ಕೇವಲ ಟವಲ್ ನಲ್ಲಿ ಕಾಣಿಸಿಕೊಂಡ ಜೊತೆಜೊತೆಯಲಿ ಧಾರಾವಾಹಿ ಅನು.. ಶಾಕ್ ಆದ ಪ್ರೇಕ್ಷಕರು ಮಾಡಿದ್ದೇನು ಗೊತ್ತಾ?

0 views

ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಜೊತೆಜೊತೆಯಲಿ ಸಧ್ಯ ಐನೂರು ಸಂಚಿಕೆಗಳನ್ನು ಪೂರೈಸಿ ತನ್ನ ಯಶಸ್ಸಿನ ಪಯಣವನ್ನು ಮುಂದುವರೆಸಿಕೊಂಡು ಹೋಗುತ್ತಿದೆ.. ಧಾರಾವಾಹಿ ಅದಾಗಲೇ ಜನರ ಮನ ಗೆದ್ದಿದೆ.. ಒಂದೂವರೆ ವರ್ಷದ ಹಿಂದೆ ಶುರುವಾದ ಧಾರಾವಾಹಿ ಆಗನಿಂದಲೂ ಕನ್ನಡ ಕಿರುತೆರೆ ಟಾಪ್‌ ಒಂದು ಅಥವಾ ಎರಡನೇ ಸ್ಥಾನವನ್ನು ಪಡೆದುಕೊಳ್ಳುತ್ತಾ ತನ್ನ ಯಶಸ್ಸಿನ ಪಯಣವನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಸ್ಯಾಂಡಲ್ವುಡ್ ನಿಂದ ಕಿರುತೆರೆಗೆ ಕಾಲಿಟ್ಟ ಅನಿರುದ್ಧ್ ಅವರಿಗೆ ಕಿರುತೆರೆಯ ಸೆನ್ಸೇಷನಲ್ ಎಂಬ ಬಿರುದನ್ನು ತಂದುಕೊಟ್ಟಿತ್ತು.. ನಟನೆಯಲ್ಲಿ ಒಂದು ದೊಡ್ಡ ಬ್ರೇಕ್‌ ಗಾಗಿ ಕಾಯುತ್ತಿದ್ದ ಅನಿರುದ್ಧ್‌ ಅವರಿಗೆ ಜೊತೆಜೊತೆಯಲಿ ಧಾರಾವಾಹಿ ಕೈ ಹಿಡಿದಿತ್ತು..

ಅಷ್ಟೇ ಅಲ್ಲದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡು ಅನು ಆಗಿ ಮನೆ ಮಾತಾದ ಮೇಘಾ ಶೆಟ್ಟಿ ಅವರಿಗೂ ದೊಡ್ಡ ಯಶಸ್ಸನ್ನು ತಂದು ಕೊಟ್ಟಿತ್ತು.. ಈ ಧಾರಾವಾಹಿಯ ಯಶಸ್ಸಿನಿಂದ ಮೇಘಾ ಶೆಟ್ಟಿ ಅವರಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶವೂ ದೊರಕಿತು.. ಗಣೇಶ್ ಅವರ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದಾರೆ.. ಆದರೆ ಈ ನಡುವೆ ಧಾರಾವಾಹಿಯಲ್ಲಿ ಸಣ್ಣ ಯಡವಟ್ಟೊಂದನ್ನು ಮಾಡಿಕೊಂಡಿದ್ದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ..

ಹೌದು ಜೊತೆಜೊತೆಯಲಿ ಧಾರಾವಾಹಿ ಕೇವಲ ಧಾರಾವಾಹಿಯಾಗಿ ಮಾತ್ರ ಉಳಿಯದೆ ಅನೇಕ ಸಾಮಾಜಿಕ ಕಳಕಳಿಯುಳ್ಳ ಕಂಟೆಂಟ್ ನಿಂದಾಗಿ ಜನರಿಗೂ ಬಹಳ ಹತ್ತಿರವಾಗಿತ್ತು.. ಅಷ್ಟೇ ಅಲ್ಲದೇ ಅನು ಆರ್ಯನ ಪ್ರೀತಿಗೆ ಜನ ಮನಸೋತಿದ್ದರು.. ಆರ್ಯವರ್ಧನ್ ರ ಡ್ರೆಸ್ಸಿಂಗ್ ಸ್ಟೈಲ್ ಲುಕ್ ಹಾಗೂ ಸಾಲ್ಟ್ ಪೆಪ್ಪರ್ ಗಡ್ಡದ ಸ್ಟೈಲ್ ಗೆ ಜನರು ಫಿದಾ ಆಗಿದ್ದರೆ.. ಇತ್ತ ಅನು ತನ್ನ ಮುಗ್ಧತೆ ಹಾಗೂ ಸರಳತೆಯಿಂದಲೇ ಜನರ ಮನಸ್ಸನ್ನು ಗೆದ್ದಿದ್ದರು.. ಇನ್ನು ಸಧ್ಯ ಧಾರಾವಾಹಿಯಲ್ಲಿ ಆರ್ಯ ಅನು ಯಾವಾಗ ಮದುವೆಯಾಗ್ತಾರೋ ಎಂದು ಕಾದಿದ್ದ ಜನರಿಗೆ ಸಧ್ಯ ಆರ್ಯ ಅನುವಿನ ಪ್ರೀತಿಯ ಸಂಚಿಕೆಗಳು ಪ್ರಸಾರವಾಗುತ್ತಿದ್ದು ಲಾಕ್‌ ಡೌನ್‌ ನಲ್ಲಿ ಮನರಂಜನೆಯ ರಸದೌತಣ ಬಡಿಸಿದಂತಾಗಿದೆ.. ಸಧ್ಯದಲ್ಲಿಯೇ ಕಲ್ಯಾಣ ನಡೆಯಬಹುದಾಗಿದೆ‌‌..

ಹೌದು ರಾಜ್ಯದಲ್ಲಿ ಲಾಕ್‌ ಡೌನ್‌ ಇರುವ ಕಾರಣ ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ ಕನ್ನಡ ಕಿರುತೆರೆಯ ಬಹುತೇಕ ಎಲ್ಲಾ ಧಾರಾವಾಹಿಗಳ ತಂಡ ಹೈದರಾಬಾದಿಗೆ ತೆರಳಿದ್ದು ಅಲ್ಲಿನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ.. ಅಏ ರೀತಿ ಜೊತೆಜೊತೆಯಲಿ ಧಾರಾಆಆಹಿ ತಂಡದವರೂ ಸಹ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳನ್ನು ಹೈದರಾಬಾದಿಗೆ ಕೊಂಡೊಯ್ದಿದ್ದು ಅಲ್ಲಿಯೇ ಚಿತ್ರೀಕರಣ ನಡೆಸುತ್ತಿದ್ದಾರೆ.. ಕತೆಗೆ ಕೊಂಚ ಬದಲಾವಣೆ ತಂದಿರುವ ಧಾರಾವಾಹಿ ತಂಡ ಸಧ್ಯ ಆರ್ಯವರ್ಧನ್‌ ಹಾಗೂ ಅನು ನಡುವಿನ ಪ್ರೇಮ ಮಹೋತ್ಸವದ ಸಂಚಕೆಗಳನ್ನು ಚಿತ್ರೀಕರಣ ಮಾಡಿ ಪ್ರಸಾರ ಮಾಡಾಗುತ್ತಿದೆ.. ಆದರೆ ಈ ನಡುವೆ ಅನು ಅವರ ಉಡುಗೆ ಬಗ್ಗೆ ಪ್ರೇಕ್ಷಕರು ಕೊಂಚ ಬೇಸರ ವ್ಯಕ್ತ ಪಡಿಸಿದ್ದಾರೆ..

ಹೌದು ಧಾರಾವಾಹಿಯ ದೃಶ್ಯವೊಂದರಲ್ಲಿ ಅನು ಕೇವಲ ಟವಲ್ ನಲ್ಲಿ ಮಾತ್ರ ಕಾಣಿಸಿಕೊಂಡಿದ್ದು ಅಭಿಮಾನಿಗಳು ಶಾಕ್ ಆಗುವುದರ ಜೊತೆಗೆ ಬೇಸರವನ್ನೂ ಸಹ ವ್ಯಕ್ತ ಪಡಿಸಿದ್ದಾರೆ.. ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯ.. ಆದರೆ ಧಾರಾವಾಹಿಯಲ್ಲಿ ಅನುವನ್ನು ಆ ರೀತಿ ತೋರುವ ಅವಶ್ಯಕತೆ ಇರಲಿಲ್ಲ.. ಅದರಲ್ಲಿಯೂ ಮೈತುಂಬಾ ಉಡುಗೆಯಲ್ಲಿ ನಮ್ಮ ಮನ ಹೆದ್ದಿರುವ ಅನುವಿನ ಪಾತ್ರವನ್ನು ಈ ರೀತಿಯ ತುಡು ಟವಲ್ ನಲ್ಲಿ ನಮ್ಮ ಮುಂದೆ ಇಡಬೇಡಿ.. ಜೊತೆಜೊತೆಯಲಿಯನ್ನು ಧಾರಾವಾಹಿಯಾಗಿ ಮಾತ್ರವಲ್ಲ ನಮ್ಮೊಡನೆಯೇ ನಡೆಯುತ್ತಿರುವ ಕತೆಯಾಗಿ ನೋಡುತ್ತಿದ್ದೇವೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ..