ಕಿರಿಕ್ ಕೀರ್ತಿ ಮೇಲೆ ಕೈ ಮಾಡಿದ ಘಟನೆಗೆ ಟ್ವಿಸ್ಟ್.. ನಿಜವಾದ ಕಾರಣವೇ ಬೇರೆ ಇತ್ತು.. ಅವರೆಲ್ಲಾ ನಿಜಕ್ಕೂ ಯಾರು ಗೊತ್ತಾ..

0 views

ಕಳೆದ ವಾರವಷ್ಟೇ ನಟ ಹಾಗೂ ನಿರೂಪಕ ಕಿರಿಕ್ ಕೀರ್ತಿ ಅವರ ಮೇಲೆ ಬೆಂಗಳೂರಿನ ಪಬ್ ಒಂದರಲ್ಲಿ ಒಂದಷ್ಟು ಹುಡುಗರು ಕೈ ಮಾಡಿದ್ದು ಈ ಬಗ್ಗೆ ಸುದ್ದಿಯಾಗಿತ್ತು.. ಅದರಲ್ಲಿಯೂ ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಕೈಗೆ ಹೊಡೆದಿದ್ದಕಾರಣ ಸಾಕಷ್ಟು ಹೊಲಿಗೆಯನ್ನೂ ಸಹ ಹಾಕಲಾಗಿತ್ತು.. ಆದರೆ ಅವರೆಲ್ಲಾ ಯಾಕೆ ಬಂದರು ಯಾಕೆ ಈ ರೀತಿ ಮಾಡಿದರು ಕಿರಿಕ್ ಕೀರ್ತಿ ಮಾಡಿದ್ದಾದರು ಏನು ಹೀಗೆ ಸಾಕಷ್ಟು ಕುತೂಹಲವಿತ್ತು.. ಆದರೆ ಈಗ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದೆ.. ಹೌದು ಅಂದು ಕಿರಿಕ್ ಕೀರ್ತಿ ಮೇಲೆ ಕೈಮಾಡಿದವರನ್ನು ಪೊಲೀಸರು ಹಿಡಿದಿದ್ದು ಎಲ್ಲರೂ ಸತ್ಯ ಬಾಯಿಬಿಟ್ಟಿದ್ದಾರೆ.. ಹೌದು ಪೊಲೀಸರ ಮುಂದೆ ಹಾಜರಾದ ನಾಲ್ವರು ಸಹ ಅಂದು ಆ ಘಟನೆ ನಡೆಯಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ..

ಹೌದು ಡಿಸೆಂಬರ್ ಎರಡರಂದು ಎಂದಿನಂತೆ ಸದಾಶಿವನಗರದ ಪಬ್ ಒಂದಕ್ಕೆ ಕಿರಿಕ್ ಕೀರ್ತಿ ಅವರು ತೆರಳಿದ್ದರು.. ತಮ್ಮ ಸಿನಿಮಾದ ಕುರಿತು ನಿರ್ಮಾಪಕರು ಹಾಗೂ ಕೆಲ ಸ್ನೇಹಿತರು ಚರ್ಚೆ ನಡೆಸುತ್ತಿದ್ದರು.. ನಂತರ ಅದೇ ಜಾಗಕ್ಕೆ ಕೀರ್ತಿ ಅವರ ಪತ್ನಿ ಸಹ ಬಂದು ಹೋದರು.. ಆ ಬಳಿಕ ನಿರ್ಮಾಪಕರು ಅಲ್ಲಿಂದ ತೆರಳಿದ ಬಳಿಕ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ವ್ಯಕ್ತಿಯೊಬ್ಬ ಬಂದು ಕೀರ್ತಿ ನಿನ್ನ್ ಹತ್ರ ಸ್ವಲ್ಪ ಮಾತಾಡ್ಬೇಕು ಬಾ ಎಂದು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾನೆ.. ಆ ಸಮಯದಲ್ಲಿ ನಾನ್ ಯಾರು ಗೊತ್ತಾ.. ಎಂದು ಕೇಳಿದ್ದಾನೆ. ಆಗ ಇಲ್ಲಾ ಗುರು ಗೊತ್ತಿಲ್ಲ ಎಂದು ಕೀರ್ತಿ ಪ್ರತಿಕ್ರಿಯೆ ನೀಡಿದಾಗ ನೀನ್ ಯಾರು ಅಂತ ನನಗೆ ಗೊತ್ತು.. ನಾನ್ ಯಾರು ಅಂತ ಗೊತ್ತಿಲ್ವಾ ಎಂದಿದ್ದಾನೆ..

ಇದನ್ನೆಲ್ಲಾ ಸ್ನೇಹಿತರು ವೀಡಿಯೋ ಮಾಡಿಕೊಳ್ಳುತ್ತಿದ್ದು ಅದನ್ನು ಕೀರ್ತಿ ಪ್ರಶ್ನೆ ಮಾಡಿದ್ದಕ್ಕೆ ಏಕಾಏಕಿ ಪಕ್ಕದಲ್ಲಿದ್ದ ಬಿಯರ್ ಬಾಟಲಿಯನ್ನು ತೆಗೆದುಕೊಂಡು ಮೀರು ಬಾರಿ ಕೈ ಮಾಡಿದ್ದಾರೆ.. ಕೀರ್ತಿ ತನ್ನ ಕೈ ಯನ್ನು ಅಡ್ಡಕೊಟ್ಟ ಕಾರಣ ಪೆಟ್ಟಿನ ತೀವ್ರತೆ ಕಡಿಮೆಯಾಗಿ ಕುತ್ತಿಗೆಗೆ ಏಳು ಹೊಲಿಗೆ ಕೈಗೆ ಐದು ಹೊಲಿಗೆ ಹಾಕುವಂತಾಗಿದೆ.. ತಕ್ಷಣ ಆ ಜಾಗದಿಂದ ಅವರು ಪರಾರಿಯಾಗಿದ್ದು ನಂತರ ಕೀರ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದರು.. ಸಾಮಾನ್ಯವಾಗಿ ಪಬ್ ಗಳಿಗೆ ಹೋದಾಗ ಅಲ್ಲಿ ಯಾರಾದರೊಬ್ಬರ ಐಡಿ ಕಾರ್ಡ್ ಪ್ರತಿಯನ್ನು ಪಡೆದಿರುತ್ತಾರೆ.. ಅದರಿಂದಾಗಿ ಅವರುಗಳನ್ನು ಹುಡುಕಲು ಸುಲಭವಾಗಿದ್ದು ಇದೀಗ ಎಲ್ಲರೂ ಸಹ ಪೊಲೀಸರ ವಶದಲ್ಲಿದ್ದಾರೆ..

ಹೌದು ಪೊಲೀಸರ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದು ಆ ದಿನ ಕೀರ್ತಿ ಅವರ ಮೇಲೆ ಕೈ ಮಾಡಲು ಕಾರಣವೇನೆಂದು ಸತ್ಯ ಬಾಯಿಬಿಟ್ಟಿದ್ದಾರೆ.. ಹೌದು ಆ ದಿನ ಡಿಸೆಂಬರ್ ಎರಡರಂದು ಸದಾಶಿವನಗರದ ಪಬ್ ನಲ್ಲಿ ಕಿರಿಕ್ ಕೀರ್ತಿ ಅವರು ಕುಳಿತಿದ್ದ ಟೇಬಲ್ ನ ಪಕ್ಕದ ಟೇಬಲ್ ನಲ್ಲಿ ಅನಿಲ್ ವಿಜಯ್ ಹಾಗೂ ಅಜಯ್ ಮತ್ತು ಅವರುಗಳ ಸ್ನೇಹಿತರು ಕುಳಿತಿದ್ದರು‌. ಆ ಸಮಯದಲ್ಲಿ ಸ್ನೇಹಿತರು ಸಾಮಾನ್ಯವಾಗಿ ಮಾತನಾಡುತ್ತಾ ಅಲ್ನೋಡೋ ಕಿರಿಕ್ ಕೀರ್ತಿ ಕೂತಿದ್ದಾನೆ ಎಂದಿದ್ದಾರೆ.. ಆಗ ಅನಿಲ್ ಎಂಬಾತ ನನಗೆ ಕೀರ್ತಿ ಗೊತ್ತು ಎಂದಿದ್ದಾನೆ.. ಆಗ ಮಿಕ್ಕವರು ಇದನ್ನು ನಂಬದೇ ನಕ್ಕಿದ್ದಾರೆ.. ಆಗ ನಿಜವಾಗಲೂ ನನಗೆ ಕೀರ್ತಿ ಗೊತ್ತು ಎಂದಿದ್ದಾನೆ ಅನಿಲ್. ಆಗ ಕೀರ್ತಿ ಗೊತ್ತಿದ್ದರೆ ಹೋಗಿ ಅವನನ್ನು ಮಾತನಾಡಿಸು ಆಗ ನಂಬ್ತೇವೆ ಎಂದಿದ್ದಾರೆ..

ಆಗ ಸರಿ ಎಂದು ಅನಿಲ್ ಎದ್ದು ಹೋಗಿ ಕೀರ್ತಿಯನ್ನು ಮಾತನಾಡಿಸಿ ನಿನ್ನ ಹತ್ತಿರ ಮಾತನಾಡ್ಬೇಕು ಪಕ್ಕಕ್ಕೆ ಬಾ ಎಂದಿದ್ದಾನೆ.. ಅದಾಗಲೇ ಅನಿಲ್ ಗಂಟಲು ಪೂರ್ತಿಯಾಗಿದ್ದ ಕಾರಣ ಕೀರ್ತಿ ಸಹ ಏನು ಮಾತನಾಡದೇ ಸರಿ ಎಂದು ಪಕ್ಕಕ್ಕೆ ಹೋಗಿದ್ದಾರೆ.. ಆಗ ಅಲ್ಲಿ ನಾನ್ ಯಾರು ಗೊತ್ತಾ.. ಎಂದಿದ್ದಾನೆ.. ಇತ್ತ ಕೀರ್ತೊ ಗೊತ್ತಿಲ್ಲ ಗುರು ಎಂದಿದ್ದಾರೆ.. ಮತ್ತೆ ಇನ್ನೊಬ್ಬರ ಹೆಸರು ಹೇಳಿ ಅವನು ನಿನಗೆ ಗೊತ್ತಾ ಎಂದು ಕೇಳಿದ್ದಾನೆ.. ಆಗ ಮತ್ತೆ ಹು ಅವನು ಗೊತ್ತು ಆದರೆ ನೀನ್ ಯಾರು ಅಂತ ನನಗೆ ಗೊತ್ತಿಲ್ಲ ಎಂದಿದ್ದಾರೆ.. ತಕ್ಷಣ ಕೋಪಗೊಂಡ ಅನಿಲ್ ಅವರೆಲ್ಲಾ ಗೊತ್ತು ನಾನ್ ಯಾರು ಅಂತ ಗೊತ್ತಿಲ್ವಾ.. ಎಂದು ಕೂಗಾಡಿದ್ದಾನೆ.. ಇತ್ತ ಇದನ್ನೆಲ್ಲಾ ಸ್ನೇಹಿತರು ವೀಡಿಯೋ ಮಾಡಿಕೊಳ್ಳುತ್ತಿದ್ದು ನಕ್ಕಿದ್ದಾರೆ.. ಇದನ್ನು ನೋಡಿದ ಕೀರ್ತಿ ವೀಡಿಯೋ ಮಾಡುತ್ತಿದ್ದವರ ಬಳಿ ಬಂದು ವೀಡಿಯೋ ಯಾಕ್ ಮಾಡ್ತಿದ್ದೀರಾ..

ನನ್ನ ಪರ್ಮಿಷನ್ ಇಲ್ಲದೇ ಅದೇಗೆ ವೀಡಿಯೋ ಮಾಡ್ತೀರಾ ಎಂದು ಸ್ವಲ್ಪ ಜೋರಾಗಿಯೇ ಕೇಳಿದ್ದಾರೆ.. ಅದಾಗಲೇ ಅನಿಲ್ ಗೆ ತಾನು ಯಾರ್ವ್ಂದು ಕೀರ್ತಿ ಗೊತ್ತಿಲ್ಲ ಎಂದಾಗ ಅವಮಾನವಾಗಿದ್ದು ಅದೇ ಕೋಪದಲ್ಲಿ ಬಂದು ಬಿಯರ್ ಬಾಟಲಿಯಲ್ಲಿ ಹಿಂದಿಂದೆ ಮೂರು ಬಾರಿ ಕೈ ಮಾಡಿದ್ದಾರೆ.. ತಕ್ಷಣ ಅಲ್ಲಿಂದ ಪರಾರಿಯೂ ಸಹ ಆಗಿದ್ದರು.. ಇದೀಗ ಪೊಲೀಸರ ಅಥಿತಿಗಳಾಗಿದ್ದು ಕ್ಷಮಿಸಿಬಿಡಿ ಅಂದು ತಪ್ಪಾಗಿ ಹೋಯ್ತು ಎಂದು ಕೇಳಿಕೊಂಡಿದ್ದಾರೆ.. ಒಟ್ಟಿನಲ್ಲಿ ಅವನು ಗೊತ್ತು ಇವನು ಗೊತ್ತು ಎನ್ನುತ್ತ ಪ್ರತಿಷ್ಟೆ ತೋರುವ ಬರದಲ್ಲಿ ಇದೀಗ ನೆಮ್ಮದಿಯಾಗಿ ಜೀವನ ಸಾಗಿಸಿಕೊಂಡು ಇರಬೇಕಾದವರು ಪೊಲೀಸ್ ಠಾಣೆಯಲ್ಲಿ ಇರುವಂತಾಗಿದೆ..