ಅನಿಲ್ ಕುಂಬ್ಳೆ ಅವರ ಪತ್ನಿ ನಿಜಕ್ಕೂ ಯಾರೂ ಗೊತ್ತಾ.. ಅದಾಗಲೇ ಒಂದು ಮದುವೆಯಿಂದ ನೊಂದಿದ್ದ ಚೇತನಾ ರನ್ನು ಕುಂಬ್ಳೆ ಮದುವೆಯಾಗಲು ಕಾರಣವೇನು ಗೊತ್ತಾ.. ನಿಜಕ್ಕೂ ಗ್ರೇಟ್‌‌..

0 views

ಅನಿಲ್ ಕುಂಬ್ಳೆ ಕನ್ನಡ ನಾಡಿನ ಮಗ, ಕ್ರಿಕೇಟ್ ಮೂಲಕ ದೇಶವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕ್ರಿಕೆಟಿಗ.. ಈಗಲೂ ಸಹ ನಾಡು ನುಡಿ ನಮ್ಮ ಭಾಷೆ ವಿಚಾರಕ್ಕೆ ಬಂದರೆ ಅಪಾರ ಅಭಿಮಾನ ತೋರುವ ಅನಿಲ್ ಕುಂಬ್ಳೇ ಅವರ ಕ್ರಿಕೇಟ್ ಜೀವನ ತೆರೆದ ಪುಸ್ತಕದಂತೆ ಎಲ್ಲರಿಗೂ ತಿಳಿದೇ ಇದೆ.. ಆದರೆ ಅನಿಲ್ ಕುಂಬ್ಳೆ ಅವರ ವ್ಯಯಕ್ತಿಕ ಜೀವನದ ಬಗ್ಗೆ ಕೇಳಿದರೆ ನಿಜಕ್ಕೂ ಕಣ್ಣಂಚಲ್ಲಿ ನೀರು ಜಾರುತ್ತದೆ.‌ ಹೌದು ಅನಿಲ್ ಕುಂಬ್ಳೆ ಅವರು ಚೇತನಾ ಅವರನ್ನು ಮದುವೆಯಾದ ಕತೆ ಮನಮುಟ್ಟುವಂತಿದೆ.. ಅದಾಗಲೇ ಒಂದು ಮದುವೆಯಿಂದ ನೊಂದಿದ್ದ ಹೆಣ್ಣು ಮಗಳೊಬ್ಬಳನ್ನು ಸತತ ಎರಡು ವರ್ಷಗಳ ಕಾಲ ಒಪ್ಪಿಸಿ ನಂತರ ಮದುವೆಯಾಗಿ ಅವರಿಗೊಂದು ಹೊಸ ಜೀವನ ಕೊಡುವುದು ನಿಜಕ್ಕೂ ಹೇಳುವಷ್ಟು ಸುಲಭದ ಮಾತಲ್ಲ.. ಆದರೆ ಅನಿಲ್ ಕುಂಬ್ಳೆ ಅವರು ಅದನ್ನು ನಿಜ ಜೀವನದಲ್ಲಿ ಮಾಡಿ ತೋರಿಸಿ ನಿಜ ಜೀವನದ ರಿಯಲ್ ಲೈಫ್ ಹೀರೋ ಆದರು.. ಅವರ ದೊಡ್ಡತನಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು..

ಹೌದು ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ರಾಮತೀರ್ಥ ಅವರು ಅನಿಲ್ ಕುಂಬ್ಳೆ ಅವರಿಗಿಂತ ಎರಡ್ಯ್ ವರ್ಷ ದೊಡ್ಡವರು.. ಅನಿಲ್ ಕುಂಬ್ಳೆ ಅವರಿಗೆ ಸಧ್ಯ ಐವತ್ತೊಂದು ವರ್ಷ ವಯಸ್ಸಾಗಿದ್ದು ಇತ್ತ ಚೇತನಾ ಅವರಿಗೆ ಐವತ್ತ ಮೂರು ವರ್ಷ ವಯಸ್ಸಾಗಿದೆ.. ಇಪ್ಪತ್ತೆರೆಡು ವರ್ಷದ ಅನ್ಯೂನ್ಯವಾದ ದಾಂಪತ್ಯ ಜೀವನ ಇವರದ್ದು ನಿಜಕ್ಕೂ ಬಹಳಷ್ಟು ಜನರಿಗೆ ಮಾದರಿ ಎನ್ನಬಹುದು.. ಹೌದು ಚೇತನಾ ರಾಮತೀರ್ಥ ಅವರು 1986 ರಲ್ಲಿ ಕುಮಾರ್ ವಿ ಜಾಗೀರ್ದಾರ್ ಎಂಬುವವರನ್ನು ಮೈಸೂರಿನಲ್ಲಿ ಮದುವೆಯಾದರು‌.. ಈ ದಂಪತಿಗೆ 1994 ರಲ್ಲಿ ಹೆಣ್ಣು ಮಗುವಿನ ಜನನವಾಗಿದ್ದು ಆರುಣಿ ಎಂಬ ಹೆಸರನ್ನಿಟ್ಟಿದ್ದರು.. ಆದರೆ ಹನ್ನೆರೆಡು ವರ್ಷದ ದಾಂಪತ್ಯ ಜೀವನದಲ್ಲಿ ಸಾಕಷ್ಟು ಏರುಪೇರುಗಳಾದ ಕಾರಣ ಸಾಕಷ್ಟು ನೋವು ಅನುಭವಿಸಿದ್ದ ಚೇತನಾ ಅವರು ಬೆಂಗಳೂರಿನ ಟ್ರಾನ್ಸ್ ಓಷಿಯನ್ ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು..

1998 ರಲ್ಲಿ ಇಬ್ಬರ ನಡುವಿನ ದಾಂಪತ್ಯ ಮುರಿದುಬಿದ್ದಿತ್ತು.. ಇಬ್ಬರೂ ಒಪ್ಪಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು.. ಇಬ್ಬರ ನಡುವೆ ಡಿವೋರ್ಸ್ ಕೂಡ ಆಯಿತು.. ಚೇತನಾ ಅವರು ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಿಕೊಂಡು ತಮ್ಮ ಮಗಳ ಜೊತೆ ಜೀವನ ಸಾಗಿಸುತ್ತಿದ್ದರು.. ಇತ್ತ ಪ್ರತಿ ವಾರಾಂತ್ಯದಲ್ಲಿ ಮಗುವನ್ನು ಮೊದಲ ಗಂಡ ಕುಮಾರ್ ಅವರು ನೋಡಬಹುದಾಗಿತ್ತು.. ಇನ್ನು ಇತ್ತ ಅನಿಲ್ ಕುಂಬ್ಳೆ ಅವರು ಚೇತನಾ ಅವರನ್ನು ನೋಡಿ ಪರಿಚಯವಾಗಿತ್ತು.. ಇವರ ಜೀವನದ ಬಗ್ಗೆ ಬೇರೆ ಒಬ್ಬರಿಂದ ನಡೆದ ಘಟನೆಗಳ ಬಗ್ಗೆ ಕೇಳಿದ ಅನಿಲ್ ಕುಂಬ್ಳೆ ಅವರು ಚೇತನಾ ಅವರನ್ನು ಮದುವೆಯಾಗುವ ನಿರ್ಧಾರ ಮಾಡಿದರು.. ಆದರೆ ಇತ್ತ ಚೇತನಾ ಅವರು ಮಾತ್ರ ಮದುವೆಯನ್ನು ನಿರಾಕರಿಸಿದರು.. ಅದಾಗಲೇ ಒಂದು ಮದುವೆಯಿಂದ ಸಾಕಷ್ಟು ಅನುಭವಿಸಿದ್ದೇನೆ.. ಮದುವೆ ಮತ್ತೊಂದು ದಾಂಪತ್ಯ ಯಾವುದೂ ಸಹ ಬೇಡವೆಂದು ತಮ್ಮ ನಿರ್ಧಾರವನ್ನು ತಿಳಿಸಿದರು..

ಆದರೆ ಇತ್ತ ಅನಿಲ್ ಕುಂಬ್ಳೆ ಅವರು ಮಾತ್ರ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ.. ಚೇತನಾ ಅವರ ಗುಣವನ್ನು ತಿಳಿದಿದ್ದ ಅನಿಲ್ ಕುಂಬ್ಳೆ ಅವರು ಸತತ ಒಂದು ವರ್ಷ ಪೂರ್ತಿ ಕಾದು ಅವರ ಮನವೊಲಿಸಿ ಮದುವೆಯಾದರು.. ಇತ್ತ ಚೇತನಾ ಅವರು ಅನಿಲ್ ಕುಂಬ್ಳೆ ಅವರನ್ನು ಮದುವೆಯಾದ ನಂತರ ಮೊದಲ ಪತಿ ಕುಮಾರ್ ಅವರು ಮತ್ತೆ ಕೋರ್ಟ್ ನಲ್ಲಿ ಮಗುವಿಗಾಗಿ ಪ್ರಕರಣ ದಾಖಲು ಮಾಡಿದರು.. ಅವರು ಸ್ಟಾಕ್ ಮಾರ್ಕೆಟ್ ಉದ್ಯಮಿಯಾಗಿದ್ದು ಮತ್ತೊಂದು ಮದುವೆಯಾಗಿರಲಿಲ್ಲ.. ಇತ್ತ ಚೇತನಾ ಅವರು ಎರಡನೇ ಮದುವೆಯಾಗಿ ಎರಡನೇ ಗಂಡನ ಜೊತೆ ವಿದೇಶಗಳಿಗೆ ಹೋಗುತ್ತಿದ್ದಾರೆ.. ಆ ಕಾರಣಕ್ಕಾಗಿ ಮಗುವನ್ನು ನನಗೆ ಕೊಡಬೇಕಾಗಿ ಕೇಳಿಕೊಂಡಿದ್ದರು.. ಇದಕ್ಕೆ ಹೈಕೋರ್ಟ್ ಕೂಡ ಒಪ್ಪಿ ಅಪ್ಪ ಕುಮಾರ್ ಅವರಿಗೆ ಮಗುವನ್ನು ಒಪ್ಪಿಸಿ ವಾರಾಂತ್ಯದಲ್ಲಿ ತಾಯಿ ಭೇಟಿ‌ ಮಾಡಬಹುದೆಂದು ತಿಳಿಸಿತ್ತು..

ಆದರೆ ಇತ್ತ ಮಗಳಿಗಾಗಿ ಸಾಕಷ್ಟು ಕಷ್ಟ ಪಟ್ಟು ಬದುಕು ಕಟ್ಟಿಕೊಂಡಿದ್ದ ಚೇತನಾ ಅವರು ಮಗುವನ್ನು ಬಿಡಲು ತಯಾರಿರಲಿಲ್ಲ. ಮತ್ತೆ ಸುಪ್ರಿಂ ಕೋರ್ಟ್ ಗ ಮೆಟ್ಟಿಲೇರಿದರು.. ಅವರ ಈ ಸಂಪೂರ್ಣ ಜರ್ನಿಯನ್ನು ಅನಿಲ್ ಕುಂಬ್ಳೆ ಅವರು ಚೇತನಾ ಅವರ ಬೆನ್ನೆಲುಬಾಗಿ ನಿಂತರು.. ಹೀಗೆ ಮೂರು ನಾಲ್ಕು ವರ್ಷ ಕೋರ್ಟ್ ಗೆ ಅಲೆದಾಡಿ ತಮ್ಮ ಮಗಳನ್ನು ತಮ್ಮ ಬಳಿಯೇ ಉಳಿಸಿಕೊಂಡರು.. ಸಧ್ಯ ಆ ಮಗುವಿಗೆ ಇದೀಗ ಇಪ್ಪತ್ತೇಳು ವರ್ಷ.. ಇತ್ತ ಅನಿಲ್ ಕುಂಬ್ಳೆ ಹಾಗೂ ಚೇತನಾ ದಂಪತಿಗೆ ಮತ್ತಿಬ್ಬರು ಮಕ್ಕಳಾದರು.. ಮಯಾಸ್ ಕುಂಬ್ಳೆ ಎಂಬ ಗಂಡು ಮಗು ಹಾಗೂ ಸ್ವಾಸ್ತಿ ಕುಂಬ್ಳೆ ಎಂಬ ಹೆಣ್ಣು ಮಗುವಾಯಿತು.. ನಂತರದ ದಿನಗಳಲ್ಲಿ ಮೂವರು ಮಕ್ಕಳೊಟ್ಟಿಗೆ ಒಳ್ಳೆಯ ಜೀವನ ಕಟ್ಟಿಕೊಂಡರು ಈ ದಂಪತಿ.. ಅನಿಲ್ ಕುಂಬ್ಳೆ ಅವರು ಆರುಣಿ ಅವರನ್ನು ತಮ್ಮ ಸ್ವಂತ ಮಗಳಾಗಿ ಕಂಡರು.. ಎಂದೂ ಸಹ ತಮಗೆ ಇಬ್ಬರು ಮಕ್ಕಳು ಮಾತ್ರ ಎಂದು ಹೇಳಲೇ ಇಲ್ಲ..

ಪ್ರತಿಯೊಂದು ಸಂದರ್ಭದಲ್ಲಿಯೂ ನನಗೆ ಮೂವರು ಮಕ್ಕಳು ಎಂದೇ ಹೇಳಿಕೊಂಡಿದ್ದಾರೆ.. ಇತ್ತ ಅನಿಲ್ ಕುಂಬ್ಳೆ ಅವರಿಗೆ ಮಕ್ಕಳ ಬಗ್ಗೆ ಏನಾದರೂ ಕೇಳಿದ ಕೂಡಲೇ ಅವರು ಮೊದಲು ಮಾತನಾಡುವುದೇ ತಮ್ಮ ಮೊದಲ ಮಗಳು ಆರುಣಿ ಅವರ ಬಗ್ಗೆ.. ನಿಜಕ್ಕೂ ಇದು ಅನಿಲ್ ಕುಂಬ್ಳೆ ಅವರ ದೊಡ್ಡತನವೇ ಸರಿ.. ಚೇತನಾ ಅವರಿಗೆ ‌ಮಾತ್ರವಲ್ಲ ಮಗುವಿಗೂ ಸಹ ಒಳ್ಳೆಯ ತಂದೆಯಾಗಿ ಹೊಸ ಬದುಕು ಕಟ್ಟಿಕೊಡುವಲ್ಲಿ ನೆರವಾದರು.. ಈಗಲೂ ಸಹ ಆರುಣಿ ಅವರನ್ನು ಆರುಣಿ ಕುಂಬ್ಳೆ ಎಂದೇ ಅಧಿಕೃತ ಹೆಸರಾಗಿ ಮಾಡಿದ್ದಾರೆ.. ನಿಜಕ್ಕೂ ಜೀವನದಲ್ಲಿ ಸಾಕಷ್ಟು ನೋವು ಹಾಗೂ ಏರು ಪೇರುಗಳನ್ನು ನೋಡಿ ಯಾವುದೇ ಕಷ್ಟದ ಸಮಯದಲ್ಲಿಯೂ ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಜೊತೆಯಾಗಿ ನಿಂತು ಜೀವನವನ್ನು ಜೊತೆಯಾಗಿ ಎದುರಿಸಿ ತಮ್ಮ ಮೂರು ಮಕ್ಕಳಿಗೂ ಒಳ್ಳೆಯ ಜೀವನ ರೂಪಿಸಿದ್ದಾರೆನ್ನಬಹುದು.. ಮಗಳ ಕನಸಿನಂತೆ ವಿದೇಶದಲ್ಲಿ ವ್ಯಾಸಂಗ ಮಾಡಿಸುತ್ತಿದ್ದು ಲಂಡನ್ ನಲ್ಲಿ ದೊಡ್ಡ ಮಗಳ ಜೊತೆ ಸಮಯ ಕಳೆದ ಫೋಟೋಗಳನ್ನು ಹಂಚಿಕೊಂಡು ಸಂತೋಷ ಹಂಚಿಕೊಂಡಿದ್ದರು.. ಅಷ್ಟೇ ಅಲ್ಲದೇ ದೊಡ್ಡ ಮಗಳು ಆರುಣಿ ತನ್ನ ಡಿಗ್ರಿ ಮುಗಿಸಿದಾಗ ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು..

ಇತ್ತ ಈಗಿನ ದಿನಗಳಲ್ಲಿ ಪ್ರೀತಿ ಅನ್ನೋ ಹೆಸರಿನಲ್ಲಿ ಮೂರು ದಿನ ಜೊತೆಯಾಗಿ ಇದ್ದು ದೂರಾವಾಗೋದು.. ಮತ್ತೊಂದು ಕಡೆ ಲಿವ್ ಇನ್ ಟುಗೆದರ್ ಎನ್ನುವ ಹೊಸ ಜೀವನ ಶೈಲಿಯಲ್ಲಿ ಎಲ್ಲವನ್ನೂ ಮುಗಿಸಿ ಮದುವೆಯಾಗದೇ ಮತ್ತೊಬ್ಬರನ್ನು ಮದುವೆಯಾಗುವ ಹೊಸ ಹೊಸ ಸಂಪ್ರದಾಯಗಳನ್ನು ರೂಡಿಸಿಕೊಂಡಿರುವ ಈಗಿನ ಜನತೆ ನಿಜಕ್ಕೂ ಅನಿಲ್ ಕುಂಬ್ಳೆ ಅವರು ದೊಡ್ಡ ಕ್ರಿಕೆಟರ್ ಆಗಿದ್ದರೂ ಸಹ ನನಗೇಕೆ ಈ ವಿವಾದಗಳು ಎಂದುಕೊಳ್ಳದೇ ಎಷ್ಟೇ ಕಷ್ಟವಾದರೂ ಚೇತನಾ ಅವರಿಗೆ ಅವರ ಗುಣ ನೋಡಿ ಅವರಿಗೆ ಹೊಸದೊಂದು ಜೀವನ ಕೊಡಲೇ ಬೇಕೆಂದು ಒಮ್ಮೆ ನಿರ್ಧರಿಸಿ ಅವರ ಜೊತೆಯಾಗಿ ನಿಂತು ಎಲ್ಲವನ್ನು ಗೆದ್ದು ಸಧ್ಯ ಇದೀಗ ತಮ್ಮ ಅರ್ಥಪೂರ್ಣವಾದ ಇಪ್ಪತ್ತೊಂದು ವರ್ಷಗಳ ದಾಂಪತ್ಯ ಜೀವನವನ್ನು ಪೂರ್ಣಗೊಳಿಸಿದ್ದಾರೆ.. ಇವರ ಬಾಂಧವ್ಯ ನಿಜಕ್ಕೂ ಪರಿಶುದ್ಧ ಪ್ರೀತಿಯಿಂದ ತುಂಬಿದ್ದು ಮನತುಂಬಿ ಬರುತ್ತದೆ ಎನ್ನಬಹುದು.. ಈ ಕುಟುಂಬ ಸದಾ ಹೀಗೆ ಕೊನೆವರೆಗೂ ಸಂತೋಷವಾಗಿರಲಿ..