ಕರ್ನಾಟಕದಲ್ಲಿ ಸಿಂಗಂ ಆಗಿದ್ದ ಅಣ್ಣಾಮಲೈ ಅವರಿಗೆ ಚುನಾವಣೆಯಲ್ಲಿ ನಿಜಕ್ಕೂ ಸಿಕ್ಕಿದ್ದು ಎಷ್ಟು ಮತಗಳು ಗೊತ್ತಾ?

0 views

ಕರ್ನಾಟಕದಲ್ಲಿ ಕೆಲವೇ ವರ್ಷಗಳ ಹಿಂದೆ ತಮ್ಮ ದಕ್ಷತೆಯ ಮೂಲಕವೇ ಸಿಂಗಂ ಎಂದೇ ಹೆಸರಾಗಿದ್ದ.. ಈಗಲೂ ಕರ್ನಾಟಕದ ಜನರ ಮನಸ್ಸಿನಲ್ಲಿ ಇರುವ ಐಪಿಎಸ್ ಮಾಜಿ ಅಧಿಕಾರಿ ಅಣ್ಣಾಮಲೈ ಅವರು ಕಳೆದ ವರ್ಷ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದ್ದರು.. ಅಣ್ಣಾಮಲೈ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇತ್ತು.. ನೂರಾರು ಮಂದಿ ಅಭಿಮಾನಿಗಳು ಅಣ್ಣಾಮಲೈ ಅವರು ರಾಜಿನಾಮೆ ನೀಡಲಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ರಾಜೀನಾಮೆ ನೀಡದಂತೆ ಮನವಿ ಮಾಡಿಕೊಂಡಿದ್ದರು.. ಆದರೆ ತಮ್ಮ ನಿರ್ಧಾರದಲ್ಲಿ ಧೃಡವಾಗಿದ್ದ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ತಮ್ಮ ಹುಟ್ಟೂರು ತಮಿಳುನಾಡಿನಲ್ಲೆ ನೆಲೆಸಿದರು..

ಆರು ತಿಂಗಳ ಬಳಿಕ ರಾಜಕೀಯಕ್ಕೆ ಎಂಟ್ರಿ ನೀಡಿದ ಅಣ್ಣಾಮಲೈ ಅವರು ಬಿಜೆಪಿ ಪಕ್ಷ ಸೇರಿದರು.. ಆದರೆ ಇದು ಬಹಳಷ್ಟು ಅಭಿಮಾನಿಗಳಿಗೆ ಬೇಸರವನ್ನು‌ ತಂದಿತ್ತು.. ಹೌದು ಅಣ್ಣಾಮಲೈ ಅವರಿಗೆ ಕರ್ನಾಟಕದಲ್ಲಿ ಪಕ್ಷಾತೀತವಾಗಿ ಅಭಿಮಾನಿಗಳಿದ್ದರು.. ಆದರೆ ಅಣ್ಣಾಮಲೈ ಅವರು ಒಂದು ಪಕ್ಷ ಸೇರಿದ್ದು ಬೇರೆ ಪಕ್ಷದ ಅಭಿಮಾನಿಗಳಿಗೆ ಅಸಮಾಧಾನ ತಂದಿತ್ತು.. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಭಿನಂದಿಸಿದ್ದರೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದೂ ಉಂಟು..

ಇನ್ನು‌ ಇದೆಲ್ಲದರ ಬೆನ್ನಹಿಂದೆಯೇ ತಮಿಳುನಾಡಿನ ವಿಧಾನಸಭಾ ಚುನಾವಣೆಯೂ ಬಂತು.. ತಮಿಳುನಾಡು ರಾಜ್ಯದ ಬಿಜೆಪಿ ಉಪಾಧ್ಯಕ್ಷ ಹುದ್ದೆಗೇರಿದ ಅಣ್ಣಾಮಲೈ ಅವರಿಗೆ ಚುನಾವಣೆಯ ನೇತೃತ್ವವನ್ನು ನೀಡಲಾಯಿತು.. ತಮಿಳುನಾಡಿನ ಅರವಾಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂ ಕೆ ಪಕ್ಷದ ಎಲಂಗೋ ಆರ್ ವಿರುದ್ಧವಾಗಿ ಚುನಾವಣೆಗೆ ನಿಂತರು.. ಭರ್ಜರಿಯಾಗಿಯೇ ಪ್ರಚಾರವನ್ನಿ ಸಹ ಮಾಡಿದರು.. ಇತ್ತ ಬೆಂಗಳೂರಿನಿಂದ ತೇಜಸ್ವಿ ಸೂರ್ಯ.. ಸಿ ಟಿ ರವಿ ಸೇರಿದಂತೆ ಅನೇಕ ಘಟಾನುಘಟಿಗಳೆಲ್ಲಾ ತಮಿಳುನಾಡಿಗೆ ಹೋಗಿ ಪ್ರಚಾರ ಮಾಡಿ ಬಂದಿದ್ದರು.. ಆದರೆ ಅದ್ಯಾಕೋ ಮತದಾರ ಪ್ರಭು ಅಣ್ಣಾಮಲೈ ಅವರ ಕೈ ಹಿಡಿಯಲಿಲ್ಲ..

ಹೌದು ಅರವಾಕುರಿಚಿಯಲ್ಲಿ ಅಣ್ಣಾಮಲೈ ಅವರಿಗೆ ಮತದಾರ ಸೋಲುಣಿಸಿದ್ದಾನೆ.. ದಕ್ಷ ಐ ಪಿ ಎಸ್ ಅಧಿಕಾರಿಯಾಗಿ ಗೆದ್ದಿದ್ದ ಅಣ್ಣಾಮಲೈ ಅವರು ರಾಜಕೀಯವಾಗಿ ಸೋಲನುಭವಿಸಿದ್ದಾರೆ.. ಆದರೆ ಅಣ್ಣಾಮಲೈ ಅವರಿಗೆ ಬಿದ್ದ ಮತಗಳು ಮಾತ್ರ ಆಶ್ಚರ್ಯವನ್ನು ತಂದಿದೆ.. ಹೌದು ತಮಿಳುನಾಡು ಎಂದೊಡನೆ ಅಲ್ಲಿನ ರಾಜಕೀಯ ಎಂದ ತಕ್ಷಣ ನೆನಪಾಗುವುದೇ ಪ್ರಾದೇಶಿಕ ಪಕ್ಷಗಳು.. ಅಲ್ಲಿನ ಜನರು ಪ್ರಾದೇಶಿಕ ಪಕ್ಷವನ್ನೇ ಯಾವಾಗಲೂ ಅಧಿಕಾರಕ್ಕೆ ತರುವುದು ಗಮನಾರ್ಹವಾದದ್ದು.. ಆದರೆ ಈ ಬಾರಿ ಅಣ್ಣಾಮಲೈ ನೇತೃತ್ವದ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಮತಗಳು ಬಿದ್ದಿರುವುದು ಆಶ್ವರ್ಯವೇ ಸರಿ.. ಅದರಲ್ಲೂ ಅಣ್ಣಮಲೈ ಅವರೂ ಸಹ ಹೆಚ್ಚು ಮತಗಳನ್ನು ಪಡೆದೊದ್ದರೂ ಸಹ ಅರವಾಕುರಿಚಿಯಲ್ಲಿ ದೊಡ್ಡ ಅಂತರದಲ್ಲಿ ಸೋಲು ಕಾಣುವಂತಾಗಿದೆ..

ಅಣ್ಣಾಮಲೈ ಅವರಿಗೂ ಸಹ ಮತಗಳು ದೊಡ್ಡ ಮಟ್ಟದಲ್ಲಿಯೇ ಬಿದ್ದಿದ್ದರೂ ಸಹ ಅಂತರ ಹೆಚ್ಚಿದ್ದು ಬಹಳಷ್ಟು ಸಾವಿರ ಮತಗಳ ಅಂತರದಲ್ಲಿಯೇ ಆರ್ ಎಲಾಂಗೋ ಅವರ ವಿರುದ್ಧ ಅಣ್ಣಾಮಲೈ ಅವರು ಸೋಲನುಭವಿಸಿದ್ದಾರೆ.. ಹೌದು ಅಣ್ಣಾಮಲೈ ಅವರಿಗೆ ಒಟ್ಟು 68553 ಮತಗಳು ಬಿದ್ದಿದ್ದರೆ.. ಇತ್ತ ಡಿ ಎಂ ಕೆ ಪಕ್ಷದ ಎಲಾಂಗೋ ಆರ್ ಅವರಿಗೆ 93369 ಮತಗಳು ಬೀಳುವ ಮೂಲಕ ವಿಜಯ ಸಾಧಿಸಿದ್ದಾರೆ.. ಅಣ್ಣಾಮಲೈ ಅವರಿಗೆ ಶೇಕಡ 38.71 ರಷ್ಟು ಮತ ಚಲಾವಣೆಯಾಗಿದ್ದರೆ.. ಎಲಾಂಗೋ ಅವರಿಗೆ ಶೇಕಡ 52.72 ರಷ್ಟು ಮತ ಚಲಾವಣೆಯಾಗಿದೆ..