ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ಚೆಕ್ ನೀಡಿದ ಅಮೂಲ್ಯ ಜಗದೀಶ್.. ಕೊಟ್ಟ ಹಣವೆಷ್ಟು ಗೊತ್ತಾ?

0 views

ಕೋಟ್ಯಾಂತರ ಜನರ ಕನಸು.. ಬಹಳಷ್ಟು ವರ್ಷಗಳ ಶ್ರಮದ ಪ್ರತೀಕ ಶ್ರೀರಾಮಚಂದ್ರರ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ.. ಜನರೂ ಸಹ ನಮ್ಮ ಸೇವೆಯೂ ಭಗವಂತ ಶ್ರೀರಾಮನಿಗೆ ಸೇರಲೆಂದು ತಮ್ಮ ಕೈಲಾದ ರೀತಿಯಲ್ಲಿ ದೇಣಿಗೆ ನೀಡುತ್ತಿದ್ದಾರೆ..

ಇನ್ನು ಈ ಕೆಲಸದಲ್ಲಿ ಸ್ಟಾರ್ ಗಳು ಸೆಲಿಬ್ರೆಟಿಗಳು ಹೊರತಾಗಿಲ್ಲ.. ರಾಷ್ಟ್ರಪತಿಗಳಾದ ರಮಾನಾಥ ಕೋವಿಂದ್ ಅವರು ಸಹ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.. ಇದೇ ರೀತಿ ಅನೇಕ ರಾಜಕಾರಣಿಗಳು ಸಹ ದೇಣಿಗೆ ನೀಡಿದ್ದರು.. ಇನ್ನು ಕಲಾವಿದರ ವಿಚಾರಕ್ಕೆ ಬಂದರೆ ಕನ್ನಡದ ನಟಿ ಪ್ರಣಿತಾ ಸುಭಾಶ್ ಅವರು ಒಂದು ಲಕ್ಷ ರೂಪಾಯಿ ದೇಣಿಗೆ ಕೊಟ್ಟು ತಮ್ಮ ಅಭಿಮಾನಿಗಳು ಸಹ ತಮ್ಮ ಕೈಲಾದ ರೀತಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಎಂದು ತಿಳಿಸಿದ್ದರು..

ಇನ್ನು ಇದೀಗ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅವರು ಸಹ ರಾಮಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತವನ್ನೇ ದೇಣಿಗೆಯಾಗಿ ನೀಡಿದ್ದಾರೆ.. ಹೌದು ಅದಾಗಲೇ ಸಾಕಷ್ಟು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಅಮೂಲ್ಯ ಜಗದೀಶ್ ಅವರು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಮಂದಿಗೆ ಆಹಾರ ನೀಡಿ ಅವರುಗಳ ಹಸಿವನ್ನು ನೀಗಿಸಿದ್ದರು.. ಅಷ್ಟೇ ಅಲ್ಲದೇ ನೂರಾರು ಕುಟುಂಬಗಳಿಗೆ ಅಗತ್ಯದ ವಸ್ತುಗಳನ್ನು ಪೂರೈಸಿ ನೆರವಾಗಿದ್ದರು.. ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದ ಜೋಡಿ ಇದೀಗ ಮತ್ತೆ ರಾಮಮಂದಿರ ವಿಚಾರಕ್ಕೆ ಸುದ್ದಿಯಾಗಿದ್ದಾರೆ..

ಹೌದು ರಾಮಮಂದಿರ ನಿರ್ಮಾಣಕ್ಕೆ ಅಮೂಲ್ಯ ಹಾಗೂ ಜಗದೀಶ್ ಅವರು ಎರಡುವರೆ ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಗದೀಶ್ ಅವರು “ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಿಮಿತ್ತ ನಮ್ಮ ಮನೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್ ಜೀ ರವರು ಆಗಮಿಸಿದ್ದರು. ಪ್ರತಿ ವರ್ಷವೂ ಜನ್ಮದಿನಾಚರಣೆಗಾಗಿ ವ್ಯಯಿಸುತ್ತಿದ್ದ ಮೊತ್ತಕ್ಕೆ ನಮ್ಮಿಂದಾದ ಮೊತ್ತವನ್ನು ಸೇರಿಸಿ ಪ್ರಭು ಶ್ರೀರಾಮ ಮಂದಿರಕ್ಕಾಗಿ ಅರ್ಪಿಸಿದೆವು. ಈ ಕ್ಷಣ ನಮಗೆ ಅತ್ಯಂತ ಸಾರ್ಥಕತೆಯ ಕ್ಷಣವೆನಿಸಿತು… ಜೈ‌ ಶ್ರೀರಾಮ್..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ತಮ್ಮ ಹೆಸರಿನಲ್ಲಿ‌ ಒಂದೂವರೆ ಲಕ್ಷ ರೂಪಾಯಿ ಹಾಗೂ ಜಗದೀಶ್ ಅವರ ತಂದೆ ರಾಮಚಂದ್ರ ಅವರ ಹೆಸರಿನಲ್ಲಿ‌‌ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿ ಅಯೋದ್ಯ ಶ್ರೀರಾಮನಿಗೆ ನಮ್ಮ ಕಿರು ಕಾಣಿಕೆ ಎಂದು ಸಾಮಾಜಿಕ‌ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ..

ಇನ್ನು ಈ ಹಿಂದೆ ನಟ ಪವನ್ ಕಲ್ಯಾಣ್ ಅವರು ಮೂವತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು.. ಕನ್ನಡದ ನಟ ಜಗ್ಗೇಶ್ ಅವರು ಸಹ ತಮ್ಮ ಕೈಲಾದ ಹಣವನ್ನು ದೇಣಿಗೆ ನೀಡಿ ಜನರಿಗೂ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು..