದಾರೆ..

ಇತ್ತ ಬಹಳಷ್ಟು ಶ್ರೀಮಂತರಾಗಿರುವ ರಾಮಚಂದ್ರ ಅವರ ಕುಟುಂಬ ಹಾಗೂ ಜಗದೀಶ್ ಅವರು ಅಮೂಲ್ಯ ಅವರನ್ನು ಗಣೇಶ್ ಅವರ ಮನೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ ಮೆಚ್ಚಿಕೊಂಡಿದ್ದರು.. ಇತ್ತ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರ ಮಾತಿಗೆ ಎದುರಾಡದ ಅಮೂಲ್ಯ ಅವರೂ ಸಹ ಮದುವೆಗೆ ಒಪ್ಪಿದರು.. ಗಣೇಶ್ ಅವರೇ ಮುಂದೆ ನಿಂತು ಮದುವೆಯನ್ನು ಸಹ ಮಾಡಿಸಿದರು.. ಮದುವೆಯ ನಂತರ ನಿಜಕ್ಕೂ ತಂದೆ ಯಿಲ್ಲದ ಮಗಳ ಮದುವೆ ಹೇಗೋ ಏನೋ ಎನ್ನುತ್ತಿದ್ದ ಅಮೂಲ್ಯ ಅವರ ತಾಯಿ ಮಗಳನ್ನು ನೋಡಿ ಮಗಳ ಜೀವನ ನೋಡಿ ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆ.. ಇತ್ತ ಅಮೂಲ್ಯ ಹಾಗೂ ಜಗದೀಶ್ ಅವರು ಬಹಳ ಅನ್ಯೂನ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..

ಮದುವೆಯ ನಂತರ ಸಿನಿಮಾ ರಂಗದಿಂದ ದೂರ ಉಳಿದ ಅಮೂಲ್ಯ ತಮ್ಮ ಮಾವ ಹಾಗೂ ಪತಿ ಜಗದೀಶ್ ಅವರ ರಾಜಕೀಯ ಕೆಲಸಗಳಿಗೆ ಸಹಾಯ ಮಾಡುತ್ತಿದ್ದರು‌. ಇನ್ನು ಜಗದೀಶ್ ಅವರ ಜೊತೆ ಆಗಾಗ ವಿದೇಶ ಪ್ರವಾಸಗಳಿಗೆ ತೆರಳುವ ಅಮೂಲ್ಯ ಸಹ ತಮ್ಮ ದಾಂಪತ್ಯ ಜೀವನವನ್ನು ಬಹಳ ಎಂಜಾಯ್ ಮಾಡುತ್ತಿದ್ದರು.. ಇನ್ನು ಜಗದೀಶ್ ಅವರು ತಮ್ಮ ನಗರದಲ್ಲಿ ಸಮಾಜಸೇವೆಗಳಲ್ಲಿ ತೊಡಗಿ ಕೊಂಡು ಸಾಕಷ್ಟು ಹೆಸರನ್ನೂ ಸಹ ಮಾಡಿದ್ದಾರೆ.. ಕಳೆದ ಕೊರೊನಾ ಸಮಯದಲ್ಲಿ ಸಾವಿರಾರು ಜನರಿಗೆ ದಿನ ನಿತ್ಯ ಊಟ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದರು..

ಸಧ್ಯ ಈಗ ತಂದೆಯಾಗುವ ಸಂತೋಷದಲ್ಲಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಅಮೂಲ್ಯ ಅವರು ಸಧ್ಯ ನಾವೀಗ ಇಬ್ಬರು ಮಾತ್ರವಲ್ಲ.. ಮುಂದಿನ ವರ್ಷ ಬೇಸಿಗೆಗೆ ಹೊಸ ಸದಸ್ಯರ ಆಗಮನ.. ಕುಟುಂಬ ದೊಡ್ಡದಾಗುತ್ತಿದೆ.. ಅಮೂಲ್ಯ ಜಗದೀಶ್ ರ ಸಂತೋಷ ಹೆಚ್ಚಾಗುತ್ತಿದೆ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಪ್ರೆಗ್ನೆನ್ಸಿ ಫೋಟೋ ಚಿತ್ರೀಕರಣವನ್ನೂ ಸಹ ಮಾಡಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ..

ಸಧ್ಯ ಆರು ತಿಂಗಳ ಗರ್ಭಿಣಿಯಾಗಿರುವ ಅಮೂಲ್ಯ ಅವರು ತಮ್ಮ ಗಂಡನ ಬಗ್ಗೆ ಅವರು ತಮ್ಮ ಜೀವನಕ್ಕೆ ಬಂದಿದ್ದರ ಬಗ್ಗೆ ಸಂತೋಷ ವ್ಯಕ್ತ ಪಡಿಸಿ ಇಷ್ಟು ಕಾಳಜಿ ಮಾಡುವ ಸಂಗಾತಿ ಸಿಕ್ಕಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.. ಒಟ್ಟಿನಲ್ಲಿ ಸಿಹಿ ಸುದ್ದಿ ಯಾವಾಗ ಎಂದು ಪ್ರಶ್ನೆ ಕೇಳುತ್ತಿದ್ದ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಸಂಭ್ರಮದ ಸುದ್ದಿ ಕೊಟ್ಟು ಸಧ್ಯದಲ್ಲಿಯೇ ಮಗುವಿನ ಆಗಮನದ ಸಂತೋಷ ಹಂಚಿಕೊಂಡಿದ್ದಾರೆನ್ನಬಹುದು‌. ಇತ್ತ ವಿಚಾರ ತಿಳಿದು ಅಭಿಮಾನಿಗಳು ಹಾಗೂ ಸ್ನೇಹಿತರು ಅಮೂಲ್ಯ ಹಾಗೂ ಜಗದೀಶ್ ಅವರಿಗೆ ಶುಭಾಶಯ ತಿಳಿಸಿ ಮಗುವಿಗೆ ಶುಭ ಹಾರೈಸಿದ್ದಾರೆ..