ಕೆಜಿಎಫ್ ಸಿನಿಮಾ ನೋಡಲು ಹೋಗಿ ನಟ ಅನಿರುದ್ಧ್ ಹೇಳಿದ ಮಾತು ನೋಡಿ.. ಕೆಜಿಎಫ್ ನಮ್ಮ ಹೆಮ್ಮೆ ಎಂದ ಕಿರುತೆರೆಯ ಸೆನ್ಸೇಷನಲ್ ಸ್ಟಾರ್..

0 views

ಸ್ಯಾಂಡಲ್ವುಡ್ ನಲ್ಲಿ ಮಾತ್ರವಲ್ಲದೇ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಧ್ಯ ಕೆಜಿಎಫ್ ಸಿನಿಮಾದ ಹವಾ ಮುಂದುವರೆಯುತ್ತಿದ್ದು ಸಾವಿರದ ನೂರು ಕೋಟಿ ದಾಖಲೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದ್ದು ತನ್ನ ಯಶಸ್ಸಿನ ಓಟವನ್ನು ಮುಂದುವರೆಸಿದೆ.. ಇನ್ನು ಅದಾಗಲೇ ಯಶಸ್ವಿ ಇಪ್ಪತ್ತೈದು ದಿನದತ್ತ ತನ್ನ ಗೆಲುವಿನ ಓಟವನ್ನು ಮುಂದುವರೆಸಿರುವ ಕೆಜಿಎಫ್ ಸಿನಿಮಾವನ್ನು ದೇಶ‌ ಮಾತ್ರವಲ್ಲದೇ ಬೇರೆ ದೇಶಗಳಲ್ಲಿನ ಸಿನಿಮಾ ಪ್ರೇಮಿಗಳು ಸಹ ಕೊಂಡಾಡುತ್ತಿದ್ದರೆ ಅದ್ಯಾಕೋ ನಮ್ಮಲ್ಲೇ ಕೆಲವರು ಅಂಡು ಸುಟ್ಟವರಂತೆ ಆಡುತ್ತಿದ್ದಾರೆ..

ಹೌದು ಸಿನಿಮಾ ಬಿಡುಗಡೆಯಾದ ದಿನದಿಂದಲೂ ಅಭಿಮಾನಿಗಳು ಅದಾಗಲೇ ನಾಲ್ಕೈದು ಬಾರಿ ಸಿನಿಮಾ ನೋಡಿಯಾಗಿದ್ದು ಇತ್ತ ಸಿನಿಮಾ ಮಂದಿಗಳು ಸಹ ಒಬ್ಬಬ್ಬರಾಗಿಯೇ ಥಿಯೇಟರ್ ಕಡೆಗೆ ಮುಖ ಮಾಡುತ್ತಿದ್ದಾರೆ.. ಹೌದು ತಮ್ಮ ತಮ್ಮ ಸಿನಿಮಾಗಳ ಧಾರಾವಾಹಿಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ಮಂದಿ ಬಿಡುವು ಮಾಡಿಕೊಂಡು ಕೆಜಿಎಫ್ ನೋಡಲು ತೆರಳುತ್ತಿದ್ದು ಸಿನಿಮಾ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.. ಇನ್ನು ಕನ್ನಡ ಕಿರುತೆರೆಯ ಸೆನ್ಸೇಷನಲ್ ಹೀರೋ ಎನಿಸಿಕೊಂಡಿರುವ ನಟ ಅನಿರುದ್ಧ್ ಅವರು ಸಹ ಕೆಜಿಎಫ್ ಸಿನಿಮಾ ನೋಡಲು ತೆರಳಿದ್ದು ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..

ಹೌದು ಕೆಜಿಎಫ್ ಸಿನಿಮಾ ಸಧ್ಯ ಇಡೀ ಭಾರತದ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ್ದು ತಮ್ಮ ತಮ್ಮ ಸಿನಿಮಾ ಇಂಡಸ್ಟ್ರಿಯ ಚಿತ್ರಗಳಿಗೆ ಪೆಟ್ಟು ಬಿದ್ದಿರುವುದು ಸುಳ್ಳಲ್ಲ.. ಕಲೆಕ್ಷನ್ ಕೂಡ ಇಳಿಮುಖವಾಗಿದ್ದು ಜನರು ಬೇರೆ ಭಾಷೆಗಳ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದರೂ ಸಹ ಅದನ್ನು ಕೆಜಿಎಫ್ ಸಿನಿಮಾಗೆ ಹೋಲಿಕೆ ಮಾಡಿ ನೋಡುತ್ತಿರುವುದು ಸಾಮಾನ್ಯವಾಗಿದೆ.. ಇದೇ ಕಾರಣಕ್ಕೆ ಬೇರೆ ಭಾಷೆಯ ಕೆಲವರಿಗೆ ಅಂಡು ಸುಟ್ಟಂತಾಗಿರೋದು ಸತ್ಯ.. ಅದೇ ರೀತಿ ಅಂಡು ಸುಟ್ಟಿಕೊಂಡ ವ್ಯಕ್ತಿಯೊಬ್ಬ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಇದೀಗ ನೆಟ್ಟಿಗರೇ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..

ಹೌದು ಕೆಜಿಎಫ್ ಸಿನಿಮಾ ಎದುರಾಗಿ ತಮಿಳು ನಟ ವಿಜಯ್ ಅವರ ಬೀಸ್ಟ್ ಸಿನಿಮಾ ಬಿಡುಗಡೆಯಾಗಿರೋದು ಎಲ್ಲರಿಗೂ ತಿಳಿದೇ ಇದೆ.. ಈಗಾಗಲೇ ಪ್ರಪಂಚದಾದ್ಯಂತ ಇನ್ನೂರು ಕೋಟಿ‌ ಕಲೆಕ್ಷನ್ ಮಾಡಿರುವ ಬೀಸ್ಟ್ ಯಶಸ್ಸಿನ ಹಾದಿಯಲ್ಲಿಯೇ ಸಾಗಿದೆ.. ಆದರೆ ಅದೇ ಸಮಯದಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಸಿನಿಮಾದ ಮುಂದೆ ಬೀಸ್ಟ್ ಮಕಾಡೆ ಮಲಗಿದ್ದಂತೂ ಸತ್ಯ.. ಎರಡೂ ಸಿನಿಮಾ ನೋಡಿದವರು ಕೆಜಿಎಫ್ ಸಿನಿಮಾವನ್ನು ಸೂಪರ್ ಎಂದು ಬೀಸ್ಟ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದೂ ಉಂಟು.. ಇನ್ನು ಅದೇ ದಿನ ಬಿಡುಗಡೆಯಾಗಿ ಸಾವಿರ ಕೋಟಿ ಕಲೆಕ್ಷನ್ ದಾಟಿದ ಕೆಜಿಎಫ್ ಸಿನಿಮಾ ಬಗ್ಗೆ ಕೆಲವರಿಗೆ ಕೊಂಚ ಉರಿ ಇದ್ದೇ ಇದೆ..

ಅದೇ ರೀತಿ ಉರಿ ತಾಳಲಾಗದೇ ಇದೀಗ ಪ್ರತಿಕ್ರಿಯೆ ಕೊಟ್ಟಿರೋದು ಮತ್ಯಾರೂ ಅಲ್ಲ ಅದು ನಟ ವಿಜಯ್ ಅವರ ತಂದೆ.. ಹೌದು ವಿಜಯ್ ತಂದೆ ಕೆಜಿಎಫ್ ಸಿನಿಮಾ ನೋಡಿ.. ಸಿನಿಮಾದಲ್ಲಿ ಬಹಳ ಲೋಪದೋಷಗಳಿವೆ ಎಂದಿದ್ದಾರೆ.. ಇದಕ್ಕೆ ಇದೀಗ ನೆಟ್ಟಿಗರೇ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದು ಬೆವರಿಳಿಸಿದ್ದಾರೆ. ತಮ್ಮ ಮಗನ ಸಿನಿಮಾ ಮುಂದೆ ನಿಂತು ಗೆದ್ದ ಕೆಜಿಎಫ್ ಬಗ್ಗೆ ಇಷ್ಟು ಉರಿ ಇರಬೇಕಾದದ್ದೇ ಎಂದೂ ಸಹ ಕೆಲವರು ಟೀಕಿಸಿದ್ದು.. ಒಬ್ಬ ಹಿರಿ ಮನುಷ್ಯನಿಗೆ ಇಷ್ಟೊಂದು ಹೊಟ್ಟೆಉರಿ ಯಾಕೆ ಎಂದೂ ಸಹ‌ ತರಾಟೆಗೆ ತೆಗೆದುಕೊಂಡಿದ್ದಾರೆ..

ಇನ್ನು ಇತ್ತ ಇದೇ ಸಮಯದಲ್ಲಿ ನಮ್ಮ ಕನ್ನಡದ ನಟ ಅನಿರುದ್ಧ್ ಅವರು ಸಹ ಕೆಜಿಎಫ್ ಸಿನಿಮಾ ನೋಡಿ ಸಿ‌ನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಇಂದು ಭಾನುವಾರ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ತಮ್ಮ ಜೊತೆಜೊತೆಯಲಿ ಧಾರಾವಾಹಿ ತಂಡದ ಜೊತೆ ಸಿನಿಮಾ ನೋಡಿದ್ದಾರೆ.. ಹೌದು ಝೇಂಡೆ ಅನು ಮಾನ್ಸಿ ಹರ್ಷವರ್ಧನ್ ಜೊತೆಗೆ ಬೆಂಗಳೂರಿನ ಮಾಲ್ ಒಂದಕ್ಕೆ ತೆರಳಿರುವ ಅನಿರುದ್ಧ್ ಅವರು ಕೆಜಿಎಫ್ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಸಿನಿಮಾ ನೋಡಿ ಸಿಕ್ಕಾಪಟ್ಟೆ ಸಂತೋಷ ವ್ಯಕ್ತ ಪಡಿಸಿರುವ ಅನಿರುದ್ಧ್ ಅವರು “ನಮ್ಮ‌ ಕನ್ನಡದ ಹೆಮ್ಮೆ ಕೆಜಿಎಫ್ ನೋಡಲು ಜೊತೆಜೊತೆಯಲಿ ತೆರಳಿದ್ದೇವೆ.. ಕೆಜಿಎಫ್ ನಮ್ಮ ಸಿನಿಮಾದ ಹೆಮ್ಮೆ ಎಂದಿದ್ದಾರೆ..”

ಹೌದು ನಿನ್ನೆ ರಾತ್ರಿ ಶೋ ಗೆ ತೆರಳಿರುವ ಜೊತೆಜೊತೆಯಲಿ ತಂಡ ಸಿನಿಮಾ ನೋಡಿ ಎಂಜಾಯ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸಿದ್ದಾರೆ.. ಇಷ್ಟೇ.. ನಮ್ಮವರಿಗೆ ನಮ್ಮ ಸಿನಿಮಾ ಖುಷಿ ಆದರೆ ಕೆಲ ಪಕ್ಕದ ಮನೆಯವರಿಗೆ ಲೋಪದೋಷವಂತೆ.. ಸಿನಿಮಾವನ್ನು‌ ಸಿನಿಮಾ ರೀತಿ‌ ನೋಡದೇ ಮನಸ್ಸಿನಲ್ಲಿ‌ ಲೋಪ ದೋಷಗಳನ್ನೇ ತುಂಬಿಕೊಂಡು ನೋಡಿದರೇ ಸಿನಿಮಾ ಕೂಡ ಹಾಗೆ ಅನಿಸಬಹುದು ಬಿಡಿ..