ಅವರು ನನ್ನ ಬಾಯ್ ಫ್ರೆಂಡ್ ಅಲ್ಲ.. ಸ್ಪಷ್ಟನೆ ಕೊಟ್ಟ ಗಟ್ಟಿಮೇಳ ನಟಿ ಅಮೂಲ್ಯ..

0 views

ಕಲಾವಿದರು ಎಂದ ಮೇಲೆ ಅವರ ಬಗ್ಗೆ ಕೆಲ ಗಾಸಿಪ್ ಗಳು ಹರಿದಾಡೋದು ಸಾಮನಯವಾಗಿ ಬಿಟ್ಟಿದೆ.. ಅದರಲ್ಲೂ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಾದಂತೆ ಕಲಾವಿದರ ಕುರಿತ ಕೆಲ ಇಲ್ಲಸಲ್ಲದ ಸುದ್ದಿಗಳು ಹರಿದಾಡುವುದು ಹೆಚ್ಚಾಗಿದೆ.. ಅದೇ ರೀತಿ ಗಟ್ಟಿಮೇಳ ಧಾರಾವಾಹಿಯ ನಟಿ ಅಮೂಲ್ಯ ಬಗ್ಗೆ ಅವರ ಬಾಯ್ ಫ್ರೆಂಡ್ ಬಗ್ಗೆ ಸುದ್ದಿಯೊಂದು ಹರಿದಾಡಿದ್ದು ಇದೀಗ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ..

ಹೌದು ಸದ್ಯ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಎನಿಸಿಕೊಂಡಿರುವ ಗಟ್ಟಿಮೇಳ ಧಾರಾವಾಹಿಯ ನಟಿ ಅಮೂಲ್ಯ ಧಾರಾವಾಹಿ ಪ್ರಿಯರ ಅಚ್ಚುಮೆಚ್ಚಿನ ನಟಿ ಎನ್ನಬಹುದು.. ಅದರಲ್ಲೂ ತನ್ನ ಮಾಸ್ ಡೈಲಾಗ್ ಮೂಲಕ ಜನರ ಮನಗೆದ್ದಿರುವ ಅಮೂಲ್ಯ ಅವರ ಕುರಿತು ಕೆಲ ತಿಂಗಳ ಹಿಂದೆ ಸುದ್ದಿಯೊಂದು ಹರಿದಾಡಿತ್ತು.. ಅಮೂಲ್ಯ ವ್ಯಕ್ತಿಯೊಬ್ಬರ ಜೊತೆ ಇರುವ ಫೋಟೋ ಜೊತೆಗೆ ಇವರೇ ಅಮೂಲ್ಯರ ಬಾಯ್ ಫ್ರೆಂಡ್ ಎಂಬ ಸುದ್ದಿ ಹರಡಿತ್ತು.. ಇದೀಗ ಮಾದ್ಯಮವೊಂದರ ಸಂದರ್ಶನದಲ್ಲಿ‌‌ ಮಾತನಾಡಿರುವ ಅಮೂಲ್ಯ ಪಾತ್ರಧಾರಿ ನಿಶಾ ಅವರು ತನ್ನ ಬಾಯ್ ಫ್ರೆಂಡ್ ಬಗೆಗಿನ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ..

ಹೌದು ಫೋಟೋದಲ್ಲಿ ನಿಶಾ ಅವರ ಜೊತೆಗಿದ್ದ ವ್ಯಕ್ತಿ ಅವರ ಮಾವ.. ಈ ಬಗ್ಗೆ ಮಾತನಾಡಿದ ನಿಶಾ.. ನಾನು ನನ್ನ ಮಾವನ ಜೊತೆ ಫೋಟೋ ಒಂದನ್ನು ಹಂಚಿಕೊಂಡಿದ್ದೆ.. ಅದನ್ನು ನೋಡಿ ಯೂಟ್ಯೂಬ್ ನಲ್ಲಿ ಇವರೇ ನಿಶಾರ ಬಾಯ್ ಫ್ರೆಂಡ್ ಅಂತ ಸುದ್ದಿ‌ ಮಾಡಿಬಿಟ್ಟಿದ್ರು.. ಜೊತೆಗೆ ನಿಶಾ ಅವರ ಮನೆ ಹಾಗಿದೆ ಹೀಗಿದೆ ಅಂತೆಲ್ಲಾ ಸುದ್ದಿ ಆಗಿತ್ತು.. ಅದೆಲ್ಲಾ ಸುಳ್ಳು.. ಆತರ ಏನೂ ಇಲ್ಲ.. ಅವರು ನಮ್ಮ ಮಾವ ಎಂದಿದ್ದಾರೆ..

ಇಷ್ಟೇ ಅಲ್ಲದೇ ತಮ್ಮ ಜೀವನ ಶೈಲಿಯ ಕುರಿತು ಸಂದರ್ಶನದಲ್ಲಿ‌ ಮಾತನಾಡಿರುವ ಅಮೂಲ್ಯ ಮತ್ತಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ನಾನು ಐಶಾರಾಮಿಯಾಗಿ ಸದಾ ಬ್ರಾಂಡೆಂಡ್ ರೀತಿ ಇಲ್ಲ.. ಅಥವಾ ಪಕ್ಕಾ ಲೋಕಲ್ ಕೂಡ ಅಲ್ಲ.. ನಾನೊಂದು ರೀತಿ ಮದ್ಯಮವರ್ಗ.. ಎಲ್ಲವನ್ನು ಲೆಕ್ಕಾಚಾರ ಹಾಕಿಕೊಂಡೇ ಮಾಡ್ತೀನಿ.. ದೊಡ್ಡ ದೊಡ್ಡ ಹೊಟೆಲ್ ಗಳಿಗೆ ಹೋಗಲ್ಲ.. ನನಗೆ ಸಣ್ಣ ಪುಟ್ಟ ಹೊಟೆಲ್ ಗಳಿಗೆ ಹೋಗಿಯೇ ಅಭ್ಯಾಸ.. ನಾನು ಅಲ್ಲಿಗೇ ಹೋಗೋದು..

ಒಮ್ಮೆ ಮಾತ್ರ ಯಾವುದೋ ಹೊಟೆಲ್ ಗೆ ಹೋಗಿ ಒಂದು ಜ್ಯೂಸ್ 200 ರೂಪಾಯಿ ಬಿಲ್ ಆಗಿತ್ತು.. ಅದನ್ನ ನೋಡಿ ಸಿಕ್ಕಾಪಟ್ಟೆ ಬೇಜಾರ್ ಆಗಿತ್ತು.. ಒಂದು ಜ್ಯೂಸ್ ಗೆ ಇನ್ನೂರು ರೂಪಾಯಿ‌ ಕೊಡೋಕೆ ನನಗೆ ಹೊಟ್ಟೆ ಉರಿಯತ್ತೆ.. ಅದೇ ಸಣ್ಣ ಪುಟ್ಟ ಹೊಟೆಲ್ ಗಳಲ್ಲಿ ಹೊಟ್ಟೆ ತುಂಬಾ ಊಟ ಮಾಡಬಹುದಿತ್ತು ಎಂದರು..

ಅಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿ ನನಗೆ ಕ್ರಶ್ ಅಂತ ಇರೋದು ಪುನೀತ್ ಸರ್ ಒಬ್ಬರೇ ಎಂದಿದ್ದಾರೆ.. ಇನ್ನು ಧಾರಾವಾಹಿಯಲ್ಲಿ ವಟ ವಟ ಅಂತ ಮಾತನಾಡುವ ಅಮೂಲ್ಯ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಅನ್ನೋದು ವಿಶೇಷ.. ಜೊತೆಗೆ ಜೀವನದಲ್ಲಿ ಲವ್ ಅದು ಇದು ಅಂತ ಮಾಡ್ಕೊಂಡ್ ಸಮಯ ವ್ಯರ್ಥ ಮಾಡಬಾರದು.. ಜೀವನದಲ್ಲಿ ಸಮಯವನ್ನು ಸರಿಯಾಗಿ ಸದುಪಯೋಗ ಮಾಡ್ಕೊಂಡು ಏನಾದರು ಸಾಧನೆ ಮಾಡಿ ನಂತರ ಉಳಿದಿದ್ದರ ಬಗ್ಗೆ ಯೋಚಿಸಬೇಕೆಂಬುದು ನಿಶಾರ ಪಾಲಿಸಿಯಾಗಿದೆ..