ಪುನೀತ್ ಸಮಾಧಿ ನೋಡಿ, ವಿಷ್ಣುವರ್ಧನ್ ಸಮಾಧಿ ಬಗ್ಗೆ ಅನಿರುದ್ಧ್ ಹೇಳಿದ್ದೇನು ಗೊತ್ತಾ..

0 views

ನಾಡಿನ ಮನೆ ಮಗ ಅಪ್ಪು ಇಲ್ಲವಾಗಿ ಹದಿಮೂರು ದಿನಗಳು ಕಳೆದಿವೆ.. ಇನ್ನೂ ಸಹ ಆ ನೋವಿನಿಂದ ಜನರು ಹೊರ ಬಂದಿಲ್ಲ.. ಆದರೆ ಈ ನಡುವೆ ಕೆಲವೊಂದು ಸುದ್ಧಿಗಳು ಹರಿದಾಡುತ್ತಿದ್ದು ಸಧ್ಯ ಈ ಬಗ್ಗೆ ಖುದ್ದು ಅನಿರುದ್ಧ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.. ಹೌದು ಡಾ.ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಶಂಕರ್ ನಾಗ್ ಎಲ್ಲರೂ ನಮ್ಮ ಚಿತ್ರರಂಗದ ಮೇರು ನಟರು.. ಇವರುಗಳಿಗೆ ಸರಿ ಸಮಾನರಾದವರು ಯಾರೂ ಇಲ್ಲ.. ಕನ್ನಡ ಚಿತ್ರರಂಗಕ್ಕೆ ಇವರುಗಳ ಕೊಡುಗೆ ಅಪಾರ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ.. ಆದರೆ ರಾಜಣ್ಣ ಹಾಗೂ ಅಂಬರೀಶ್ ಅವರು ಅಗಲಿದಾಗ ತಕ್ಷಣಕ್ಕೆ ನಿರ್ಮಾಣಗೊಂಡ ಸ್ಮಾರಕ.. ವಿಷ್ಣುವರ್ಧನ್ ಅವರು ಅಗಲಿ ಹನ್ನೆರೆಡು ವರ್ಷಗಳು ಕಳೆದರೂ ಇನ್ನೂ ಸ್ಮಾರಕದ ಕೆಲಸ ಸಂಪೂರ್ಣಗೊಂಡಿಲ್ಲ ಎಂಬ ಬೇಸರ ಈಗಲೂ ಅಭಿಮಾನಿಗಳಲ್ಲಿದೆ.. ಆದರೆ ಮತ್ತೊಬ್ಬರು ಇಲ್ಲವಾದಾಗ ಅದನ್ನು ಹೋಲಿಕೆ ಮಾಡಿ ಕೆಲವೊಂದು ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ..

ಕಳೆದ ಬಾರಿ ಅಂಬರೀಶ್ ಅವರು ಇಲ್ಲವಾದಾಗಲು ಅವರ ಸಮಾಧಿಯ ಫೋಟೋ ಹಾಕಿ ಜೊತೆಗೆ ಯಾವುದೇ ವ್ಯವಸ್ಥೆ ಇಲ್ಲದ ವಿಷ್ಣುವರ್ಧನ್ ಅವರ ಸಮಾಧಿಯ ಫೋಟೋ ಹಾಕಿ ಯಾಕೀ ತಾರತಮ್ಯ ಎನ್ನಲಾಗಿತ್ತು.. ಅದೇ ರೀತಿ ಇದೀಗ ಅಪ್ಪು ವಿಚಾರದಲ್ಲಿಯೂ ಮುಂದುವರೆದಿದೆ.. ಹೌದು ಅಪ್ಪು ಸಮಾಧಿಯ ಫೋಟೋ ಜೊತೆಗೆ ವಿಷ್ಣುವರ್ಧನ್ ಅವರ ಸಮಾಧಿಯ ಫೋಟೋ ಹಾಕಿ ಮೇರು ನಟನಿಗೇಕೆ ಇಂತಹ ಸ್ಥಿತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.. ಆದರೆ ಈ ಬಗ್ಗೆ ಇದೀಗ ಖುದ್ದು ನಟ ಅನಿರುದ್ಧ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಮಾದ್ಯಮವೊಂದರ ಜೊತೆ ಮಾತನಾಡಿರುವ ಅನಿರುದ್ಧ್ ಅವರು ಈ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ..

ಸಧ್ಯ ಕಳೆದ ವರ್ಷ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಲಾಗಿದ್ದು ಮುಂದಿನ ವರ್ಷಾಂತ್ಯದ ವೇಳೆಗೆ ಸ್ಮಾರಕದ ಕೆಲಸ ಸಂಪೂರ್ಣವಾಗಲಿದೆ.. ಆದರೆ ನಾವು ಮೊದಲು ಬೆಂಗಳೂರಿನಲ್ಲಿಯೇ ಸ್ಮಾರಕ ಮಾಡಲು ಆರು ವರ್ಷಗಳ ಕಾಲ ಅಲೆದೆವು.. ಮುಂದಿನ ವರ್ಷಕ್ಕೆ ಅಪ್ಪಾಜಿ ಇಲ್ಲವಾಗಿ ಹನ್ನೆರೆಡು ವರ್ಷಗಳಾಗಲಿದೆ.. ನಾವು ಆರು ವರ್ಷಗಳ ಕಾಲ ವಿಧಾನ ಸೌದ ಕೋರ್ಟು ಕಚೇರಿ ಹೀಗೆ ಸಾಕಷ್ಟು ಕಡೆ ಅಲೆದಾಡಿದ್ದೇವೆ.. ಯಾರೊಬ್ಬರು ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ.. ಸರ್ಕಾರ ನಮಗೆ ಕೆಲ ಜಾಗಗಳನ್ನು ತೋರಿಸಿತು.. ಆದರೆ ಆ ಜಾಗಗಳಿಗೆ ಹೋಗಲು ದಾರಿಯೇ ಇರಲಿಲ್ಲ.. ಕಾಡು ಅಥವಾ ಯಾವುದೋ ಬೆಟ್ಟದ ಮೇಲಿನ ಜಾಗ ಅಥವಾ ಮುಳ್ಳಿನ ದಾರಿ ಹೀಗೆ ಇಂತಹ ಜಾಗಗಳನ್ನು ತೋರಿದ್ದರು.. ಕಳೆದ ಹನ್ನೆರೆಡು ವರ್ಷದಿಂದಲೂ ಮುಖ್ಯಮಂತ್ರಿಗಳ ಬಳಿ ಒಂದಿಷ್ಟು ಜಾಗ ಕೊಡಿ ಎಂದು ಕೇಳಿಕೊಂಡಿದ್ದೆವು.. ಯಾವುದೇ ಜಾಗ ಕೊಟ್ಟರು ಅಲ್ಲಿ ಅಡೆತಡೆಗಳು ಶುರುವಾಗುತಿತ್ತು..

ಅಭಿಮಾನ್ ಸ್ಟುಡಿಯೋ ಪಕ್ಕದಲ್ಲಿಯೇ ಒಂದು ಜಾಗ ಫೈನಲ್ ಆಗಿತ್ತು.. ಇನ್ನೇನು ಸಮಾಧಿ ಕೆಲಸ ಶುರು ಮಾಡಬೇಕು ಎನ್ನುವಷ್ಟರಲ್ಲಿ ಯಾರಾದರು ಬಂದು ತಕರಾರು ಮಾಡುತ್ತಿದ್ದರು.. ಬಿಜಿಎಸ್ ಕಾಲೇಜು ಮುಂಭಾಗದಲ್ಲಿ ಒಂದು ಜಾಗ ನೀಡಿತು.. ಆದರೆ ಶಂಕುಸ್ಥಾಪನೆಯ ದಿನವೇ ಸ್ಟೇ ಆರ್ಡರ್ ತಂದರು.. ಇದು ಫಾರೆಸ್ಟ್ ಬಫರ್ ಜೋನ್ ಇಲ್ಲಿ ಸಮಾಧಿ ಮಾಡುವ ಹಾಗಿಲ್ಲ ಎಂದು ಕೆಲವರು ಸ್ಟೇ ತಂದರು.. ಸತತ ಆರು ವರ್ಷ ಇದೇ ರೀತಿ ಅಡೆತಡೆಗಳನ್ನು ತಂದರು.. ಕೊನೆಗೆ ಬೆಂಗಳೂರಿನಲ್ಲಿ ಸಾಧ್ಯವಾಗುವುದಿಲ್ಲ ಎಂದು ಅರಿತು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾದೆವು..

ಅಂಬರೀಶ್ ಅವರಿದ್ದಾಗ ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ಮಾಡಲು ಸಾಕಷ್ಟು ಪ್ರಯತ್ನ ಪಟ್ಟರು ನಾವೂ ಸಹ ಬಾಲಣ್ಣಮ ಕುಟುಂಬದ ಜೊತೆ ಮಾತನಾಡಿ ಮನವಿ ಮಾಡಿದ್ದೆವು ಆದರೆ ಯಾವುದೂ ಸಾಧ್ಯವಾಗಲಿಲ್ಲ.. ಕನ್ನಡದಲ್ಲಿ ಅಪ್ಪಾಜಿ ೨೨೪ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಆದರೆ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ.. ಮಾಧ್ಯಮದ ಮುಂದೆ ಕೂತು ಮಾತನಾಡಿದರು.. ಸಮಾಧಿ ಮಾಡೇ ಮಾಡ್ತೀವಿ ಎಂದರು.. ಆದರೆ ಯಾರೊಬ್ಬರು ಆ ಪ್ರಯತ್ನವನ್ನು ಮಾಡಲಿಲ್ಲ.. ಅಪ್ಪಾಜಿ ಇದ್ದಾಗ ಎಲ್ಲರೂ ಹಿಂದೆ ಮುಂದೆ ಇದ್ದರು.. ಆದರೆ ಹೋದ ಮೇಲೆ ಯಾರೊಬ್ಬರೂ ಇರಲಿಲ್ಲ..

ಅಪ್ಪಾಜಿಗೆ ಎಲ್ಲಾ ವಿಚಾರದಲ್ಲಿಯೂ ತಾರತಮ್ಯ ಮಾಡಿದ್ದಾರೆ.. ಡಾ.ರಾಜ್ ಅಂಬರೀಶ್ ಅಪ್ಪು ಎಲ್ಲರೂ ಮೇರು ನಟರು.. ಅವರಿಗೆ ಸಲ್ಲಬೇಕಾದ ಗೌರವ ಸಂದಿದೆ.. ಆ ಬಗ್ಗೆ ನನಗೆ ಖುಷಿ ಇದೆ.. ಆದರೆ ವಿಷ್ಣು ಅಪ್ಪಾಜಿ ಏನು ಮಾಡಿದ್ದರು.. ಜನರನ್ನು ರಂಜಿಸಿದ್ದೇ ತಪ್ಪಾ.. ಅವರು ಚಿತ್ರರಂಗಕ್ಕೆ ಕೊಡುಗೆಯನ್ನೇ ಕೊಟ್ಟಿಲ್ವಾ.. ಕೊನೆವರೆಗೂ ಕಲೆಗಾಗಿಯೇ ದುಡಿದಿದ್ದಾರೆ.. ಅಂತವರಿಗೆ ಈ ರೀತಿ ತಾರತಮ್ಯ ಸಹಿಸೋದು ಕಷ್ಟ.. ಅಪ್ಪಾಜಿ ಅವರ ಸಮಾಧಿ ವಿಚಾರದಲ್ಲಿ ಅಮ್ಮ ಬಹಳ ನೊಂದಿದ್ದಾರೆ.. ಎಲ್ಲರೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.. ಅದೇ ರೀತಿ ಅಪ್ಪಾಜಿಯೂ ಕೊಡುಗೆ ನೀಡಿದ್ದಾರೆ.. ಆದರೆ ಅದು ಯಾರಿಗೂ ಲೆಕ್ಕಕ್ಕಿಲ್ಲ.. ಎಂದು ಬೇಸರ ವ್ಯಕ್ತಪಡಿಸಿದ್ದಾರೆ..