ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಜೊತೆಜೊತೆಯಲಿ ಧಾರಾವಾಹಿ ಶುರುವಿನಲ್ಲಿ ಅಬ್ಬರಿಸಿದ್ದು ಧಾರಾವಾಹಿಯಲ್ಲಿ ಅಭಿನಯಿಸಿದ್ದ ಕಲಾವಿದರೆಲ್ಲರೂ ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.. ಒಂದೇ ವಾರಕ್ಕೆ ಕಿರುತೆರೆಯಲ್ಲಿ ದಾಖಲೆ ಬರೆದು ಮನೆಮಾತಾದರು.. ಎರಡು ವರ್ಷಗಳ ಕಾಲ ಬಹುತೇಕ ಕನ್ನಡ ಕಿರುತೆರೆಯ ಟಾಪ್ ಒಂದು ಅಥವಾ ಎರಡನೇ ಸ್ಥಾನದಲ್ಲಿಯೇ ಮುಂದುವರೆದು ಯಶಸ್ಸನ್ನು ಪಡೆದರು.. ಈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ಅನಿರುದ್ಧ್ ಅವರು ಸಹ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ವಿಚಾರ ಎಲ್ಲರಿಗೂ ತಿಳಿದೇ ಇದೆ..

ಇನ್ನು ಇದೀಗ ಅನಿರುದ್ಧ್ ಅವರು ಧಾರಾವಾಹಿ, ವ್ಯಯಕ್ತಿಕ ಜೀವನ, ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳು, ಅವರು ಪಡೆಯುತ್ತಿರುವ ಸಂಭಾವನೆ ಹೀಗೆ ನಾನಾ ವಿಚಾರವಾಗಿ ಅನಿರುದ್ಧ್ ಅವರು ಸುದ್ದಿಯಾಗಿದ್ದರು.. ಸಿನಿಮಾದಲ್ಲಿ ಕಾಣದ ಯಶಸ್ಸನ್ನು ಸತತ ಪರಿಶ್ರಮದ ಮೂಲಕ ಆರ್ಯವರ್ಧನ್ ಆಗಿ ದೊಡ್ಡ ಯಶಸ್ಸು ಪಡೆದುಕೊಂಡರು.. ಆದರೀಗ ಅನಿರುದ್ಧ್ ಅವರ ಮೊದಲ ಪತ್ನಿ ನಟಿ ಸೋನು ಗೌಡ ಎಂಬ ವಿಚಾರ ಬಯಲಾಗಿದೆ..

ಹೌದು ಜೊತೆಜೊತೆಯಲಿ ಧಾರಾವಾಹಿ ಕಳೆದ ಕೆಲ ತಿಂಗಳುಗಳಿಂದ ಆರ್ಯವರ್ಧನ್ ಹೀರೋ ಅಲ್ಲ ಬದಲಿಗೆ ವಿಲನ್ ಎನ್ನುವ ರೀತಿಯಲ್ಲಿ ತೋರಲು ಶುರು ಮಾಡಿದಾಗಿನಿಂದ ಜನರು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.. ಅದೇ ಕಾರಣಕ್ಕೆ ಇದೀಗ ಕತೆಯನ್ನು ಕೊಂಚ ವೇಗವಾಗಿ ಓಡಿಸಿ ಧಾರಾವಾಹಿಯಲ್ಲಿ ಆರ್ಯವರ್ಧನ್ ರ ಮೊದಲ ಪತ್ಂಕ್ ರಾಜನಂದಿನಿಯನ್ನು ಕರೆತರಲಾಗಿದ್ದು ನಿನ್ನೆ ಇಂದ ಈ ಪಾತ್ರವನ್ನು ಬಯಲು ಮಾಡಲಾಗಿದೆ.. ಹೌದು ಧಾರಾವಾಹಿಯಲ್ಲಿ ರಾಜನಂದಿನಿಯ ಎಂಟ್ರಿಯಾಗಿದ್ದು ಧಾರಾವಾಹಿ ಮತ್ತಷ್ಟು ರೋಚಕತೆಯಿಂದ ಕೂಡಿದೆ.. ಇತ್ತ ಆರ್ಯನ ಮೇಲೆ ಅನುಮಾನ ಹಾಗೂ ಅಸಮಾಧಾನವಿದ್ದ ಅನುವಿಗೆ ಆರ್ಯ ತನ್ನ ಸೀಕ್ರೆಟ್ ರೂಮಿನೊಳಗೆ ಕರೆದುಕೊಂಡು ಹೋಗಿದ್ದು ಅಲ್ಲಿ ರಾಜನಂದಿನಿ ಯಾರು ಎಂಬ ವಿಚಾರ ಬಯಲಾಗಿದೆ..

ಹೌದು ಆರ್ಯವರ್ಧನನ ಮೊದಲ ಪತ್ನಿ ರಾಜನಂದಿನಿಯಾಗಿ ಸೋನು ಗೌಡ ಎಂಟ್ರಿಯಾಗಿದ್ದು ಇತ್ತ ಆರ್ಯವರ್ಧನ್ ಕೂಡ ಇಪ್ಪತ್ತೈದು ವರ್ಷದ ಹಿಂದಿನ ಲುಕ್ ಗೆ ಮರಳಿದ್ದಾರೆ.. ಇನ್ನು ಸಿನಿಮಾ ಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸೋನು ಗೌಡ ಇದೀಗ ಕಿರುತೆರೆಗೆ ಅದರಲ್ಲೂ ಅದಾಗಲೇ ಸೂಪರ್ ಹಿಟ್ ಆಗಿರುವ ಜೊತೆಜೊತೆಯಲಿ ಧಾರಾವಾಹಿಯ ಗಟ್ಟಿಯಾದ ಪ್ರಮುಖ ಪಾತ್ರ ರಾಜನಂದಿನಿ ಮೂಲಕ ಎಂಟ್ರಿ ನೀಡಿದ್ದು ಇನ್ನು ಕೆಲ ತಿಂಗಳುಗಳ ಕಾಲ ರಾಜನಂದಿನಿ ಹಾಗೂ ಆರ್ಯವರ್ಧನ್ ರ ಸಂಚಿಕೆ ಪ್ರಸಾರವಾಗಲಿದೆ..

ಇತ್ತ ಸುಭಾಷ್ ಪಾಟೀಲ್ ಯಾರೆಂಬ ವಿಚಾರ ಅನುಗೆ ತಿಳಿದಿದ್ದರೂ ತಿಳಿಯದಂತಿದ್ದು ಅತ್ತ ತನ್ನ ಹಳೆಯ ಕತೆ ಹೇಳುತ್ತಿರುವ ಆರ್ಯವರ್ಧನ್ ಕತೆಯ ಜೊತೆಗೆ ತನ್ನ ಹಳೆಯ ಹೆಸರನ್ನೂ ಸಹ ಹೇಳಿದರೆ ಇತ್ತ ಕಂಪನಿಯಲ್ಲಿ ಮೋಸ ಮಾಡಿದ ಸುಭಾಶ್ ಪಾಟೀಲ್ ತಾನೇ ಎಂಬ ವಿಚಾರವನ್ನು ತಾನೇ ಒಪ್ಪಿಕೊಂಡಂತಾಗುತ್ತದೆ.. ಅಲ್ಲಿಯಾದರೂ ಅನು ಮುಂದೆ ನಿಜ ಹೇಳುವರಾ ಅಥವಾ ಅದರಲ್ಲಿಯೂ ಒಂದಷ್ಟು ಕತೆ ಕಟ್ಟಿ ಸುಳ್ಳನ್ನೇ ಹೇಳುವರಾ ಕಾದು ನೋಡಬೇಕಿದೆ..

ಒಟ್ಟಿನಲ್ಲಿ ಕೆಲವೇ ದಿನಗಳ ಹಿಂದಷ್ಟೇ ಆರ್ಯವರ್ಧನ್ ಪಾತ್ರವನ್ನು ನೆಗಟಿವ್ ಪಾತ್ರವನ್ನಾಗಿ ತೋರಲು ಶುರು ಮಾಡುತ್ತಿದ್ದಂತೆ ಧಾರಾವಾಹಿ ನೋಡುತ್ತಿದ್ದ ಅನೇಕರು ಧಾರಾವಾಹಿಯನ್ನು ನೋಡೋದಿಲ್ಲ ಎಂದಿದ್ದರು.. ಆದರೀಗ ಸುಭಾಶ್ ಪಾಟೀಲ್ ಹಾಗೂ ರಾಜನಂದಿನಿ ಪಾತ್ರದ ಎಂಟ್ರಿ ಬಹಳಷ್ಟು ಕುತೂಹಲ ಮೂಡಿಸಿದ್ದು ಅವರೆಲ್ಲರೂ ಮತ್ತೆ ಕುತೂಹಲದಿಂದ ಧಾರಾವಾಹಿ ನೋಡುವಂತಾಗಿದೆ.. ರಾಜನಂದಿನಿ ರಹಸ್ಯ ಸಧ್ಯದಲ್ಲಿಯೇ ತೆರೆ ಮೇಲೆ ಪ್ರಸಾರವಾಗಲಿದೆ.