ನಲವತ್ತೆಂಟನೇ ವಯಸ್ಸಿಗೆ ಮಾಡಿರುವ ಸಾಧನೆ ಬಗ್ಗೆ ಸಂತೋಷ ಹಂಚಿಕೊಂಡ ನಟ ಅನಿರುದ್ಧ್..

0 views

ಅನಿರುದ್ಧ್.. ಸ್ಯಾಂಡಲ್ವುಡ್ ನಟನಾದರೂ ಕೂಡ ಕನ್ನಡ ಕಿರುತೆರೆಯಲ್ಲಿ ಬಹಳ ದೊಡ್ಡ ಮಟ್ಟದ ಯಶಸ್ಸು ಪಡೆದ ಕಲಾವಿದ.. ಸಿನಿಮಾ ಮಾತ್ರವಲ್ಲದೇ ರಂಗಭೂಮಿ ಕಲಾವಿದನಾಗಿ ನಿರ್ದೇಶಕನಾಗಿ ಬರಹಗಾರನಾಗಿ ಗುರುತಿಸಿಕೊಂಡಿದ್ದ ಅನಿರುದ್ಧ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯನಾದರೂ ಸಹ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ.. ಶುರುವಿನಲ್ಲಿ ಕೆಲವೊಂದು ಸಿನಿಮಾಗಳು ಹಿಟ್ ಆದವು.. ಮತ್ತೊಂದು ಕಡೆ ವಿಷ್ಣುವರ್ಧನ್ ಅವರೂ ಸಹ ತಮ್ಮ ಜೊತೆಗೆ ಎರಡು ಸಿನಿಮಾಗಳಲ್ಲಿ ಅನಿರುದ್ಧ್ ಅವರಿಗೆ ಪ್ರಮುಖ ಪಾತ್ರ ನೀಡಿದರು.. ಆದರೂ ಸಹ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನಿಲ್ಲಲೂ ಬಹಳಷ್ಟು ಕಷ್ಟ ಪಟ್ಟಿದ್ದು ನಿಜ.. ಇನ್ನು ಹೀಗಿರುವಾಗ ಎರಡು ವರ್ಷದ ಹಿಂದೆ ಕಿರುತೆರೆಗೆ ಜೊತೆಜೊತೆಯಲಿ ಧಾರಾವಾಹಿ ಮೂಲಕ ಕಾಲಿಟ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದರು..ಕಿರುತೆರೆಯ ಸೆನ್ಸೇಷನಲ್ ಹೀರೋ ಎನಿಸಿಕೊಂಡರು..

ಮತ್ತೊಂದು ಕಡೆ ಧಾರಾವಾಹಿ ದೊಡ್ಡ ಮಟ್ಟದ ರೇಟಿಂಗ್ ಪಡೆದು ದಾಖಲೆ ಬರೆಯಿತು.. ಸಾಮಾಜಿಕ ಜಾಲತಾಣದ ತುಂಬೆಲ್ಲಾ ಅನಿರುದ್ಧ್ ಅವರ ಕುರಿತ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.. ಇನ್ನು ಇತ್ತ ಧಾರಾವಾಹಿಯಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯು ಸಮಾಜಿಕ ಕಳಕಳಿಯುಳ್ಳು ಅನಿರುದ್ಧ್ ಸಾಕಷ್ಟು ಅಭಿಯಾನಗಳನ್ನು ಮಾಡಿ ಯಶಸ್ವಿಯಾಗಿರುವುದೂ ಉಂಟು.. ಇನ್ನು ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಬಹಳ ಮೆಚ್ಚುಗೆ ಗಳಿಸಿದ್ದು ಸಧ್ಯ ಸಾಕಷ್ಟು ರೋಚಕ ತಿರುವುಗಳ ಜೊತೆ ಕತೆ ಸಾಗುತ್ತಿದೆ..

ಇನ್ನು ಇತ್ತ ಅನಿರುದ್ಧ್ ಅವರ ವ್ಯಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ ಅನಿರುದ್ಧ್ ಅವರು ತಮ್ಮ ಜೀವನದ ಹಾಗೂ ತಮ್ಮ ಮಕ್ಕಳ ಕುರಿತ ಆಗುಹೋಗುಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.. ಅದೇ ರೀತಿ ಇದೀಗ ಸಂತೋಷದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಅನಿರುದ್ಧ್ ಅವರಿಗೆ ಸಧ್ಯ ನಲವತ್ತೆಂಟು ವರ್ಷ ವಯಸ್ಸಾಗಿದ್ದು ಸಾದರೆ ಸಾಧನೆ ಮಾಡಲು ವಯಸ್ಸು ಯಾವುದೇ ಅಡ್ಡಿಯಿಲ್ಲ ಎಂಬುದನ್ನು ತೋರಿದ್ದಾರೆ.. ಹೌದು ಅನಿರುಧ್ ಅವರು ಮಾಡಿರುವ ಸಾಧನೆಗಳ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ..

“ನಮಸ್ತೆ.. ನನ್ನ ಸಾಕ್ಷ್ಯಚಿತ್ರ ಬಾಳೇ ಬಂಗಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆಗಳನ್ನು ಸ್ಥಾಪಿಸಿರುವೆನೆಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತ್ಯಂತ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ.. ಬದುಕಿರುವ ಮೇರು ನಟಿಯೊಬ್ಬರ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ.. ಭಾರತದ ಕರ್ನಾಟಕದಲ್ಲಿರುವ ಅನಿರುದ್ಧ ಹರ್ಷವರ್ಧನ ಜತ್ಕರರವರು ಫೆಬ್ರವರಿ 16, 1974 ರಂದು ಜನನ.. ಬದುಕಿರುವ ಭಾರತದ ಮೇರು ನಟಿಯ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ಬಾಳೇ ಬಂಗಾರದ ಪರಿಕಲ್ಪನೆ, ಸಂಶೋಧನೆ, ಲೇಖನ, ನಿರೂಪಣೆ ಹಾಗೂ ನಿರ್ದೇಶನದ ದಾಖಲೆ ಸ್ಥಾಪಿಸಿದ್ದಾರೆ.

ಕೀರ್ತಿ ಇನ್ನೋವೇಷನ್ಸ್ ನಿರ್ಮಾಣದ ಕನ್ನಡ ಭಾಷೆಯ ಆಂಗ್ಲ ಅಡಿಬರಹಗಳನ್ನು ಹೊಂದಿದ 141.49 ನಿಮಿಷಗಳ ಕಾಲದ ಸಾಕ್ಷ್ಯಚಿತ್ರ ಬಾಳೇ ಬಂಗಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಭಾರತಿ ವಿಷ್ಣುವರ್ಧನ್ ರವರ ಜೀವನವನ್ನು ಕಟ್ಟಿಕೊಡುತ್ತದೆ.ಈ ಸಾಕ್ಷ್ಯಚಿತ್ರವನ್ನು ನೋಡಲು ನೀವು ಕಾತುರರಾಗಿದ್ದೀರಿ ಎಂದು ನನಗೆ ಗೊತ್ತು. ಅತಿ ಶೀಘ್ರದಲ್ಲೇ ನಿಮ್ಮ ನೆಚ್ಚಿನ ವೇದಿಕೆಗಳಲ್ಲಿ ಇದನ್ನು ತಾವು ನೋಡಬಹುದು..‌ ಈ ದಾಖಲೆಗಳೂ ಸೇರಿದಂತೆ, ಇದುವರೆಗೂ ನಾನು ಇಪ್ಪತ್ತು ದಾಖಲೆಗಳನ್ನು ಸ್ಥಾಪಿಸಿದ್ದೇನೆ..” ಎಂದು ಹೇಳಿಕೊಂಡು ಸಂತೋಷ ಹಂಚಿಕೊಂಡಿದ್ದು ಅಭಿಮಾನಿಗಳು ಸ್ನೇಹಿತರು ಅಭಿನಂದಿಸಿದ್ದಾರೆ..