ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಜೀವ ಕಳೆದುಕೊಂಡ ಬೆಂಗಳೂರಿನ ಯುವತಿ.. ಹೊರಬಿತ್ತು ಆಕೆ ಬರೆದ ಪತ್ರದಲ್ಲಿನ ಸತ್ಯ..

0 views

ತಂದೆ ತಾಯಿ ಕಷ್ಟ ಪಟ್ಟು ತಮಗೆ ಎಷ್ಟೇ ಕಷ್ಟವಾದರೂ ಮಕ್ಕಳು ಚೆನ್ನಾಗಿ ಓದಲಿ ಎಂದು ತಮ್ಮ ಕೈ ಮೀರಿ ಸಾಲ ಸೋಲ ಮಾಡಿ ದೊಡ್ಡ ದೊಡ್ಡ ಪದವಿ ಪಡೆಯಲೆಂದು ಕಾಲೇಜಿಗೆ ಸೇರಿಸುವರು.. ಆದರೆ ಅದೇ ವಯಸ್ಸಿನಲ್ಲಿ ಮೂಡುವ ಆಸೆಗಳಿಗೆ ಕಡಿವಾಣ ಹಾಕಿಕೊಳ್ಳದ ಮಕ್ಕಳು ಪ್ರೀತಿಯ ಬಲೆಯಲ್ಲಿ ಬಿದ್ದು ಅಪ್ಪ ಅಮ್ಮನನ್ನೂ ವಿರೋಧಿಸಿ ಅಷ್ಟೂ ವರ್ಷ ಅಪ್ಪ ಅಮ್ಮ ಪಟ್ಟ ಕಷ್ಟಕ್ಕೆ ಎಳ್ಳು ನೀರು ಬಿಟ್ಟು ಮದುವೆಯನ್ನು ತಮ್ಮಿಷ್ಟದಂತೆ ಮಾಡಿಕೊಳ್ಳುವರು.. ಈ ರೀತಿ ಮದುವೆ ಮಾಡಿಕೊಂಡ ನಂತರ ಒಳ್ಳೆಯ ಜೀವನ ಕಟ್ಟಿಕೊಂಡರೆ ನಿಜಕ್ಕೂ ಆ ಹೆತ್ತವರಿಗಿಂತ ಹೆಚ್ಚು ಸಂತೋಷ ಪಡುವವರು ಮತ್ತೊಬ್ಬರಿಲ್ಲ.. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾಗಿ ಜೀವನ ಹಾಳಾದರೂ ಸಹ ಕೊನೆಗೆ ಕೊರಗುವುದು ಅದೇ ಹೆತ್ತವರೇ.. ಅದೇ ರೀತಿ ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಮನಕಲಕುವಂತಿದೆ..

ಹೌದು ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಬದುಕು ಮುಗಿಸಿದ ಹೆಣ್ಣಿನ ಕತೆಯ ಹಿಂದಿನ ಅಸಲಿ ಸತ್ಯಗಳು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಹೌದು ಈ ಹೆಣ್ಣು ಮಗಳ ಹೆಸರು ಅಂಜು.. ಈಕೆ ಸಿವಿಲ್ ಇಂಜಿನಿಯರಿಂಗ್ ಓದಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.. ಅಂಜು ಕಡೂರು ತಾಲೂಕಿನ ಬೋಳನ ಹಳ್ಳಿಯ ರವಿಕುಮಾರ್ ಹಾಗೂ ಹೇಮಾವತಿ ಎಂಬುವವರ ಮಗಳು.. ಅಂಜು ತಾನು ಇಂಜಿನಿಯರಿಂಗ್ ಓದುವಾಗಲೇ ಅರಕಲಗೂಡು ನಿವಾಸಿ ಅಂಜನ್ ಕಣಿಯಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು.. ಇಬ್ಬರೂ ಸಹ ಪರಸ್ಪರ ಪ್ರೀತಿಸಿ ಅಪ್ಪ ಅಮ್ಮನ ವಿರೋಧವಿದ್ದರೂಸಹ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾದರು.. ಬೇರೆ ದಾರಿ ಇಲ್ಲದೇ ಅಪ್ಪ ಅಮ್ಮ ಮಗಳ ಮದುವೆಗೆ ಒಪ್ಪಿಕೊಂಡರು.. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಅಂಜು ಹಾಗೂ ಅಂಜನ್ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..

ಆದರೆ ಹೊಸ ಜೀವನದ ಪಯಣ ಆರಂಭಿಸಿದ ಅಂಜು ನಾಲ್ಕೇ ತಿಂಗಳಿಗೆ ತನ್ನ ಜೀವನದ ಪಯಣವನ್ನೇ ಮುಗಿಸಿ ಬಿಡುತ್ತಾಳೆಂದು ಯಾರೂ ಸಹ ಕನಸಿನಲ್ಲಿಯೂ ಊಹಿಸಿರಲಿಲ್ಲ.. ಆದರೆ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಂಜು ದುಡುಕಿನ ನಿರ್ಧಾರ ಮಾಡಿಯೇ ಬಿಟ್ಟಳು.. ನಾಲ್ಕೇ ತಿಂಗಳಿಗೆ ದಾಂಪತ್ಯದ ಬದುಕು ಸಾಕಾಗಿ ಹೋಗಿತ್ತು.. ಕೊನೆಯುಸಿರೆಳೆದೇ ಬಿಟ್ಟಳು.. ಆದರೆ ಹೋಗುವ ಮುನ್ನ ತನ್ನ ತಾಯಿಗೆ ಪತ್ರವೊಂದನ್ನು ಬರೆದಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ..

ಹೌದು ಅಂಜು ಅಗಲಿಕೆಯ ನಂತರ ಅಂಜನ್ ಅಂಜು ಗೆ ಹಣಕ್ಕಾಗಿ ಪೀಡಿಸುತ್ತಿದ್ದ.. ತಿಂಗಳ ಹಿಂದೆ ನನ್ನ ಬಳಿ ಕಷ್ಟ ಹೇಳಿಕೊಂಡಿದ್ದಳು ಎಂದು ಅಂಜು ತಾಯಿ ಆರೋಪಿಸಿದ್ದರು.. ಇದೀಗ ಅಂಜು ಕೊನೆಯದಾಗಿ ಬರೆದ ಪತ್ರ ಹೊರಬಿದ್ದಿದೆ.. ಹೌದು “ನನ್ನ ಈ ನಿರ್ಧಾರಕ್ಕೆ ನಾನೇ ಕಾರಣ.. ನನ್ನ ಮಮಸ್ಥಿತಿ ಸರಿ ಇಲ್ಲ.. ಏನು ಮಾಡ್ತಿದ್ದೀನಿ ಗೊತ್ತಾಗ್ತಿಲ್ಲ.. ಅಂಜನ್ ಐ ಡೋಂಟ್ ನೋ ವಾಟ್ ಐ ಆಮ್ ಡೂಯಿಂಗ್.. ನನಗೆ ಬೆನ್ನು ನೋವಿದೆ ಹೇಳಿಕೊಳ್ಳಲು ಆಗ್ತಿಲ್ಲ.. ನೀನು ಕೋಪ ಹಠ ಮಾಡಿಕೊಳ್ಳುತ್ತಿದ್ದೆ.. ನನಗೆ ಬಹಳ ಹರ್ಟ್ ಆಗುತಿತ್ತು.. ನೀನು ನನ್ನ ಜೊತೆ ಇದ್ದರೂ ಸಹ ದೂರ ಇದ್ದಂತೆ ಅನ್ನಿಸ್ತಾ ಇದೆ.. ಏನೂ ಗೊತ್ತಾಗ್ತಿಲ್ಲಾ.. ಬಾಯ್.. ನಾನು ಇನ್ನು ಯಾವತ್ತೂ ನಿನಗೆ ಹಿಂಸೆ ಕೊಡೋದಕ್ಕೆ ಹೋಗೋದಿಲ್ಲ.. ಅಮ್ಮಾ ಐ ಲವ್ ಯೂ.. ಹಠ ಮಾಡಿಕೊಂಡು ಇಲ್ಲಿಗೆ ಬಂದೆ.. ಈಗ ಹಠ ಮಾಡಿಕೊಂಡೇ ಇಲ್ಲಿಂದ ಹೋಗ್ತಾ ಇದ್ದೀನಿ.. ಅಮ್ಮಾ ನನ್ನನ್ನು ದಯವಿಟ್ಟು ಕ್ಷಮಿಸಿಬಿಡು.. ಎಂದು ಬರೆದಿದ್ದಾರೆ..

ಇತ್ತ ಅಂಜು ಗಂಡ ಅಂಜನ್ ಕೂಡ ಪೊಲೀಸರಿಗೆ ಹೇಳಿಕೆ ನೀಡಿದ್ದು “ನಿನ್ನೆ ಬೆಳಗ್ಗೆ ನಾನು ಸಂಬಂಧಿಕರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರ ಜೊತೆ ಹೋಗಿದ್ದೆ.. ಅಂಜು ಮನೆಯಲ್ಲಿಯೇ ಇದ್ದಳು.. ಈ ವೇಳೆ ಈ ನಿರ್ಧಾರ ಮಾಡಿದ್ದಾಳೆ.. ನಾವು ಕಾರ್ಯಕ್ರಮ ಮುಗಿಸಿ ಸಂಜೆ ಆರು ಗಂಟೆಗೆ ವಾಪಸ್ ಬಂದಾಗ ಈ ವಿಚಾರ ತಿಳಿದಿದೆ.. ಎಂದಿದ್ದಾರೆ..

ಅಂಜು‌ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಲಾಗುತಿತ್ತು ಎಂದು ತಿಳಿದು ಬಂದಿದೆ.. ಆದರೆ ಅಂಜುವಿನ ಈ ನಿರ್ಧಾರಕ್ಕೆ ನಿಜವಾದ ಕಾರಣವೇನು.. ಸಣ್ಣ ಅನಾರೋಗ್ಯಕ್ಕೆ ಹೆದರಿ ಇಂತಹ ನಿರ್ಧಾರ ಮಾಡಿದರೋ ಅಥವಾ ಪೋಷಕರ ಆರೋಪ ನಿಜವಾ ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ಹೊರ ಬರಬೇಕಿದೆ.. ಸಂಗಾತಿಯ ಸ್ಪರ್ಷದಿಂದ ಅರಳಬೇಕಾದ ಹೂವೊಂದು ಅರಳುವ ಹೊತ್ತಿನಲ್ಲಿಯೇ ಒಂಟಿತನ ಕಾಡಿ ಮನಸ್ಸಿನ ಭಾವನೆಗಳು ತೊಳಲಾಟವನ್ನು ಎದುರಿಸಲಾಗದೇ ಬಾಡಿ ಹೋಯಿತು.. ಹೆಣ್ಣಾಗಲಿ ಗಂಡಾಗಲಿ ಮದುವೆ ಎಂಬ ನಿರ್ಧಾರ ತಡವಾದರೂ ಸರಿಯಾಗಿರುವಂತೆ ನೋಡಿಕೊಳ್ಲೂವುದು ಉತ್ತಮ..