ಲಕ್ಷ್ಮೀ ಬಾರಮ್ಮ‌ ಧಾರಾವಾಹಿಯಲ್ಲಿ ಮಿಂಚಿದ್ದ ನಟಿ ಅನಿಕಾ ಸಿಂಧ್ಯಾ ಏನಾದರು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳು ವೀಕ್ಷಕರ ಮನಸ್ಸಿನಲ್ಲಿ ಸದಾ ಕಾಲಕ್ಕೆ ಛಾಪು ಮೂಡಿಸಿ ಬಿಡುತ್ತದೆ. ಕೆಲವು ಧಾರಾವಾಹಿಗಳ ಕಥೆ ಹಾಗೂ ಅದರಲ್ಲಿನ ಕಲಾವಿದರನ್ನು ವೀಕ್ಷಕರ ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಇಂತಹ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀಬಾರಮ್ಮ ಧಾರವಾಹಿ ಕೂಡ ಒಂದು. ಲಕ್ಷ್ಮೀಬಾರಮ್ಮ ಧಾರವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕ ವಯಸ್ಸಿನವರಿಂದ ಹಿಡಿದು ವಯಸ್ಸಾದವರ ವರೆಗೂ ಲಕ್ಷ್ಮೀಬಾರಮ್ಮ ಧಾರವಾಹಿ ಎಲ್ಲರ ಫೇವರೇಟ್ ಆಗಿತ್ತು. ಇಂದಿಗೂ ಸಹ ಈ ಧಾರವಾಹಿಯನ್ನು ಅದೆಷ್ಟೋ ಜನ ಮಿಸ್ ಮಾಡಿಕೊಳ್ಳುತ್ತಾರೆ.

ಲಕ್ಷ್ಮೀಬಾರಮ್ಮ ಧಾರವಾಹಿ ಇಂದಿಗೂ ಸಹ ಸಾಕಷ್ಟು ಜನರ ಫೇವರೇಟ್ ಆಗಿದೆ. ಧಾರವಾಹಿ ಮುಗಿದು 6 ವರ್ಷಗಳು ಕಳೆದರು, ಇನ್ನು ಈ ಧಾರವಾಹಿ ಸೃಷ್ಟಿಸಿರುವ ಹೈಪ್ ಕಡಿಮೆಯಾಗಿಲ್ಲ. ಈ ಧಾರಾವಾಹಿ ಅದೆಷ್ಟೋ ಕಲಾವಿದರಿಗೆ ಜೀವನ ಕಟ್ಟುಕೊಟ್ಟಿದೆ ಎಂದರೆ ತಪಾಗುವುದಿಲ್ಲ. ಈ ಧಾರವಾಹಿಯಲ್ಲಿ ನಟಿಸುವ ಮೂಲಕ ಸಾಕಷ್ಟು ಕಲಾವಿದರೂ ಸಕತ್ ಫ್ಹೇಮಸ್ ಆಗಿದ್ದಾರೆ. ಈ ಧಾರವಾಹಿಯಲ್ಲಿ ನಟಿ ಕವಿತಾ ಗೌಡ, ನಟ ಚಂದನ್, ನೇಹಾ ಗೌಡ, ರಶ್ಮಿ ಪ್ರಭಾಕರ್, ಅನಿಕಾ ಸಿಂದ್ಯ ಇನ್ನು ಮುಂತಾದವರು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ನಟಿ ಅನಿಕಾ ಅವರ ಪಾತ್ರ ಕೂಡ ಒಂದಾಗಿತ್ತು..

ಹೌದು ನಟಿ ಅನಿಕಾ ಸಿಂದ್ಯ ಲಕ್ಷ್ಮೀಬಾರಮ್ಮ ಧಾರವಾಹಿಯಲ್ಲಿ ಕುಮುಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿ ಗೊಂಬೆ ತಾಯಿಯ ತಂಗಿ ಪಾತ್ರದಲ್ಲಿ ನಟಿ ಅನಿಕಾ ಸಿಂದ್ಯ ಕಾಣಿಸಿಕೊಂಡಿದ್ದರು. ನಟಿ ಅನಿಕಾ ಸಿಂದ್ಯ ಅವರು ಕನ್ನಡ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ಸಹ ಸಕ್ರಿಯರಾಗಿರುವ ನಟಿ. ತಮ್ಮ ಅದ್ಬುತ ನಟನೆಯ ಮೂಲಕ ನಟಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಿರುತೆರೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಪಾಸಿಟಿವ್ ಹಾಗೂ ನೆಗಟಿವ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ನಟಿ ಅನಿಕಾ ಹೆಚ್ಚಾಗಿ ಗುರುತಿಸಿಕೊಂಡಿದ್ದು ಅವರ ನೆಗಟಿವ್ ಪಾತ್ರಗಳಿಂದ.

ಸುಕನ್ಯಾ, ಅಕಾಶದೀಪ, ಲಕ್ಷ್ಮೀಬಾರಮ್ಮ, ಪ್ರಮಾಲೋಕ ಸೇರಿದಂತೆ ಇನ್ನು ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ನಟಿ ಅನಿಕಾ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿ ಸಹ ಸಕ್ರಿಯರಾಗಿರುವ ನಟಿ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ ನಟಿ ಅನಿಕಾ ಸಿಂದ್ಯ. ಸುಮಾರು 15ರಿಂದ 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಲಕ್ಷ್ಮೀಬಾರಮ್ಮ ಧಾರಾವಾಹಿಯ ಮೂಲಕ ನಟಿ ಅನಿಕಾ ಸಿಂದ್ಯ ಮತ್ತಷ್ಟು ಖ್ಯಾತಿ ಪಡೆದುಕೊಂಡರು. ಈ ಧಾರಾವಾಹಿಯ ಅವರ ಪಾತ್ರವನ್ನು ಇನ್ನು ಜನರು ಮರೆತ್ತಿಲ್ಲ. ಇಂದಿಗೂ ಸಹ ಕುಮುಧಾ ಪಾತ್ರದಿಂದ ನನ್ನನ್ನು ಜನ ಗುರುತು ಹಿಡಿಯುತ್ತಾರೆ ಎನ್ನುತ್ತಾರೆ ನಟಿ ಅನಿಕಾ.

ಲಕ್ಷ್ಮೀಬಾರಮ್ಮ ಧಾರವಾಹಿಯ ಬಳಿಕ ನಟಿ ಅನಿಕಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮಲೋಕ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಪ್ರೇಮಲೋಕ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಲಾಕ್ ಡೌನ್ ಸಮಯದಲ್ಲಿ ನಟಿ ಕಿರುತೆರೆಯಿಂದ ಕೊಂಚ ಬ್ರೇಕ್ ಪಡೆದುಕೊಂಡರು. ನಂತರ ನಟಿ ಯಾವುದೇ ಧಾರವಾಹಿ ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಮತ್ತೆ ನಟಿ ಅನಿಕಾ ನಟನೆಗೆ ಎಂಟ್ರಿ ಕೊಡಬೇಕು ಎಂದು ಅವರ ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಪಾತ್ರಕ್ಕಾಗಿ ನಟಿ ಅನಿಕಾ ಕಾಯುತ್ತಿದ್ದು, ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದಿದ್ದಾರೆ ನಟಿ ಅನಿಕಾ ಸಿಂದ್ಯ.