ಜೀವನದ ಹೊಸ ಹೆಜ್ಜೆಯ ಬಗ್ಗೆ ಸಿಹಿ ಸುದ್ದಿ ನೀಡಿದ ಅನುಶ್ರೀ..

0 views

ಕನ್ನಡ ಕಿರುತೆರೆಯ ಖ್ಯಾತ ನಿರೂಪಕರ ಪೈಕಿ ಒಬ್ಬರಾಗಿರುವ ನಿರೂಪಕಿ ಅನುಶ್ರೀ ಅವರಿಂದ ಸಿಹಿಸುದ್ದಿಯೊಂದು ಹೊರ ಬಂದಿದೆ.. ಹೌದು ಅನುಶ್ರೀ ಸಧ್ಯ ಜೀ ಕನ್ನಡ ವಾಹಿನಿಯ ಖಾಯಂ ನಿರೂಪಕಿಯಾಗಿದ್ದರು.. ಕಳೆದ ಆರೇಳು ವರ್ಷದಿಂದ ಸಾಲು ಸಾಲು ಶೋಗಳಲ್ಲಿ ಸರಿಗಮಪ ಡಿಕೆಡಿ ಹೀಗೆ ಸಾಕಷ್ಟು ಶೋ ಮೂಲಕ ಜನಪ್ರಿಯರಾಗಿದ್ದು ಅನುಶ್ರೀ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು.. ಅಷ್ಟೇ ಅಲ್ಲದೇ ದೊಡ್ಡ ದೊಡ್ಡ ಸಿನಿಮಾಗಳ ಯಾವುದೇ ಕಾರ್ಯಕ್ರಮವೇ ಆದರೂ ಇವರದ್ದೇ ನಿರೂಪಣೆ ಎನ್ನುವಂತಾಗಿತ್ತು.. ಇನ್ನು ಇತ್ತ ತಮ್ಮ ವ್ಯಯಕ್ತಿಕ ವಿಚಾರಗಳ ಬಗ್ಗೆ ಯೋಚಿಸುವಷ್ಟು ಸಹ ಸಮಯ ಇಲ್ಲದಷ್ಟು ಬ್ಯುಸಿ ಆಗಿದ್ದರು..ಆದರೀಗ ಅನುಶ್ರೀ ಅವರಿಂದ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಬಂದಿದೆ.. ಹೌದು ಮಂಗಳೂರಿನಲ್ಲಿ ಬಹಳ ಕಷ್ಟದ ಕುಟುಂಬದಿಂದ ಬಂದ ಅನುಶ್ರೀ ವೇದಿಕೆಯ ಕಾರ್ಯಕ್ರಮಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದವರು..

ಬೆಂಗಳೂರಿಗೆ ಬಂದು ಗುರು ಕಿರಣ್ ಅವರ ಕಾರ್ಯಕ್ರಮದಲ್ಲಿ ಈ ರೀತಿ ಕೆಲಸ ಮಾಡುತ್ತಿದ್ದರು.. ಇವರನ್ನು ಗುರುತಿಸಿ ಕಾರ್ಯಕ್ರಮಗಳ ನಿರೂಪಣೆ ಮಾಡುವಂತೆ ಒತ್ತಾಯ ಮಾಡಿ ಜನರ ಮುಂದೆ ತಂದವರು ಗುರು ಕಿರಣ್ ಅವರು.. ಈಗಲೂ ಸಹ ಅನುಶ್ರೀ ತಮ್ಮ ಹಳೆಯ ದಿನಗಳನ್ನು ನೆನೆದಾಗ ಗುರುಕಿರಣ್ ಅವರನ್ನು ನೆನೆದು ಅವರಿಗೆ ಧನ್ಯವಾದಗಳನ್ನು ಹೇಳುತ್ತಾರೆ.. ನಂತರ ನಿರೂಪಕಿಯಾಗಿ ಗುರುತಿಸಿಕೊಂಡರೂ ಸಹ ಅಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರಲಿಲ್ಲ.. ಇತ್ತ ಸಿ‌ನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರೂ ಸಹ ಯಾರಿಗೂ ತಿಳಿದಿಲ್ಲ.. ನಂತರ ಬಿಗ್ ಬಾಸ್ ನಲ್ಲಿ ಅವಕಾಶ ಒದಗಿ ಬಂತು.. ನಂತರ ಅನುಶ್ರೀ ಅವರ ಜೀವನವೇ ಬದಲಾಯಿತು ಎನ್ನಬಹುದು..

ಹೌದು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಬೆಂಕಿ ಪೊಟ್ಟಣ ಸಿನಿಮಾದಲ್ಲಿ ಅಭಿನಯಿಸಿದರು.. ಆದರೆ ಸಿನಿಮಾಗಿಂತ ಕಿರುತೆರೆಯಲ್ಲಿ ಅನುಶ್ರೀಗೆ ಒಂದೊಳ್ಳೆ ಅವಕಾಶ ದೊರೆಯಿತು.. ಹೌದು ಜೀ ಕನ್ನಡ ವಾಹಿನಿಯ ಸರಿಗಮಪ ಶೋಗೆ ನಿರೂಪಕಿಯಾಗಿ ಕೆಲಸ ಮಾಡಲು ಅನುಶ್ರೀ ಅವರಿಗೆ ಅವಕಾಶ ದೊರೆಯಿತು.. ನಂತರ ಅನುಶ್ರೀ ಹಿಂತಿರುಗಿ ನೋಡಿದ್ದೇ ಇಲ್ಲ.. ಇತ್ತ ಒಂದರ ಹಿಂದೆ ಒಂದರಂತೆ ಕಳೆದ ಐದಾರು ವರ್ಷಗಳಿಂದ ಸ್ವಲ್ಪವೂ ಬ್ರೇಕ್ ಇಲ್ಲದೇ ಸಾಲು ಸಾಲು ಶೋಗಳಲ್ಲಿ‌ ಕೆಲಸ ಮಾಡುತ್ತಲೇ ಇದ್ದಾರೆ.. ಈ ನಡುವೆ ಉಪ್ಪು ಹುಳಿ ಖಾರ ಸಿನಿಮಾದಲ್ಲಿ ಪ್ರಮುಖ ಪಾತ್ರದ ಅವಕಾಶವೂ ದೊರೆಯಿತು.. ಆನಂತರ ಮತ್ತೆ ಕಿರುತೆರೆಯಲ್ಲಿಯೇ ಬ್ಯುಸಿ ಆದರು..

ಸಾವಿರ ರೂಪಾಯಿಗೂ ಕಷ್ಟ ಪಡುತ್ತಿದ್ದ ಅನುಶ್ರೀ ಲಕ್ಷ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದು ನಿಂತರು.. ಇನ್ನು ಪರಭಾಷಾ ಸಿನಿಮಾ ಆಗಲಿ ಅಥವಾ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳ ಆಡಿಯೋ ಬಿಡುಗಡೆ ಅಥವಾ ಪ್ರೀ ರಿಲೀಸ್ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರದ್ದೇ ನಿರೂಪಣೆ ಎನ್ನುವಂತಾಯ್ತು.. ಅನುಶ್ರೀ ಕಷ್ಟ ಪಟ್ಟು ಇಷ್ಟರ ಮಟ್ಟಕ್ಕೆ ಬೆಳೆದದ್ದು ನಿಜಕ್ಕೂ ಮೆಚ್ಚುವ ವಿಚಾರವೇ ಸರಿ.. ಇನ್ನು ಈ ನಡುವೆ ಅನುಶ್ರೀ ಸಾಕಷ್ಟು ವಿಚಾರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇದ್ದರು.. ಅದರಲ್ಲೂ ಕಳೆದ ವರ್ಷ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ವಿಚಾರವೊಂದರಲ್ಲಿ ಅನುಶ್ರೀ ಅವರ ಹೆಸರು ಸಹ ಕೇಳಿ ಬಂದು ಆನಂತರ ಹಾಗೆಯೇ ವಿಚಾರ ತಣ್ಣಗಾಗಿತ್ತು..

ಇನ್ನು ಇದೆಲ್ಲವನ್ನು ಹೊರತು ಪಡಿಸಿ ಅನುಶ್ರೀ ಅವರು ತಮ್ಮ ಮದುವೆಯ ವಿಚಾರವಾಗಿಯೂ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.. ಇತ್ತ ಚಿಕ್ಕಣ್ಣ ಹಾಗೂ ಅನುಶ್ರೀ ಅವರ ಮದುವೆ ಎಂದೂ ಸಹ ಇಲ್ಲದ ಸುದ್ದಿ ಹಬ್ಬಿ ಕೊ‌ನೆಗೆ ಅನುಶ್ರೀ ಹಾಗೂ ಚಿಕ್ಕಣ್ಣ ಇಬ್ಬರೂ ಸಹ ಈ ಬಗ್ಗೆ ನಗುತ್ತಲೇ ಇದೆಲ್ಲವೂ ಅರ್ಥವಿಲ್ಲದ ಸುದ್ದಿಗಳೆಂದಿದ್ದರು.. ಇನ್ನು ಅನುಶ್ರೀ ಅವರಿಗೆ ಮೂವತ್ತು ದಾಟಿದ್ದು ಸಧ್ಯ ಮದುವೆಯ ಬಗ್ಗೆ ಆಲೋಚನೆ ಮಾಡಿದಂತೆ ಕಂಡಿಲ್ಲ.. ಆದರೆ ಅಭಿಮಾನಿಗಳು ಮಾತ್ರ ಆ ಕುರಿತು ಪ್ರಶ್ನೆ ಕೇಳೋದನ್ನು ಬಿಟ್ಟಿಲ್ಲ.. ಇನ್ನು ಇದೆಲ್ಲದರ ಜೊತೆಗೆ ಅನುಶ್ರೀ ಸಧ್ಯ ಜೀ ವಾಹಿನಿಯ ಕಿರುತೆರೆಯ ಕಾರ್ಯಕ್ರಮಗಳಿಂದ ಕೊಂಚ ಬ್ರೇಕ್ ಪಡೆದು ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆಯೊಂದನ್ನು ಇಡುತ್ತಿದ್ದಾರೆ.. ಹೌದು ಕಿರುತೆರೆಯಿಂದ ಸ್ಯಾಂಡಲ್ವುಡ್ ಗೆ ಮರಳಿರುವ ಅನುಶ್ರೀ ಕನ್ನಡದ ಸಿನಿಮಾವೊಂದರಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

ಹೌದು ಥ್ರಿಲ್ಲರ್ ಸಿನಿಮಾವೊಂದರಲ್ಲಿ ನಾಯಕಿಯಾಗಿ ಅಭಿನಯಿಸಲು ಅನುಶ್ರೀ ಒಪ್ಪಿಕೊಂಡಿದ್ದು ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಶುರುವಾಗಲಿದೆ ಎಂದು ತಿಳಿದು ಬಂದಿದೆ.. ಸಧ್ಯ ನಿರೂಪಣೆಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಅನುಶ್ರೀ ಇದೀಗ ಸಿನಿಮಾ ಕಡೆ ಹೆಜ್ಜೆ ಇಡುತ್ತಿದ್ದು ಸಿನಿಮಾ ಕೈ ಹಿಡಿದು ದೊಡ್ಡ ಮಟ್ಟದ ಯಶಸ್ಸು ನೀಡುವುದಾ ಕಾದು ನೋಡಬೇಕಿದೆ.. ಇದೆಲ್ಲದರ ಜೊತೆ ಕಿರುತೆರೆಯಲ್ಲಿ ನಿರೂಪಕಿಯಾಗಿ ಮುಂದುವರೆಯುವರೋ ಅಥವಾ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ‌ ಮಾತ್ರ ಕಾಣಿಸಿಕೊಳ್ಳುವರೋ ಕಾದು ನೋದಬೇಕಿದೆ..