ನಿರೂಪಕಿ ಅನುಪಮಾ ಅವರ ನಿಜ ಜೀವನದ ಕತೆ ಕೇಳಿದ್ರೆ ನಿಜಕ್ಕೂ ಮನಕಲಕುತ್ತದೆ.. ಅವರ ತಂದೆ ಕೂಡ ಸಿನಿಮಾ ಇಂಡಸ್ಟ್ರಿಯವರೇ..

0 views

ತೆರೆ ಮೇಲೆ ಕಾಣಿಸಿಕೊಳ್ಳುವ ಸಾಕಷ್ಟು ಕಲಾವಿದರು‌ ಕ್ಯಾಮರಾ ಮುಂದೆ ಸದಾ ನಗುನಗುತ್ತಲೇ ಇರುತ್ತಾರೆ.. ಇನ್ನು ತಮ್ಮ ನಟನೆಯಲ್ಲಿ ಯಶಸ್ಸು ಪಡೆದು ಜನರು ಗುರುತಿಸುವಂತಾದ ನಂತರವೂ ಅಭಿಮಾನಿಗಳು ಅಥವಾ ಪ್ರೇಕ್ಷಕರು ಸಿಕ್ಕಾಗಲೂ ನಗುನಗುತ್ತಲೇ ಇರುತ್ತಾರೆ.. ನಗುತ್ತಾ ಸೆಲ್ಫಿಗಳಿಗೆ ನಿಲ್ಲುತ್ತಾರೆ.. ಆದರೆ ಕ್ಯಾಮರಾ ಮುಂದೆ ಸದಾ ನಗುವ ಅವರುಗಳ ನಿಜ ಜೀವನದಲ್ಲಿ‌ ನಿಜಕ್ಕೂ ಹೇಳಲಾಗದ ನೋವು ಇರುತ್ತದೆ ಎಂಬುದು ಬಹುತೇಕ ಕಲಾವಿದರ ಜೀವನದ ಕಟು ಸತ್ಯ.. ಹೌದು ಅದೇ ರೀತಿ ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಅವರ ಜೀವನದ ಕತೆ ಕೇಳಿದರೆ ಮನಕಲಕುತ್ತದೆ..

ಹೌದು ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಕ ಎಂಬ ಧಾರಾವಾಹಿಯ ಮೂಲಕ‌ ಕನ್ನಡ ಕಿರುತೆರೆಗೆ ಕಾಲಿಟ್ಟ ಅನುಪಮಾ ಅವರು ನಂತರ ಒಂದೊಂದೆ ಹೆಜ್ಜೆ ಇಟ್ಟು ಬಣ್ಣದ ಬದುಕಲ್ಲಿ ತಮ್ಮ ವೃತ್ತಿ ಬದುಕನ್ನು‌ಕಟ್ಟಿಕೊಂಡರು.. ನಟಿಯಾಗಿ ಖ್ಯಾತಿ ಗಳಿಸಿದರು. ನಂತರ ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿ ನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿಯೂ ಅವಕಾಶ ಪಡೆದು ಆ ಬಳಿಕ‌ ಮತ್ತೆ ಕಿರುತೆರೆಗೆ ಮರಳಿ ಬಂದು‌ ನಿರೂಪಕಿಯಾಗಿ ಮಿಂಚುತ್ತಿದ್ದಾರೆ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಸಾಕಷ್ಟು ಶೋಗಳಿಂದ ಅನುಪಮಾ ಅವರೇ ನಿರೂಪಕಿಯಾಗಿದ್ದು ಸಧ್ಯ ರಾಜಾ ರಾಣಿ ಶೋ ನಂತರ ನನ್ನಮ್ಮ ಸೂಪರ್ ಸ್ಟಾರ್ ಶೋನ ನಿರೂಪಣೆ ಮಾಡುತ್ತಿದ್ದಾರೆ..

ಸದಾ ತಮಾಷೆ ಮಾಡಿಕೊಂಡು ವೇದಿಕೆ ಮೇಲೆ ನಗುನಗುತ್ತಲೇ ಕಾಣಿಸಿಕೊಳ್ಳುವ ಅನುಪಮಾ ಅವರ ನಿಜ ಜೀವನದ ಕತೆ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಅನುಪಮಾ ಗಟ್ಟಿಮೇಳ ನಟ ರಕ್ಷ್ ಹಾಗೂ ನಾಗಿಣಿ ಧಾರಾವಾಹಿಯ ನಟಿ ನಮ್ರತಾ ಎಲ್ಲರೂ ಸಹ ಈ ವಾರದ ಗೋಲ್ಡನ್ ಗ್ಯಾಂಗ್ ಗೆ ಆಗಮಿಸಿದ್ದು ಆ ಕಾರ್ಯಕ್ರಮದಲ್ಲಿ ಅವರ ಜೀವನದ ಸತ್ಯ ಕತೆಗಳು ಅನಾವರಣಗೊಂಡಿದೆ.. ಹೌದು ಅದರಲ್ಲಿಯೂ ಅನುಪಮಾ ಅವರು ಜೀವನದಲ್ಲಿ ಪಟ್ಟ ಕಷ್ಟಗಳು ಹೇಳ ತೀರದು..

ಈ ಹಿಂದೆಯೂ ಸೃಜನ್ ಅವರು ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಅನುಪಮಾ ಅವರ ಬಗ್ಗೆ ಮಾತನಾಡಿ ಅನುಪಮಾ ಅವರನ್ನು‌ ನಾನು ಏನೂ ಇಲ್ಲದ ಬದುಕಿನಿಂದ ನೋಡಿಕೊಂಡು ಬಂದಿದ್ದೇನೆ.. ಜೀವನದಲ್ಲಿ ಬಹಳ ಕಷ್ಟಪಟ್ಟು ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದ ಹೆಣ್ಣು ಮಗಳು ಎಂದು ಪ್ರೀತಿಯಿಂದ ಬಂಗಾರದ ಉಡುಗೊರೆಯನ್ನು ಸಹ ನೀಡಿದ್ದರು.. ಇನ್ನು ನಿನ್ನೆ ಗೋಲ್ಡನ್ ಗ್ಯಾಂಗ್ ನಲ್ಲಿ ಮಾತನಾಡುವ ಸಮಯದಲ್ಲಿ ಸಾಕಷ್ಟು ವಿಚರಾಗಳನ್ನು ಹಂಚಿಕೊಂಡಿದ್ದಾರೆ.. ಅದೇ ಸಮಯದಲ್ಲಿ ಅನುಪಮಾ ಅವರ ತಂದೆ ಕೂಡ ಸಿನಿಮಾ ಇಂಡಸ್ಟ್ರಿಯವರೇ ಎಂಬ ವಿಚಾರ ಸಹ ತಿಳಿದಿದ್ದು.. ನನ್ನ ತಂದೆ ಕೂಡ ಸಿನಿಮಾ‌ ಇಂಡಸ್ಟ್ರಿ ಅವರೇ ಕೆಲಸ ಮಾಡಿದ್ದೆಲ್ಲವನ್ನೂ ಕುಡಿದು ಬಿಡುತ್ತಿದ್ದರು.. ನಮಗೆ ಬೇರೆ ದಾರಿ ಇಲ್ಲ.. ಅನಿವಾರ್ಯತೆ ಇತ್ತು..

ಅಮ್ಮ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋರು.. ರಾತ್ರಿ ಪೂರ್ತಿ ಪೀಸ್ ವರ್ಕ್ ತಂದು ಒಂದು ರೂಪಾಯಿಗೆ ಒಂದು ಶರ್ಟ್ ಅಂತ ಹೊಲಿಯೋರು.. ಆ ಕಾರಣಕ್ಕೆ ನಾನು ಚಿಕ್ಕ ವಯಸ್ಸಿಗೆ ದುಡಿಯಲು ಶುರು ಮಾಡಿದೆ.. ಮನೆಯ ಜವಾಬ್ದಾರಿ ತೆಗೆದುಕೊಂಡೆ.. ಅಪ್ಪ ಏನೋ ದುಡಿಯಲಿಲ್ಲ.. ಈಗ ನಾನು ಚೆನ್ನಾಗಿ ದುಡಿತ್ತಿದ್ದೀನಿ ಎಲ್ಲವೂ ಇದೆ.. ಆದರೆ ಈ ಸಮಯದಲ್ಲಿ ಅವರನ್ನು ನೋಡಿಕೊಳ್ಳೋಣ ಎಂದರೆ ಅವರೇ ಇಲ್ಲ.. ನನ್ನ ಅಮ್ಮ ಇದ್ದಾರೆ..ಅವರಿಗೂ ಜೀವನದಲ್ಲಿ ಕೆಲವು ಕನಸು ಇರುತ್ತದೆ ಅದನ್ನೆಲ್ಲಾ ನಾನು ನನಸು ಮಾಡಬೇಕು..

ಎಲ್ಲರೂ ನನ್ನನ್ನು ಮದುವೆಯಾಗಲ್ವಾ ಅಂತಾರೆ.. ಆದರೆ ನಿಜಕ್ಕೂ ನನಗೆ ಆ ಆಲೋಚನೆಯೇ ಇಲ್ಲ.. ನನ್ನಮ್ಮನನ್ನು ನೋಡಿಕೊಳ್ಳಬೇಕು.. ಅವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.. ಇಷ್ಟೇ ನನ್ನ ಜೀವನದ ಗುರಿ ಎಂದಿದ್ದಾರೆ.. ಹೆಣ್ಣು ಗಂಡು ಬೇರೆ ಬೇರೆ ಅನ್ನೋದನ್ನು ನಾನು ಒಪ್ಪಲ್ಲ.. ಹೆಣ್ಣಿಗೂ ಅಷ್ಟೇ ಜವಾಬ್ದಾರಿಗಳು ಇರುತ್ತದೆ.. ಅವಳು ನಿಭಾಯಿಸುತ್ತಾಳೆ ಕೂಡ ಎಂದರು.. ನಿಜಕ್ಕೂ ಅನುಪಮಾ ಅವರು ಚಿಕ್ಕ ವಯಸ್ಸಿಗೆ ಸಾಕಷ್ಟು ಕಷ್ಟ ಪಟ್ಟು ಇದೀಗ ಒಂದೊಳ್ಳೆ ಹಂತಕ್ಕೆ ಬಂದು ನಿಂತಿರೋದು ಇಂತಹ ಎಷ್ಟೋ ಹೆಣ್ಣು‌ಮಕ್ಕಳಿಗೆ ತಮ್ಮದೇ ಜೀವನದ ಕತೆ ಎನಿಸಿದೆ.. ಅನುಪಮಾ ಅವರ ಮುಂದಿನ ಜೀವನ ಚೆನ್ನಾಗಿರಲಿ..