ಶಿವರಾತ್ರಿ ಹಬ್ಬಕ್ಕೆ ತಪ್ಪದೇ ಮಾಡುವ ತಂಬಿಟ್ಟು ಉಂಡೆಯನ್ನು ಸುಲಭವಾಗಿ ಮಾಡುವ ವಿಧಾನ..

0 views

ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿರುವಂತೆ ಶಿವರಾತ್ರಿ ಹಬ್ಬಕ್ಕೂ ಬಹಳ ಮಹತ್ವವಿದೆ.. ಶಿವಭಕ್ತರಿಗೆ ಶಿವರಾತ್ರಿ ಬಹಳ ವಿಶೇಷವೂ ಹೌದು.. ಶಿವನ ಆರಾಧನೆ ಮಾಡುತ್ತಾ ನಮ್ಮೆಲ್ಲಾ ತಪ್ಪುಗಳನ್ನು ಶಿವನ ಪಾದಕ್ಕೆ ಹಾಕಿ ಎಲ್ಲದರಿಂದ ಮುಕ್ತಿ ಪಡೆದು ಹೊಸತನದಿಂದ ಜೀವನ ಆರಂಭಿಸುವ ಹಬ್ಬವೂ ಹೌದು.. ಶಿವರಾತ್ರಿಯಲ್ಲಿ ಜಾಗರಣೆ ಎಷ್ಟು ಮುಖ್ಯವೋ ಆ ದಿನದ ಅಡುಗೆಯ ಪ್ರತೀತಿಯೂ ಅಷ್ಟೇ ಮುಖ್ಯ.. ಅದರಲ್ಲಿಯೂ ಶಿವರಾತ್ರಿಯ ದಿನ ಅನ್ನವನ್ನು ಸೇವಿಸದೇ ಉಪವಾಸ ಮಾಡುವುದುಂಟು.. ಇಂತಹ ಸಮಯದಲ್ಲಿ ಮತ್ತೊಂದು ವಿಶೇಷವಾದ ಅಡುಗೆಯೊಂದನ್ನು ಹಳೆ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ.. ಅದೇ ಅಂಟಿನ ಉಂಡೆ..

ಹೌದು ಶಿವರಾತ್ರಿ ಹಬ್ಬದ ವಿಶೇಷ ರುಚಿಕರ ತಂಬಿಟ್ಟು ಉಂಡೆಯನ್ನು ಸುಲಭವಾಗಿ ಮಾಡುವ ವಿಧಾನ.. ಮಾಡಿ ಸವಿಯಿರಿ.. ಇದು ಹಬ್ಬದ ವಿಶೇಷ ಮಾತ್ರವಲ್ಲದೇ ಆರೋಗ್ಯಕ್ಕೂ ಸಹ ಬಹಳ ಉಪಕಾರಿಯಾಗಿದ್ದು ಮನೆಮಂದಿಯೆಲ್ಲಾ ಸೇವಿಸಬಹುದಾಗಿದೆ.. ತಂಬಿಟ್ಟು ಉಂಡೆಯನ್ನು ನಾನಾ ಕಡೆ ನಾನಾ ರೀತಿಯಲ್ಲಿ ಮಾಡಲಾಗುತ್ತದೆ.. ಆದರೆ ಇದನ್ನು ಬಹಳ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ನಮ್ಮ ಇತರ ಕೆಲಸಗಳ ನಡುವೆಯೇ ಮಾಡಿ ಹಬ್ಬಕ್ಕೆ ಸವಿಯಬಹುದಾಗುದ್ದು.. ಕೆಳಗಿನ ವೀಡಿಯೋದಲ್ಲಿ ತಂಬಿಟ್ಟು ಉಂಡೆಯನ್ನು ಸುಲಭವಾಗಿ ಮಾಡುವ ವಿಧಾನವಿದೆ.. ಸಂಪೂರ್ಣವಾಗಿ ನೋಡಿ..

ಹುರಿಗಡಲೆ ತಂಬಿಟ್ಟಿಗೆ ಮೊದಲಿಗೆ ಹುರಿಗಡಲೆ, ಕಡಲೆಕಾಯಿಬೀಜ, ಎಳ್ಳು, ಕೊಬ್ಬರಿತುರಿ, ಗಸಗಸೆ ಇವೆಲ್ಲವನ್ನು ಬೇರೆ ಬೇರೆಯಾಗಿ ಹೊರಿದು ಆರಿದ ನಂತರ ಹುರಿಗಡಲೆ ಗಸಗಸೆಯನ್ನು ನುಣ್ಣಗೆ ಪೌಡರ್ ಮಾಡಿ ಹಾಗೂ ಕಡಲೆಕಾಯಿ ಬೀಜವನ್ನು ತರಿ ತರಿಯಾಗಿ ಪೌಡರ್ ಮಾಡಿ ಬೆಲ್ಲವನ್ನು ಕರಗಿಸಿ ಒಂದೆರೆಡು ನಿಮಿಷ ಚೆನ್ನಾಗಿ ಕುದಿಸಿ (ಎಲ್ಲಾ ರೀತಿಯ ಉಂಡೆಗಳಿಗೆ ಬೆಲ್ಲದ ಪಾಕವನ್ನು ಮಾಡುವ ಹಾಗೆ ಪಾಕ ಮಾಡುವುದೇನು ಬೇಡ ಬೆಲ್ಲವನ್ನು ಚೆನ್ನಾಗಿ ಕರಗಿಸಿ ಒಂದೆರೆಡು ನಿಮಿಷ ಕುದಿಸಿದರೆ ಸಾಕಾಗುತ್ತದೆ ಬೆಲ್ಲದ ಪಾಕ ಗಟ್ಟಿ ಆದರೆ ತಂಬಿಟ್ಟು ಉಂಡೆಯು ಸಹ ಗಟ್ಟಿ ಆಗುತ್ತದೆ)..

ಗ್ಯಾಸ್ ಆಫ್ ಮಾಡಿ ತಯಾರಿಸಿರುವ ತಂಬಿಟ್ಟು ಪೌಡರ್ ಗೆ ಸ್ವಲ್ಪ ಸ್ವಲ್ಪಾನೆ ಬೆಲ್ಲದ ಪಾಕವನ್ನು ಸೇರಿಸಿ ಉಂಡೆಯ ಹದವನ್ನು ಪರೀಕ್ಷಿಸಿ ಪಾಕವನ್ನು ಬೇಕಿದ್ದಲ್ಲಿ ಸೇರಿಸಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಕೈ ಗೆ ಸ್ವಲ್ಪ ತುಪ್ಪವನ್ನು ಸವರಿ ಬೇಕಾದ ಆಕಾರದಲ್ಲಿ ಉಂಡೆಯನ್ನು ತಯಾರಿಸಿಕೊಂಡರೆ ರುಚಿಯಾದ ತಂಬಿಟ್ಟು ಉಂಡೆ ಸಿದ್ಧ ನೀವು ನಿಮ್ಮ ಮನೆಯಲ್ಲಿ ಈ ಶಿವರಾತ್ರಿ ಹಬ್ಬಕ್ಕೆ ಹುರಿಗಡಲೆ ತಂಬಿಟ್ಟನ್ನು ತಯಾರಿಸಿ.. ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ..