ಅಂದುಕೊಂಡಿದ್ದು ಇಪ್ಪತ್ತು ಸಾವಿರ.. ಆದರೆ ಬಂದದ್ದು ನಲವತ್ತು ಸಾವಿರಕ್ಕೂ ಹೆಚ್ಚು ಜನ.. ಕೊನೆಗೆ ಅಶ್ವಿನಿ ಅವರು ಮಾಡಿದ ಕೆಲಸ ನೋಡಿ..

0 views

ಅಪ್ಪು ಅಗಲಿಕೆಯ ನಡುವೆ ದೊಡ್ಮನೆ ಕುಟುಂಬದ ಮೇಲೆ ಜನರು ತೋರಿದ ಅಭಿಮಾನ ಪ್ರೀತಿಗೆ ಎಂದೂ ಸಹ ಬೆಲೆ ಕಟ್ಟಲಾಗದು.. ಆ ಎಲ್ಲಾ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳುವ ಸಲುವಾಗಿ ಇಂದು ಪುನೀತ್ ರಾಜ್ ಕುಮಾರ್ ಅವರ ಕಾರ್ಯದ ಅಂಗವಾಗಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.. ಆದರೆ ಅಲ್ಲಿ ಅಂದುಕೊಂಡದ್ದೇ ಬೇರೆ.. ನಡೆದದ್ದೇ ಬೇರೆ.. ಹೌದು ಪುನೀತ್ ರಾಜ್ ಕುಮಾರ್ ಅವರ ಹನ್ನೊಂದನೇ ದಿನದ ಕಾರ್ಯದ ಅಂಗವಾಗಿ ನಿನ್ನ ಕುಟುಂಬಸ್ಥರಿಗೆ ಹಾಗೂ ಸಿನಿಮಾ ಮಂದಿಗೆ ಸದಾಶಿವನಗರದ ಪುನೀತ್ ಅವರ ನಿವಾಸದ ಬಳಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು.. ಇಂದು ಅಭಿಮಾನಿಗಳಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು..

ಹೌದು ಅಪ್ಪು ಅವರು ಇದ್ದಾಗ ಬಹಳಷ್ಟು ಬಾರಿ ಅಭಿಮಾನಿಗಳಿಗಾಗಿ ಒಮ್ಮೆ ನಾನ್ ವೆಜ್ ಊಟದ ವ್ಯವಸ್ಥೆ ಮಾಡಬೇಕು ಎಂದು ಪದೇ ಪದೇ ಅಂದುಕೊಳ್ಳುತ್ತಿದ್ದರಂತೆ.. ಆದರೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ.. ಯಾವುದಾದರು ಸಮಾರಂಭಕ್ಕೆ ಹೋಗಿ ಬಂದಾಗಲೆಲ್ಲಾ ಅಶ್ವಿನಿ ಅವರ ಬಳಿ ಈ ವಿಚಾರವನ್ನು ಹಂಚಿಕೊಂಡಿದ್ದರಂತೆ.. ಆದರೆ ಪುನೀತ್ ಅವರ ಆಸೆ ನೆರವೇರಿರಲಿಲ್ಲ.. ಆದರೆ ಇಂತಹ ಸಮಯದಲ್ಲಿ ಇಂತಹ ಸಂದರ್ಭದಲ್ಲಿ ಅವರ ಆ ಆಸೆ ನೆರವೇರಿಸಬೇಕಾಗುತ್ತದೆ ಎಂದು ಕನಸಿನಲ್ಲಿಯೂ ಆ ಕುಟುಂಬ ಅಂದುಕೊಂಡಿರಲಿಲ್ಲ.. ಹೌದು ಕಳೆದ ಹನ್ನೆರೆಡು ದಿನಗಳಿಂದಲೂ ಸಹ ಅಭಿಮಾನಿಗಳು ಅಪ್ಪು ನೋಡುವ ಸಲುವಾಗಿ ಜನಸಾಗರವೇ ಹರಿದು ಬರುತ್ತಿದೆ.. ಪ್ರತಿದಿನ ಮೂವತ್ತರಿಂದ ನಲವತ್ತು ಸಾವಿರ ಮಂದಿ ಅಭಿಮಾನಿಗಳು ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿ ಅಪ್ಪುವಿನ ದರ್ಶನ ಪಡೆದು ಹೋಗುತ್ತಿದ್ದಾರೆ..

ಮೊದಲ ಎರಡು ದಿನಗಳ ಕಾಲ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ ಅಪ್ಪುವಿನ ಅಂತಿಮ ದರ್ಶನ ಪಡೆದರೆ.. ಐದನೇ ದಿನದಿಂದ ಪ್ರತಿ ದಿನ ಮೂವತ್ತು ಸಾವಿರ ಮಂದಿ ಆಗಮಿಸಿ ಅಪ್ಪುವಿನ ಸಮಾಧಿ ದರ್ಶನ ಪಡೆದು ಹೋಗುತ್ತಿದ್ದಾರೆ.. ನಾಡಿನ ಜನರು ಅಪ್ಪು ಮೇಲೆ ಇಟ್ಟಿರುವ ಪ್ರೀತಿ ನೋಡಿ ಅಕ್ಷರಶಃ ದೊಡ್ಮನೆ ಕುಟುಂಬ ಸಂತೋಷ ಪಡಬೇಕೋ ಅಥವಾ ಇದನ್ನೆಲ್ಲಾ ನೋಡಲು ಅಪ್ಪು ಇಲ್ಲವಲ್ಲ ಎಂದು ನೋವು ಪಡಬೇಕೋ ಒಂದು ತಿಳಿಯದಂತಾಗಿದೆ.. ಇನ್ನು ಇದೇ ಸಮಯದಲ್ಲಿ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡುವ ನಿರ್ಧಾರ ಮಾಡಿದ ಅಶ್ವಿನಿ ಅವರು ಶಿವಣ್ಣ ಹಾಗೂ ರಾಘಣ್ಣನ ಬಳಿ ವಿಚಾರ ತಿಳಿಸಲಾಗಿ ಅವರು ಸಮ್ಮತಿಸಿ ಇಂದು ತ್ರಿಪುರವಾಸಿನಿ ಅರಮನೆಯ ಆವರಣದಲ್ಲಿ ಅಭಿಮಾನಿಗಳಿಗೆ ನಾನ್ ವೆಜ್ ಹಾಗೂ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು..

ಬರೋಬ್ಬರಿ ಸಾವಿರದ ಐನೂರು ಬಾಣಸಿಗರು ಅಭಿಮಾನಿಗಳಿಗಾಗಿ ಊಟ ತಯಾರಿಸಲು ತಯಾರಾದರು.. ಕೆಲ ದಿನಗಳಿಂದ ಸಿದ್ಧತೆ ಮಾಡಿಕೊಂಡು ಇಂದು ಬೆಳಗಿನ ಜಾವ ಎರಡು ಗಂಟೆಯಿಂದ ಅಡುಗೆ ಮಾಡಲು ಶುರು ಮಾಡಿದ್ದರು.. ಮೊದಲು ಇಪ್ಪತ್ತು ಸಾವಿರ ಜನರಿಗೆ ನಾನ್ ವೆಜ್ ಊಟ ಐದು ಸಾವಿರ ಜನರಿಗೆ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.. ಆದರೆ ನೋಡ ನೋಡುತ್ತಿದ್ದಂತೆ ಜನಸಾಗರ ಹರಿದು ಬಂದಿತ್ತು.. ಊಟಕ್ಕಾಗಿ ಅಲ್ಲ ಬದಲಿಗೆ ಇದು ಅಪ್ಪುವಿನ ಪ್ರಸಾದ ಎಂದು ಜನರು ಆಗಮಿಸಿ ಊಟ ಸೇವಿಸಿದರು.. ಇಪ್ಪತ್ತು ಸಾವಿರ ಅಂದುಕೊಂಡಿದ್ದು ನೋಡು ನೋಡುತ್ತಿದ್ದಂತೆ ನಲವತ್ತು ಸಾವಿರಕ್ಕೂ ಹೆಚ್ಚು ಜನರು ಬರುವುದು ಖಚಿತವಾಯಿತು..

ವಿಚಾರ ತಿಳಿಯುತ್ತಿದ್ದಂತೆ ಬರುವ ಯಾವೊಬ್ಬ ಅಭಿಮಾನಿಗಳೂ ಸಹ ಹೊಟ್ಟೆ ಹಸಿವಿನಿಂದ ಮರಳಬಾರದೆಂದು ಅಶ್ವಿನಿ ಅವರು ಹಾಗೂ ಶಿವಣ್ಣ ಮತ್ತು ರಾಘಣ್ಣ ತಕ್ಷಣ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದವರನ್ನು ಕರೆದು ಎಷ್ಟು ಅಭಿಮಾನಿಗಳು ಬಂದರೂ ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ.. ಆ ತಕ್ಷಣ ಮತ್ತಷ್ಟು ಸಾವಿರ ಜನರಿಗೆ ಅಡುಗೆ ಸಿದ್ಧ ಪಡಿಸಿ ಬಂದವರಿಗೆಲ್ಲಾ ಸಂಜೆ ಐದು ಗಂಟೆಯವರೆಗೂ ಊಟ ಬಡಿಸಿದ್ದಾರೆ.. ಎಲ್ಲಾ ಮುಗಿಯುವವರೆಗೂ ನಾವು ಈ ಜಾಗದಿಂದ ಹೋಗೋದಿಲ್ಲ ಎಂದ ಬಾಣಸಿಗರು ನಾವು ಪುನೀತ್ ಅವರ ಮದುವೆಗೂ ಅಡುಗೆ ಮಾಡಿದ್ದೇವೆ.. ಆದರೆ ಇಂತಹ ಸಂದರ್ಭದಲ್ಲಿ ಅಡುಗೆ ಮಾಡುವ ಸಂದರ್ಭ ಬರುತ್ತದೆ ಎಂದುಕೊಂಡಿರಲಿಲ್ಲ.. ಇದು ನಮ್ಮ ಕರ್ಮ ಅನ್ಸತ್ತೆ.. ನಾವೆಲ್ಲಾ ಹೋಗಿ ಅವರು ಉಳಿಯಬೇಕಿತ್ತು.. ಎಂದು ಕಣ್ಣೀರು ಇಡುತ್ತಲೇ ಅಪ್ಪು ಮನೆಯ ಎಲ್ಲಾ ಸಮಾರಂಭಗಳಿಗೂ ಅಡುಗೆ ಮಾಡುವ ಬಾಣಸಿಗರು ಸಂಜೆಯವರೆಗೂ ಎಲ್ಲಿಯೂ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ..

ಇನ್ನು ಅಶ್ವಿನಿ ಅವರು ಇಂದೆ ಬೆಳಿಗ್ಗೆ ಹನ್ನೊಂದು ಮೂವತ್ತರ ಸಮಯದಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿ ಪುನೀತ್ ಅವರ ಫೋಟೋ ಮುಂದೆ ಕಣ್ಣೀರಿಟ್ಟು ಅಭಿಮಾನಿಗಳಿಗೆ ಊಟ ಬಡಿಸುವಾಗಲೂ ದುಃಖ ತಡೆಯಲಾಗದೇ ಕಣ್ಣೀರಿಟ್ಟು ಮನೆಗೆ ಮರಳಿ ಹೋದರು.. ಅಶ್ವಿನಿ ಅವರ ದುಃಖ ನಿಜಕ್ಕೂ ಯಾವ ಹೆಣ್ಣಿಗೂ ಬಾರದಿರಲಿ.. ಜೊತೆಯಾಗಿರುವ ಎಷ್ಟೋ ಜೀವಗಳ ನಡುವೆ ಪ್ರೀತಿಯಿಲ್ಲ.. ಅತಿಯಾಗಿ ಪ್ರೀತಿಸುವ ಕುಟುಂಬವೇ ಸರ್ವಸ್ವ ಎನ್ನುತ್ತಿದ್ದ ಜೀವಗಳನ್ನು ಒಟ್ಟಾಗಿ ಇರಲು ಆ ಭಗವಂತ ಬಿಡುವುದಿಲ್ಲ.. ಇಷ್ಟೇ ಜೀವನ.. ಇರುವಷ್ಟು ದಿನ ನಮ್ಮವರಿಗಾಗಿ ಬದುಕಿ ಪ್ರೀತಿ ಹಂಚಿ ಹೋಗುತಿರಬೇಕಷ್ಟೇ..