ನನ್ನಮ್ಮ ಸೂಪರ್ ಸ್ಟಾರ್ ಶೋ ಇಂದ ಹೊರ ಬಂದ ಅನುಪಮಾ ಗೌಡ.. ನಿಜವಾದ ಕಾರಣವೇನು ಗೊತ್ತಾ..

0 views

ನನ್ನಮ್ಮ ಸೂಪರ್ ಸ್ಟಾರ್.. ಕನ್ನಡ ಕಿರುತೆರೆಯ ಖ್ಯಾತ ಶೋ.. ಮಕ್ಕಳಿಗಾಗಿ ಶುರುವಾದ ಶೋ ಸಾಕಷ್ಟು ವಿಶೇಷತೆಗಳಿಂದ ಜನರ ಗಮನ ಸೆಳೆದಿತ್ತು.. ಸಾಕಷ್ಟು ವಿಚಾರಗಳಿಗೆ ಸುದ್ದಿಯೂ ಆಗಿತ್ತು.. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಅದೇ ಶೋನ ಸ್ಪರ್ಧಿಯಾಗಿದ್ದ ನಟಿ ಅಮೃತಾ ನಾಯ್ಡು ಅವರ ಪುಟ್ಟ ಮಗಳು ಸಮನ್ವಿ ಜೀವ ಕಳೆದುಕೊಂಡದ್ದು ನಿಜಕ್ಕೂ ಶೋನವರಿಗೆ ಮಾತ್ರವಲ್ಲ ಯಾರೊಬ್ಬರಿಗೂ ಸಹ ಅರಗಿಸಿಕೊಳ್ಳಲಾಗದ್ದಾಗಿದೆ.. ಇನ್ನೂ ಸಹ ಆ ಘಟನೆ ನೆನೆದರೆ.. ಅಮೃತಾ ನಾಯ್ಡು ಅವರ ಪರಿಸ್ಥಿತಿ ನೆನೆದರೆ ಸಂಕಟವಾಗುತ್ತದೆ..

ಇನ್ನು ಇತ್ತ ಮೊನ್ನೆ ಶನಿವಾರದ ನನ್ನಮ್ಮ ಸೂಪರ್ ಸ್ಟಾರ್ ಸಂಚಿಕೆಗೂ ಮುನ್ನ ಸಮನ್ವಿಯ ಬಗ್ಗೆ ಪ್ರತಿಯೊಬ್ಬರೂ ನೆನೆದು ಕಂಬನಿ ಮಿಡಿದರು.. ಅಮೃತಾ ನಾಯ್ಡು ಸಧ್ಯ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ಅವರ ಒಡಲಲ್ಲಿ ಮತ್ತೆ ಸಮನ್ವಿ ಮತ್ತೆ ಹುಟ್ಟಿ ಬರಲೆಂದು ಹಾರೈಸಿದರು.. ಇನ್ನು ಇತ್ತ ಶೋ ವಿಚಾರಕ್ಕೆ ಬರುವುದಾದರೆ ಮುಂಬರುವ ಸಂಚಿಕೆಗಳಲ್ಲಿ ಅನುಪಮಾ ಗೌಡ ನನ್ನಮ್ಮ ಸೂಪರ್ ಸ್ಟಾರ್ ಸಂಚಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ..

ಹೌದು ಅನುಪಮಾ ಗೌಡ ಅವರು ಕಳೆದ ಕೆಲ ವರ್ಷಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಾಲು ಸಾಲು ಶೋಗಳನ್ನು ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ.. ಮಜಾ ಭಾರತ ನಂತರ ರಾಜಾ ರಾಣಿ ಶೋ ನಡೆಸಿಕೊಟ್ಟ ಅನುಪಮಾ ಗೌಡ ಸಧ್ಯ ನನ್ನಮ್ಮ ಸೂಪರ್ ಸ್ಟಾರ್ ಶೋ ನಡೆಸಿಕೊಡುತ್ತಿದ್ದರು.. ಅಮ್ಮಂದಿರ ಜೊತೆಗೆ ಮಕ್ಕಳನ್ನೂ ಸಹ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದ ಅನುಪಮಾ ಗೌಡ ಅವರು ಸಧ್ಯ ಶೋನಿಂದ ಕೆಲ ಸಂಚಿಕೆಗಳ ಮಟ್ಟಕ್ಕೆ ಹೊರ ಬಂದಂತೆ ಕಾಣುತ್ತಿದೆ..

ಹೌದು ಅನುಪಮಾ ಗೌಡ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಸಧ್ಯ ಮನೆಯಲ್ಲಿಯೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ನಿನ್ನೆ ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದ್ದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೆಲ ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಾರೆ.. ಆದರೆ ಆತಂಕ ಪಡುವ ಮತ್ತೊಂದು ವಿಚಾರ ವಿದೆ..

ಹೌದು ಮೊನ್ನೆಯಷ್ಟೇ ಸಮನ್ವಿಯ ಅಂತಿಮ ಕಾರ್ಯದಲ್ಲಿ ಅನುಪಮಾ ಅವರು ಪಾಲ್ಗೊಂಡಿದ್ದು ಅಲ್ಲಿ ಸಾಕಷ್ಟು ಜನರು ಸೇರಿದ್ದು ಅಲ್ಲಿಯೇ ಅನುಪಮಾ ಅವರಿಗೆ ಸೋಂಕು ತಗುಲಿರಬಹುದೆನ್ನಲಾಗಿದೆ.. ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ಶೋನ ಬಹುತೇಕ ಎಲ್ಲರೂ ಸಹ ಸಮನ್ವಿಯ ಕಾರ್ಯದಲ್ಲಿ ಪಾಲ್ಗೊಂಡಿದ್ದು ಇದೀಗ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ.. ಇದೇ ಕಾರಣಕ್ಕೆ ಕನಿಷ್ಠ ಹದಿನೈದು ದಿನಗಳ ಕಾಲ ಐಸೋಲೇಟ್ ಆಗಬೇಕಿರುವ ಕಾರಣ ಮುಂಬರುವ ಕೆಲ ಸಂಚಿಕೆಗಳಲ್ಲಿ ಅನುಪಮಾ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಎನ್ನುವುದು ಖಚಿತವಾಗಿದೆ..

ಇನ್ನು ಇತ್ತ ನನ್ನಮ್ಮ ಸೂಪರ್ ಸ್ಟಾರ್ ಶೋನ ಮತ್ತೊಬ್ಬ ಸ್ಪರ್ಧಿ ಯಶಸ್ವಿನಿ ಅವರೂ ಸಹ ಮುಂಬರುವ ಸಂಚಿಕೆಗಳಿಂದ ದೂರ ಉಳಿದಿದ್ದಾರೆ.. ಹೌದು ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಅವರಿಗೂ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವರುಹ್ ಸಹ ಮನೆಯಲ್ಲಿಯೇ ಐಸೋಲೇಟ್ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.. ಇತ್ತ ಯಶಸ್ವಿನಿ ಅವರು ತಮ್ಮ ಮಕ್ಕಳು ವಂಶಿಕಾ ಹಾಗೂ ಕೃಷ್ಣ ಇಬ್ಬರನ್ನೂ ಸಹ ಆರೋಗ್ಯದ ಕಾಳಜಿ ವಹಿಸುವ ಸಲುವಾಗಿ ಅಜ್ಜಿಯ ಮನೆಗೆ ಕಳುಹಿಸಲಾಗಿದ್ದು ಕೆಲ ಸಂಚಿಕೆಗಳಲ್ಲಿ ವಂಶಿಕಾಳನ್ನು ಮಿಸ್ ಮಾಡಿಕೊಳ್ಳಬೇಕಾಗಬಹುದಾಗಿದೆ.. ಆದಷ್ಟು ಬೇಗ ಎಲ್ಲರೂ ಗುಣಮುಖರಾಗಿ ಮತ್ತೆ ಶೋ ಮೂಲಕ ಮರಳುವಂತಾಗಲಿ..