ಅಂದು ಮಠಕ್ಕೆ ಬಂದು ಮೊಟ್ಟೆ ತಿಂತೀನಿ ಎಂದಿದ್ದ ವಿದ್ಯಾರ್ಥಿನಿ ಏನಾದಳು ಗೊತ್ತಾ..

0 views

ರಾಜ್ಯದಲ್ಲಿ ಕೆಲ ವಾರಗಳಿಂದ ಈ ಮೊಟ್ಟೆಯ ವಿಚಾರ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು.. ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚು ಮಾಡುವ ಸಲುವಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ನೀಡುವ ನಿರ್ಧಾರವನ್ನು ಮಾಡಲಾಗಿತ್ತು.. ಅದೇ ರೀತಿ ಪ್ರತಿದಿನ ವಿತರಣೆಯೂ ಸಹ ನಡೆದಿತ್ತು.. ಆದರೆ ಈ ನಿರ್ಧಾರ ಕೈಗೊಂಡ ಕೆಲವೇ ದಿನಗಳಲ್ಲಿ ಇದಕ್ಕೆ ಕೆಲವರು ವಿರೋಧವನ್ನು ವ್ಯಕ್ತಪಡಿಸಿದರು.. ಅದರಲ್ಲಿಯೂ ಮಠಗಳಲ್ಲಿ ಶ್ರೀಗಳು ಸಾಕಷ್ಟು ಮಂದಿ ಇದಕ್ಕೆ ಬಹಳ ತೀವ್ರವಾದ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದರು.. ಈ ವಿಚಾರ ಕಾವೇರುತ್ತಿದ್ದಂತೆ.. ಅದರಲ್ಲಿಯೂ ಮೊಟ್ಟೆ ಕೊಡಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದಂತೆ ಇತ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಮಕ್ಕಳಿಗೆ ಮೊಟ್ಟೆ ಕೊಡಬೇಕು ಎಂದಿದ್ದರು.. ಇನ್ನು ಈ ರೀತಿ ಪ್ರತಿಭಟನೆ ನಡೆಸುವಾಗ ವಿದ್ಯಾರ್ಥಿಯೊಬ್ಬಳು ನೀವು ಇದೇ ರೀತಿ ಮಾತನಾಡುತ್ತಿದ್ದರೆ ನಾನು ಮಠಕ್ಕೆ ಬಂದು ಮೊಟ್ಟೆ ತಿಂತೀನಿ ಏನು ಮಾಡ್ತೀರಾ ಎಂದು ಸಹ ಸವಾಲು ಹಾಕಿದ್ದಳು..

ಈ ವಿದ್ಯಾರ್ಥಿನಿ ಮಾತನಾಡಿದ್ದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.. ಆದರೆ ಆನಂತರ ಸಾಕಷ್ಟು ಬೆಳವಣಿಗೆಗಳು ನಡೆದಿವೆ.. ಹೌದು ಅಷ್ಟಕ್ಕೂ ಆ ವಿದ್ಯಾರ್ಥಿನಿ ಏನಾದಳು.. ಹೌದು ಒಂದು ಕಡೆ ಕೊರೊನಾದಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗಳೆಲ್ಲಾ ಮುಚ್ಚಿ ಹೋಗಿ ಇತ್ತೀಚೆಗೆ ಎಲ್ಲವೂ ಮೊದಲಿನಂತಾಗುತ್ತಿದ್ದು ಶಾಲೆಗಳು ಸಹ ಪು‌ನರಾರಂಭವಾಗುತ್ತಿದೆ‌.. ಎಷ್ಟೋ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಮನೆಯಲ್ಲಿ ಸರಿಯಾದ ಊಟವಿಲ್ಲದೇ ಸರ್ಕಾರಿ ಶಾಲೆಗಳಲ್ಲಿ ಕೊಡುವ ಬಿಸಿಯೂಟದಿಂದಲೇ ಎಷ್ಟೋ ಮಕ್ಕಳು ಹಸಿವು ನೀಗಿಸಿಕೊಳ್ಳುತ್ತಿದ್ದು ಅಕ್ಷರಶಃ ಸತ್ಯದ ಮಾತು.. ಹಾಗೆಯೇ ಶಾಲೆಗಳು ಮುಚ್ಚಿದಾಗ ಊಟಕ್ಕೂ ಬಹಳ ಕಷ್ಟಪಟ್ಟಿದ್ದೂ ಉಂಟು.. ಇನ್ನು ಈಗ ಊಟದ ಜೊತೆಗೆ ಮೊಟ್ಟೆ ಕೊಡುತ್ತಿರುವುದರಿಂದ ಒಂದು ವರ್ಗದ ಜನರು ಬಹಳ ಸಂತೋಷ ಪಟ್ಟರೆ ಮತ್ತೊಂದು ವರ್ಗ ಅದರಲ್ಲೂ ಮಠಾಧೀಶರುಗಳು ವಿರೋಧಿಸಿದ್ದರು..

ಆ ಸಮಯದಲ್ಲಿ ಮಠಾಧೀಶರ ಮಾತನ್ನು ವಿರೋಧಿಸಿ ಹೀಗೆ ಮಾತನಾಡಿದರೆ ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಎಂದಿದ್ದ ವಿದ್ಯಾರ್ಥಿನಿ ಮತ್ಯಾರೂ ಅಲ್ಲ ಆಕೆಯ ಹೆಸರು ಅಂಜಲಿ.. ಹೌದು ಅಂಜಲಿ ಆ ದಿನ ಆಡಿದ ಮಾತುಗಳು “ತತ್ತಿ ತಿಂದರೇನೇ ನಾವೆಲ್ಲಾ ಬದುಕೋದು.. ನಾವೆಲ್ಲಾ ಉಳಿಯೋದು ಬೇಕಾ ಇಲ್ಲಾ ನಿಮಗೆ ಮೊಟ್ಟೆ ಕೊಡೋದನ್ನು ನಿಲ್ಲಿಸೋದೆ ಮುಖ್ಯಾನಾ ಹೇಳಿ.. ನೀವು ಇದಕ್ಕೆ ಒಪ್ಪಿಕೊಂಡಿಲ್ಲ ಅಂದ್ರೆ ನಾವ್ ಹೀಗೆ ಮುಂದುವರೆಸ್ತೀವಿ.. ನಮಗೆಲ್ಲಾ ಶಿಕ್ಷಕರಿಲ್ಲಾ ಪೋಷಕರಿಲ್ಲಾ ಅಂತ ಅಂದುಕೊಳ್ಳಬೇಡಿ.. ನಮಗೆ ಎಲ್ಲಾರೂ ಇದಾರೆ.. ಎಲ್ಲಾರೂ ನಮಗೆ ಬೆಂಬಲವಾಗಿ ಇದ್ದಾರೆ.. ನೀವೇನಾದ್ರು ನಮಗೆ ಮೊಟ್ಟೆ ಕೊಡಬೇಡಿ ಅಂದ್ರೆ ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗ್ತೀವಿ.. ಬೇಕಾ ಇದೆಲ್ಲಾ.. ಬೇಡ ತಾನೆ.. ಮತ್ತೆ ನಮಗೆ ಮೊಟ್ಟೆ ಕೊಡಬೇಕು ಅಷ್ಟೇ..

ಮಕ್ಕಳನ್ನ ದೇವರು ಅಂತೀರಿ.. ಮಕ್ಕಳು ಮೊಟ್ಟೆ ಕೇಳಿದ್ರೆ ಕೊಡಬಾರದು ಅಂತೀರಿ.. ಇದು ಸರೀನಾ.. ನಾವು ರೋಡಿಗ್ ಬಂದು ಈ ರೀತಿ ಮಾಡಿ ಮೊಟ್ಟೆ ಕೊಡಿ ಅಂತ ಕೇಳ್ಬೇಕಾ.. ನಿಮಗೆ ಸರಿ ಅನ್ಸತ್ತಾ.. ನಿಮ್ಮ ಮಕ್ಕಳು ಸಹ ಇದೇ ತರ ರೋಡಿಗೆ ಬಂದ್ರೆ ಚೆನ್ನಾಗ್ ಅನ್ಸತ್ತಾ.. ಎಂದಿದ್ದಳು.. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಮಾತನಾಡಿದ್ದರು.. ಕೆಲವರು ಬೆಂಬಲಿಸಿದರೆ ಮತ್ತಷ್ಟು ಮಂದಿ ಈಕೆಯ ಮಾತುಗಳನ್ನು ಟೀಕಿಸಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಈ ಎಲ್ಲಾ ಮಾತುಗಳನ್ನು ನೋಡಿ ನೀನು ಆ ರೀತಿ ಮಠಕ್ಕೆ ಹೋಗಿ ಮೊಟ್ಟೆ ತಿಂತೀನಿ ಅನ್ನೋ ಮಾತನ್ನು ಆಡಬಾರದಿತ್ತು ಎಂದೂ ಸಹ ಹೇಳಿದರು..

ಇಷ್ಟೆಲ್ಲಾ ಬೆಳವಣಿಗೆಗಳಾದ ಮೇಲೆ ಈ ಬಗ್ಗೆ ಮಾದ್ಯಮದ ಜೊತೆ ಮಾತನಾಡಿದ ಅಂಜಲಿ ತನ್ನ ಮಾತುಗಳಿಗೆ ಸ್ಪಷ್ಟನೆ ನೀಡಿದ್ದಳು.. ಹೌದು “ನಾವ್ ಹಂಗ್ ಹೇಳಿದ್ವಿ ಅಂತ ನಾವೇನು ಮಠಕ್ಕೆ ಬಂದು ಮೊಟ್ಟೆ ತಿನ್ನಲ್ಲ.. ನಮಗೂ ತಿಳುವಳಿಕೆ ಇದೆ.. ನೀವ್ ವಿರೋಧ ಮಾಡಿದ್ದಕ್ಕೆ ನಾವು ವಿರೋಧ ಮಾಡಿದ್ದು.. ಡಾಕ್ಟರ್ ಕೂಡ ಏನಾದ್ರು ಆದ್ರೆ ಮೊಟ್ಟೆ ತಿನ್ನಿ ಅಂತಾರೆ.. ಈಗ ಸರ್ಕಾರನೇ ನಮಗೆ ಕೊಡ್ತಾ ಇದೆ.. ಮೊಟ್ಟೆ ತಿನ್ನಲ್ಲಾ ಅನ್ನೋರಿಗೆ ಬಾಳೆಹಣ್ಣು ಕೊಡ್ತಾ ಇದ್ದಾರೆ.. ಅದಕ್ಕೋಸ್ಕರ ನಾನು ಮಾತಾಡಿದ್ದು.. ಸ್ವಾಮಿಜಿಗಳು ನೀವುಗಳು ವಿರೋಧ ಮಾಡಬೇಡಿ.. ಎಂದು ಸ್ಪಷ್ಟನೆ ನೀಡಿದ್ದಾರೆ..

ಇನ್ನು ಈ ಸ್ಪಷ್ಟನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ನಂತರ “ಮಠಕ್ಕೆ ಬಂದು ಮೊಟ್ಟೆ ತಿನ್ನಲ್ಲ” ಎಂದ ಅಂಜಲಿಯ ಅಷ್ಟೇ ಅಷ್ಟು ಮಾತುಗಳನ್ನು ಮಾತ್ರ ಪೋಸ್ಟ್ ಮಾಡಿ ಇದೆಲ್ಲಾ ಬೇಕಿತ್ತಾ ನಿನಗೆ ಎಂದೂ ಸಹ ಟೀಕಿಸಲಾಗುತ್ತಿದೆ.. ಆದರೆ ಇತ್ತ ವಾಸ್ತವವನ್ನು ಅರಿತು ಇಂತಹ ವಿಚಾರಗಳನ್ನು ದೊಡ್ಡದು ಮಾಡುವುದನ್ನು ಬಿಟ್ಟು ಒಳ್ಳೆಯ ಶಿಕ್ಷಣ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಅದನ್ನು ಸರಿ ಮಾಡುವುದರ ಬಗ್ಗೆ ಚರ್ಚೆ ಮಾಡಿ ಎನ್ನುವುದು ನೆಟ್ಟಿಗರ ಮಾತು.. ಮೊಟ್ಟೆ ತಿನ್ನುವವರಿಗೆ ಮೊಟ್ಟೆ ತಿನ್ನದೇ ಇರುವವರಿಗೆ ಬಾಳೆ ಹಣ್ಣು ಮತ್ತು ಚಿಕ್ಕಿಯನ್ನು ಕೊಡಲಾಗುತ್ತಿದ್ದು.. ತಿನ್ನೋ ಮಕ್ಕಳ ಆಹಾರವನ್ನು ಯಾಕೆ ಈ ರೀತಿ ವಿರೋಧ ಮಾಡುವಿರಿ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ.. ಒಟ್ಟಿನಲ್ಲಿ ಒಂದು ಮೊಟ್ಟೆಯ ಕತೆ ಸಧ್ಯಕ್ಕೆ ಮುಗಿಯಲಾರದ ಕತೆಯಾಗಿದೆ..