ಹದಿನೆಂಟು ಹುಡುಗರನ್ನು ಮದುವೆಯಾದ ಈ ಸುಂದರಿ ಮಾಡಿರುವ ಕೆಲಸ ನೋಡಿ‌‌.. ಶಾಕ್ ಆಗ್ತೀರಾ..

0 views

ಮದುವೆ ಅನ್ನೋ ಹೆಸರಿನಲ್ಲಿ ಸಾಕಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿದೆ ಎಂಬ ಸುದ್ದಿಯನ್ನು ಆಗಾಗ ಪತ್ರಿಕೆಗಳಲ್ಲಿ ನ್ಯೂಸ್ ಚಾನಲ್ ಗಳಲ್ಲಿ ನೋಡುತ್ತಿರುತ್ತೇವೆ.. ಆದರೆ ಅಲ್ಲಲ್ಲಿ ಹೆಣ್ಣು ಮಕ್ಕಳಿಂದಲೂ ಗಂಡ್ ಹೈಕಳು ಮೋಸ ಹೋಗಿರುತ್ತಾರೆ ಎಂಬುದು ಬೆಳಕಿಗೆ ಬರುತ್ತಿರುತ್ತದೆ.. ಆದರೆ ಇದೆಲ್ಲದಕ್ಕೂ ಮೀರಿ ಇಲ್ಲೊಬ್ಬ ಹೆಣ್ಣು ಮಗಳು ಬರೋಬ್ಬರಿ ಹದಿನೆಂಟು ಪುರುಷರನ್ನು ಮದುವೆಯಾಗಿ ಮಾಡಿರುವ ಕೆಲಸ ನೋಡಿದ್ರೆ ನಿಜಕ್ಕೂ ಆಶ್ವರ್ಯವಾಗುತ್ತದೆ..

ಹೌದು ಈ ಸುಂದರಿಯ ಹೆಸರು ಅಂಜಲಿ.. ಈಕೆಯೇ ಹದಿನೆಂಟು ಹುಡುಗರನ್ನು ಪ್ರೀತಿಸಿ ಎಲ್ಲರೊಂದಿಗೂ ಮದುವೆಯಾಗಿ ಅವರುಗಳ ಎಲ್ಲರ ಜೊತೆ ಸಂಸಾರವನ್ನೂ ಸಹ ಮಾಡಿ ಕೊನೆಗೆ ಎಲ್ಲರಿಗೂ ಕೈ ಕೊಟ್ಟು ಮಾಡಿರುವ ಕೆಲಸ ಮಾತ್ರ ಇದೀಗ ಎಲ್ಲಾ ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ..

ಹೌದು ಈಕೆ ಹದಿನೆಂಟು ಪುರುಷರನ್ನು ಪ್ರೀತಿಸಿ ಮದುವೆಯಾಗಿ.. ಅವರೊಟ್ಟಿಗೆ ಸಂಸಾರವನ್ನೂ ಸಹ ಮಾಡಿ ಕೊನೆಗೆ ಆ ಮನೆಯಿಂದಲೇ ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.. ಈ ಅಂಜಲಿಯ ಕಸುಬೇ ಇದಾಗಿದ್ದು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದಾಳೆ..

ಹೌದು ಈ ಅಂಜಲಿ ರಾಜಸ್ಥಾನದವಳು.. ಹುಡುಗರನ್ನು ಪ್ರೀತಿಸಿ ಮದುವೆಯಾಗುವುದೇ ಈಕೆಯ ಬಂಡವಾಳವಾಗಿತ್ತು.. ಅದೇ ರೀತಿ ಸುಮಾರು ಹದಿನೆಂಟು ಪುರುಷರ ಜೊತೆ ಮದುವೆಯಾಗಿ ಇದೇ ಕೆಲಸ ಮಾಡಿ ಹಣ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಳು.. ಆದರೆ ಕೆಟ್ಟದ್ದು ಒಂದಲ್ಲಾ ಒಂದು ದಿನ ಸಿಕ್ಕಿಕೊಳ್ಳಲೇಬೇಕಿರುವುದರಿಂದ ಈಗ ಸಿಕ್ಕಿಬಿದ್ದಿದ್ದಾಳೆ.. ಹೌದು ಜುನಾಗಡದ ಅಂಬಾಲಿ ಯುವಕನನ್ನು ಮದುವೆಯಾಗಿದ್ದ ಈಕೆ ಅವನ ಮನೆಯಲ್ಲಿ ಐದು ಲಕ್ಷ ಹಣದ ಜೊತೆಗೆ ಚಿನ್ನವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ.. ಘಟನೆ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಯುವಕ ಆಕೆಯ ವಿರುದ್ಧ ದೂರು ನೀಡಿದ್ದನು..

ತನಿಖೆ ನಡೆಸಿದ ಪೊಲೀಸರು ಅಂಜಲಿಯನ್ನು ಆಕೆಯ ಗ್ಯಾಂಗ್ ಸಮೇತ ಹಿಡಿದು ಹಾಕಿದ್ದಾರೆ.. ಪೊಲೀಸರಿಗೆ ಸಿಕ್ಕಿಬಿದ್ದ ಅಂಜಲಿ ತನ್ನ ಹದಿನೆಂಟು ಮದುವೆಗಳ ಹಿಸ್ಟರಿಯನ್ನು ತೆಗೆದಿಟ್ಟಿದ್ದಾಳೆ.. ಈಕೆಯ ಜೊತೆ ಒಂದು ಗ್ಯಾಂಗೇ ಇದ್ದು ಗುಜರಾತ್ ಮದ್ಯಪ್ರದೇಶ ಹಾಗೂ ಇನ್ನಿತರ ರಾಜ್ಯದ ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಅವರುಗಳ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡು ಗ್ಯಾಂಗ್ ಸಮೇತ ಪರಾರಿಯಾಗುತ್ತಿದ್ದರು.. ಇದೀಗ ಪೊಲೀಸರಿಗೆ ಅತಿಥಿಯಾಗಿದ್ದಾರೆ..