ಯಾರದ್ದೇ ಮದುವೆಯಾಗಲಿ ಪುನೀತ್ ಹಾಗೂ ಅಶ್ವಿನಿ ಅವರು ತಪ್ಪದೇ ಕೊಡುತ್ತಿದ್ದ ಬೆಲೆಬಾಳುವ ಆ ವಸ್ತು ಏನು ಗೊತ್ತಾ.. ನಿಜಕ್ಕೂ ದೊಡ್ಡತನ ಇದು..

0 views

ಪುನೀತ್ ಇದ್ದ ನಲವತ್ತಾರು ವರ್ಷಗಳಲ್ಲಿ ಮಾಡಿದ ಕೆಲಸಗಳು ಅವರಿದ್ದಾಗ ಒಂದನ್ನೂ ಪ್ರಚಾರ ಪಡೆಯದೇ ದೊಡ್ಡವರಾಗಿಯೇ ಹೊರಟುಬಿಟ್ಟರು.. ಆದರೆ ಇದೊಇಗ ಅವರು ಹೋದ ಮೇಲೆ ಕಳೆದ ಇಪ್ಪತ್ತು ದಿನಗಳಿಂದ ಪ್ರತಿದಿನವೂ ಅಪ್ಪು ಅವರ ಕುರಿತ ಹೊಸ ಹೊಸ ವಿಚಾರಗಳು ಹೊರ ಬರುತ್ತಿದೆ.. ಅದರಲ್ಲಿಯೂ ಈಗ ಅಪ್ಪು ಭಾಗವಹಿಸುತ್ತಿದ್ದ ಪ್ರತಿಯೊಂದು ಮದುವೆಯಲ್ಲಿಯೂ ಅಪ್ಪು ಕೊಡುತ್ತಿದ್ದ ಬೆಲೆ ಬಾಳುವ ಉಡುಗೊರೆಯ ಸತ್ಯ ಹೊರ ಬಿದ್ದಿದೆ.. ಹೌದು ಅಪ್ಪು ತಾನಿದ್ದಾಗ ತಾನು ಬೆಳೆದದ್ದಷ್ಟೇ ಅಲ್ಲದೇ ತಾವಿದ್ದಷ್ಟು ದಿನ ಕೋಟ್ಯಾಂತರ ರೂಪಾಯಿ ದಾನ ಧರ್ಮ ಮಾಡಿ ಸಾವಿರಾರು ಜನರ ಬಾಳಿಗೆ ಬೆಳಕಾಗಿದ್ದರು. ಅವರು ಹೋದ ಬಳಿಕ ಈ ಎಲ್ಲಾ ವಿಚಾರಗಳು ಹೊರ ಬಂದವು.. ಅನಾಥಾಶ್ರಮಗಳು ವೃದ್ಧಾಶ್ರಮಗಳು.. ಶಾಲೆಗಳು.. ಗೋಶಾಲೆಗಳು.. ಹೀಗೆ ಎಷ್ಟೇ ಹೇಳಿದರೂ ತೀರದು.. ಜೊತೆಗೆ ಕಷ್ಟದಲ್ಲಿರುವವರು ತಮ್ಮ ಕಣ್ಣಿಗೆ ಕಂಡರೆ ಆತನ ಕಷ್ಟ ನಿವಾರಣೆಯಾಯಿತು ಎಂದೇ ಲೆಕ್ಕ..

ಅಷ್ಟೇ ಅಲ್ಲ ಆ ಪುಣ್ಯಾತ್ಮ ನಾಡಿನ ಮೇರು ನಟನ ಮಗನಾದರೂ ಸ್ವತ- ತಾನೇ ಒಬ್ಬ ಸೂಪರ್ ಸ್ಟಾರ್ ಆದರೂ ಸಹ ತೋರುತ್ತಿದ್ದ ಸರಳತೆ ಅವರ ವ್ಯಕ್ತಿತ್ವ ನಿಜಕ್ಕೂ ಮೈ ರೋಮಾಂಚನಗೊಳ್ಳುವಂತದ್ದು.. ಕಿರುತೆರೆಯಲ್ಲಿ ನಡೆಸಿಕೊಡುತ್ತಿದ್ದ ಶೋಗಳಲ್ಲಿ ಸೀಸನ್ ನ ಒಂದು ದಿನ ಸಂಪೂರ್ಣ ತಂಡಕ್ಕೆ ತಮ್ಮ ಕಡೆಯಿಂದ ಊಟ ಬರಬೇಕಿತ್ತು.. ಅಷ್ಟೇ ಅಲ್ಲದೇ ಸಿನಿಮಾದಲ್ಲಿಯೂ ಈ ಅಭ್ಯಾಸವನ್ನು ರೂಡಿಸಿಕೊಂಡು ಬಂದಿದ್ದರು.. ಸೆಟ್ ಬಾಯ್ ಇಂದ ಹಿಡಿದು ಪ್ರತಿಯೊಬ್ಬ ತಂತ್ರಜ್ಞರು ಕಲಾವಿದರು ಯಾರೇ ಆಗಲಿ ಸಮನಾಗಿ ನೋಡುತ್ತಿದ್ದ ಸಮಾನಾಗಿ ಗೌರವ ನೀಡುತ್ತಿದ್ದ ವ್ಯಕ್ತಿ ನಮ್ಮ ಅಪ್ಪು..

ಇನ್ನು ಅಪ್ಪು ಹದಿನೆಂಟು ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಹೆಣ್ಣು ಮಗಳಿಗೆ ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದ ವಿಚಾರವೂ ಮೊನ್ನೆ ಮೊನ್ನೆಯಷ್ಟೇ ಹೊರ ಬಂತು.. ಇನ್ನು ಕೋಟ್ಯಾಧಿಪತಿ ಶೋನಲ್ಲಿ ಸೋತ ಅದೆಷ್ಟೋ ಜನರಿಗೆ ತಾವು ತಮ್ಮ ಕೈಯಿಂದ ಹಣವನ್ನು ನೀಡಿರುವ ವಿಚಾರ ಸ್ವತಃ ಚಾನಲ್ ನ ಮುಖ್ಯಸ್ಥರಿಗೂ ತಿಳಿಯದೆ ಅಪ್ಪು ಇಲ್ಲವಾದ ನಂತರ ಅದನ್ನು‌ ಕಂಡಿದ್ದವರು ಅವರಿಗೆ ತಿಳಿಸಿದರು.. ಎಲ್ಲಿಯೇ ಯಾವುದೇ ಸಹಾಯ ಮಾಡಿದರೂ ಇದನ್ನು ಪುನೀತ್ ಮಾಡಿದನೆಂದು ಹೇಳಕೂಡದು ಎಂದು ತಾಕೀತು ಮಾಡುತ್ತಿದ್ದರು ಅಪ್ಪು.. ಕೆಳಗಿನ ವೀಡಿಯೋ ನೋಡಿ

ಇನ್ನು ಯಾರೇ ಅಪ್ಪುವನ್ನು ಮದುವೆಗೆ ಆಮಂತ್ರಿಸಿದರೂ ತಪ್ಪದೇ ಆ ಮದುವೆಗೆ ಹೋಗುತ್ತಿದ್ದರು.. ಅದರಲ್ಲೂ ಬಹುತೇಕ ಮದುವೆಗಳಿಗೆ ಪತ್ನಿ ಅಶ್ವಿನಿ ಅವರ ಜೊತೆಯೇ ಹೋಗುತ್ತಿದ್ದದ್ದು ಪುನೀತ್ ಅವರ ದೊಡ್ಡಗುಣ ಎನ್ನಬಹುದು.. ಅಭಿಮಾನಿಗಳಾಗಲಿ ಸ್ನೇಹಿತರಾಗಲಿ ಅಥವಾ ಸಂಬಂಧಿಕರಾಗಲಿ ಯಾರೇ ಆಗಲಿ ಅದು ಎಷ್ಟು ದೂರವೇ ಆಗಲಿ ಮದುವೆಗಳಿಗೆ ತಪ್ಪದೇ ಹಾಜರಾಗುತ್ತಿದ್ದರು.. ಈ ಬಗ್ಗೆ ಈ ಹಿಂದೆ ಕಾರ್ಯಕ್ರಮವೊಂದರಲ್ಲಿಯೂ ಸಹ ಅಪ್ಪು ಹೇಳಿಕೊಂಡಿದ್ದರು.. ಆದರೆ ಅಪ್ಪು ಯಾರದ್ದೇ ಮದುವೆಗೆ ಹೋದರೂ ಸಹ ಅವರು ಕೊಡುತ್ತಿದ್ದ ಉಡುಗೊರೆ ಮಾತ್ರ ನಿಜಕ್ಕೂ ಅಪ್ಪುವಿನ ಗುಣ ಏನು ಎಂದು ತೋರುತ್ತದೆ..

ಹೌದು ಸಾಮಾನ್ಯವಾಗಿ ದೊಡ್ಡ ದೊಡ್ಡವರು ಮದುವೆಗೆ ಬಂದರೆ ಹೂವಿನ ಗುಚ್ಛವನ್ನೋ ಅಥವಾ ಗಿಫ್ಟ್ ಗಳನ್ನೋ ನೀಡುವುದು ಸಹಜ.. ಆದರೆ ಅಪ್ಪು ಮಾತ್ರ ಆ ರೀತಿ‌ ಮಾಡುತ್ತಿರಲಿಲ್ಲ.. ಹೌದು ತಾವು ಕೊಡುವ ವಸ್ತು ಪಡೆಯುವವರಿಗೆ ಉಪಯೋಗವಾಗಬೇಕೆಂಬುದು ಅಪ್ಪು ಹಾಗೂ ಅಶ್ವಿನಿ ಅವರ ಉದ್ದೇಶವಾಗಿತ್ತು.. ಅದೇ ಕಾರಣಕ್ಕೆ ಯಾವುದೇ ಮದುವೆಗೆ ಹೋದರೂ ಅಪ್ಪು ಮಾತ್ರ ಕೊಡುತ್ತಿದ್ದದ್ದು ಬಂಗಾರದ ಉಡುಗೊರೆಯೇ.. ಹೌದು ಬಂಗಾರದ ಸರ ಅಥವಾ ಬಂಗಾರದ ಉಂಗುರ ಅಥವಾ ಬಂಗಾರದ ನಾಣ್ಯವನ್ನಾದರೂ ಉಡುಗೊರೆಯಾಗಿ ನೀಡುತ್ತಿದ್ದರು..

ಅಷ್ಟೇ ಅಲ್ಲದೇ ಕೋಟ್ಯಾಧಿಪತಿ ಶೋ ಆಗಲಿ ಅಥವಾ ಫ್ಯಾಮಿಲಿ ಪವರ್ ಶೋ ಆಗಲಿ ಒಂದು ದಿನ ಅಪ್ಪು ಅವರ ಕಡೆಯಿಂದ ಊಟ ಬರುತಿತ್ತು.. ಊಟದ ಜೊತೆಗೆ ಕಾರ್ಯಕ್ರಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಹ ಬೆಳ್ಳಿಯ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡುತ್ತಿದ್ದರು.. ಹೌದು ಆ ವಸ್ತು ಅವರ ನೆನಪಾಗಿ ಪಡೆದುಕೊಳ್ಳುವವರಿಗೂ ಉಪಯೋಗವಾಗಲೆಂದು ಬೆಳ್ಳಿಯ ಲೋಟವೋ ಅಥವಾ ಬೆಳ್ಳಿಯ ಹರಿಷಿಣ ಕುಂಕುಮದ ಬಟ್ಟಲೋ ಹೀಗೆ ಯಾವುದಾದರೊಂದು ಬೆಳ್ಳಿಯ ಉಡುಗೊರೆಯನ್ನು ನೀಡುತ್ತಿದ್ದರು..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವವರ ಮನೆಯಲ್ಲಿ ಈಗಲೂ ಸಹ ಅಪ್ಪು ಅವರು ಕೊಟ್ಟಿರುವ ಯಾವುದಾದರೊಂದು ಬೆಳ್ಳಿಯ ಉಡುಗೊರೆ ಇದ್ದೇ ಇದೆ.. ಇದು ಅಪ್ಪುವಿನ ದೊಡ್ಡತನ ಒಳ್ಳೆಯತನ ಸರಳತೆ..‌ ಬಹುಶಃ ಇಷ್ಟೊಂದು ಒಳ್ಳೆಯವರಾಗಿದ್ದಕ್ಕೋ ಏನೋ ಭಗವಂತ ತನ್ನ ಬಳಿಗೆ ಕರೆಸಿಕೊಂಡುಬಿಟ್ಟ.. ಮರೆಯಲಾಗದು ಅಪ್ಪು ಸರ್ ನಿಮ್ಮನ್ನು.. ಎಂದಿಗೂ ಮರೆಯಲಾಗದು..