ರವಿಚಂದ್ರನ್ ಅವರ ನೇರ ಮಾತುಗಳಿಗೆ ವೇದಿಕೆಯಲ್ಲೇ ಕಣ್ಣೀರಿಟ್ಟ ಅನುಶ್ರೀ..

0 views

ಸಧ್ಯ ಕಿರುತೆರೆಯಲ್ಲಿ ಹೊಸ ಹೊಸ ಶೋಗಳು ಶುರುವಾಗುತ್ತಿದ್ದು ಈಗಿನ ಕಾರ್ಯಕ್ರಮಗಳೆಲ್ಲವೂ ಮುಗಿಯುವ ಹಂತಕ್ಕೆ ಬಂದು ನಿಂತಿದೆ.. ಮುಗಿಯುವ ಹಂತದಲ್ಲಿ ಸಾಕಷ್ಟು ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಕಳೆದ ಶನಿವಾರ ಹಾಗೂ ಭಾನುವಾರದ ಕಾರ್ಯಕ್ರಮದಲ್ಲಿ ಸರಿಗಮಪ ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಆಗಮಿಸಿದ್ದರು.. ಹೌದು ಇತ್ತ ರವಿಚಂದ್ರನ್ ಅವರ ದೃಶ್ಯ 2 ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ಸಿನಿಮಾ ಪ್ರಚಾರದ ಕಾರಣಕ್ಕೂ ಸಹ ರವಿಚಂದ್ರನ್ ಅವರು ವಾರಾಂತ್ಯದ ಸರಿಗಮಪ ಶೋನಲ್ಲಿ ಭಾಗವಹಿಸಿದ್ದರು.. ಆದರೆ ಇದೇ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ನೇರ ಮಾತಿಗೆ ವೇದಿಕೆಯಲ್ಲಿಯೇ ಅನುಶ್ರೀ ಕಣ್ಣೀರಿಟ್ಟಿದ್ದಾರೆ..

ಹೌದು ನಿನ್ನೆ ಹಾಗೂ ಮೊನ್ನೆಯ ಕಾರ್ಯಕ್ರಮ ರವಿ ಹಂಸ ಸಂಗಮ ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಮಾಡಲಾಗಿತ್ತು.. ರವಿಚಂದ್ರನ್ ಅವರ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಎಲ್ಲಾ ಸ್ಪರ್ಧಿಗಳು ರವಿಚಂದ್ರನ್ ಅವರ ಮನಸ್ಸನ್ನು ಸಂತೋಷ ಪಡಿಸಿದರು.. ಇನ್ನು ಕಾರ್ಯಕ್ರಮದಲ್ಲಿ ಅನೇಕ ವಿಚಾರ ಮಾತನಾಡಿದ ರವಿಚಂದ್ರನ್ ಅವರು ತಮ್ಮ ಹಳೆಯ ದಿನಗಳನ್ನು ಸಿನಿಮಾ ಮಾಡುವಾಗ ಅವರ ಅನುಭವಗಳನ್ನು ಎಲ್ಲರೊಟ್ಟಿಗೆ ಹಂಚಿಕೊಂಡರು.. ಅದೇ ಸಮಯದಲ್ಲಿ ರವಿಚಂದ್ರನ್ ಅವರು ತಿಂಗಳ ಹಿಂದಷ್ಟೇ ಅಗಲಿದ ಅಪ್ಪು ಬಗ್ಗೆಯೂ ಮಾತನಾಡಿದರು.. ಮಾತನಾಡುವಾಗ ಹಣ ಸಂಪಾದನೆಯ ಬಗ್ಗೆಯೂ ನೇರವಾಗಿ ಮಾತನಾಡಿದ ರವಿಚಂದ್ರನ್ ಅವರು ತಮ್ಮ ಆ ಅರ್ಥಪೂರ್ಣವಾದ ಮಾತುಗಳ ಮೂಲಕವೇ ಎಲ್ಲರ ಕಣ್ಣಲ್ಲಿ ನೀರು ತಂದರು..

ಹೌದು ಸರಿಗಮಪ ವೇದಿಕೆಯಲ್ಲಿ ಅಪ್ಪು ಬಗ್ಗೆ ಮಾತನಾಡುತ್ತಾ”ದುಡ್ಡ್ ಸಂಪಾದನೆ ಮಾಡಿ ಏನ್ ಮಾಡ್ಬೇಕು.. ಏನ್ ಮಾಡ್ಬೇಕು ಅಂತ.. ಮೊನ್ನೆ ಅಪ್ಪು ನಮ್ಮನ್ನ್ ಬಿಟ್ಟ್ ಹೋಗುವಾಗ ಏನ್ ಹೇಳ್ಕೊಟ್ಬಿಟ್ಟು ಹೋದ್ರು.. ನಾಳೆ ಅನ್ನೋದು ಬರಿ ಆಸೆ ಕನಸು ಅಷ್ಟೇ.. ಭರವಸೆ ಅಲ್ಲ.. ಭರವಸೆ ಅಂತೂ ಅಲ್ವೇ ಅಲ್ಲ.. ಅಲ್ಲ.. ಮನುಷ್ಯ ಯಾವಾಗ ಬೇಕಾದ್ರೂ ಹೊರಟು ಹೋಗ್ತಾನೆ.. ಹೇಳದೇ ಕೇಳದೇ ಹೋಗ್ಬಿಡ್ತಾನೆ.. ಒಂದ್ ಗುಡ್ ಬೈ ನೂ ಕೂಡ ಹೇಳದೇ ಹೋಗ್ಬಿಡ್ತಾನಲ್ರೀ ಇವಾಗ.. ಗುಡ್ ಬೈ ಹೇಳಿಲ್ವಲ್ಲಾ ನಮ್ ಯಾರಿಗೂ ಅಪ್ಪು.. ಸೋ ಈತರ ಪ್ರಪಂಚ ಇರುವಾಗ ಏನ್ ಬೇಕು ನಮಗೆ.. ನಗ್ರಿ, ಚೆನ್ನಾಗಿರಿ.. ಸಾಕು ಈ ಕೋಪ ಈ ಈಗೋ ಎಲ್ಲನೂ ಸಾಕು.. ಏನೇನೋ ಇರ್ತಾವೆ.. ಮನುಷ್ಯನಲ್ಲಿ ಬೇಡದೇ ಇರೋದೆಲ್ಲಾ ಇರ್ತಾವೆ.. ಬೇಡದೇ ಇರೋದೆಲ್ಲಾ ಇಟ್ಕೊಂಡ್ ಇರ್ತಾರೆ..

ಎಲ್ಲಾನೂ ಬಿಟ್ಬಿಡಿ.. ಎಲ್ಲಾರ್ ಜೊತೆ ಚೆನ್ನಾಗಿರ್ರಿ ಅಷ್ಟೇ ಎಂದು ನೇರವಾಗಿಯೇ ದುಡ್ಡನ್ನು ಸಂಪಾದನೆ ಮಾಡೋದು ಮಾತ್ರ ಜೀವನವಲ್ಲ.. ಆದರೆ ಇದ್ದಷ್ಟು ದಿನ ಚೆನ್ನಾಗಿರಬೇಕು ಅದು ಜೀವನ ಎಂದರು.. ಈ ಮಾತುಗಳನ್ನು ಆಡುತ್ತಾ ಸ್ವತಃ ರವಿಚಂದ್ರನ್ ಅವರೂ ಸಹ ಗದ್ಗದಿತರಾದರು.. ಜೀವನದಲ್ಲಿ ನಾನು ವೀಕ್ ಆದೆ ನನ್ನ ಕೈಲಿ ಏನೂ ಮಾಡೋಕಾಗಲ್ಲ ಅಂತ ಅನ್ಸಿದ್ದು ಅಪ್ಪು ಹೋದ ದಿನಾನೆ.. ಜೀವನದಲ್ಲಿ ನಾನು ಯಾವತ್ತೂ ಸಹ ಕುಗ್ಗಿ ಹೋಗಿರ್ಲಿಲ್ಲ.. ಆದರೆ ಆ ದಿನ ಕುಗ್ಗಿ ಹೋದೆ ಎಂದರು.. ಇನ್ನು ಇತ್ತ ಅನುಶ್ರೀ ಅವರಿಗೆ ಪುನೀತ್ ರಾಜ್ ಕುಮಾರ್ ಅವರೆಂದರೆ ಎಷ್ಟು ಇಷ್ಟವೆಂದು ಬಹಳಷ್ಟು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.. ಇದಕ್ಕೆ ಕಾರಣವೂ ಇದೆ.. ಹೌದು ಈ ಹಿಂದೆ ಒಮ್ಮೆ ಹೈದರಾಬಾದ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಅನುಶ್ರೀ ಪಾಲ್ಗೊಂಡಿದ್ದರಂತೆ.. ಅದೇ ಕಾರ್ಯಕ್ರಮದಲ್ಲಿ ಅಪ್ಪು ಸಹ ಭಾಗವಹಿಸಿದ್ದರು..

ಅನುಶ್ರೀ ಅವರು ಆಗತಾನೆ ಕಿರುತೆರೆಯಲ್ಲಿ ಹೆಸರು ಮಾಡುತ್ತಿದ್ದ ಸಮಯ.. ಹೊರಗಿನ ಪ್ರಪಂಚದ ಅರಿವು ಅಷ್ಟಾಗಿ ಇರಲಿಲ್ಲ.. ಆ ಕಾರ್ಯಕ್ರಮ ಮುಗಿದ ಬಳಿಕ ಅನುಶ್ರೀ ಅವರಿಗೆ ಅಲ್ಲಿಂದ ಹೊರ ಹೋಗುವುದೇಗೆ ಎಂದು ತಿಳಿಯದೇ ಆ ಜಾಗದಲ್ಲಿನ ಬಾಗಿಲೊಂದರ ಬಳಿ ಅವರಿವರನ್ನು ನೋಡುತ್ತಾ ನಿಂತಿದ್ದರಂತೆ.. ಆ ಸಮಯದಲ್ಲಿ ಅಲ್ಲಿಗೆ ಬಂದ ಅಪ್ಪುಅನುಶ್ರೀ ಅವರನ್ನು ನೋಡಿ ಅವರೇ ಮಾತನಾಡಿಸಿ ನೀವ್ ಅನುಶ್ರೀ ಅಲ್ವಾ.. ಇಲ್ಯಾಕೆ ನಿಂತಿದ್ದೀರಾ ಎಂದು ಕೇಳಿದ್ದರಂತೆ.. ಆಗ ಈರೀತಿ ಹೋಗೋಕೆ ದಾರಿ ಗೊತ್ತಾಗ್ತಿಲ್ಲ ಎಂದು ಅನುಶ್ರೀ ಕಣ್ಣೀರಿಡುವ ಹಂತಕ್ಕೆ ಬಂದು ನಿಂತಿದ್ದರಂತೆ.. ಆಗ ತಕ್ಷಣ ಅನುಶ್ರೀ ಅವರನ್ನಿ ಅದೇ ಜಾಗದಲ್ಲಿ ಕೂತಿರಿ.. ಹತ್ತು ನಿಮಿಷದಲ್ಲಿ ನಾನು ಮರಳಿ ಬರ್ತೀನಿ ಎಂದು ಹೋದ ಅಪ್ಪು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಹತ್ತು ನಿಮಿಷದ ಬಳಿಕ ಮರಳಿ ಅದೇ ಜಾಗಕ್ಕೆ ಬಂದರು.. ಬಂದು ಅನುಶ್ರೀ ಅವರನ್ನು ತಮ್ಮ ಜೊತೆಯೇ ಕರೆದುಕೊಂಡು ಹೋಗಿದ್ದರು.. ಈ ವಿಚಾರವನ್ನು ಈಗಲ್ಲ..

ಸಾಕಷ್ಟು ತುಂಗಳುಗಳ ಹಿಂದೆಯೇ ಅಪ್ಪು ಅವರು ಇದ್ದಾಗಲೇ ಅನುಶ್ರೀ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದರು.. ಒಬ್ಬ ಸ್ಟಾರ್ ನಟನಾದರುಜ್ ಅಪ್ಪುಗಿದ್ದ ದೊಡ್ಡ ಗುಣ ನಿಜಕ್ಕೂ ಮೆಚ್ಚುವಂತದ್ದಾಗಿತ್ತು.. ಇತ್ತ ರವಿಚಂದ್ರನ್ ಅವರು ಅಪ್ಪು ಬಗ್ಗೆ ಮಾತನಾಡುವಾಗ ಅನುಶ್ರೀ ತಮ್ಮ ಹಾಗೂ ಅಪ್ಪುವಿನ ಒಡನಾಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.. ನಂತರ ಅಳು ತಡೆಯಲಾಗದೆ ಸಣ್ಣ ಬ್ರೇಕ್ ಪಡೆದು ಸ್ಕ್ರೀನ್ ನ ಹಿಂಭಾಗಕ್ಕೆ ತೆರಳಿ ಸಂತೈಸಿಕೊಂಡು ಮರಳಿದರು. ನಿಜಕ್ಕೂ ರವಿಚಂದ್ರನ್ ಅವರ ಮಾತು ಅಕ್ಷರಶಃ ಸತ್ಯ.. ಇಂದು ಇದ್ದೋರು ನಾಳೆ ಇರ್ತೀವೋ ಇಲ್ವೋ ಗೊತ್ತಿಲ್ಲ.. ಆದರೆ ಇರೋವಷ್ಟು ದಿನ ನಮ್ಮವರೊಟ್ಟಿಗೆ ಚೆನ್ನಾಗಿರೋಣ.. ಹೋದಮೇಲೆ ನಮಗೆ ಇಲ್ಲಿ ಏನು ನಡೆಯುತ್ತಿದೆ ಎಂಬ ಪರಿವೇ ಇರೋದಿಲ್ಲ.. ಅದಕ್ಕಾಗಿ ಯಾಕೆ ಹಣ ಆಸ್ತಿ ಅಂತ ಅದರ ಹಿಂದೆ ಓಡಬೇಕು.. ಜೀವನಕ್ಕೆ ಹಣ ಆಸ್ತಿ ಎಲ್ಲವೂ ಮುಖ್ಯ ನಿಜ.. ಆದರೆ ಅದೇ ನಮ್ಮ ಜೀವನವಾಗಬಾರದು.. ನಿಜಕ್ಕೂ ಪುನೀತ್ ಅವರ ಅಗಲಿಕೆ ಸಾಕಷ್ಟು ಪಾಠಗಳನ್ನು ಕಲಿಸಿಕೊಟ್ಟುಬಿಟ್ಟಿತು‌‌.‌. ಸಾಕಷ್ಟು ಜನರ ಜೀವನವನ್ನೂ ಸಹ ಬದಲಿಸಿಬಿಟ್ಟಿತು ಎಂಬುದು ಅಷ್ಟೇ ಸತ್ಯ..