ಅಮ್ಮನೇ ಮಗುವನ್ನು ಬಿಟ್ಟು ಹೋದಳು.. ಕೆಲಸ ಮಾಡದೆ ಆ ಮಗು ಒಂದು ರೂಪಾಯಿಯೂ ಯಾರಿಂದಲೂ ಪಡೆಯಲ್ಲ.. ನಾಯಿಯೇ ಈ ಪುಟ್ಟ ಹುಡುಗನಿಗೆಲ್ಲಾ.. ಮನಕಲಕುವ ಸುದ್ದಿ‌‌ ನೋಡಿ..

0 views

ಎಷ್ಟೇ ವಯಸ್ಸಾದರೂ.. ನಾವೆಷ್ಟೇ ದುಡಿದರೂ.. ದೊಡ್ಡ ಮನುಷ್ಯರಾದರೂ ಯಾವುದಾದರೂ ಒಂದು ಸಂದರ್ಭದಲ್ಲಿಯಾದರೂ ಅಮ್ಮ ಬೇಕು ಎನಿಸಿಬಿಡುತ್ತದೆ.. ಅಂತಹುದರಲ್ಲಿ ಪುಟ್ಟ ವಯಸ್ಸಿನಲ್ಲಿಯೇ ಅಪ್ಪ ಅಮ್ಮನಿಲ್ಲದೇ ಪಡುವ ಕಷ್ಟ ಮಾತ್ರ ಯಾವ ಶತ್ರುವಿಗೂ ಬೇಡ.. ಆದರೆ ಇಲ್ಲೊಂದು ಅಂತಹುದೇ ಮನಕಲಕುವ ಘಟನೆ ನಡೆದಿದೆ.. ಈ ಪುಟ್ಟ ಹುಡುಗನಿಗೆ ನಾಯಿ ಬಿಟ್ಟರೆ ಬೇರೆ ಯಾರೂ ಬಂಧುಗಳಿಲ್ಲ.. ಆದರೂ ಸ್ವಾಭಿಮಾನ ಇವನನ್ನು ಬಿಟ್ಟಿಲ್ಲ..

ಹೌದು ಈ ಹುಡುಗನ ಹೆಸರು ಅಂಕಿತ್.. ವಯಸ್ಸಿನ್ನೂ ಒಂಭತ್ತು.. ಅಪ್ಪ ಜೈ ಲಿನಲ್ಲಿ ಇದ್ದಾರಂತೆ.. ಅಮ್ಮ ಬಿಟ್ಟು ಹೋಗಿದ್ದಾರೆ.. ಎಂದಷ್ಟೇ ಈ ಹುಡುಗನಿಗೆ ತಿಳಿದಿದೆ.. ಇದನ್ನು ಹೊರತು ಪಡಿಸಿ ಇವನಿಗೆ ತನ್ನ ಕುಟುಂಬದ ಬಗ್ಗೆ ಬೇರೆ ಯಾವುದೇ ಮಾಹಿತಿ ಇಲ್ಲ.. ಅಪ್ಪ ಅಮ್ಮನ ಆಶ್ರಯವಿಲ್ಲದೇ ಬೀದಿಯಲ್ಲಿಯೇ ಬೆಳೆಯುತ್ತಿರುವ ಈ ಹುಡುಗನಿಗೆ ನಾಯಿಯೇ ಬಂಧು ಬಳಗ ಎಲ್ಲಾ.. ಹೌದು ಮನಕಲಕುವ ಸುದ್ದಿ ಕಣ್ಣಂಚಲ್ಲಿ ನೀರು ತರಿಸಿಬಿಟ್ಟಿತು..

ಅಂಕಿತ್ ದೆಹಲಿಯಲ್ಲಿನ ಟೀ ಅಂಗಡಿಯೊಂದರಲ್ಲಿ ಪ್ರತಿದಿನ ಕೆಲಸ ಮಾಡುತ್ತಾನೆ.. ಜೊತೆಗೆ ಬಲೂನ್ ಸಹ ಮಾರಿ ಜೀವನ ಸಾಗಿಸುತ್ತಿದ್ದಾನೆ.. ಪ್ರತಿದಿನ ಸಂಪಾದನೆ ಆದ ಹಣದಲ್ಲಿ ತನಗೆ ಹಾಗೂ ತನ್ನ ನಾಯಿಗೆ ಊಟ ತೆಗೆದುಕೊಂಡು ಮಾಡುತ್ತಾನೆ.. ಕೆಲಸ ಮಾಡದೇ ತನಗೆ ಯಾರಾದರೂ ಒಂದು ರೂಪಾಯಿ ಕೊಟ್ಟರೂ ಅವನು ತೆಗೆದುಕೊಳ್ಳುವುದಿಲ್ಲ.. ಅವನಿಗೆ ಯಾಕೆ ಅವನ ಜೊತೆ ಇರುವ ನಾಯಿಗೂ ಸಹ ಯಾರೂ ಹಾಲು ನೀಡುವಂತಿಲ್ಲ.. ತಾನೇ ಸಂಪಾದಿಸಿ ಇಬ್ಬರಿಗೂ ಆಹಾರ ಖರೀದಿಸುತ್ತಾನೆ.. ಪ್ರತಿದಿನ ಫುಟ್ ಪಾತ್ ನಲ್ಲಿಯೇ ಮಲಗುತ್ತಾನೆ.. ನಾಯಿಯೂ ಸಹ ಅಂಕಿತ್ ನನ್ನು ಬಿಟ್ಟು ಒಂದು ಕ್ಷಣವೂ ಇರುವುದಿಲ್ಲ..

ಈ ಹುಡುಗ ಕೆಲ ವರ್ಷಗಳಿಂದಲೂ ಹೀಗೇ ಜೀವನ ಸಾಗಿಸುತ್ತಿದ್ದಾನೆ.. ಅಂಕಿತ್ ಹಾಗೂ ಆತನ ನಾಯಿ ಡ್ಯಾನಿ ಫುಟ್ ಪಾತ್ ನ ಅಂಗಡಿ ಮುಂಭಾಗದಲ್ಲಿ ಮಲಗಿರುವುದನ್ನು ಯಾರೋ ಒಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ಬಗ್ಗೆ ಬರೆದಿದ್ದರು.. ಈ ಫೋಟೋ ವೈರಲ್ ಕೂಡ ಆಗಿತ್ತು.. ನಂತರ ಇವನ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದಾಗ ತಾಯಿ ಬಿಟ್ಟು ಹೋಗಿದ್ದಾಳೆ.. ಈತ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.. ಟೀ ಅಂಗಡಿ ಮಾಲಿಕ ಮಾತನಾಡಿ ಅಂಕಿತ್ ನಮ್ಮಿಂದ ಏನನ್ನೂ ಫ್ರೀಯಾಗಿ ತೆಗೆದುಕೊಳ್ಳೋದಿಲ್ಲ.. ಅವನ ನಾಯಿಗೂ ಫ್ರೀಯಾಗಿ ಯಾರಿಂದಲೂ ಹಾಲು ಪಡೆಯೋದಿಲ್ಲ.. ಅಂಕಿತ್ ಕೆಲಸ ಮಾಡುವಷ್ಟು ಸಮಯ ಡ್ಯಾನಿ ಒಂದು ಮೂಲೆಯಲ್ಲಿ ಕೂತಿರುತ್ತದೆ.. ಅಂಕಿತ್ ನ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.. ಕೆಲಸ ಮುಗಿದ ಮೇಲೆ ಇಬ್ಬರೂ ಒಟ್ಟಿಗೆ ಹೋಗುತ್ತಾರೆ ಎಂದಿದ್ದಾರೆ..

ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಈ ಹುಡುಗನನ್ನು ಪತ್ತೆ ಮಾಡಿ.. ಪೊಲೀಸರೇ ಆ ಪುಟ್ಟ ಹುಡುಗನ ಆರೈಕೆ ಮಾಡುತ್ತಿದ್ದಾರೆ.. ಹುಡುಗನ ವಯಸ್ಸಿನ್ನೂ ಒಂಭತ್ತು ಆಗಿರುವುದರಿಂದ ಆತನ ಸಂಬಂಧಿಕರು ಯಾರಾದರೂ ಸಿಗಬಹುದಾ ಎಂದು ಹುಡುಕಾಡುತ್ತಿದ್ದಾರೆ.. ನಿಜಕ್ಕೂ ಆ ತಾಯಿ ಬೇಕು ಎಂದು ಆ ಹುಡುಗನನ್ನು ಬಿಟ್ಟು ಹೋದಳಾ? ಅಥವಾ ಭೂಮಿ‌ ಮೇಲೆ ಇಲ್ಲವಾ.. ಆ ಭಗವಂತನೇ ಬಲ್ಲ.. ಆದರೆ ಆ ಕಂದ ಇಂತಹ ಕಷ್ಟದ ಸಮಯದಲ್ಲಿಯೂ ಭಿಕ್ಷೆ ಬೇಡದೆ ಸ್ವಾಭಿಮಾನದಿಂದ ಕೆಲಸ ಮಾಡಿ ಜೀವನ ಸಾಗಿಸುವ ರೀತಿ ಮಾತ್ರ ನಿಜಕ್ಕೂ ಆತನ ಆತ್ಮಾಭಿಮಾನಕ್ಕೆ ಹ್ಯಾಟ್ಸ್ ಆಫ್..

ಆದರೆ ಇನ್ನು ಪ್ರಪಂಚ ಅರಿಯದ ಆ ಕಂದನಿಗೆ ಆದಷ್ಟು ಬೇಗ ಆತನ ಕುಟುಂಬ ಸಿಗಲಿ.. ಅಥವಾ ಒಳ್ಳೆಯ ಮನಸ್ಸಿನ ಯಾರಾದರೂ ಆ ಕಂದ ಪೋಷಣೆ ಮಾಡುವಂತಾಗಲಿ.. ಮಕ್ಕಳನ್ನು ಸಾಕಲಾಗದಿದ್ದ ಮೇಲೆ ಹೆರಬಾರದು.. ಹೆತ್ತ ಮೇಲೆ ಜೀವ ಹೋಗುವ ಸಂದರ್ಭ ಬಂದರೂ ಮಕ್ಕಳನ್ನು ಕೈ ಬಿಡಬಾರದು.. ವೃದ್ದಾಪ್ಯದಲ್ಲಿ ಹೆತ್ತವರನ್ನು ಸಾಕಲು ಮರೆಯಬಾರದು.. ನಿಜಕ್ಕೂ ಈ ಘಟನೆ ಮನಸ್ಸನ್ನು ಒಂದು ಕ್ಷಣ ಕುಗ್ಗಿಸಿ ಬಿಟ್ಟಿತು.. ಆ ಕಂದನ ಸದ್ಯದ ಪರಿಸ್ಥಿತಿಯನ್ನು ನೆನೆದರೆ ನಿಜಕ್ಕೂ ಕಣ್ಣಲ್ಲಿ ನೀರು ತುಂಬುತ್ತದೆ.. ಆದಷ್ಟು ಬೇಗ ಅಂಕಿತ್ ಒಳ್ಳೆಯ ಕುಟುಂಬದ ಕೈ ಸೇರುವಂತೆ ಮಾಡಿ ಬಿಡಲಿ ಆ ಭಗವಂತ..