ದೊರೆಸಾನಿ ಧಾರಾವಾಹಿಯ ಹೀರೋ ಆನಂದ್ ನಿಜಕ್ಕೂ ಯಾರು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ ಕಳೆದ ಕೆಲ ತಿಂಗಳ ಹಿಂದಷ್ಟೇ ಶುರುವಾದ ಹೊಸ ಧಾರಾವಾಹೊ ದೊರೆಸಾನಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಸಧ್ಯ ಧಾರಾವಾಹಿ ಶುರು ಆದಾಗಿನಿಂದಲೂ ಒಳ್ಳೆಯ ರೀತಿ ಕತೆಯ‌ ನಿರೂಪಣೆಯಾಗುತ್ತಿದ್ದು ಜನರ ಮನಸ್ಸಿಗೂ ಹತ್ತಿರವಾಗಿದೆ.. ಎಲ್ಲಿಯೂ ಯಾವುದೇ ರೀತಿಯ ಅತಿರೇಕವಿಲ್ಲದೇ ಮನಸ್ಸಿಗೆ ಮುದ ನೀಡುವ ರೀತಿ ಕತೆ ಸಾಗುತ್ತಿರುವುದು ಮೆಚ್ಚುವ ವಿಚಾರ.. ಒಂದು ಕಡೆ ಅಪ್ಪ ಮಗಳ ಬಾಂಧವ್ಯದ ಮೇಲೆ ಗಟ್ಟಿ ಕತೆ ಕಟ್ಟಿರುವ ನಿರ್ದೇಶಕರು ಮತ್ತೊಂದು ಕಡೆ ಅಮ್ಮನಿಂದ ದೂರವಾದ ಮಗ ಕುಟುಂಬದ ಪ್ರೀತಿಗಾಗಿ ಪರಿತಪಿಸುವುದು ಮನಸ್ಸಿಗೆ ನಾಟುತ್ತದೆ.. ಇನ್ನೂ ಧಾರಾವಾಹಿಯಲ್ಲಿನ ನಾಯಕ ಆನಂದ್ ಹಾಗೂ ನಾಯಕಿ ದೀಪಿಕಾ ಜೋಡಿಗೆ ಜನರು ಫಿದಾ ಆಗಿದ್ದು ಇಬ್ಬರ ನಡುವಿನ ಪ್ರೀತಿ ಮಮಸ್ಸಿಗೆ ಮುದ ನೀಡುತ್ತದೆ ಎನ್ನಬಹುದು..

ಇನ್ನು ಸಾಮಾನ್ಯವಾಗಿ ಧಾರಾವಾಹಿಗಳು ಜನರಿಗೆ ಇಷ್ಟವಾಗುತ್ತಿದ್ದಂತೆ ಧಾರಾವಾಹಿಯ‌ ಕಲಾವಿದರುಗಳು ತಮ್ಮ ತಮ್ಮ ಪಾತ್ರದ ಹೆಸರಿನ ಮೂಲಕವೇ ಖ್ಯಾತಿ ಪಡೆಯುತ್ತಾರೆ.. ಅದೇ ಹೆಸರಿನಿಂದಲೇ ಜನರು ಗುರುತಿಸಿ ಪ್ರೀತಿಯನ್ನೂ ಸಹ ನೀಡುತ್ತಾರೆ.. ಅದೇ ರೀತಿ ಬಂದ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾಗಿರುವ ನಟ ಆನಂದ್.. ಅಷ್ಟಕ್ಕೂ ಈತ ಯಾರು.. ನಟನೆಗೆ ಸಂಬಂಧವೇ ಇಲ್ಲದ ವ್ಯಕ್ತಿ ಈ ದಾರಿಗೆ ಬಂದದ್ದಾದರೂ ಹೇಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.. ಹೌದು ದೊರೆಸಾನಿ ಧಾರಾವಾಹಿಯಲ್ಲಿ ತನ್ನ ಸ್ವಂತ ಪರಿಶ್ರಮದ ಮೂಲಕ‌ ಆಸ್ತಿ ಅಂತಸ್ತು ಮಾಡಿಕೊಂಡರೂ ಅನಾಥನೆಂಬ ಭಾವನೆ ಕಾಡುತ್ತಲೇ ಸರಳವಾಗಿ ಜೀವನ ಸಾಗಿಸುತ್ತಿರುವ ಹುಡುಗ ಆನಂದ್..

ಇನ್ನು ಆನಂದ್ ಬದುಕಿಗೆ ದೀಪಿಕಾ ಎಂಟ್ರಿ ಕೊಟ್ಟ ಬಳಿಕ ಆನಂದ್ ನ ಜೀವನವೇ ಬದಲಾಗಿದ್ದು ದೀಪಿಕಾಗಾಗಿ ಏನು ಬೇಕಾದರೂ ಮಾಡುವ ಹಂತಕ್ಕೆ ಬಂದು ನಿಂತಿದ್ದಾನೆ.. ಇನ್ನು ಈ ಆನಂದ್ ನ ನಿಜ ಜೀವನದ ಕತೆಯೂ ಇಷ್ಟೇ ರೋಚಕವಾಗಿದ್ದು ಖುಷಿ ನೀಡುತ್ತದೆ.. ಹೌದು ನಟ ಆನಂದ್ ನ ನಿಜ ಜೀವನದ ಹೆಸರು ಪೃಥ್ವಿ ರಾಜ್.. ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ.. ಕಂಪ್ಲೀಟ್ ಬೆಂಗಳೂರಿನ ಹುಡುಗ ಎಂದರೂ ತಪ್ಪಿಲ್ಲ.. ಇನ್ನು ಪೃಥ್ವಿ ರಾಜ್ ಧಾರಾವಾಹಿಯಂತೆ ನಿಜ ಜೀವನದಲ್ಲಿಯೂ ಉನ್ನತ ಶಿಕ್ಷಣವನ್ನೇ ಪಡೆದಿದ್ದು ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ..

ಇನ್ನೂ ಎಲ್ಲರಂತೆಯೇ ಪೃಥ್ವಿರಾಜ್ ಕೂಡ ತಮ್ಮ ಇಂಜಿನಿಯರಿಂಗ್ ಮುಗಿದ ಕೂಡಲೇ ಕೆಲಸ ಹುಡುಕಿಕೊಂಡು ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸಕ್ಕೂ ಸೇರಿಕೊಂಡರು.. ಒಳ್ಳೆ ಕೆಲಸ.. ಕೈತುಂಬಾ ಸಂಬಳ.. ಆದರೆ ಪೃಥ್ವಿರಾಜ್ ಗೆ ಬೇರೆ ಇನ್ನೇನೋ ಬೇಕು ಎನಿಸುತ್ತದೆ.. ಹೌದು ನಟನೆಯಲ್ಲಿ ಆಸಕ್ತಿ ಹೊಂದಿದ್ದ ಪೃಥ್ವಿರಾಜ್ ಮಾಡೆಲಿಂಗ್ ಮಾಡಲು ಶುರು ಮಾಡಿದರು.. ಮಾಡೆಲಿಂಗ್ ಮಾಡುತ್ತಲೇ ನಟನೆಯತ್ತ ಮುಖ ಮಾಡುವ ನಿರ್ಧಾರ ಮಾಡಿದ್ದ ಪೃಥ್ವಿರಾಜ್ ಸಿನಿಮಾ ಹಾಗೂ ಧಾರಾವಾಹಿಗಳಿಗೆ ಆಡಿಷನ್ ನೀಡಲು ಶುರು ಮಾಡಿದರು.. ಸಾಕಷ್ಟು ಧಾರಾವಾಹಿಗಳಿಗೆ ಆಯ್ಕೆಯಾದರು.. ಆದರೆ ಅದ್ಯಾಕೋ ಆ ಸಮಯದಲ್ಲಿ ಅವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ..

ಕೊರೊನಾ ಕಾರಣದಿಂದ ಅವರು ಆಯ್ಕೆಯಾಗಿದ್ದ ಸಾಕಷ್ಟು ಧಾರಾವಾಹಿಗಳು ಸೆಟ್ಟೇರಲಿಲ್ಲ.. ಆದರೂ ಸಹ ಪೃಥ್ವಿರಾಜ್ ಮಾತ್ರ ತಮ್ಮ ಪ್ರಯತ್ನವನ್ನು ಬಿಡಲಿಲ್ಲ.. ಆಡಿಷನ್ ಕೊಡುತ್ತಲೇ ಇದ್ದರು.. ನಂತರದಲ್ಲಿ‌ ದೊರೆಸಾನಿ ಧಾರಾವಾಹಿಗೆ ಆಯ್ಕೆಯಾದ ಪೃಥ್ವಿರಾಜ್ ಕೆಲವೇ ದಿನಗಳಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಜನರ ಮನಸ್ಸು ಗೆದ್ದರು.. ಕನ್ನಡ ಕಿರುತೆರೆಯ ಖ್ಯಾತ ನಟರುಗಳಲ್ಲಿ‌ ಒಬ್ಬರಾದರು.. ದೊರೆಸಾನಿಯ ಹೀರೋ ಪ್ರೇಕ್ಷಕರ ನೆಚ್ಚಿನ ದೊರೆಯಾದರು..

ಇನ್ನು ನಟನೆಯಲ್ಲಿಯೇ ಏನಾದರೂ ಸಾಧಿಸಬೇಕೆಂಬ ನಿರ್ಧಾರ ಮಾಡಿದ ಪೃಥ್ವಿರಾಜ್ ಸಿನಿಮಾದಲ್ಲಿಯೂ ಸಹ ಅಭಿನಯಿಸಿದ್ದು ಓ ಮೈ ಲವ್ ಎಂಬ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯಾಗಬೇಕಿದೆ.. ಇನ್ನೂ ಸಧ್ಯ ದೊರೆಸಾನಿ ಧಾರಾವಾಹೊಯಲ್ಲಿ ದೀಪಿಕಾ ಆನಂದ್ ನ‌ ಪ್ರೀತಿಯನ್ನು ಒಪ್ಪಿಕೊಂಡಿದ್ದು ಮತ್ತೊಂದು ಕಡೆ ದೀಪಿಕಾಳ ತಂದೆಯೇ ತನ್ನ ಆಫೀಸಿನಲ್ಲಿ‌ ಕೆಲಸ ಮಾಡುತ್ತಿರುವ ಪುರುಷೋತ್ತಮ್ ಎಂದು ತಿಳಿದಿದ್ದು ಸಧ್ಯ ಎಲ್ಲಾ ಕಗ್ಗಂಟನ್ನು ನಿವಾರಣೆ ಮಾಡಿಕೊಂಡು ದೀಪಿಕಾಳ‌ ಜೊತೆಗಿನ ಮದುವೆಯ‌ ಕನಸನ್ನು ನನಸು ಮಾಡಿಕೊಳ್ಳುವನ ಕಾದು ನೋಡಬೇಕಿದೆ.. ಒಂದು‌ ರೀತಿ ಧಾರಾವಾಹಿಯಲ್ಲಿ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿರುವ ಆನಂದ್ ನ ನಿಜ ಜೀವನವೂ ಸಹ ಅಷ್ಟೇ ಸ್ಪೂರ್ತಿಯಾಗಿದ್ದು ಪ್ರತಿಬ್ಜಾನ್ವಿತ ಪೃಥ್ವಿರಾಜ್ ಗೆ ಮುಂದಿನ ನಟನಾ ಜೀವನಕ್ಕೆ ಶುಭವಾಗಲಿ..