ಮೂರು ವರ್ಷಗಳು.. ಸಾಕಷ್ಟು ಪ್ರೀತಿ.. ಒಂದಷ್ಟು ಅಸಮಾಧಾನ.. ಅನಿರುದ್ಧ್ ಬದುಕು ಬದಲಿಸಿದ ಘಟನೆ.. -ರಮ್ಯ ಜಗತ್ ಮೈಸೂರು..

0 views

ಅನಿರುದ್ಧ್.. ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಎಬ್ಬಿಸಿದ ಜೀ ಕನ್ನಡದ ಧಾರಾವಾಹಿಯೊಂದರ ಪ್ರಮುಖ ಪಾತ್ರಗಳಲ್ಲಿ ಅನಿರುದ್ಧ್ ಎನ್ನುವ ಹೆಸರೂ ಕೂಡ ಒಂದು.. ಕಳೆದ ಮೂರು ವರ್ಷದ ಹಿಂದೆ ತೆಗೆದುಕೊಂಡ ಆ ಒಂದು ನಿರ್ಧರಾದಿಂದಾಗಿ ಇಂದು ಅನಿರುದ್ಧ್ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.. ತಮ್ಮಿಂದ ಬೇರೆ ವಿಚಾರಗಳಲ್ಲಿ ಬದಲಾವಣೆ ಮಾಡುವ ಪ್ರಯತ್ನವೂ ಸಹ ಅನಿರುದ್ಧ್ ಅವರಿಂದ ನಡೆಯುತ್ತಿದೆ ಎಂದರೆ ಸುಳ್ಳಲ್ಲ.. ಆದರೆ ಈ ಮೂರು ವರ್ಷದ ಅವರ ಜರ್ನಿ ನಿಜಕ್ಕೂ ಸಾಕಷ್ಟು ಪ್ರೀತಿ ನೀಡಿದರೆ ಒಂದಷ್ಟು ಅಸಮಾಧಾನವನ್ನೂ ಸಹ ನೀಡಿದ್ದು ಸತ್ಯ.. ಹೌದು ನಿನ್ನೆಗೆ ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎನಿಸಿಕೊಂಡ ಜೊತೆಜೊತೆಯಲಿ ಧಾರಾವಾಹಿ ತನ್ನ ಏಳನೂರು ಸಂಚಿಕೆಗಳನ್ನು ಪೂರೈಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದೆ.. ಈ ಧಾರಾವಾಹಿ ಅನಿರುದ್ಧ್ ಅವರ ವೃತ್ತಿ ಜೀವನವನ್ನೇ ಬದಲಿಸಿದ ಧಾರಾವಾಹಿ ಎಂದರೆ ತಪ್ಪಾಗಲಾರದು‌..

ಶ್ರಮಕ್ಕೆ ತಕ್ಕ ಪ್ರತಿಫಲ.. ಜನರ ಪ್ರೀತಿ.. ಹಣ.. ಯಶಸ್ಸು ಎಲ್ಲವನ್ನೂ ನೀಡಿದೆ.. ಆದರೆ ಈ ಮೂರು ವರ್ಷಗಳ ಅನಿರುದ್ಧ್ ಅವರ ಜರ್ನಿಯನ್ನು ಒಮ್ಮೆ ಹಿಂತಿರುಗಿ ನೋಡಿದಾಗ ಸಾಕಷ್ಟು ರೋಚಕ ಸಂಗತಿಗಳು ಎದುರಾಗುತ್ತವೆ.. ಹೌದು ಅನಿರುದ್ಧ್ ಅವರು ದಶಕಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು‌ ನೀಡಿ ಭರವಸೆಯ ನಟ ಎನಿಸಿಕೊಂಡರೂ ಸಹ ಮುಂದೆ ಅವರ ಸಿನಿಮಾ ಜರ್ನಿ ಅವರು ಅಂದುಕೊಂಡಂತೆ ಇರಲಿಲ್ಲ.. ಸಾಕಷ್ಟು ಸೋಲುಗಳನ್ನು ಕಂಡರು.. ಆದರೆ ತಮ್ಮನ್ನು ತಾವು ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿ ಕೊಂಡು ಕಿರುಚಿತ್ರಗಳ ನಿರ್ದೇಶನದ ಮೂಲಕ ಸಾಕಷ್ಟು ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನೂ ಸಹ ಪಡೆದರು.. ಜೊತೆಗೆ ಭಾರತಿ ವಿಷ್ಣುವರ್ಧನ್ ಅವರ ಕುರಿತ ಸಾಕ್ಷ್ಯ ಚಿತ್ರವನ್ನು ಸಹ ಮಾಡಿದರು.. ಇತ್ತ ಅನಿರುದ್ಧ್ ಅವರ ಪ್ರತಿಯೊಂದು ಏಳು ಬೀಳುಗಳಲ್ಲಿ ಜೊತೆಯಾಗಿ ನಿಂತವರು ಅವರ ಧರ್ಮ ಪತ್ನಿ ಕೀರ್ತಿ ವಿಷ್ಣುವರ್ಧನ್ ಅವರೆಂದರೆ ತಪ್ಪಾಗಲಾರದು.. ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಯಾದರು..

ಆದರೆ ಎಲ್ಲೋ ಒಂದು ಕಡೆ ಕಲಾವಿದನಾಗಿ ಇನ್ನೂ ತನ್ನ ಕನಸುಗಳು ನನಸಾಗಲಿಲ್ಲ ಎನ್ನುವ ಸಣ್ಣದೊಂದು ಕೊರಗು ಮನಸ್ಸಿನಲ್ಲಿ ಇರುವಾಗಲೇ ಬಂದ ಅವಕಾಶ ಜೊತೆಜೊತೆಯಲಿ.. ಆದರೆ ಇದ್ದಕಿದ್ದ ಹಾಗೆ ಸಿನಿಮಾದಿಂದ ಕಿರುತೆರೆಗೆ ಬರುವ ನಿರ್ಧಾರ ಒಮ್ಮೆಲೆ ಮಾಡಲು ಸಾಧ್ಯವೂ ಇರಲಿಲ್ಲ.. ಆಗ ಅನಿರುದ್ಧ್ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಬೆಂಬಲವಾಗಿ ನಿಂತದ್ದು ಮಗಳು ಹಾಗೂ ಅವರ ಪತ್ನಿ.. ಏನೇ ಮಾಡಿದರೂ ಜೊತೆಯಾಗಿ ಇರುವೆವು ಎನ್ನುವ ಪತ್ನಿಯ ಮಾತಿನ ಜೊತೆಗೆ ಕಿರುತೆರೆಗೆ ಕಾಲಿಟ್ಟ ಅನಿರುದ್ಧ್ ಅವರು ಒಂದೇ ವಾರದಲ್ಲಿ ಕನ್ನಡ ಕಿರುತೆರೆಯ ಸೆನ್ಸೇಷನಲ್ ಹೀರೋ ಆದರು.. ಜೊತೆಜೊತೆಯಲಿ ಧಾರಾವಾಹಿ ಸೆನ್ಸೇಷನಲ್ ಧಾರಾವಾಹಿಯಾಯಿತು..

ದಾಖಲೆಯ ರೇಟಿಂಗ್ ಪಡೆದುಕೊಂಡು ಅಕ್ಕ ಪಕ್ಕದ ಕಿರುತೆರೆಯವರೂ ಸಹ ಕನ್ನಡದ ಜೊತೆಜೊತೆಯಲಿ ಧಾರಾವಾಹಿಯ ಬಗ್ಗೆ ಮಾತನಾಡುವಂತಾಯಿತು.. ಆದರೆ ಈ ಸಕ್ಸಸ್ ನ ಹಿಂದೆ ದುಡಿದ ಕೈಗಳು ಮಾತ್ರ ನೂರಾರು.. ಪ್ರಮುಖವಾಗಿ ಈ ಧಾರಾವಾಹಿಯ ಬಗ್ಗೆ ಕನಸು ಕಂಡದ್ದು ಜೀ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರು.. ಅದನ್ನು ಯಥಾವತ್ತಾಗಿ ತೆರೆಯ ಮೇಲೆ ಮ್ಯಾಜಿಕ್ ರೀತಿಯಲ್ಲಿ ತಂದವರು ನಿರ್ದೇಶಕ ಹಾಗೂ ನಿರ್ಮಾಪಕರಾದ ಆರೂರು ಜಗದೀಶ್ ಅವರು.. ಇನ್ನು ಈ ಧಾರಾವಾಹಿಗಾಗಿ ಜೀ ವಾಹಿನಿಯ ಫಿಕ್ಷನ್ ತಂಡ ಆರೂರು ಜಗದೀಶ್ ಅವರ ತಂಡ.. ಹೀಗೆ ಸಾಕಷ್ಟು ಜನರ ಪರಿಶ್ರಮ.. ಮತ್ತು ಅನಿರುದ್ಧ್, ಮೇಘಾ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಆ ಎಲ್ಲರ ಕನಸಿಗೆ ಜೀವ ತುಂಬಿ ಅಭಿನಯಿಸುವ ಮೂಲಕ ಧಾರಾವಾಹಿ ದೊಡ್ಡ ಮಟ್ಟದ ಯಶಸ್ಸು ಪಡೆಯುವಂತಾಯಿತು..

ಇನ್ನು ಧಾರಾವಾಹಿಯಲ್ಲಿ ಸಾಕಷ್ಟು ಸಾಮಾಜಿಕ ಕಳಕಳಿಯುಳ್ಳ ಸಂದೇಶಗಳನ್ನು ನೀಡಿ ಅನೇಕರಿಗೆ ಸ್ಪೂರ್ತಿಯಾಯಿತು.. ಇನ್ನು ಇತ್ತ ಅನಿರುದ್ಧ್ ಅವರ ಜರ್ನಿ ನೋಡುವುದಾದರೆ ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಅವರ ಆದರ್ಶ ವ್ಯಕ್ತಿತ್ವ ತೋರುತಿತ್ತು.. ತಮ್ಮ ಅಭಿಮಾನಿಗಳನ್ನು ಅವರ ಅಭಿಮಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡ ಅನಿರುದ್ಧ್ ಅವರು ಜನರು ತಾವಿದ್ದಲ್ಲಿಯೇ ಗಿಡಗಳನ್ನು ನೆಡುವ ಅಭಿಯಾನ.. ಸರ್ಕಾರಿ ಶಾಲೆಗಳಿಗೆ ಪುಸ್ತಕ ಪೆನ್ನುಗಳನ್ನು ನೀಡುವ ಅಭಿಯಾನ.. ಹೀಗೆ ಸಾಕಷ್ಟು ರೀತಿಯಲ್ಲಿ ಸಾಮಾಜಿಕ ಕಳಕಳಿ ತೋರಿದರು.. ಇದೆಲ್ಲದರ ಜೊತೆಗೆ ಅತೊದೊಡ್ಡದಾಗಿ ಬೆಳೆದು ನಿಂತದ್ದು ಅನಿರುದ್ಧ್ ಅವರ ಸ್ವಚ್ಛತೆಯಲ್ಲಿ ನಾನೂ ಸಹಭಾಗಿ ಎನ್ನುವ ಅಭಿಯಾನ.. ಸ್ವಚ್ಛತೆ ಅನ್ನೋದು ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ತಿಳಿದಿದ್ದರೂ ಸಹ.. ಸುಮ್ಮನೆ ಕೂತರೂ ಸಹ ಏನೂ ಆಗೋದಿಲ್ಲ ಎನ್ನುವುದನ್ನು ಅರಿತ ಅನಿರುದ್ಧ್ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕವೇ ಸಾಕಷ್ಟು ಜಾಗೃತಿ ಮೂಡಿಸಿದರು.. ಜನರು ಸಹ ಇದಕ್ಕೆ ಕೈ ಜೋಡಿಸಿದರು..

ಕಳೆದ ಎರಡೂ- ಎರಡೂ ವರೆ ವರ್ಷದಿಂದಲೂ ಈ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು ನಿಜಕ್ಕೂ ಮೆಚ್ಚುವಂತದ್ದು.. ಆದರೆ ಈ ಅಭಿಯಾನದ ಜರ್ನಿಯಲ್ಲಿ ಕೆಲವರು ಅನಿರುದ್ಧ್ ಅವರ ಮೇಲೆ ಅಸಮಧಾನ ವ್ಯಕ್ತ ಪಡಿಸಿದ್ದೂ ಉಂಟು.. ಆದರೆ ಅದ್ಯಾವುದಕ್ಕೂ ಪ್ರಾಮುಖ್ಯತೆ ನೀಡದೇ ತಮ್ಮ ಪಾಡಿಗೆ ತಾವು ತಮ್ಮ ಗುರಿಯನ್ನು ಮಾತ್ರ ಬಿಡಲಿಲ್ಲ.. ಗುರಿ ಎನ್ನುವುದಕ್ಕಿಂತ ಇದೊಂದು ಜರ್ನಿ ಎನ್ನಬಹುದು.. ದಿನನಿತ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ವಚ್ಚತಾ ಅಭಿಯಾನದ ಸಾಕಷ್ಟು ಪೋಸ್ಟ್ ಗಳನ್ನು ಹಂಚಿಕೊಳ್ಳುವರು.. ಅದೇ ರೀತಿ ಸಾಕಷ್ಟು ಅಧಿಕಾರಿಗಳು ಸಹ ಅನಿರುದ್ಧ್ ಅವರ ಮನವಿಗಳಿಗೆ ಸ್ಪಂದಿಸಿ ತಕ್ಷಣ ಸ್ವಚ್ಛತಾ ಕೆಲಸಗಳು ಕಾರ್ಯ ರೂಪಕ್ಕೆ ಬರುವಂತೆ ಮಾಡಿದ್ದೂ ಉಂಟು.. ಇನ್ನು ಈ ಸ್ವಚ್ಛತಾ ಕೆಲಸಕ್ಕೆ ಪ್ರಮುಖ ಆಧಾರವೆಂದರೆ ಅದು ಪೌರ ಕಾರ್ಮಿಕರು ಎಂದು ಸಾಕಷ್ಟು ಪೌರ ಕಾರ್ಮಿಕರುಗಳನ್ನು ಅನಿರುದ್ಧ್ ಅವರು ಹಾಗೂ ಕೀರ್ತಿ ವಿಷ್ಣುವರ್ಧನ್ ಅವರು ಸನ್ಮಾನಿಸಿ ಅವರಿಗೆ ಗೌರವದಿಂದ ಉಡುಗೊರೆ ನೀಡಿ ಕೃತಜ್ಞತೆ ಹೇಳುವ ಅವರ ಗುಣ ಮೆಚ್ಚುವಂತದ್ದು..

ಇನ್ನು ಧಾರಾವಾಹಿಯ ವಿಚಾರಕ್ಕೆ ಬರುವುದಾದರೆ ಕಲಾವಿದರಿಗೆ ಪಾತ್ರದಲ್ಲಿ ಯಾವುದೇ ಬದಲಾವಣೆಯಾದರೂ ಸಹ ಅದನ್ನು ಸವಾಲಾಗಿ ತೆಗೆದುಕೊಂಡು ಸೈ ಎನಿಸಿಕೊಳ್ಳಬೇಕಾಗಿರುವುದಷ್ಟೇ ಮುಖ್ಯ ಎಂದು ಅರಿತಿರುವ ಅನಿರುದ್ಧ್ ಅವರು ಸಧ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿನ ಬದಲಾವಣೆಯನ್ನು ಒಪ್ಪಿಕೊಂಡು ಅದ್ಭುತವಾಗಿ ಅಭಿನಯಿಸುತ್ತಿದ್ದು ತಮ್ಮ ಜೊತೆಜೊತೆಯಲಿಯ ಯಶಸ್ಸಿನ ಜರ್ನಿಯನ್ನು ಮುಂದುವರೆಸುತ್ತಿದ್ದಾರೆ.. ಇನ್ನು ಸಧ್ಯ ಜೊತೆಜೊತೆಯಲಿ ಧಾರಾವಾಹಿ ಏಳನೂರು ಸಂಚಿಕೆ ಪೂರ್ಣಗೊಂಡ ಕಾರಣ ಧಾರಾವಾಹಿ ತಂಡ ಸಂಭ್ರಮದಲ್ಲಿದ್ದು ಅನಿರುದ್ಧ್ ಅವರು ಪ್ರೇಕ್ಷಕರಿಗೆ, ಜೀ ಕನ್ನಡ ವಾಹಿನಿಯ ಮುಖ್ಯಸ್ಥರಿಗೆ ಫಿಕ್ಷನ್ ತಂಡಕ್ಕೆ ಹಾಗೂ ನಿರ್ದೇಶಕರಿಗೆ ಮತ್ತು ಧಾರಾವಾಹಿಯ ಸಂಪೂರ್ಣ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಎಬ್ಬಿಸಿದ್ದ ಜೊತೆಜೊತೆಯಲಿ ಧಾರಾವಾಹಿ ಮತ್ತೊಂದು ಮೈಲಿಗಲ್ಲಿನಲ್ಲಿ ಬಂದು ನಿಂತಿದ್ದು ಈ ಯಶಸ್ಸಿನ ಜರ್ನಿ ಹೀಗೆ ಸಾಗಲಿ.. ಕನ್ನಡ ಕಿರುತೆರೆ ಒಳ್ಳೆಯ ಧಾರಾವಾಹಿಗಳು ಒಳ್ಳೆಯ ಶೋಗಳ ಮೂಲಕ ಯಶಸ್ಸಿನ ಉತ್ತುಂಗಕ್ಕೇರಲಿ ಎನ್ನುವುದೇ ಕನ್ನಡ ಕಿರುತೆರೆ ಪ್ರಿಯರ ಹಾರೈಕೆ.. -ರಮ್ಯ ಜಗತ್, ಮೈಸೂರು..