ಹೆಣ್ಣು ಮಗುವಿಗೆ ತಂದೆಯಾದ ವಿರಾಟ್ ಕೋಹ್ಲಿ.. ಮಗು ಹೇಗಿದೆ ಗೊತ್ತಾ?

0 views

ಟಿಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಹಾಗೂ ನಟಿ ಅನುಷ್ಕಾ ದಂಪತಿಗೆ ಇಂದು ಹೆಣ್ಣು ಮಗು ಜನನವಾಗಿದ್ದು ವಿರಾಟ್ ಕೋಹ್ಲಿ ಅಭಿಮಾನಿಗಳೊಟ್ಟಿಗೆ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಕಳೆದ ಕೆಲ ತಿಂಗಳ ಹಿಂದೆ ತಮ್ಮ ಮನೆಗೆ ನೂತನ ಅತಿಥಿ ಆಗಮನದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ಸಂತೋಷ ಹಂಚಿಕೊಂಡಿದ್ದರು..

ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ತಾಯ್ತನದ ಫೋಟೋಗಳು ವೈರಲ್ ಆಗಿದ್ದವು.. ಅಭಿಮಾನಿಗಳು ಈ ಜೋಡಿಗೆ ಶುಭಾಶಯ ತಿಳಿಸಿ ಹುಟ್ಟುವ ಮಗು ಆರೋಗ್ಯವಾಗಿರಲೆಂದು ಶುಭ ಹಾರೈಸಿದ್ದರು.. ಕೆಲ ತಿಂಗಳ ಹಿಂದೆ ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ದಂಪತಿ ಅದಾಗಲೇ ಜನವರಿ ಸಂಪೂರ್ಣವಾಗಿ ವಿರಾಟ್ ರಜೆ ತೆಗೆದುಕೊಂಡು ತಮ್ಮ ಆಟದಿಂದ ಬ್ರೇಕ್ ಪಡೆದಿದ್ದರು..

ಇನ್ನು ಇದೀಗ ಜನವರಿ ಹನ್ನೊಂದು ಸೋಮವಾರದಂದು ವಿರಾಟ್ ದಂಪತಿಗೆ ಹೆಣ್ಣು ಮಗು ಜನನವಾಗಿದ್ದು ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.. ಸ್ನೇಹಿತರು ಅಭಿಮಾನಿಗಳು ರಾಜಕಾರಣಿಗಳು ಸಿನಿಮಾ ಸ್ಟಾರ್ ಗಳು ಎಲ್ಲರೂ ಸಹ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ..

ಇನ್ನು ಸಂತೋಷದ ಸಮಾಚಾರವನ್ನು ಇನ್ಸ್ಟಾಗ್ರಾಂ ಫೇಸ್ಬುಕ್ ಟ್ವಿಟ್ಟರ್ ಎಲ್ಲಾ ಕಡೆ ಏಕಕಾಲದಲ್ಲಿ ತಿಳಿಸಿದ ವಿರಾಟ್ ಕೋಹ್ಲಿ ತಾಯಿ ಮಗು ಹೇಗಿದ್ದಾರೆ ಎಂಬ ವಿಚಾರವನ್ನೂ ಸಹ ತಿಳಿಸಿದ್ದಾರೆ.. “ಈ ದಿನ ಸೋಮವಾರ ಮಧ್ಯಾಹ್ನ ನಮಗೆ ಮುದ್ದಾದ ಹೆಣ್ಣು ಮಗು ಜನಿಸಿದೆ ಎಂಬ ವಿಚಾರವನ್ನು ನಿಮ್ಮೆಲ್ಲರ ಜೊತೆಗೆ ಹಂಚಿಕೊಳ್ಳಲು ನನಗೆ ರೋಮಾಂಚನವಾಗುತ್ತಿದೆ.. ನಿಮ್ಮೆಲ್ಲರ ಈ ಪ್ರೀತಿಗೆ.. ಹಾರೈಕೆಗೆ.. ಮತ್ತು ಪ್ರಾರ್ಥನೆಗೆ ನನ್ನ ಅಂತರಾಳದ ಧನ್ಯವಾದಗಳು.. ತಾಯಿ ಅನುಷ್ಕಾ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ. ನಾನು ಮತ್ತು ಅನುಷ್ಕಾ ಇಬ್ಬರೂ ಸಹ ನಮ್ಮ ಜೀವನದ ಮುಂದಿನ ಘಟ್ಟ ಆರಂಭಿಸಲು ಉತ್ಸುಕರಾಗಿದ್ದೇವೆ. ನಮ್ಮ ಖಾಸಗೀತನವನ್ನು ನೀವು ಗೌರವಿಸುತ್ತೀರಾ.. ಎಂದು ನಂಬಿದ್ದೇವೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಇನ್ನು ಈ ವಿಚಾರವಾಗಿ ಅದಾಗಲೇ ಸಾಕಷ್ಟು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದು ಕೆಲವರು ಹೆಣ್ಣು ಮಗುವಾಗುವುದೆಂದಿದ್ದರು.. ಮತ್ತೆ ಕೆಲವರು ಗಂಡು ಮಗುವಾಗುವುದೆಂದಿದ್ದರು.. ಸದ್ಯ ಹೆಣ್ಣು ಮಗು ಆಗುತ್ತದೆ ಎಂದಿದ್ದ ಎಲ್ಲಾ ಜ್ಯೋತಿಷಿಗಳು ಇದೀಗ ಮುನ್ನೆಲೆಗೆ ಬಂದಿದ್ದು ನಮ್ಮ ಭವಿಷ್ಯ ನಿಜವಾಯಿತು ಎಂದಿದ್ದಾರೆ.. ಒಟ್ಟಿನಲ್ಲಿ ಕೆಲ ತಿಂಗಳಿಂದ ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದ ವಿಚಾರಕ್ಕಿಂದು ತೆರೆ ಬಿದ್ದಿದ್ದು ವಿರಾಟ್ ಹಾಗೂ ಅನುಷ್ಕಾ ದಂಪತಿ ಮಹಾಲಕ್ಷ್ಮಿಯಂತೆ ಹೆಣ್ಣು ಮಗುವಿನ ಆಗಮನದ ಸಂತೋಷದಲ್ಲಿದ್ದಾರೆನ್ನಬಹುದು..

ಇನ್ನೂ ಪ್ರಮುಖ ವಿಚಾರವೆಂದರೆ ಮಗುವನ್ನು ಮಾದ್ಯಮಗಳಿಗೆ ತೋರದೇ ಇರುವ ನಿರ್ಧಾರವನ್ನು ಇಬ್ಬರೂ ಸಹ ಮಾಡಿದ್ದಾರೆ‌‌.. ಹೌದು ಮಗು ಸಾಮಾನ್ಯ ಮಗುವಾಗಿ ಬೆಳೆಯಬೇಕೆಂಬ ಕಾರಣಕ್ಕೆ ಸೆಲಿಬ್ರೆಟಿ ಮಕ್ಕಳ ರೀತಿ ಸಮಾಜದಲ್ಲಿ ವಿಶೇಷ ಸ್ಥಾನಮಾನಗಳನ್ನು ನೀಡದೇ ಸಾಮಾನ್ಯವಾಗಿ ಬೆಳೆಸಬೇಕೆಂಬ ಕಾರಣಕ್ಕೆ ಮಗುವನ್ನು ಮಾದ್ಯಮದಿಂದ ದೂರ ಇಡುವ ನಿರ್ಧಾರ ಮಾಡಿದ್ದು ಅನೇಕರು ವಿರಾಟ್ ಹಾಗೂ ಅನುಷ್ಕಾರ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ..