ಸಿಹಿ ಸುದ್ದಿ ನೀಡಿದ ಅನುಶ್ರೀ..

0 views

ಜೀವನದ ಮೇಲೆ ನಂಬಿಕೆ ಕಳೆದುಕೊಳ್ಳದೆ, ನಾವು ಮಾಡುತ್ತಿರುವ ನಾವು ಇಷ್ಟಪಡುವ ಕೆಲಸದ ಮೇಲೆ ಶ್ರದ್ಧೆ ನಂಬಿಕೆ ಇಟ್ಟು ಕೆಲಸ ಮಾಡಿದರೆ ಅದು ನಮ್ಮನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗುತ್ತದೆ, ನಮಗೆ ಒಳ್ಳೆಯದನ್ನು ಮಾಡಿ, ಯಶಸ್ಸು ಕೀರ್ತಿ ಬರುವ ಹಾಗೆ ಮಾಡುತ್ತದೆ ಎನ್ನುವುದಕ್ಕೆ ನಿರೂಪಕಿ ಅನುಶ್ರೀ ಅವರು ಒಂದು ಉದಾಹರಣೆ. ಅಂದು ಒಂದೇ ಒಂದು ಎಪಿಸೋಡ್ ನಿರೂಪಣೆ ಮಾಡುವ ಅವಕಾಶಕ್ಕಾಗಿ ಎಲ್ಲಾ ಚಾನೆಲ್ ಗಳಿಗೆ ಓಡಾಡುತ್ತಿದ್ದರು ಅನುಶ್ರೀ, ಆದರೆ ಇಂದು ಕರ್ನಾಟಕದ ನಂಬರ್ ಒನ್ ನಿರೂಪಕಿ ಎಂದು ಹೆಸರುವಾಸಿಯಾಗಿದ್ದಾರೆ. ಇದೀಗ ನಿರೂಪಣೆ ಕ್ಷೇತ್ರದಿಂದ ಸಿನಿಮಾ ಕ್ಷೇತ್ರಕ್ಕೂ ಬಂದಿದ್ದಾರೆ ಅನುಶ್ರೀ.. ಇನ್ನು ಈ ಮೊದಲು ಅನುಶ್ರೀ ಅವರು ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅನುಶ್ರೀ ಅವರ ಮುಂದಿನ ಸಿನಿಮಾ ಯಾವುದು.. ಹೇಗಿರಲಿದೆ..

ಅನುಶ್ರೀ ಅವರು ಕರಾವಳಿಯ ಹುಡುಗಿ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅನುಶ್ರೀ, ತಾಯಿ ಎಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸುತ್ತಿದ್ದಾರೆ ಎನ್ನುವುದನ್ನು ನೋಡಿ ಬೆಳೆದವರು. ಚಿಕ್ಕ ವಯಸ್ಸಿನಲ್ಲೇ ತಾಯಿಗೆ ನೆರವಾಗಬೇಕು ಎಂದು ಕೆಲಸ ಮಾಡಲು ಶುರು ಮಾಡಿದರು. ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಅಂತ್ಯಾಕ್ಷರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅನುಶ್ರೀ, ಜನರು ತಮ್ಮ ಕಾರ್ಯಕ್ರಮ ಚೆನ್ನಾಗಿದೆ ಎಂದು ನಿರೂಪಣೆ ಬಗ್ಗೆ ಹೊಗಳಲು ಶುರು ಮಾಡಿದಾಗ, ಇದೆ ನನ್ನ ದಾರಿ ಎಂದು ಆರಿಸಿಕೊಂಡು ಬೆಂಗಳೂರಿಗೆ ಬರುವ ನಿರ್ಧಾರ ಮಾಡುತ್ತಾರೆ. ಆದರೆ ಇಲ್ಲಿ ಬಂದ ನಂತರ ಅವಕಾಶ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗುತ್ತದೆ.

ಅನುಶ್ರೀ ಅವರು ಮಾತನಾಡುತ್ತಾ ಇದ್ದದ್ದು ಮಂಗಳೂರು ಕನ್ನಡ, ಬೆಂಗಳೂರು ಕನ್ನಡ ಅವರಿಗೆ ಅಷ್ಟಾಗಿ ಬರುತ್ತಿರಲಿಲ್ಲ. ಆ ಕಾರಣದಿಂದಲೂ ಅನುಶ್ರೀ ಅವರಿಗೆ ಅವಕಾಶಗಳು ಕೈತಪ್ಪಿಹೋಗುತ್ತಿದ್ದವು. ಆ ಸಮಯದಲ್ಲಿ ಸಾಕಷ್ಟು ನೋವು ಅವಮಾನಗಳನ್ನು ಕೂಡ ಅನುಭವಿಸಿದ್ದಾರೆ ಅನುಶ್ರೀ. ಆದರೆ ಎಂದಿಗೂ ಅವರು ಛಲ ಬಿಡಲಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎಂದು ದೃಢ ನಿರ್ಧಾರ ಮಾಡಿ, ಅವಕಾಶಗಳನ್ನು ಅರಸಿ ಹೊರಟರು. ಮೊದಲಿಗೆ ಸಿಗುತ್ತಿದ್ದದ್ದು ಸಣ್ಣ ಪುಟ್ಟ ಅವಕಾಶಗಳೇ, ಅದೆಲ್ಲವನ್ನು ಸದುಪಯೋಗ ಪಡಿಸಿಕೊಂಡರು ಅನುಶ್ರೀ.

ಅನುಶ್ರೀ ಅವರು ಮಾತನಾಡುವ ಶೈಲಿಯನ್ನು ಜನರು ತುಂಬಾ ಇಷ್ಟಪಡಲು ಶುರು ಮಾಡಿದರು. ಜನರು ಅನುಶ್ರೀ ಅವರ ಪಟಾಕಿಯಂತಹ ಮಾತುಗಳನ್ನು ಎಂಜಾಯ್ ಮಾಡಲು ಶುರು ಮಾಡಿದರು. ಇದರಿಂದ ನಿರೂಪಕಿಯಾಗಿ ಅನುಶ್ರೀ ಅವರಿಗೆ ಬೇಡಿಕೆ ಹೆಚ್ಚಾಯಿತು. ಅನುಶ್ರೀ ಅವರನ್ನು ರಿಜೆಕ್ಟ್ ಮಾಡಿದ್ದ ಚಾನೆಲ್ ಗಳೇ, ಅವರನ್ನು ಹಾಕಿಕೊಂಡು ಕಾರ್ಯಕ್ರಮ ಮಾಡಬೇಕು ಎನ್ನುವ ಹಂತಕ್ಕೆ ಬೆಳೆದು ನಿಂತರು ಅನುಶ್ರೀ. ರಿಯಾಲಿಟಿ ಶೋಗಳು, ಸೀರಿಯಲ್ ಸಂತೆಗಳು, ಸಿನಿಮಾ ಸಂಬಂಧಿದ ಕಾರ್ಯಕ್ರಮಗಳು, ಸೀರಿಯಲ್ ಬಗೆಗಿನ ಶೋಗಳು, ಟಾಕ್ ಶೋಗಳು, ಕ್ವಿಜ್ ಶೋಗಳು, ಕನ್ನಡ್ಸ್ ಚಿತ್ರರಂಗದ ಅವಾರ್ಡ್ ಕಾರ್ಯಕ್ರಮಗಳು, ಒಂದಾ ಎರಡಾ.. ಎಲ್ಲಾ ರೀತಿಯ ಶೋಗಳನ್ನು ನಿಭಾಯಿಸಿದ್ದಾರೆ ಅನುಶ್ರೀ..

ನಿರೂಪಣೆಯಲ್ಲಿ ಮಾತ್ರವಲ್ಲದೆ ನಟನೆಯನ್ನು ಕೂಡ ಅಚ್ಚುಕಟ್ಟಾಗಿ ಮಾಡುತ್ತಾರೆ ಅನುಶ್ರೀ. ಭೂಮಿ ತಾಯಿ, ಬೆಂಕಿ ಪಟ್ಟಣ, ಉಪ್ಪು ಹುಳಿ ಖಾರ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮುರಳಿ ಮೀಟ್ಸ್ ಮೀರಾ ಸಿನಿಮಾದಲ್ಲಿನ ಡಬ್ಬಿಂಗ್ ಗೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ಅನುಶ್ರೀ ಅವರು ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊಸ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಸುಳಿವು ಕೊಟ್ಟಿದ್ದರು ಅನುಶ್ರೀ. ಇದೀಗ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅನುಶ್ರೀ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾಗೆ “ಸೈತಾನ್”ಎಂದು ಹೆಸರಿಡಲಾಗಿದೆ..

ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ ಅನುಶ್ರೀ. ಸಿನಿಮಾ ಬಗ್ಗೆ ಮಾತನಾಡಿ, “ಈ ಸಿನಿಮಾದಲ್ಲಿ ನಾಯಕಿ ನಾಯಕಿ ಅಂತ ಇಲ್ಲ. ಕಥೆಯೇ ನಾಯಕ..” ಎಂದು ತಿಳಿಸಿದ್ದಾರೆ . ಅನುಶ್ರೀ ಈ ಸಿನಿಮಾ ಒಪ್ಪಿಕೊಳ್ಳಲು ಕೋರಿಯೋಗ್ರಾಫರ್ ಇಮ್ರಾನ್ ಸರ್ದಾರಿಯ ಅವರೇ ಮುಖ್ಯ ಕಾರಣವಂತೆ. ನಿರೂಪಣೆಯಲ್ಲಿ ಬ್ಯುಸಿ ಇರುವ ಕಾರಣ ಚಿತ್ರರಂಗಕ್ಕೆ ಬರುವ ಯೋಚನೆ ಅನುಶ್ರೀ ಅವರಿಗೆ ಇರಲಿಲ್ಲ, ಲೋಹಿತ್ ಅವರು ಬಂದು ಕಥೆ ಹೇಳಿದಾಗ, ಕಥೆ ತುಂಬಾ ಇಷ್ಟವಾಗಿ ಒಪ್ಪಿಕೊಂಡಿದ್ದಾರೆ. ಈಗಾಗಲೇ ಕೆಲವು ದಿನಗಳು ಚಿತ್ರೀಕರಣ ಕೂಡ ನಡೆದಿದೆ ಎನ್ನಲಾಗಿದೆ. ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುತ್ತಿರುವ ಅನುಶ್ರೀ ಯಶಸ್ಸು ಪಡೆಯಲಿ ಎಂದು ಹಾರೈಸೋಣ.