ಜೊತೆಜೊತೆಯಲಿ ವೀಕ್ಷಕರಿಗೆ ಶಾಕಿಂಗ್ ಸುದ್ದಿ.. ಅನಿರುದ್ಧ್ ಪಾತ್ರ ಬದಲಾವಣೆ.. ನಿಜವಾದ ಕಾರಣವೇನು ಗೊತ್ತಾ..

0 views

ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ, ರೇಟಿಂಗ್ ನಲ್ಲಿ ಸಾಕಷ್ಟು ದಾಖಲೆ ಬರೆದ ಜೊತೆಜೊತೆಯಲಿ ಧಾರಾವಾಹಿ ಸಧ್ಯ ಟಿ ಆರ್ ಪಿ‌ ಪ್ರಕಾರ ಕನ್ನಡ ಕಿರುತೆರೆಯ ಟಾಪ್ ನಾಲ್ಕನೇ ಧಾರಾವಾಹಿಯಾಗಿ ಎರಡು ವರ್ಷಗಳಿಂದ ಯಶಸ್ಸಿನ ಪಯಣವನ್ನು ಮುಂದುವರೆಸುತ್ತಿದೆ.. ಜೊತೆಜೊತೆಯಲಿ ಕನ್ನಡ ಕಿರುತೆರೆಯ ಸೂಪರ್ ಹಿಟ್ ಅನ್ನೋದಕ್ಕಿಂತ ಸೆನ್ಸೇಷನಲ್ ಧಾರಾವಾಹಿಯಾಗಿತ್ತು.. ಜೊತೆಜೊತೆಯಲಿ ಧಾರಾವಾಹಿಗೆ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನೂ ಸಹ ಹೊಂದಿತ್ತು.. ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಟ್ರೆಂಡ್ ಸೃಷ್ಟಿ ಮಾಡಿದ್ದ ಧಾರಾವಾಹಿಯೆಂದರೆ ಅದು ಜೊತೆಜೊತೆಯಲಿ ಧಾರಾವಾಹಿಯಾಗಿತ್ತು.. ಆದರೆ ಈಗ ಜೊತೆಜೊತೆಯಲಿ ಧಾರಾವಾಹಿಯ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ..

ಹೌದು ಎಲ್ಲರಿಗೂ ತಿಳಿದಿರುವಂತೆ ಜೊತೆಜೊತೆಯಲಿ ಧಾರಾವಾಹಿ ಕಳೆದ ಎರಡು ವರ್ಷದ ಹಿಂದೆ ಸೆಪ್ಟೆಂಬರ್ ಒಂಭತ್ತರಂದು ತನ್ನ ಪ್ರಸಾರವನ್ನು ಆರಂಭಿಸಿತು.. ಅಂದಿನಿಂದ ಹಿಂತಿರುಗಿ ನೋಡಿದ್ದೇ ಇಲ್ಲ.. ಮೊದಲ ವಾರವೇ 11.8 ಟಿ ಆರ್ ಪಿ ಪಡೆದು ದಾಖಲೆ ಬರೆಯಿತು.. ಇತ್ತ ಅನಿರುದ್ಧ್ ಸ್ಯಾಂಡಲ್ವುಡ್ ನಿಂದ ಕಿರುತೆರೆಗೆ ಕಾಲಿಟ್ಟು ತಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಬ್ರೇಕ್ ಪಡೆದರು.. ಇತ್ತ ಅನು ಹಾಗೂ ಮಿಕ್ಕ ಎಲ್ಲಾ ಪಾತ್ರಧಾರಿಗಳೂ ಸಹ ಜನರ ಮನ ಗೆದ್ದರು.. ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರ ದೊಡ್ಡ ಮಟ್ಟದ ಪ್ರಶಂಸೆ ಪಡೆದುಕೊಂಡಿತು.. ಅನಿರುದ್ಧ್ ಕಿರುತೆರೆಯ ಸೆನ್ಸೇಷನಲ್ ಹೀರೋ ಎಂದು ಹೆಸರು ಪಡೆದರು.. ಇತ್ತ ದಿನದ್ಕ್ಂದ ದಿನಕ್ಕೆ ರೇಟಿಂಗ್ ಅಧಿಕವಾಯಿತು.. ಅಕ್ಕ ಪಕ್ಕದ ಕಿರುತೆರೆ ಇಂಡಸ್ಟ್ರಿಗಳು ಕನ್ನಡದತ್ತ ತಿರುಗಿ ನೋಡುವಂತಾಯಿತು.. ಇನ್ನು ಇತ್ತ ಅನಿರುದ್ಧ್ ಅವರಿಗೆ ಒಂದು ದಿನಕ್ಕೆ ಬರೋಬ್ಬರಿ ಮೂವತ್ತೈದು ಸಾವಿರ ರೂಪಾಯಿ ಸಂಭಾವನೆ ನೀಡುತ್ತಿರುವುದು ಆಗ ದೊಡ್ಡ ಮಟ್ಟದ ಸುದ್ದಿಯಾಗಿತ್ತು..

ಇನ್ನು ಧಾರಾವಾಹಿಯ ವಿಚಾರಕ್ಕೆ ಬಂದರೆ ಜೊತೆಜೊತೆಯಲಿ ಧಾರಾವಾಹಿ ಶುರುವಿನಲ್ಲಿ ಸಿನಿಮಾದಂತೆ ಸಾಗಿ ಮಧ್ಯದಲ್ಲಿ ಕೊಂಚ ಕತೆಯನ್ನು ಎಳೆ ಎಳೆದು ಮುಂದೆ ಸಾಗದೇ ಬೇಸರ ತಂದದ್ದೂ ಉಂಟು.. ಆದರೆ ಇದೀಗ ಮತ್ತೆ ತನ್ನ ರೋಚಕತೆಯ ಶೈಲಿಯಲ್ಲಿಯೇ ಕಂಬ್ಯಾಕ್ ಮಾಡಿದ್ದು ಆರ್ಯವರ್ಧನ್ ಅನು ಮದುವೆಯ ನಂತರದ ಜೀವನ ಸಾಕಷ್ಟು ತಿರುವು ಹಾಗೂ ರೋಚಕತೆಯ ಜೊತೆ ಸಾಗುತ್ತಿದೆ.. ಇನ್ನು ಇತ್ತ ಜೊತೆಜೊತೆಯಲಿ ಧಾರಾವಾಹಿಯಂತಹ ಸೂಪರ್ ಹಿಟ್ ಧಾರಾವಾಹಿಯನ್ನು ನೀಡಿದ ನಿರ್ದೇಶಕ ಅರೂರು ಜಗದೀಶ್ ಅವರು ಸಧ್ಯ ಪುಟ್ಟಕ್ಕನ ಮಕ್ಕಳು ಹೊಸ ಧಾರಾವಾಹಿಯ ಆಅರಥ್ಯ ವಹಿಸಿದ್ದು ಅದೂ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಮೊದಲ ವಾರವೇ ಬರೋಬ್ಬರಿ 13.5 ರೇಟಿಂಗ್ ಪಡೆದು ಭರ್ಜರಿ ಆರಂಭ ಮಾಡಿ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗಿದೆ.. ಒಟ್ಟಿನಲ್ಲಿ ಎರೆಡೆರೆಡು ಸೂಪರ್ ಹಿಟ್ ಧಾರಾವಾಹಿಗಳ ಜೊತೆ ನಿರ್ದೇಶಕ ಆರೂರು ಜಗದೀಶ್ ಅವರು ಸಾಗುತ್ತಿದ್ದಾರೆ..

ಆದರೆ ಇಂತಹ ಸಮಯದಲ್ಲಿ ಜೊತೆಜೊತೆಯಲಿ ಧಾರಾವಾಹಿ ಪ್ರೇಕ್ಷಕರಿಗೆ ಬೇಸರದ ವಿಚಾರವೊಂದು ಹೊರ ಬಂದಿದೆ.. ಹೌದು ಜೊತೆಜೊತೆಯಲಿ ಧಾರಾವಾಹಿಯ ಪ್ರಮುಖ ಆಕರ್ಷಣೆಯೇ ಆರ್ಯವರ್ಧನ್ ಪಾತ್ರ.. ಅದರಲ್ಲಿಯೂ ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರವನ್ನು ನಿಭಾಯಿಸುತ್ತಿದ್ದ ರೀತಿ ಹಾಗೂ ಅವರು ನಡೆದುಕೊಳ್ಳುತ್ತಿದ್ದ ರೀತಿ ಎಲ್ಲವೂ ಸಹ ಯಶಸ್ಸು ತಂದು ಕೊಟ್ಟಿತ್ತು.. ಅವರ ಪಾತ್ರಕ್ಕೆ ಹಾಗೂ ಅವರಿಗೆ ಆದ ಒಂದು ಅಭಿಮಾನಿ ಬಳಗವೂ ಇತ್ತು.. ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಅವರನ್ನು ಬಿಟ್ಟು ಬೇರೆ ಯಾರನ್ನೂ ಸಹ ಊಹಿಸಿಕೊಳ್ಳಲು ಅಸಾಧ್ಯ ಎನ್ನುವಂತಾಗಿತ್ತು.. ಅದರೀಗ ಅರ್ಯವರ್ಧನ್ ಪಾತ್ರದಲ್ಲಿ ಬಹಿದೊಡ್ಡ ಬದಲಾವಣೆ ತರಲಾಗಿದೆ..

ಹೌದು ಆರ್ಯವರ್ಧನ್ ಇಷ್ಟು ದಿನ ಜನರಿಗೆ ಮಾದರಿಯಾಗಿ ಆತನ ಒಳ್ಳೆಯ ಗುಣಗಳನ್ನು ಜನರಿಗೆ ತೋರಲಾಗಿತ್ತು.. ಜನರೂ ಸಹ ಅದನ್ನೇ ಮೆಚ್ಚಿಕೊಂಡಿದ್ದರು.. ಹಾಗೂ ಅವರನ್ನು‌ ಫಾಲೋ ಸಹ ಮಾಡುತ್ತಿದ್ದರು.. ಆದರೆ ಇದೀಗ ಅದೇ ಆರ್ಯವರ್ಧನ್ ಜೊತೆಜೊತೆಯಲಿ ಧರಾವಾಹಿಯಲ್ಲಿ ನಾಯಕನಲ್ಲ ಬದಲಿಗೆ ಆತನೊಬ್ಬ ಖಳನಾಯಕನಾಗಿ ತೋರಲು ನಿರ್ಧರಿಸಲಾಗಿದೆ.. ಹೌದು ಈ ಬಗ್ಗೆ ಅಧಿಮೃತವಾಗಿ ಖುದ್ದು ಅಮಿರುದ್ಧ್ ಅವರೇ ಹೇಳಿಕೊಂಡಿದ್ದು ಜೊತೆಜೊತೆಯಲಿ ಧಾರಾವಾಹಿ ಎಂದರೆ ತಿರುವು.. ನಾನು ನಾಯಕನಾ.. ಖಳ‌ನಾಯಕನಾ.. ಒಬ್ಬ ಕಲಾವಿದನಾಗಿ ಈ ಹೊಸ ಸವಾಲು ನನಗೆ ಸಂತೋಷ ಕೊಡುತ್ತಿದೆ.. ವೀಕ್ಷಿಸುವಾಗ ಖಂಡಿತವಾಗಲೂ ತಾವೂ ಕೂಡ ಸಂತೋಷ ಪಡುತ್ತೀರ.. ಈ ಪ್ರವಶವನ್ನು ನಾವೆಲ್ಲರೂ ಸೇರಿ ಆನಂದಿಸೋಣ.. ಎಂದು ಸಾಮಾಜಿಲ‌ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ..

ಸಧ್ಯ ಇಷ್ಟು ದಿನ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ರನ್ನು ಹೀರೋ ಆಗಿ ತೋರಿಸಿದ್ದ ನಿರ್ದೇಶಕರು ಇದೀಗ ಪಾತ್ರವನ್ನೇ ಸಂಪೂರ್ಣವಾಗಿ ಬದಲಿಸುತ್ತಿದ್ದು ರೋಚಕ ತಿರುವನ್ನೇನೋ ನೀಡುತ್ತಿದ್ದಾರೆ.. ಮದುವೆಯ ಸಂಚಿಕೆಗಳ ಮೂಲಕ ಒಳ್ಳೆಯ ರೇಟಿಂಗ್ ಪಡೆದಿದ್ದ ಧಾರಾವಾಹಿಯಲ್ಲಿ ಇದೀಗ ಹೊಸ ತಿರುವು ನೀಡುವ ಸಲುವಾಗಿ ಈ ರೀತಿ ಕತೆ ಹೆಣೆಯಲಾಗುತ್ತಿದ್ದು ಬದಲಾವಣೆಯನ್ನು ಪ್ರೇಕ್ಷಕರು ಒಪ್ಪಿಕೊಳ್ಳುವರೋ ಕುತೂಹಲವಿದೆ.. ಆದರೆ ಆರ್ಯವರ್ಧನ್ ರ ಒಳ್ಳೆಯ ಗುಣಗಳನ್ನು ಒಪ್ಪಿಕೊಂಡು ಪಾತ್ರವನ್ನು ಇಷ್ಟಪಟ್ಟಿದ್ದ ಪ್ರೇಕ್ಷಕರು ಈ ರೀತಿ‌ ಬದಲಾಗಿ ಖಳ ನಾಯಕನಾಗುವ ಆರ್ಯವರ್ಧನ್ ನನ್ನು ಯಾವ ರೀತಿ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ..