ಸುಮ್ಮನೆ ಸುಳ್ಳು ಹೇಳಬೇಡ್ರಯ್ಯಾ.. ಜೇಮ್ಸ್ ಮೊದಲ ದಿನದ ನಿಜವಾದ ಕಲೆಕ್ಷನ್ ಎಷ್ಟು ಗೊತ್ತಾ.. ಸತ್ಯ ಇಲ್ಲಿದೆ ನೋಡಿ..

0 views

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ಮೊದಲ ದಿನವೇ ದಾಖಲೆ ಬರೆದಿದೆ.. ಆದರೆ ಜೇಮ್ಸ್ ಸಿನಿಮಾ ನಿಜಕ್ಕೂ ಮಾಡಿರುವ ಕಲೆಕ್ಷನ್ ಎಷ್ಟು ಅಸಲಿ ಸತ್ಯವೇನು ಎಲ್ಲವೂ ಇಲ್ಲಿದೆ ನೋಡಿ.. ಹೌದು ಪುನೀತ್ ರಾಜ್ ಕುಮಾರ್ ಅವರು ಅಭಿನಯದ ಜೇಮ್ಸ್ ಸಿನಿಮಾ ಇದೀಗ ಅವರು ಅಗಲಿದ ಬಳಿಕ ಬಿಡುಗಡೆಯಾಗಿದ್ದು ಅಪ್ಪು ಹುಟ್ಟುಹಬ್ಬದ ದಿನದಂದೇ ಬಿಡುಗಡೆ ಗೊಳಿಸಿದ್ದು ಒಂದು ರೀತಿ ಭಾವನಾತ್ಮಕ ಕ್ಷಣ ಎಂದರೂ ತಪ್ಪಾಗಲಾರದು..

ಅಪ್ಪು ಮುಂದೊಂದು ದಿನ ಈ ರೀತಿ ಇಷ್ಟು ಚಿಕ್ಕ ವಯಸ್ಸಿಗೆ ನಮ್ಮನ್ನೆಲ್ಲಾ ಬಿಟ್ಟು ಹೋಗುವರೆಂದು ಕನಸು ಮನಸ್ಸಿನಲ್ಲಿಯೂ ಸಹ ಯಾರೂ ಊಹಿಸಿರಲಿಲ್ಲ.. ಆದರೆ ಸಮಯದ ಮುಂದೆ ನಾವೆಲ್ಲರೂ ತಲೆ ಬಾಗಲೇ ಬೇಕು.. ಅಪ್ಪು ಇಲ್ಲದ ಸತ್ಯವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದೇ ವಾಸ್ತವವೆಂದು ನಂಬಲೇ ಬೇಕು..

ಇತ್ತ ಅಪ್ಪು ಅಭಿನಯದ ಕೊನೆಯ ಎರಡು ಸಿನಿಮಾಗಳು ಜೇಮ್ಸ್ ಹಾಗೂ ಗಂಧದಗುಡಿ ಬಿಡುಗಡೆಯಾಗಬೇಕಿತ್ತು.. ಒಂದು ಕಡೆ ಜೇಮ್ಸ್ ಸಿನಿಮಾದ ಡಬ್ಬಿಂಗ್ ಆಗದ ಕಾರಣ ಶಿವಣ್ಣನೇ ಅಪ್ಪುವಿಗೆ ಧ್ವನಿ ನೀಡಿದ್ದು ಅದು ಮತ್ತಷ್ಟು ಸಂಕಟ ತರುವಂತಾಗಿತ್ತು.. ಇನ್ನು ಅಂದುಕೊಂಡಂತೆ ನಿನ್ನೆ ಪ್ರಪಂಚದಾದ್ಯಂತ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದೆ.. ಹಾಗೆಯೇ ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಬರೆದಿದೆ..

ಹೌದು ಜೇಮ್ಸ್ ಸಿನಿಮಾ ಮೊದಲ ದಿನ ರಾಜ್ಯದಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಂಡಿದ್ದು ಬರೋಬ್ಬರಿ ಇಪ್ಪತ್ತ ಮೂರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.. ಇನ್ನು ಕರ್ನಾಟಕ ಹೊರತು ಪಡಿಸಿ ಮಿಕ್ಕೆಲ್ಲಾ ಕಡೆ ಸೇರಿ 8.2 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು ಮೊದಲ ದಿನ ಒಟ್ಟು 31.2 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು ಹೊಸ ದಾಖಲೆ ಬರೆದಿದೆ.. ಹೌದು ಈ ಹಿಂದೆ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಮೊದಲ ದಿನ ಇಪ್ಪತ್ತೈದು ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅದು ದಾಖಲೆಯಾಗಿತ್ತು..

ಈಗ ಜೇಮ್ಸ್ ಸಿನಿಮಾ ಹೊಸ ದಾಖಲೆ ಬರೆದಿದ್ದು ಬರೋಬ್ಬರಿ 31.2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.. ಇದು ಪುನೀತ್ ಅವರ ವೃತ್ತಿ ಬದುಕಿನಲ್ಲಿಯೂ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ.. ಇನ್ನು ಇತ್ತ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಜೇಮ್ಸ್ ಮೊದಲ ದಿನ ಹತ್ತು ಕೋಟಿಯಷ್ಟೇ ಎಂದು ಸುದ್ದಿ ಹರಿಬಿಡುತ್ತಿದ್ದು ಅವರ ಸಣ್ಣ ಮನಸ್ಥಿತಿಯನ್ನು ತೋರುತ್ತಿದೆ.. ಆದರೆ ಅಧಿಕೃತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ 31.2 ಕೋಟಿ‌ ಕಲೆಕ್ಷನ್ ಆಗಿದ್ದು ಎರಡನೇ ದಿನ ಕೂಡ ಎಲ್ಲಾ ಶೋಗಳು ಹೌಸ್ ಫುಲ್ ಆಗಿದ್ದು ಇಂದೂ ಸಹ ಇಪ್ಪತ್ತೈದು ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ ಎನ್ನಲಾಗಿದೆ..

ಅದರಲ್ಲೂ ಥಿಯೇಟರ್ ಗಳ ಕಡೆಗೆ ಬರುತ್ತಿರುವ ಅಭಿಮಾನಿಗಳ ಸಾಗರವನ್ನು ನೋಡಿದರೆ ಇದು ನೂರಲ್ಲ ಇನ್ನೂರು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎನ್ನುತ್ತಿದ್ದಾರೆ ಸಿನಿ ತಜ್ಞರು.. ಇನ್ನು ಇದೇ ವರ್ಷ ಪುನೀತ್ ಅವರ ಕೊನೆ ಸಿನಿಮಾ ಅವರ ಕನಸಿನ ಕೂಸು ಸಹ ಆಗಿರುವ ಗಂಧದ ಗುಡಿ ಸಿನಿಮಾ ಕೂಡ ಬಿಡುಗಡೆಯಾಗಲಿದ್ದು ಅದು ಪುನೀತ್ ಅವರ ಹೋಂ ಬ್ಯಾನರ್ ಕೂಡ ಆಗಿದ್ದು ಅದು ಇನ್ನು ಹೆಚ್ಚಿನ ಮಟ್ಟದಲ್ಲಿ ಸಕ್ಸಸ್ ಕಾಣುವ ನಿರೀಕ್ಷೆ ಇದೆ.. ಒಟ್ಟಿ‌ನಲ್ಲಿ ಜೊತೆಯಿರದ ಜೀವ ಸದಾ ಜೀವಂತ ಎನ್ನುವಂತೆ ಅಪ್ಪು ಎಂದೂ ಕನ್ನಡಿಗರ ಮನಸ್ಸಿನಲ್ಲಿ ಅಮರರಾಗಿಯೇ ಇರುತ್ತಾರೆ.. ಮತ್ತೆ ಹುಟ್ಟಿಬನ್ನಿ ಅಪ್ಪು ಸರ್‌..