ಅನಿಲ್ ಕುಂಬ್ಳೆ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಏನಾಗಬೇಕು ಗೊತ್ತಾ.. ನಿಜಕ್ಕೂ ಶಾಕಿಂಗ್.. ಎಲ್ಲಿಯೂ ಹೇಳಿಕೊಳ್ಳದ ಸತ್ಯ ನೋಡಿ‌..

0 views

ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಮಾತ್ರವಲ್ಲ.. ಕ್ರಿಕೆಟ್ ಹೊರತು ಪಡಿಸಿಯೂ ಸಾಕಷ್ಟು ವಿಚಾರಗಳಿಗೆ ಕನ್ನಡಿಗರ ಮನಸ್ಸಿಗೆ ಬಹಳ ಹತ್ತಿರವಾದವರು.. ಕನ್ನಡ ಸಿನಿಮಾ ಇಂಡಸ್ಟ್ರಿಯವರ ಜೊತೆಯೂ ಸಾಕಷ್ಟು ಆತ್ಮೀಯತೆಯನ್ನು ಹೊಂದಿದ್ದರು.. ಹೊರದೇಶಗಳಿಗೆ ಹೋದರೂ ಸಹ ಅಲ್ಲಿಯೂ ಎಲ್ಲಾ ಕ್ರಿಕೆಟಿಗರ ಮುಂದೆ ಹಾಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕನ್ನಡದ ಹಾಡುಗಳನ್ನು ಹೆಮ್ಮೆಯಿಂದ ಹಾಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದವರು.. ನಾಡು ನುಡಿ ಎಂದರೆ ಸದಾ ಮುಂದೆ ಇರುವ ಹೆಮ್ಮೆ ಪಡುವ ಅನಿಲ್ ಕುಂಬ್ಳೇ ಅವರು ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಕುಟುಂಬದವರು ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.. ಹೌದು ಇಷ್ಟು ದಿನ ಎಲ್ಲಿಯೂ ಹೇಳಿಕೊಳ್ಳದ ವಿಚಾರವನ್ನೀಗ ಸ್ವತಃ ಅನಿಲ್ ಕುಂಬ್ಳೆ ಅವರೇ ಹಂಚಿಕೊಂಡಿದ್ದಾರೆ.. ಹೌದು ಸಾಮಾನ್ಯವಾಗಿ ನಾಡಿನ ಆಚೆಗೆ ಗುರುತಿಸಿಕೊಂಡು ಸ್ವಲ್ಪ ಹೆಸರು ಮಾಡಿದರೂ ಸಹ ತಲೆಯಲ್ಲಿ ನಡೆಯುವ ಕೆಲವರ ನಡುವೆ ನಮ್ಮ ಅನಿಲ್ ಕುಂಬ್ಳೆ ಅವರು ಬಹಳ ಎತ್ತರದ ಸ್ಥಾನದಲ್ಲಿದ್ದಾರೆನ್ನಬಹುದು..

ಹೌದು ಅದರಲ್ಲೂ ಕ್ರಿಕೆಟ್ ನಲ್ಲಿ ಇಷ್ಟು ದೊಡ್ಡ ಹೆಸರು ಮಾಡಿದರೂ ಸಹ ಸ್ವಲ್ಪವೂ ಅಹಂಕಾರವಿಲ್ಲದ ಅನಿಲ್ ಕುಂಬ್ಳೇ ಅವರು ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ ಜೀವನದ ಸಾಕಷ್ಟು ಅನುಭವಗಳನ್ನು ಹಂಚಿಕೊಂಡರು.. ಅದೇ ಸಮಯದಲ್ಲಿ ಕೆಲ ಆಶ್ಚರ್ಯಕರ ವಿಚಾರವನ್ನೂ ಸಹ ಹಂಚಿಕೊಂಡಿದ್ದಾರೆ.. ಹೌದು ಅನಿಲ್ ಕುಂಬ್ಳೇ ಅವರು ನಮ್ಮ ಸಿನಿಮಾ ಇಂಡಸ್ಟ್ರಿಯವರ ಜೊತೆ ಬಹಳ ಆತ್ಮೀಯವಾದ ಸಂಬಂಧವನ್ನು ಹೊಂದಿದ್ದರು‌.. ಕೆಲ ತಿಂಗಳ ಹಿಂದೆ ಅಗಲಿದ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದು ಭಾವುಕರಾಗಿದ್ದನ್ನು ನೆನೆಯಬಹುದು.. ಜೊತೆಗೆ ಹಿರಿಯ ನಟ ಶಿವರಾಂ ಅವರು ಅಗಲಿದಾಗಲೂ ಅವರ ಅಂತಿಮ ದರ್ಶನ ಪಡೆದು ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದರು..

ಇನ್ನು ಇದೀಗ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನಿಲ್ ಕುಂಬ್ಳೇ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಹೌದು ಸಾಹಸಸಿಂಹ ವಿಷ್ಣುವರ್ಧನ್ ಅವರಿಗೂ ತಮಗೂ ಏನು ಸಂಬಂಧವೆಂದು ತಿಳಿಸಿದ್ದಾರೆ.. ಹೌದು ಸಾಹಸಸಿಂಹ ವಿಷ್ಣುವರ್ಧನ್ ಅವರು ಸ್ವಂತ ಅನಿಲ್ ಕುಂಬ್ಳೆ ಅವರ ತಾಯಿಯ ಕಸಿನ್.. ಇಷ್ಟೇ ಅಲ್ಲ ಅನಿಲ್ ಕುಂಬ್ಳೆ ಅವರನ್ನು ವಿಷ್ಣುವರ್ಧನ್ ಅವರು ನಡೆಸಿಕೊಂಡ ರೀತಿ ನಿಜಕ್ಕೂ ಅವರ ದೊಡ್ಡತನವನ್ನು ತೋರುತ್ತದೆ‌‌. ಹೌದು ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆಗಿದ್ದರೂ ಸಹ ಕುಟುಂಬದ ವಿಚಾರದಲ್ಲಿ ಸಂಪೂರ್ಣವಾಗಿ ಫ್ಯಾಮಿಲಿ ಮ್ಯಾನ್ ಆಗಿದ್ದ ವಿಷ್ಣುವರ್ಧನ್ ಅವರು ಕುಟೂಂಬದವರಿಗಾಗಿ ಆಗಾಗ ಏನಾದರೊಂದು ಕಾರ್ಯಕ್ರಮವನ್ನು ವಿಷ್ಣುವರ್ಧನ್ ಅವರು ಮಾಡುತ್ತಲೇ ಇದ್ದರು..

ಅಷ್ಟೇ ಅಲ್ಲದೇ ಅನಿಲ್ ಕುಂಬ್ಳೇ ಅವರು ಕ್ರಿಕೆಟ್ ನಲ್ಲಿ ಸಾಧನೆ ಮಾಡಿದಾಗ ಅವರನ್ನು ಕುಟುಂಬದವರಾಗಿ ಗೌರವಿಸಬೇಕೆಂದು ವಿಷ್ಣುವರ್ಧನ್ ಅವರು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.. ಹೌದು ಅನಿಲ್ ಕುಂಬ್ಳೆ ಅವರಿಗೆ ತಿಳಿಯದಂತೆ ಕುಟುಂಬದವರು ಸಂಬಂಧಿಕರು ಎಲ್ಲರನ್ನೂ ಸಹ ಕರೆಸಿ ಎಲ್ಲರ ಮುಂದೆ ಅನಿಲ್ ಕುಂಬ್ಳೆ ಅವರನ್ನು ಸನ್ಮಾನಿಸಿ ಗೌರವಿಸಿದ್ದರು.. ಜೊತೆಗೆ ಅನಿಲ್ ಕುಂಬ್ಳೆ ಅವರಿಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು.. ಆ ಬ್ಯಾಟ್ ನಲ್ಲಿ ಅನಿಲ್ ಕುಂಬ್ಳೆ ಅವರ ಸಂಬಂಧಿಕರು ಕುಟುಂಬದವರು ಪ್ರತಿಯೊಬ್ಬರೂ ಸಹ ಅನಿಲ್ ಕುಂಬ್ಖೇ ಅವರಿಗಾಗಿ ಒಂದೊಂದು ಸಾಲನ್ನು ಬರೆದು ಹಾರೈಸಿದ್ದರು.. ಇದೆಲ್ಲಾ ಸಾಧ್ಯವಾಗಿದ್ದು ವಿಷ್ಣು ಅಂಕಲ್ ಅವರಿಂದ ಮಾತ್ರ.. ಈಗಲೂ ಸಹ ಆ ಬ್ಯಾಟ್ ನನ್ನ ಬಳಿ ಇದೆ.. ಇದೆಲ್ಲವನ್ನು ಅವರು ಬಹಳ ಪ್ರೀತಿಯಿಂದ ಮಾಡಿದ್ದರು.. ಎಂದು ನೆನೆದರು..

ಇನ್ನು ಇತ್ತ ಅನಿಲ್ ಕುಂಬ್ಳೆ ಅವರು ಸುದೀಪ್ ಅವರ ಒಡನಾಟವೂ ಸಹ ಬಹಳಷ್ಟು ವರ್ಷಗಳ ಕಾಲದ್ದಾಗಿದ್ದು ಈ ಬಗ್ಗೆಯೂ ಸಹ ಹಂಚಿಕೊಂಡರು.. ನಾನು ರಣಜಿ ಕ್ರಿಕೆಟ್ ಆಡುವಾಗ ಸುದೀಪ್ ಅವರು ಆಗಮಿಸಿದ್ದರು.. ಆಗ ನನ್ನ ಬಳಿಯೇ ಬಂದು ಇಲ್ಲಿ ಅನಿಲ್ ಕುಂಬ್ಳೇ ಯಾರು ಎಂದು ಕೇಳಿದ್ದರಂತೆ ಆಗ ನಾನೇ ಎಂದಿದ್ದೆ.. ಆಗಿನಿಂದಲೂ ಅವರ ನನ್ನ ಸ್ನೇಹ ಹಾಗೆಯೇ ಇದೆ. ಎಂದರು.. ಇನ್ನು ಇತ್ತ ಸುದೀಪ್ ಅವರೂ ಸಹ ಅನಿಲ್ ಕುಂಬ್ಳೆ ಅವರಿಗಾಗಿ ವೀಡಿಯೋ ಕಾಲ್ ಮೂಲಕ ಮಾತನಾಡಿ ನನ್ನ ನಿನ್ನ ಸಂಬಂಧ ನಿನ್ನೆಯದಲ್ಲ ಎಂದು ಅನಿಲ್ ಕುಂಬ್ಳೆ ಅವರಿಗಾಗಿ ಹಾಡಿದರು.. ಜೊತೆಗೆ ಅನಿಲ್ ಕುಂಬ್ಳೆ ಅವರು ನನ್ನ ಸ್ನೇಹಿತ ಮಾತ್ರವಲ್ಲ ನನ್ನ ಹೀರೋ ಅವರು ಎಂದರು.. ಇನ್ನು ಇತ್ತ ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ಅವರೂ ಕೂಡ ಖ್ಯಾತ ಬರಹಗಾರರಾದ ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಹಾಡನ್ನು ಬರೆದಿರುವ ವಿಜಯ್ ಭಾಸ್ಕರನ್ ಅವರ ಅಕ್ಕನ ಮೊಮ್ಮಗಳು ಎಂಬುದು ಮತ್ತೊಂದು ವಿಶೇಷ..

ಇನ್ನು ಇದೆಲ್ಲದರ ಜೊತೆಗೆ ಅನಿಲ್ ಕುಂಬ್ಳೆ ಅವರು ಚೇತನಾ ರಾಮಕೃಷ್ಣ ಅವರನ್ನು ಮದುವೆಯಾಗಿದ್ದು ಮತ್ತೊಂದು ವಿಶೇಷ ಎನ್ನಬಹುದು.. ಚೇತನಾ ಅವರು ಅದಾಗಲೇ ಒಂದು ಮದುವೆಯಾಗಿ ಸಾಕಷ್ಟು ನೋವು ಅನುಭವಿಸಿದ್ದ ಸಮಯದಲ್ಲಿ ಅನಿಲ್ ಕುಂಬ್ಳೆ ಅವರು ಚೇತನಾ ಅವರಿಗೆ ಹೊಸ ಜೀವನವನ್ನು ಕೊಡಬೇಕೆಂದು ನಿರ್ಧರಿಸಿ ಚೇತನಾ ಅವರನ್ನು ಒತ್ತಾಯ ಮಾಡಿ ಅವರನ್ನು ಮದುವೆಗೆ ಒಪ್ಪಿಸಿ ಮದುವೆಯಾದರು.. ಅಷ್ಟೇ ಅಲ್ಲದೇ ಚೇತನಾ ಅವರ ಮಗುವನ್ನೂ ಸಹ ತಮ್ಮ ಮಗಳಾಗಿ ಕಂಡು ಸಧ್ಯ ಲಂಡನ್ ನಲ್ಲಿ ಮಗಳಿಗೆ ಉನ್ನತ ವ್ಯಾಸಂಗ ಮಾಡಿಸುತ್ತಿದ್ದು ಆಗಾಗ ಲಂಡನ್ ಗೆ ತೆರಳಿ ಮಗಳ ಜೊತೆ ಸಮಯ ಕಳೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.. ಒಟ್ಟಿನಲ್ಲಿ ಒಬ್ಬ ಒಳ್ಳೆ ಕ್ರಿಕೆಟರ್ ಮಾತ್ರವಲ್ಲದೇ ಒಬ್ಬ ಒಳ್ಳೆಯ ಮನುಷ್ಯ ಎಂಬುದಕ್ಕೆ ಹೆಮ್ಮೆಯ ಉದಾಹರಣೆ ನಮ್ಮ ಅನಿಲ್ ಕುಂಬ್ಖೆ ಸರ್ ಎನ್ನಬಹುದು‌‌..