ಅನಿರುದ್ಧ್ ಹೇಳಿದ ಒಂದೇ ಒಂದು ಮಾತಿಗೆ ಏನೆಲ್ಲಾ ಆಗಿದೆ ನೋಡಿ..

0 views

ಮನುಷ್ಯನಿಗೆ ಸ್ಟಾರ್ ಪಟ್ಟ ಬಂದೊಡನೆ ಅಹಂಕಾರ ಬಂದ ಉದಾಹರಣೆಗಳು ಬಹಳಷ್ಟಿದೆ.. ಆದರೆ ಇಲ್ಲೊಬ್ಬ ನಟನಿದ್ದಾರೆ.. ತಾನೆಷ್ಟು ದೊಡ್ಡವರಾಗಿ ಬೆಳೆದರೂ ಸಹ ತಾವು ಮಾಡುವ ಕೆಲಸ ಕಾರ್ಯಗಳಿಂದ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.. ಹೌದು ಆತ ಮತ್ಯಾರೂ ಅಲ್ಲ ಸೆನ್ಸೇಷನಲ್ ಸ್ಟಾರ್ ಅನಿರುದ್ಧ್ ಅವರು.. ಹೌದು ಈ ಮೊದಲೂ ಸಹ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಸಹ.. ಕನ್ನಡ ನಾಡಿನ ಸೂಪರ್ ಸ್ಟಾರ್ ಕುಟುಂಬದ ಸದಸ್ಯರಾದರೂ ಸಹ ಒಂದಿಷ್ಟೂ ಅಹಂಕಾರ ತೋರದ ವ್ಯಕ್ತಿತ್ವವುಳ್ಳ ಅನಿರುದ್ಧ್ ಅವರು ಕಳೆದ ವರ್ಷ ಕಿರುತೆರೆಗೆ ಕಾಲಿಟ್ಟ ಬಳಿಕ ಸೆನ್ಸೇಷನಲ್ ಸ್ಟಾರ್ ಪಟ್ಟ ಪಡೆದರು.. ಇಷ್ಟೆಲ್ಲಾ ಹೆಸರು ಮಾಡಿದಾಗಿಯೂ ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.. ಅನಿರುದ್ಧ್ ಅವರು ಆಡಿದ ಒಂದು ಮಾತಿಗೆ ಎಷ್ಟೆಲ್ಲಾ ಬದಲಾವಣೆಯಾಗಿದೆ ನೋಡಿ..

ಹೌದು ಅನಿರುದ್ಧ್ ಅವರು ಮೊದಲಿನಿಂದಲೂ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳಲ್ಲಿ ತೊಡಗಿಕೊಂಡವರು.. ಅದರಲ್ಲೂ ಸ್ವಚ್ಛತೆಯ ಕುರಿತಾಗಿ ಬಹಳಷ್ಟು ಕಾಳಜಿ ವಹಿಸುವ ಅನಿರುದ್ಧ್ ಅವರು ಆಗಾಗ ಕಸದ ರಾಶಿ ಕಂಡ ಜಾಗಗಳ ಫೋಟೋಗಳನ್ನು ತೆಗೆದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಖುದ್ದಾಗಿ ಕಳುಹಿಸಿ ಆ ಜಾಗಗಳನ್ನು ಸ್ವಚ್ಛ ಮಾಡಲು ಕೈ ಜೋಡಿಸುತ್ತಿದ್ದರು.. ಕೆಲ ದಿನಗಳ ಹಿಂದಷ್ಟೇ ಅನಿರುದ್ಧ್ ಅವರು ಹಾಗೂ ಕೀರ್ತಿ ವಿಷ್ಣುವರ್ಧನ್ ಅವರು ಪೌರ ಕಾರ್ಮಿಕರನ್ನು‌ ಸನ್ಮಾನಿಸಿ ಉಡುಗೊರೆ ನೀಡಿ ಗೌರವಿಸಿದ್ದರು..

ತದನಂತರದಲ್ಲಿ ಜನರಿಂದಲೂ ಅನಿರುದ್ಧ್ ಅವರ ಕೆಲಸಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಅನಿರುದ್ಧ್ ಅವರು ಎಲ್ಲರಿಗೂ ತಮ್ಮ ತಮ್ಮ ಜಾಗಗಳನ್ನು ಸುತ್ತ ಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಅರಿವು ಮೂಡಿಸ ತೊಡಗಿದರು.. ಸ್ವಚ್ಛತೆಗಾಗಿ ನಾನೂ ಸಹಭಾಗಿ ಎಂಬ ವಾಕ್ಯವನ್ನು ವೀಡಿಯೋ ಮೂಲಕ ಹಂಚಿಕೊಂಡರು.. ಜೊತೆಗೆ ಸ್ನೇಹಿತರು ಅಭಿಮಾನಿಗಳು ಪ್ರೀತಿ‌ಪಾತ್ರರೆಲ್ಲರಲ್ಲೂ ಸ್ವಚ್ಛತೆಗಾಗಿ ಸಹಕರಿಸುವಂತೆ ಮನವಿ ಮಾಡಿದರು..

ಅನಿರುದ್ಧ್ ಅವರು ಹೇಳಿದ ಆ ಒಂದು ಮಾತು ಇದೀಗ ಮ್ಯಾಜಿಕ್ ಅನ್ನೇ ಮಾಡಿತೆನ್ನಬಹುದು.. ಹೌದು ಅನಿರುದ್ಧ್ ಅವರ ಮಾತಿಗೆ ಬೆಂಬಲ ಸೂಚಿಸಿ ನಿರ್ದೇಶಕ ರಘುರಾಮ್ ಅವರು.. ನಟ ಸುನೀಲ್ ಅವರು.. ಗಾಯಕಿ ಶಮಿತಾ ಮಲ್ನಾಡ್ ಅವರು.. ಮಂಡ್ಯ ರಮೇಶ್ ಅವರು.. ಬಿಬಿಎಂಪಿ ಮಾರ್ಷಲ್ ಗಳು.. ಮಾಸ್ಟರ್ ಆನಂದ್ ಅವರು.. ವುಮೆನ್ ಆಫ್ ವಿಸ್ಡಮ್ ತಂಡದವರು.. ಹಾಗೂ ಜೊತೆಜೊತೆಯಲಿ ಧಾರಾವಾಹಿ ತಂಡದವರಾದ ನಿರ್ದೇಶಕರಾದ ಆರೂರು ಜಗದೀಶ್ ಅವರು.. ರಾಮ್ ವೈದ್ಯ ಅವರು.. ಸತ್ಯಕಿ ಅವರು.. ಛಾಯಾಗ್ರಾಹಕ ಸಂತೋಷ್ ಅವರು..‌ ಬರಹಗಾರ್ತಿ ರಶ್ಮಿ ಅವರು ಹಾಗೂ ಕಲಾವಿದರಾದ ವಿಜಯಲಕ್ಷ್ಮಿ ಸಿಂಗ್ ಅವರು.. ಅನು.. ಹರ್ಷವರ್ಧನ್.. ರಮ್ಯಾ.. ಸುಬ್ಬು.. ಪುಷ್ಪ.. ಜೇಂಡೆ.. ಕಿರಣ್.. ಹೀಗೆ ಇನ್ನು ಅನೇಕರು ಸ್ವಚ್ಛತೆಯ ಪ್ರಮಾಣ ಮಾಡಿ ಸ್ವಚ್ಛತೆಗಾಗಿ ನಾನೂ ಸಹಭಾಗಿ ಎಂಬ ಮಾತನ್ನು ಆಡುವ ಮೂಲಕ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಸಹಕರಿಸುವುದಾಗಿ ತಿಳಿಸಿ ಇತರರಿಗೂ ಅರಿವು ಮೂಡಿಸಿದ್ದಾರೆ..

ಇನ್ನು ಅನಿರುದ್ಧ್ ಅವರ ಪ್ರತಿಯೊಂದು ಕೆಲಸಕ್ಕೂ ಬೆಂಬಲವಾಗಿ ನಿಲ್ಲುವ ಅನಿರುದ್ಧ್ ಅವರ ಮಡದಿ ಕೀರ್ತಿ ವಿಷ್ಣುವರ್ಧನ್ ಅವರೂ ಸಹ ಈ ಬಗ್ಗೆ ಪ್ರತಿಜ್ಞೆ ಮಾಡಿದ್ದು ಅವರೂ ಸಹ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.. ನಿಜಕ್ಕೂ ತನಗೆ ಹಣ ಹೆಸರು ಬಂದರೆ ಸಾಕು ಮಿಕ್ಕೆಲ್ಲದರ ಬಗ್ಗೆ ನಮಗ್ಯಾಕೆ ಎನ್ನುವ ಈ ಕಾಲದಲ್ಲಿ ನಮ್ಮ ನಾಡು.. ನಮ್ಮ ದೇಶದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಅರಿವು ಮೂಡಿಸುತ್ತಿರುವ ಅನಿರುದ್ಧ್ ಅವರ ಗುಣ ನಿಜಕ್ಕೂ ಮೆಚ್ಚುವಂತದ್ದು..

ಇನ್ನು ಅನಿರುದ್ಧ್ ಅವರ ಪೋಸ್ಟ್ ಗಳಿಗೆ.. ನಿಮ್ಮಿಂದ ಎಲ್ಲವೂ ಸಾಧ್ಯ ಸರ್ ಎಂದು ಕಮೆಂಟ್ ಮಾಡಿದ ಬಹಳಷ್ಟು ಅಭಿಮಾನಿಗಳಿಗೆ ಉತ್ತರ ನೀಡಿರುವ ಅನಿರುದ್ಧ್ ಅವರು.. ಇಲ್ಲಿ ಯಾರೂ ಸಹ ದೊಡ್ಡವರಲ್ಲ… ಎಲ್ಲರಲ್ಲಿಯೂ ಒಂದೊಂದು ಶಕ್ತಿ ಇದೆ.. ನಿಮ್ಮಿಂದಲೂ ಇದು ಸಾಧ್ಯ.. ನಿಮ್ಮೊಳಗೂ ಒಂದು ಪವರ್ ಇದೆ.. ನೀವು ಸಹ ಎಲ್ಲರಲ್ಲಿಯೂ ಅರಿವು ಮೂಡಿಸಿ ಸಹಭಾಗಿಯಾಗಿ.. ಇದು ಎಲ್ಲರ ಕರ್ತವ್ಯ ಎಂದು ಪ್ರೇರೇಪಿಸಿದ್ದು ನಿಜಕ್ಕೂ ಅನಿರುದ್ಧ್ ಅವರ ದೊಡ್ಡಗುಣ ಎನ್ನಬಹುದು..

ಒಟ್ಟಿನಲ್ಲಿ ಅನಿರುದ್ಧ್ ಅವರ ಈ ಒಳ್ಳೆಯ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಸೋಣ.. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಸಹಕರಿಸೋಣ.. ಸ್ವಚ್ಛ ಭಾರತ ಮೊದಲು ನಮ್ಮಿಂದಲೇ ಶುರುವಾಗಬೇಕು.. ಅಂದುಕೊಂಡರೆ ಎಲ್ಲವೂ ಸಾಧ್ಯ.. ನಿಮ್ಮ ಈ ಒಳ್ಳೆಯ ಕೆಲಸಕ್ಕೆ ಕನ್ನಡಿಗರ ಪರವಾಗಿ ಶುಭವಾಗಲಿ ಸರ್..