ನಟಿಯರ ನಂತರ ಇದೀಗ ಮಾಲ್ಡೀವ್ಸ್ ಗೆ ಪ್ರವಾಸಕ್ಕೆ ತೆರಳಿದ ನಟ ಅನಿರುದ್ಧ್.. ಫೋಟೋ ಗ್ಯಾಲರಿ ನೋಡಿ..

0 views

ಕಳೆದ ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ಸೇರಿದಂತೆ ಇತರ ಸಿನಿಮಾ ಇಂಡಸ್ಟ್ರಿಯ ಸಾಲು ಸಾಲು‌ ನಟಿಯರು ಮಾಲ್ಡೀವ್ಸ್ ಗೆ ಪ್ರವಾಸಕ್ಕೆ ತೆರಳಿದ್ದು.. ಇನ್ಸ್ಟಾಗ್ರಾಂ ತುಂಬೆಲ್ಲಾ ಮಾಲ್ಡೀವ್ಸ್ ನ ಸಮುದ್ರ ತೀರದಲ್ಲಿ.. ಹೊಟೆಲ್ ಗಳಲ್ಲಿ ತೆಗೆದ ಫೋಟೋಗಳೇ ಕಾಣಸಿಗುತ್ತಿದ್ದವು.. ಕೊರೊನಾ ನಂತರ ಮೊದಲ ಪ್ರವಾಸ ಎಂದು ಸಿಕ್ಕಾಪಟ್ಟೆ ಸ್ಟೇಟಸ್ ಕೂಡ ಹಾಕಿಕೊಂಡರು.. ಲಾಕ್ ಡೌನ್ ನಿಂದ ಮನೆಯಲ್ಲಿಯೇ ಕೆಲ ತಿಂಗಳು ಸಮಯ ಕಳೆದ ಕಲಾವಿದರು ಲಾಕ್ ಡೌನ್ ಸಡಿಲಗೊಂಡ ಬಳಿಕ ರಾಜ್ಯದಲ್ಲಿಯೇ ಪ್ರವಾಸ ಕೈಗೊಂಡಿದ್ದರು.. ಆದರೀಗ ಮೊದಲ ವಿದೇಶ ಪ್ರವಾಸಕ್ಕಾಗಿ ಮಾಲ್ಡೀವ್ಸ್ ಗೆ ತೆರಳಿದ್ದರು..

ಸಾಲು ಸಾಲು ನಟಿಯರು ಒಟ್ಟೊಟ್ಟಿಗೆ ಒಂದೇ ಸಮಯದಲ್ಲಿ ಮಾಲ್ಡೀವ್ಸ್ ಗೆ ತೆರಳಿದ್ದು ಇದರ ಹಿಂದೆ ಏನಾದರೂ ವಿಶೇಷ ಇರಬಹುದಾ ಎಂದು ಹುಡುಕಾಡ ತೊಡಗಿದಾಗ ಅಸಲಿ‌ ಕಾರಣ ಸಿಕ್ಕಿತ್ತು.. ಹೌದು ಎಲ್ಲರಿಗೂ ತಿಳಿದಂತೆ ಮಾಲ್ಡೀವ್ಸ್ ಪ್ರವಾಸಕ್ಕೆಂದೇ ಮೀಸಲಾದ ಪ್ರದೇಶ.. ಅಲ್ಲಿನ ಪ್ರಮುಖ ಆದಾಯದ ಮೂಲವೂ ಕೂಡ ಪ್ರವಾಸೋದ್ಯಮವೇ ಆಗಿದೆ.. ಆದರೆ ಕೊರೊನಾ ಬಂದ ನಂತರ ಅಲ್ಲಿನ ಪ್ರವಾಸೋದ್ಯಮ ನೆಲಕಚ್ಚಿದ್ದು ಮತ್ತೆ ಅದನ್ನು ಪುನರ್ಜೀವ ನೀಡಲು ಹರಸಾಹಸ ಪಡುತ್ತಿದ್ದಾರೆನ್ನಬಹುದು.. ಇದೇ ಕಾರಣಕ್ಕೆ ಅಲ್ಲಿನ ಹೊಟೆಲ್ ಮಾಲಿಕರು ಭಾರತದ ನಟಿಯರಿಗೆ ಪ್ರವಾಸದ ಆಫರ್ ನೀಡಿದ್ದರು.. ಅವರೇ ವಿಮಾನದ ಟಿಕೆಟ್ ಕೊಡುವುದರ ಜೊತೆಗೆ ಅಲ್ಲಿ ಉಳಿದುಕೊಳ್ಳಲು ಐಶಾರಾಮಿ ರೂಮ್ ವ್ಯವಸ್ಥೆಯನ್ನು ಮಾಡಿದ್ದರು.. ಎಲ್ಲವೂ ಸಹ ಉಚಿತವಾಗಿ.. ಆದರೆ ಅವರು ಕೆಲ ಕಂಡೀಷನ್ ಕೂಡ ಹಾಕಿದ್ದರು..

ಹೌದು ಹೊಟೆಲ್ ನವರೇ ಪ್ರತಿಯೊಬ್ಬ ನಟಿಗೂ ಒಬ್ಬೊಬ್ಬ ಕ್ಯಾಮರಾ ಪರ್ಸನ್ ಅನ್ನು ನೀಡಿ ಅವರ ಬಳಿ ಫೋಟೋ ತೆಗೆಸಿಕೊಳ್ಳಬೇಕಿತ್ತು.. ಆ ಫೋಟೋಗಳನ್ನು ನಟಿಯರ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಳ್ಳಬೇಕಿತ್ತು.. ಜೊತೆಗೆ ಹೊಟೆಲ್ ನ ಹೆಸರನ್ನೂ ಸಹ ತಿಳಿಸಿ ಪ್ರವಾಸೋದ್ಯನ ಸೇಫ್ ಎಂದು ಬಿಂಬಿಸುವಂತೆ ಪೋಸ್ಟ್ ಮಾಡಬೇಕಿತ್ತು.. ಅದೇ ರೀತಿ ಸಾಲು ಸಾಲು ನಟಿಯರು ಒಬ್ಬರ ನಂತರ ಒಬ್ಬರು ಮಾಲ್ಡೀವ್ಸ್ ಗೆ ಉಚಿತ ವಾಗಿ ತೆರಳಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು.. ಸ್ಯಾಂಡಲ್ವುಡ್ ನ ಸಾನ್ವಿ ಶ್ರೀವಾತ್ಸವ್.. ಶರ್ಮಿಳಾ ಮಾಂಡ್ರೆ.. ಪ್ರಣಿತಾ ಸುಭಾಶ್.. ಸೇರಿದಂತೆ ಇನ್ನೂ ಅನೇಕ ನಟಿಯರು ಸಹ ಮಾಲ್ಡೀವ್ಸ್ ತೆರಳಿ ಪಡ್ಡೆ ಹುಡುಗರ ನಿದ್ರೆ ಗೆಡಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು..

ಇನ್ನು ಇದೀಗ ನಟ ಅನಿರುದ್ಧ್ ಕೂಡ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಚಿತ್ರೀಕರಣದಿಂದ ಕೊಂಚ ಬ್ರೇಕ್ ಪಡೆದು ತಮ್ಮ ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ತೆರಳಿದ್ದಾರೆ.. ಹೌದು ಇಂದು ಮಾಲ್ಡೀವ್ಸ್ ತಲುಪಿರುವ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಟೆಲ್ ಮುಂದೆ ತೆಗೆದ ಫೋಟೋವನ್ನು ಹಂಚಿಕೊಂಡಿದ್ದು.. ಮಾಲ್ಡೀವ್ಸ್ ನಲ್ಲಿ‌ ಇಂದು.. ಎಂದು ಬರೆದು ಪೋಸ್ಟ್ ಮಾಡುವ ಮೂಲಕ ತಮ್ಮ ಪ್ರವಾಸದ ಬಗ್ಗೆ ತಿಳಿಸಿದ್ದಾರೆ.. ಇನ್ನು ಅನಿರುದ್ಧ್ ಅವರ ಜೊತೆಗೆ ಭಾರತಿ ವಿಷ್ಣುವರ್ಧನ್ ಅವರು ಪತ್ನಿ ಕೀರ್ತಿ ವಿಷ್ಣುವರ್ಧನ್ ಅವರು ಮಕ್ಕಳಾದ ಶ್ಲೋಕ ಹಾಗೂ ಜ್ಯೇಷ್ಠ ವರ್ಧನ್ ಸೇರಿದಂತೆ ಇನ್ನೂ ಕೆಲ ಫ್ಯಾಮಿಲಿ ಮೆಂಬರ್ ಗಳು ಮಾಲ್ಡೀವ್ಸ್ ನ ಪ್ರವಾಸಕ್ಕೆ ತೆರಳಿದ್ದು ಫೋಟೋ ಹಂಚಿಕೊಂಡಿದ್ದಾರೆ..

ಆದರೆ ಇದೂ ಕೂಡ ಪ್ರವಾಸೋದ್ಯಮದ ಕಾರಣ ಹೊಟೆಲ್ ಉದ್ಯಮಿಗಳು ಕೊಟ್ಟ ಪ್ರವಾಸದ ಉಡುಗೊರೆಯೋ ಅಥವಾ ಸ್ವತಃ ಅನಿರುದ್ಧ್ ಅವರೇ ತಮ್ಮ ಕುಟುಂಬದ ಜೊತೆ ಸಮಯ ಕಳೆಯುವ ಸಲುವಾಗಿ ತೆರಳಿದ್ದಾರೋ ತಿಳಿಯದು.. ಆದರೆ ಒಟ್ಟಿನಲ್ಲಿ ಲಾಕ್ ಡೌನ್ ಸಡಿಲಗೊಂಡ ನಂತರ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳಿದ್ದ ಅನಿರುದ್ಧ್ ಕುಟುಂಬ  ಇದೀಗ ಮಲ್ಡೀವ್ಸ್ ಗೆ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆನ್ನಬಹುದು..